logo
ಕನ್ನಡ ಸುದ್ದಿ  /  ಜೀವನಶೈಲಿ  /  Budget Smartphones: 20 ಸಾವಿರ ರೂನೊಳಗೆ ಖರೀದಿಸಬಹುದಾದ 10 ಸ್ಮಾರ್ಟ್‌ಫೋನ್‌ಗಳು, ನಿಮಗೂ ಇಷ್ಟವಾಗಬಹುದು ನೋಡಿ

Budget Smartphones: 20 ಸಾವಿರ ರೂನೊಳಗೆ ಖರೀದಿಸಬಹುದಾದ 10 ಸ್ಮಾರ್ಟ್‌ಫೋನ್‌ಗಳು, ನಿಮಗೂ ಇಷ್ಟವಾಗಬಹುದು ನೋಡಿ

Praveen Chandra B HT Kannada

Jun 21, 2023 10:09 AM IST

google News

Budget Smartphones: 20 ಸಾವಿರ ರೂನೊಳಗೆ ಖರೀದಿಸಬಹುದಾದ 10 ಸ್ಮಾರ್ಟ್‌ಫೋನ್‌ಗಳು, ನಿಮಗೂ ಇಷ್ಟವಾಗಬಹುದು ನೋಡಿ

    • Smartphones buy under 20,000: ದೇಶದಲ್ಲಿ 20 ಸಾವಿರ ರೂಪಾಯಿಯೊಳಗಿನ ಸ್ಮಾರ್ಟ್‌ಫೋನ್‌ ಹುಡುಕುವವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರ ಹುಡುಕಾಟಕ್ಕೆ ಅನುಕೂಲವಾಗುವಂತೆ ಹತ್ತು ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿ ನೀಡಲಾಗಿದೆ.
Budget Smartphones: 20 ಸಾವಿರ ರೂನೊಳಗೆ ಖರೀದಿಸಬಹುದಾದ 10 ಸ್ಮಾರ್ಟ್‌ಫೋನ್‌ಗಳು, ನಿಮಗೂ ಇಷ್ಟವಾಗಬಹುದು ನೋಡಿ
Budget Smartphones: 20 ಸಾವಿರ ರೂನೊಳಗೆ ಖರೀದಿಸಬಹುದಾದ 10 ಸ್ಮಾರ್ಟ್‌ಫೋನ್‌ಗಳು, ನಿಮಗೂ ಇಷ್ಟವಾಗಬಹುದು ನೋಡಿ

ಈಗ ಬಜೆಟ್‌ ಸ್ಮಾರ್ಟ್‌ಫೋನ್‌ ಎಂದರೆ ಹತ್ತು ಸಾವಿರ ರೂ.ನೊಳಗೆ ದೊರಕುವ ಫೋನ್‌ಗಳಲ್ಲ. ಗ್ರಾಹಕರು ತುಸುತುಸುವೇ ತಮ್ಮ ಬಜೆಟ್‌ ಹೆಚ್ಚಿಸಿಕೊಂಡು ಕೊಂಚ ಅತ್ಯುತ್ತಮ ಫೀಚರ್‌ ಇರುವ ಆದರೆ ತುಂಬಾ ದುಬಾರಿಯಾಗದಂತೆ ಎಚ್ಚರಿಕೆವಹಿಸಿಕೊಂಡು ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ. ದೇಶದಲ್ಲಿ 20 ಸಾವಿರ ರೂಪಾಯಿಯೊಳಗಿನ ಸ್ಮಾರ್ಟ್‌ಫೋನ್‌ ಹುಡುಕುವವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರ ಹುಡುಕಾಟಕ್ಕೆ ಅನುಕೂಲವಾಗುವಂತೆ ಹತ್ತು ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿ ನೀಡಲಾಗಿದೆ.

ರಿಯಲ್‌ಮಿ 9ಐ (Realme 9i)

ಮೀಡಿಯಾಟೆಕ್‌ಹೆಲಿಯೊ ಜಿ96 ಪ್ರೊಸೆಸರ್‌ ಹೊಂದಿರುವ ರಿಯಲ್‌ಮಿ 9ಐಯು 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 4 ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ಇದರ ದರ 14,100 ರೂಪಾಯಿ.

ಪೊಕೊ ಎಂ4 ಪ್ರೊ 5ಜಿ (POCO M4 Pro 5G)

ಇದು ಮಮೀಡಿಯಾಟೆಕ್‌ ಡೈಮೆನ್ಸಿಟಿ 810 ಚಿಪ್‌ಸೆಟ್‌ ಹೊಂದಿದೆ. POCO M4 Pro 5G sports ಸ್ಮಾರ್ಟ್‌ಫೋನ್‌ 6.43 ಇಂಚಿನ ಅಮೊಲೆಡ್‌ ಸ್ಕ್ರೀನ್‌ ಹೊಂದಿದೆ. ಇದು 6ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ದರ: 15,999 ರೂಪಾಯಿ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಂ33 5ಜಿ (Samsung Galaxy M33 5G)

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 900 ಪ್ರೊಸೆಸ್‌ ಹೊಂದಿದೆ. ಇದು 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 8ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ದರ: 18,499 ರೂಪಾಯಿ.

ವಿವೊ ಟಿ1 5ಜಿ (Vivo T1 5G)

ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 695 ಪ್ರೊಸೆಸರ್‌ ಹೊಂದಿರುವ Vivo T1 5G ಸ್ಮಾರ್ಟ್‌ಫೋನ್‌ 6.44 ಇಂಚಿನ ಅಮೊಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 8ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ದರ: 19,999 ರೂಪಾಯಿ.

ಮೊಟೊ ಜಿ72 5ಜಿ (Moto G72 5G)

ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 920 ಚಿಪ್‌ಸೆಟ್‌ ಹೊಂದಿದೆ. 6.6 ಇಂಚಿನ ಒಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 8ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ದರ: 16,999 ರೂಪಾಯಿ.

ಇನ್‌ಫಿನಿಕ್ಸ್‌ ನೋಟ್‌ 11 ಪ್ರೊ 5ಜಿ (Infinix Note 11 Pro 5G)

ಮೀಡಿಯಾಟೆಕ್‌ ಡೈಮೆನ್ಸಿಟಿ 920 ಪ್ರೊಸೆಸರ್‌ ಹೊಂದಿರುವ Infinix Note 11 Pro 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಅಮೊಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು 8ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ದರ: 15,499 ರೂಪಾಯಿ.

ಟೆಕ್ನೊ ಪೊವಾ 5ಜಿ (Tecno Pova 5G)

ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 900 ಪ್ರೊಸೆಸರ್‌ ಹೊಂದಿದ್ದು, 6.9 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 8ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ದರ: 15,499 ರೂಪಾಯಿ.

ರಿಯಲ್‌ಮಿ ನಾರ್ಜೊ 50 5ಜಿ (Realme Narzo 50 5G)

ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 700 ಪ್ರೊಸೆಸರ್‌ ಹೊಂದಿದೆ. ಇದು 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 4 ಜಿಬಿ ರಾಮ್‌ ಮತ್ತು 64 ಜಿಬಿ ಸ್ಟೋರೇಜ್‌ ಹೊಂದಿದೆ. ದರ: 14,999 ರೂಪಾಯಿ.

ಕ್ಷಿಯೊಮಿ ರೆಡ್ಮಿ ನೋಟ್‌ 11 5ಜಿ

ಕ್ಷಿಯೊಮಿ ರೆಡ್ಮಿ ನೋಟ್‌ 11 5ಜಿಯು ಮೀಡಿಯಾಟೆಕ್‌ ಡೈಮೆನ್ಸಿಟಿ 810 ಪ್ರೊಸೆಸರ್‌ ಹೊಂದಿದೆ. ಇದು 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. 4 ಜಿಬಿ ರಾಮ್‌ ಮತ್ತು 64 ಜಿಬಿ ಸ್ಟೋರೇಜ್‌ ಹೊಂದಿದೆ. ದರ: 14,999 ರೂಪಾಯಿ.

ಒನ್‌ಪ್ಲಸ್‌ ನೋರ್ಡ್‌ ಸಿಇ 3 ಲೈಟ್‌ 5ಜಿ

ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 700 ಚಿಪ್‌ಸೆಟ್‌ ಹೊಂದಿದೆ. 6.59 ಇಂಚಿನ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 8ಜಿಬಿ ರಾಮ್‌ ಮತ್ತು 128 ಜಿಬಿ ಸ್ಟೋರೇಜ್‌ ಹೊಂದಿದೆ. ದರ: 19,999 ರೂಪಾಯಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ