ನಿಮ್ಮ ಮೊಬೈಲ್‌ನಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದೀರಾ? ಈ ಟ್ರಿಕ್ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ
Jul 20, 2024 02:15 PM IST
ನಿಮ್ಮ ಮೊಬೈಲ್‌ನಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದೀರಾ? ಈ ಟ್ರಿಕ್ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ
- ಫೋನ್‌ನಲ್ಲಿ ನೆಟ್‌ವರ್ಕ್ ಕೊರತೆಯ ಸಮಸ್ಯೆ ಇಂದಿನದಲ್ಲ, ಇದು ಬಹಳ ಹಿಂದಿನಿಂದಲೂ ಇದೆ. ಇಂದು, 5G ನೆಟ್‌ವರ್ಕ್ ಹೊಂದಿದ್ದರೂ , ಮೊಬೈಲ್‌ಗೆ ನೆಟ್‌ವರ್ಕ್ ಸಿಗದಿರುವುದು ಅನೇಕ ಬಾರಿ ಸಂಭವಿಸುತ್ತದೆ. ನೀವು ಕೂಡ ಈ ಸಮಸ್ಯೆ ಎದುರಿಸುತ್ತಿದ್ದರೆ ಇಲ್ಲಿದೆ ನೋಡಿ ಕೆಲವೊಂದಿಷ್ಟು ಟಿಪ್ಸ್. (ವರದಿ: ವಿನಯ್ ಭಟ್)
ದೈನಂದಿನ ಕೆಲಸಗಳಿಗೆ ನಾವು ಹೆಚ್ಚಾಗಿ ಸ್ಮಾರ್ಟ್‌ಫೋನ್ ಅನ್ನೇ ಅವಲಂಬಿಸಿದ್ದೇವೆ. ಹೀಗಿರುವಾಗ ನೆಟ್‌ವರ್ಕ್ ಸಮಸ್ಯೆ ಕಾಣಿಸಿಕೊಂಡರೆ ಸಾಕಷ್ಟು ತೊಂದರೆಯಾಗುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಕಾರ್ಯಗಳಿಗೆ ಸ್ಮಾರ್ಟ್‌ಫೋನ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೆಟ್‌ವರ್ಕ್ ಕೊರತೆಯಿಂದಾಗಿ, ಕರೆಯಲ್ಲಿರುವ ವ್ಯಕ್ತಿಯೊಂದಿಗೆ ಮಾತನಾಡಲು ಅಥವಾ ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಯಾವಾಗ ನೆಟ್‌ವರ್ಕ್ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಅವುಗಳನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ನಾವಿನಲ್ಲಿ ತಿಳಿಸುತ್ತೇವೆ.
ಮೆಟ್ರೊ ನಿಲ್ದಾಣ ಅಥವಾ ಬಸ್ ನಿಲ್ದಾಣ, ತುರ್ತು ಪರಿಸ್ಥಿತಿಯಂತಹ ಭಾರೀ ಜನರು ನೆರೆದಿದ್ದಾಗ, ನೆಟ್‌ವರ್ಕ್ ಜಾಮ್ ಆಗಬಹುದು. ಇದರಿಂದಾಗಿ ಇಂಟರ್ನೆಟ್ ನಿಧಾನವಾಗುತ್ತದೆ ಮತ್ತು ಕರೆಗಳ ಸಂಪರ್ಕ ಕಡಿತಗೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ವೈ-ಫೈ ಲಭ್ಯವಿದ್ದರೆ ಅದನ್ನು ಬಳಸಿ. ಅಲ್ಲದೆ, ಹೆಚ್ಚಿನ ನೆಟ್‌ವರ್ಕ್ ಟ್ರಾಫಿಕ್ ಇರುವಾಗ ಕಡಿಮೆ ಡೇಟಾ ಕಡಿತಗೊಳ್ಳುವ ಅಪ್ಲಿಕೇಶನ್‌ಗಳನ್ನು ಬಳಸಿ. ಹಾಗೆಯೆ ಫೋನ್ ಸಾಫ್ಟ್‌ವೇರ್ ಅನ್ನು ಯಾವಾಗಲೂ ನವೀಕರಿಸುವುದು ಮುಖ್ಯವಾಗಿದೆ. ಹಳೆಯ ಸಾಫ್ಟ್‌ವೇರ್ ನೆಟ್‌ವರ್ಕ್‌ಗೆ ಸಂಪರ್ಕಿಸುವಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಅಪ್ಡೇಟ್ಗಾಗಿ ನಿಯಮಿತವಾಗಿ ಪರಿಶೀಲಿಸಿ.
ಹಾನಿಗೊಳಗಾದ ಅಥವಾ ಸರಿಯಾಗಿ ಫಿಕ್ಸ್ ಆಗದ ಸಿಮ್ ಕಾರ್ಡ್ ನೆಟ್‌ವರ್ಕ್ ಸಮಸ್ಯೆಗಳನ್ನು ಉಂಟುಮಾಡಬಹುದು. ಸಿಮ್ ಕಾರ್ಡ್ ತೆಗೆದು ಅದರಲ್ಲಿ ಏನಾದರೂ ನ್ಯೂನತೆ ಅಥವಾ ಧೂಳು ಇದೆಯೇ ಎಂದು ಪರಿಶೀಲಿಸಿ. ಹಾಗಿದ್ದಲ್ಲಿ, ಅದನ್ನು ಸ್ವಚ್ಛಗೊಳಿಸಿ ಮತ್ತು ಸರಿಯಾಗಿ ಹಾಕಿರಿ. ಸಮಸ್ಯೆ ಇನ್ನೂ ಮುಂದುವರೆದರೆ, ಹೊಸ ಸಿಮ್ ಕಾರ್ಡ್ ಮೊರೆ ಹೋಗುವುದು ಒಳ್ಳೆಯದು.
ನೀವು ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸಿದಾಗ, ಫೋನ್ ಅನ್ನು ಸ್ವಿಚ್-ಆಫ್ ಮಾಡುವುದು ಕೂಡ ಒಂದು ಆಯ್ಕೆ. ಫೋನ್ ಅನ್ನು ಆಫ್ ಮಾಡಿ ಸ್ವಲ್ಪ ಸಮಯದ ನಂತರ ಆನ್ ಮಾಡಿ. ಅನೇಕ ಬಾರಿ ಇದು ನಿಮ್ಮ ನೆಟ್‌ವರ್ಕ್ ಸಮಸ್ಯೆಯನ್ನು ಪರಿಹರಿಸುತ್ತದೆ. ಅಥವಾ ನೀವು ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಸ್ವಲ್ಪ ಸಮಯ ಇರಿಸಬಹುದು. ಇದು ನೆಟ್‌ವರ್ಕ್ ಅನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ನಿಮ್ಮ ಫೋನ್ ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುವುದಕ್ಕೆ ಮತ್ತೊಂದು ಕಾರಣವೆಂದರೆ 2G ಅಥವಾ 3G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರಬಹುದು. ಮೊದಲಿಗೆ ನಿಮ್ಮ ಫೋನ್ 4G ಅಥವಾ 5G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ನೀವು ಫೋನ್ ಸೆಟ್ಟಿಂಗ್‌ಗಳ ಮೂಲಕ ಪರಿಶೀಲಿಸಬೇಕು.
ಇದು ಯಾವುದೂ ಕಾರ್ಯನಿರ್ವಹಿಸದಿದ್ದರೆ, ನಿಮ್ಮ ಮನೆಯಲ್ಲಿ ಸಿಗ್ನಲ್ ಬೂಸ್ಟರ್ ಅನ್ನು ನೀವು ಸ್ಥಾಪಿಸಬೇಕು. ಇದು ಒಂದು ರೀತಿಯಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದನ್ನು ನೆಟ್‌ವರ್ಕ್ ಬೂಸ್ಟರ್ ಎಂದೂ ಕರೆಯುತ್ತಾರೆ. ನೀವು ಇದನ್ನು ಆನ್‌ಲೈನ್‌ನಲ್ಲಿ ಅಥವಾ ಮಾರುಕಟ್ಟೆಯಿಂದ ಸುಲಭವಾಗಿ ಖರೀದಿಸಬಹುದು. (ವರದಿ: ವಿನಯ್ ಭಟ್)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)