ಹಬ್ಬದ ಮಾರಾಟ ಮೇಳ ಆರಂಭಿಸಿದ ಸ್ಯಾಮ್‌ಸಂಗ್: ಸ್ಮಾರ್ಟ್‌ಫೋನ್, ಟಿವಿ, ಕಂಪ್ಯೂಟರ್, ಫ್ರಿಡ್ಜ್, ವಾಷಿಂಗ್ ಮೆಷಿನ್ ಖರೀದಿದಾರರಿಗೆ ಲಾಭ
Sep 26, 2024 07:06 PM IST
ಹಬ್ಬದ ಮಾರಾಟ ಮೇಳ ಆರಂಭಿಸಿದ ಸ್ಯಾಮ್‌ಸಂಗ್
- Samsung fab grab fest 2024: ಸ್ಯಾಮ್‌ಸಂಗ್ ಕಂಪನಿಯು ಹಬ್ಬದ ಮಾರಾಟ ಮೇಳ ಆರಂಭಿಸಿದೆ. ಸ್ಮಾರ್ಟ್‌ಫೋನ್, ಡಿಜಿಟಲ್ ಉಪಕರಣಗಳು, ಸ್ಮಾರ್ಟ್ ಟೆಲಿವಿಷನ್‌ಗಳು, ಮಾನಿಟರ್‌ಗಳು, ಟ್ಯಾಬ್ಲೆಟ್ ಖರೀದಿದಾರರಿಗೆ ದರ ಕಡಿತ, ಕ್ಯಾಶ್‌ಬ್ಯಾಕ್ ಇತ್ಯಾದಿಗಳ ಭರ್ಜರಿ ಆಫರ್ ನೀಡಿದೆ.
ಬೆಂಗಳೂರು: ಒಂದೆಡೆ ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಕಂಪನಿಗಳು ಫೆಸ್ಟಿವಲ್ ಸೇಲ್ಸ್ ಆರಂಭಿಸಿದೆ. ಇದೇ ಸಮಯದಲ್ಲಿ ಸ್ಯಾಮ್‌ಸಂಗ್ ಕಂಪನಿಯು ಹಬ್ಬದ ಮಾರಾಟ ಮೇಳ 'ಫ್ಯಾಬ್ ಗ್ರಾಬ್ ಫೆಸ್ಟ್' ಆರಂಭಿಸಿದೆ. ಈ ಸಂದರ್ಭದಲ್ಲಿ ಗ್ಯಾಲಕ್ಸಿ ಝಡ್ ಸರಣಿ, ಎಸ್ ಸರಣಿ, ಎ ಸರಣಿ, ಎಂ ಸರಣಿ ಮತ್ತು ಎಫ್ ಸರಣಿಯ ಸ್ಮಾರ್ಟ್ ಫೋನ್ ಗಳ ಆಯ್ದ ಮಾಡೆಲ್ ಗಳ ಮೇಲೆ ಶೇ.53ರವರೆಗಿನ ರಿಯಾಯಿತಿ ನೀಡುತ್ತಿದೆ. ಗ್ಯಾಲಕ್ಸಿ ಟ್ಯಾಬ್ಲೆಟ್ ಗಳು, ಸ್ಮಾರ್ಟ್ ವಾಚ್ ಗಳು ಮತ್ತು ಬಡ್‌ಗಳ ಆಯ್ದ ಮಾಡೆಲ್ ಗಳ ಮೇಲೆ ಶೇ.74ರವರೆಗಿನ ರಿಯಾಯಿತಿ ಘೋಷಿಸಿದೆ. ನಿಯೋ ಕ್ಯೂಎಲ್ಇಡಿ, ಕ್ಯೂಎಲ್ಇಡಿ, ಓಎಲ್ಇಡಿ, 4ಕೆ ಯುಎಚ್‌ಡಿ ಸ್ಮಾರ್ಟ್ ಟೆಲಿವಿಷನ್ ಗಳು ಮತ್ತು ಫ್ರೀಸ್ಟೈಲ್ ಪ್ರೊಜೆಕ್ಟರ್ ನ ಆಯ್ದ ಮಾಡೆಲ್ ಗಳ ಮೇಲೆ ಶೇ.43ವರೆಗಿನ ರಿಯಾಯಿತಿ ನೀಡಿದೆ. ಆಯ್ದ ರೆಫ್ರಿಜರೇಟರ್‌ಗಳು ಸೇರಿದಂತೆ ಡಿಜಿಟಲ್ ಉಪಕರಣಗಳ ಮೇಲೆ ಶೇ.39ರವರೆಗೆ ಮತ್ತು ಆಯ್ದ ವಾಷಿಂಗ್ ಮೆಷಿನ್ ಗಳ ಮೇಲೆ ಶೇ.28ವರೆಗಿನ ರಿಯಾಯಿತಿ ನೀಡುತ್ತಿರುವುದಾಗಿ ಸ್ಯಾಮ್‌ಸಂಗ್ ತಿಳಿಸಿದೆ.
ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಸೆಪ್ಟೆಂಬರ್ 26ರಿಂದ ತನ್ನ ಅತಿದೊಡ್ಡ ಹಬ್ಬದ ಮಾರಾಟ ಮೇಳ 'ಫ್ಯಾಬ್ ಗ್ರಾಬ್ ಫೆಸ್ಟ್' ಅನ್ನು ಆರಂಭಿಸಿದೆ. ಈ ಮೇಳದಲ್ಲಿ ಗ್ಯಾಲಕ್ಸಿ ಸ್ಮಾರ್ಟ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್ ಟಾಟ್‌ಗಳು, ಪರಿಕರಗಳು, ವೇರೇಬಲ್‌ಗಳು, ಸ್ಮಾರ್ಟ್ ಟಿವಿಗಳು, ಡಿಜಿಟಲ್ ಉಪಕರಣಗಳು ಮತ್ತು ಸ್ಮಾರ್ಟ್ ಮಾನಿಟರ್ ಗಳ ಮೇಲೆ ಅತ್ಯಾಕರ್ಷಕ ಆಫರ್‌ಗಳು ದೊರೆಯಲಿವೆ ಮತ್ತು ಆಕರ್ಷಕ ಕ್ಯಾಶ್ ಬ್ಯಾಕ್ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಸ್ಯಾಮ್‌ಸಂಗ್ ವೆಬ್‌ಸೈಟ್, ಸ್ಯಾಮ್‌ಸಂಗ್ ಅಂಗಡಿಗಳು, ಸ್ಯಾಮ್‌ಸಂಗ್‌ನ ಎಕ್ಸ್‌ಕ್ಲೂಸಿವ್ ಮಳಿಗೆಗಳಲ್ಲಿ ಈ ಆಫರ್ ಇರಲಿದೆ.
ಹೆಚ್ಚು ಖರೀದಿಸಿ ಹೆಚ್ಚು ಉಳಿತಾಯ ಮಾಡಿ
ಈ ಹಬ್ಬದ ಮಾರಾಟ ಮೇಳವು ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ ಎಂಬ ಯೋಜನೆಯ ಭಾಗವಾಗಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ. ವಿಶೇಷವಾಗಿ ಮೇಳದಲ್ಲಿ ಎರಡು ಅಥವಾ ಹೆಚ್ಚಿನ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರು ಶೇಕಡ 5ರವರೆಗಿನ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಆನ್‌ಲೈನ್ ಖರೀದಿಗೆ ಈ ಆಫರ್ ಇರುತ್ತದೆ.
ಹೆಚ್ಚು ಖರೀದಿಸಿ ಹೆಚ್ಚು ಉಳಿಸಿ ಯೋಜನೆಯ ಭಾಗವಾಗಿ ಗ್ಯಾಲಕ್ಸಿ ಝಡ್ ಫೋಲ್ಡ್ 6 ಅನ್ನು ಖರೀದಿಸುವ ಗ್ರಾಹಕರು ಅದಕ್ಕೆ ದೊರೆಯುವ ಆಫರ್ ಗಳ ಜೊತೆಗೆ ಹೆಚ್ಚುವರಿಯಾಗಿ ಗ್ಯಾಲಕ್ಸಿ ಬಡ್ಸ್ ಎಫ್ಇ ಅನ್ನು ಕೇವಲ 1249 ರೂಪಾಯಿಗೆ ಪಡೆಯಬಹುದು. ಅದೇ ರೀತಿ ಗ್ಯಾಲಕ್ಸಿ ಬುಕ್4 ಅನ್ನು ಖರೀದಿಸುವವರು ಕೇವಲ 1920 ರೂಪಾಯಿಗೆ ಎಫ್ಎಚ್‌ಡಿ ಫ್ಲಾಟ್ ಮಾನಿಟರ್ ಪಡೆಯಬಹುದು. ಗ್ರಾಹಕರು ಬೀಸ್ಪೋಕ್ ಫ್ಯಾಮಿಲಿ ಹಬ್ ಫ್ರಿಜ್ ಅನ್ನು ಖರೀದಿಸುವಾಗ ಕನ್ವೆಕ್ಷನ್ ಮೈಕ್ರೋವೇವ್ ನಂತಹ ವಸ್ತುವನ್ನು ಮತ್ತು ನಿಯೋ ಕ್ಯೂಎಲ್ಇಡಿ 8ಕೆ ಸ್ಮಾರ್ಟ್ ಟೆಲಿವಿಷನ್ ಖರೀದಿಸುವಾಗ ಕ್ಯೂ ಸಿಂಫನಿ ಸೌಂಡ್‌ಬಾರ್ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೊಂದಬಹುದು.
ಕಡಿಮೆ ದರದಲ್ಲಿ ಖರೀದಿಸಿ
'ಫ್ಯಾಬ್ ಗ್ರಾಬ್ ಫೆಸ್ಟ್' ಸಮಯದಲ್ಲಿ, ಗ್ರಾಹಕರು ಗ್ಯಾಲಕ್ಸಿ ಝಡ್ ಸರಣಿಯ ಆಯ್ದ ಮಾಡೆಲ್ ಗಳು, ಗ್ಯಾಲಕ್ಸಿ ಎಸ್ ಸರಣಿ ಮತ್ತು ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್ ಗಳ ಮೇಲೆ ಶೇ.53ರವರೆಗಿನ ರಿಯಾಯಿತಿ ಪಡೆಯಬಹುದು. ಗ್ಯಾಲಕ್ಸಿ ಬುಕ್4 ಸರಣಿಯ ಲ್ಯಾಪ್ ಟಾಪ್ ಗಳ ಆಯ್ದ ಮಾಡೆಲ್ ಗಳು ಶೇ.27ರವರೆಗಿನ ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಟ್ಯಾಬ್ ಎ9 ಮತ್ತು ಟ್ಯಾಬ್ ಎಸ್9 ಸರಣಿಯ ನಿರ್ದಿಷ್ಟ ಮಾಡೆಲ್ ಗಳು, ಬಡ್ಸ್3 ಸರಣಿ, ಗ್ಯಾಲಕ್ಸಿ ವಾಚ್ ಸರಣಿಯ ಮೇಲೆ ಶೇ.74ರವರೆಗಿನ ರಿಯಾಯಿತಿ ಪಡೆಯಬಹುದು ಎಂದು ಸ್ಯಾಮ್‌ಸಂಗ್ ಪ್ರಕಟಣೆಯಲ್ಲಿ ತಿಳಿಸಿದೆ.
ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ, ಕ್ಯೂಎಲ್ಇಡಿ, ದಿ ಫ್ರೇಮ್ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ, ದಿ ಫ್ರೀಸ್ಟೈಲ್ ಪ್ರೊಜೆಕ್ಟರ್ ನಂತಪ ಸ್ಯಾಮ್ ಸಂಗ್ ಸ್ಮಾರ್ಟ್ ಟೆಲಿವಿಷನ್ ಗಳ ಮೇಲೆ ಶೇಕಡ 43ರವರೆಗಿನ ರಿಯಾಯಿತಿ ದೊರೆಯುತ್ತದೆ. ಹೆಚ್ಚುವರಿಯಾಗಿ ಆಯ್ದ 55-ಇಂಚಿನ ಮತ್ತು ಹೆಚ್ಚಿನ ಮಾಡೆಲ್ ಗಳನ್ನು ಖರೀದಿಸುವ ಗ್ರಾಹಕರು ಉಚಿತ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿ ಅಥವಾ ಸೌಂಡ್ ಬಾರ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಹಬ್ಬದ ಮಾರಾಟದ ಸಮಯದಲ್ಲಿ, ಸ್ಯಾಮ್‌ಸಂಗ್ ಆಯ್ದ 32" ಮತ್ತು ಅದಕ್ಕಿಂತ ಹೆಚ್ಚಿನ ಸ್ಮಾರ್ಟ್ ಟೆಲಿವಿಷನ್ ಗಳಿಗೆ ಮೂರು ವರ್ಷಗಳ ಸಮಗ್ರ ವಾರಂಟಿಯನ್ನು ಉಚಿತವಾಗಿ ನೀಡುತ್ತದೆ.
ಸ್ಯಾಮ್ ಸಂಗ್‌ನ ಮಾನಿಟರ್ ಗಳು ಶೇಕಡ 67ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಹೆಚ್ಚುವರಿಯಾಗಿ ಆಯ್ದ ಸ್ಮಾರ್ಟ್ ಮತ್ತು ಗೇಮಿಂಗ್ ಮಾನಿಟರ್ ಗಳ ಮೇಲೆ 10000 ರೂಪಾಯಿವರೆಗಿನ ತ್ವರಿತ ಕಾರ್ಟ್ ಡಿಸ್ಕೌಂಟ್ ಅನ್ನು ಪಡೆಯಬಹುದು.
ಫ್ರಿಡ್ಜ್, ವಾಷಿಂಗ್ ಮೆಷಿನ್ ಖರೀದಿದಾರರಿಗೂ ಆಫರ್
ಸೈಡ್ ಬೈ ಸೈಡ್ ಮತ್ತು ಫ್ರೆಂಚ್ ಡೋರ್ ರೆಫ್ರಿಜರೇಟರ್ ಗಳಂತಹ ಪ್ರೀಮಿಯಂ ಉಪಕರಣಗಳ ಮೇಲೆ ಗ್ರಾಹಕರು ಶೇಕಡ 39ರವರೆಗಿನ ರಿಯಾಯಿತಿ ಪಡೆಯಬಹುದು. ಜೊತೆಗೆ ಗ್ರಾಹಕರು ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್ ಗಳ ಮೇಲೆ 20 ವರ್ಷಗಳ ವಾರಂಟಿಯನ್ನು ಸಹ ಪಡೆಯುತ್ತಾರೆ. 8ಕೆಜಿ ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಫ್ರಂಟ್ ಲೋಡ್ ಮತ್ತು ಟಾಪ್ ಲೋಡ್ ವಾಷಿಂಗ್ ಮೆಷಿನ್ ಗಳ ಮೇಲೆ ಶೇ.28ರವರೆಗಿನ ರಿಯಾಯಿತಿ ದೊರೆಯುತ್ತದೆ ಮತ್ತು ಡಿಜಿಟಲ್ ಇನ್ವರ್ಟರ್ ಮೋಟಾರ್ ಮೇಲೆ 20 ವರ್ಷಗಳ ವಾರಂಟಿಯನ್ನು ನೀಡಲಾಗುತ್ತದೆ. ಆಯ್ದ 9ಕೆಜಿ ಸಂಪೂರ್ಣ ಸ್ವಯಂಚಾಲಿತ ಫ್ರಂಟ್-ಲೋಡಿಂಗ್ ವಾಷಿಂಗ್ ಮೆಷಿನ್ ಗಳ ಮೇಲೆ 2000 ರೂ.ವರೆಗಿನ ತ್ವರಿತ ಕಾರ್ಟ್ ಡಿಸ್ಕೌಂಟ್ ಇರುತ್ತದೆ.
ಪ್ರಮುಖ ಬ್ಯಾಂಕ್ ಗಳಲ್ಲಿ ಕ್ಯಾಶ್ ಬ್ಯಾಕ್ ಲಭ್ಯ
ಫ್ಯಾಬ್ ಗ್ರಾಬ್ ಫೆಸ್ಟ್ ಸಮಯದಲ್ಲಿ ಐಸಿಐಸಿಐ, ಹೆಚ್ ಡಿ ಎಫ್ ಸಿ, ಎಸ್ ಬಿ ಐ ಮತ್ತು ಇತರ ಪ್ರಮುಖ ಬ್ಯಾಂಕ್ ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವ ಗ್ರಾಹಕರು ಆಯ್ದ ಸ್ಮಾರ್ಟ್ ಫೋನ್ ಗಳು, ಟ್ಯಾಬ್ಲೆಟ್ ಗಳು, ವೇರೇಬಲ್ ವಸ್ತುಗಳು ಮತ್ತು ಲ್ಯಾಪ್ ಟಾಪ್ ಗಳ ಮೇಲೆ ಶೇಕಡ 40ರವರೆಗಿನ ಕ್ಯಾಶ್ ಬ್ಯಾಕ್ ( 15000 ರೂವರೆಗೆ) ಪಡೆಯಬಹುದು.
ಹೆಚ್ಚುವರಿಯಾಗಿ ಆಯ್ದ ಸ್ಮಾರ್ಟ್ ಟೆಲಿವಿಷನ್‌ಗಳು ಮತ್ತು ಡಿಜಿಟಲ್ ಉಪಕರಣಗಳ ಖರೀದಿಗಳಿಗೆ ಗ್ರಾಹಕರು ಫ್ಯಾಬ್ ಗ್ರಾಬ್ ಫೆಸ್ಟ್ ಆಫರ್ ಭಾಗವಾಗಿ ಐಸಿಐಸಿಐ, ಹೆಚ್ ಡಿ ಎಫ್ ಸಿ, ಎಸ್ ಬಿ ಐ ಮತ್ತು ಇತರ ಪ್ರಮುಖ ಬ್ಯಾಂಕ್ ಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಬಳಸುವ ಗ್ರಾಹಕರು ಶೇಕಡ 22.5ರವರೆಗಿನ ಕ್ಯಾಶ್ ಬ್ಯಾಕ್ ( 25000 ರೂವರೆಗೆ) ಪಡೆಯಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಯಾಮ್‌ಸಂಗ್ ತಿಳಿಸಿದೆ.