ಸೆಪ್ಟೆಂಬರ್ 1 ರಿಂದ ಹೊಸ ನಿಯಮ: ಬ್ಲಾಕ್ಲಿಸ್ಟ್ಗೆ ಹೋಗುತ್ತೆ ಈ ಸಿಮ್ ಕಾರ್ಡ್‌ಗಳು, ನಿಮ್ಮ ಸಂಖ್ಯೆ ಇದೆಯೇ?
Aug 21, 2024 10:52 AM IST
ನಿಮ್ಮ ಮೊಬೈಲ್ ಸಂಖ್ಯೆಯಿಂದ ನೀವು ಟೆಲಿಮಾರ್ಕೆಟಿಂಗ್ ಮಾಡಿದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಎರಡು ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುತ್ತದೆ.
ನಿಮ್ಮ ಮೊಬೈಲ್ ಸಂಖ್ಯೆಯಿಂದ ನೀವು ಟೆಲಿಮಾರ್ಕೆಟಿಂಗ್ ಮಾಡಿದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಎರಡು ವರ್ಷಗಳವರೆಗೆ ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುತ್ತದೆ. ಈಗ ಕೇಂದ್ರ ಸರ್ಕಾರದ ಟೆಲಿಕಾಂ ಸಚಿವಾಲಯವು ಟೆಲಿಮಾರ್ಕೆಟರ್‌ಗಳಿಗಾಗಿ ಹೊಸ ಮೊಬೈಲ್ ಸಂಖ್ಯೆ ಸರಣಿಯನ್ನು ಬಿಡುಗಡೆ ಮಾಡಿದೆ. (ಬರಹ: ವಿನಯ್ ಭಟ್)
ಸ್ಪ್ಯಾಮ್ ಕರೆಗಳು ಅಥವಾ ವಂಚನೆ ಕರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಸರ್ಕಾರಿ ಸಂಸ್ಥೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಮೊಬೈಲ್ ನೆಟ್‌ವರ್ಕ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ತಂದಿದೆ, ಇದು ಸೆಪ್ಟೆಂಬರ್ 1, 2024 ರಿಂದ ದೇಶಾದ್ಯಂತ ಅನ್ವಯಿಸುತ್ತದೆ. ಈ ನಿಯಮಗಳ ಅನುಷ್ಠಾನದ ನಂತರ, ಸಾಮಾನ್ಯ ಗ್ರಾಹಕರು ಅನಗತ್ಯ ಕರೆಗಳಿಂದ ಮುಕ್ತಿ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಟ್ರಾಯ್ ಜಿಯೋ, ಏರ್ಟೆಲ್ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳಿಗೆ ಸೂಚನೆಗಳನ್ನು ಕಳುಹಿಸಿದೆ.
ಹೊಸ ನಿಯಮಗಳು ಏನು?
ನಿಮ್ಮ ಮೊಬೈಲ್ ಸಂಖ್ಯೆಯಿಂದ ನೀವು ಟೆಲಿಮಾರ್ಕೆಟಿಂಗ್ ಮಾಡಿದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಎರಡು ವರ್ಷಗಳವರೆಗೆ ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುತ್ತದೆ. ಈಗ ಕೇಂದ್ರ ಸರ್ಕಾರದ ಟೆಲಿಕಾಂ ಸಚಿವಾಲಯವು ಟೆಲಿಮಾರ್ಕೆಟರ್‌ಗಳಿಗಾಗಿ ಹೊಸ ಮೊಬೈಲ್ ಸಂಖ್ಯೆ ಸರಣಿಯನ್ನು ಬಿಡುಗಡೆ ಮಾಡಿದೆ. ಹಣಕಾಸು ವಂಚನೆಯನ್ನು ತಡೆಯಲು ಟೆಲಿಕಾಂ ಕಮ್ಯುನಿಕೇಷನ್ ಇಲಾಖೆಯು ಹೊಸ 160 ಸಂಖ್ಯೆಯ ಸರಣಿಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಈಗ ಬ್ಯಾಂಕಿಂಗ್ ವಲಯ ಮತ್ತು ವಿಮಾ ವಲಯವು ಗ್ರಾಹಕರಿಗೆ ತಮ್ಮ ಪ್ರಚಾರದ ಕರೆಗಳು ಅಥವಾ ಎಸ್ಎಮ್ಎಸ್ ಕಳುಹಿಸಲು 160 ಸಂಖ್ಯೆಯ ಮೊಬೈಲ್ ನಂಬರ್ ಸರಣಿಯ ಮೂಲಕ ಮಾತ್ರ ಮಾಡಲು ಸಾಧ್ಯವಾಗುತ್ತದೆ.
ಹೊಸ ನಿಯಮಗಳ ಅನುಷ್ಠಾನದ ನಂತರ, ಅನಗತ್ಯ ಕರೆಗಳು ಮತ್ತು ಸಂದೇಶಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ಹೊಸ ನಿಯಮವು ಸ್ವಯಂಚಾಲಿತವಾಗಿ ನಿರ್ಮಿಸಲಾದ ಕರೆಗಳು ಮತ್ತು ಸಂದೇಶಗಳನ್ನು ಸಹ ಒಳಗೊಂಡಿದೆ, ಇದನ್ನು ರೋಬೋಟಿಕ್ ಕರೆಗಳು ಮತ್ತು ಎಸ್ಎಮ್ಎಸ್ಗಳು ಎಂದೂ ಕರೆಯಲಾಗುತ್ತದೆ.
ಸೆಪ್ಟೆಂಬರ್ 1 ರಿಂದ ಈ ರೀತಿಯ ಎಲ್ಲಾ ಕರೆಗಳು ಮತ್ತು ಸಂದೇಶಗಳನ್ನು ನಿಷೇಧಿಸಲಾಗುವುದು ಎಂದು ಸರ್ಕಾರ ಹೇಳಿದೆ. ನಂತರವೂ ನೀವು ಅಂತಹ ಅನಗತ್ಯ ಕರೆಗಳನ್ನು ಸ್ವೀಕರಿಸಿದರೆ ವರದಿ ಮಾಡಬಹುದು.
ದೂರು ನೀಡಬಹುದು
ದೂರಸಂಪರ್ಕ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಈ ರೀತಿ ಸಿಮ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಗ್ರಾಹಕರಿಗೆ ಹತ್ತು ಸಾವಿರ ವಂಚನೆ ಸಂದೇಶ ರವಾನೆಯಾಗಿದೆ. ನೀವು ಅಂತಹ ಸಂದೇಶವನ್ನು ಸ್ವೀಕರಿಸಿದ್ದರೆ, ನೀವು ಅದನ್ನು ವರದಿ ಮಾಡಬಹುದು. ಯಾರಾದರೂ ನಿಮಗೆ ವಂಚನೆ ಸಂಬಂಧಿತ ಸಂದೇಶವನ್ನು ಕಳುಹಿಸಿದ್ದರೆ ಅಥವಾ 10 ಅಂಕಿಗಳ ಮೊಬೈಲ್ ಸಂಖ್ಯೆಯಿಂದ ನಿಮಗೆ ಕರೆ ಮಾಡಿದರೆ, ನೀವು ಅದನ್ನು ಸಂಚಾರ್ ಸತಿ ಪೋರ್ಟಲ್‌ನಲ್ಲಿ ವರದಿ ಮಾಡಬಹುದು. ಅಲ್ಲದೆ, ಈ 10-ಅಂಕಿಯ ಮೊಬೈಲ್ ಸಂಖ್ಯೆಯಿಂದ ಸ್ಕ್ಯಾಮ್ ಎಸ್ಎಮ್ಎಸ್ಬಂದಿದ್ದರೆ, ನೀವು ನೇರವಾಗಿ ಸಹಾಯವಾಣಿ 1909 ಗೆ ವರದಿ ಮಾಡಬಹುದು.
ದೂರು ನೀಡುವುದು ಹೇಗೆ?
ನೀವು ದೂರು ಸಲ್ಲಿಸಲು sancharsathi.gov.in ವೆಬ್‌ಸೈಟ್‌ಗೆ ಹೋಗಿ ಮತ್ತು ಸಿಟಿಜನ್ ಸೆಂಟ್ರಿಕ್ ಸರ್ವೀಸ್ ಆಯ್ಕೆಯ ಮೂಲಕ ಸ್ಕ್ರಾಲ್ ಮಾಡಿ. ನಂತರ ಟ್ಯಾಬ್ ಅಡಿಯಲ್ಲಿ ನೀಡಲಾದ ಆಯ್ಕೆಯನ್ನು ಆರಿಸಿ, ಇಲ್ಲಿ ವರದಿ ಮಾಡುವಿಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ಪ್-ಡೌನ್ ಮೆನುವಿನಿಂದ ವಂಚನೆ ವರ್ಗವನ್ನು ಆಯ್ಕೆಮಾಡಿ ಮತ್ತು ವಂಚನೆಯ ಕರೆಯ ಸ್ಕ್ರೀನ್‌ಶಾಟ್ ಅನ್ನು ಲಗತ್ತಿಸಿ.
ಸ್ಕ್ಯಾಮ್ ಕರೆ ಸಂದೇಶವನ್ನು ಸ್ವೀಕರಿಸಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಕರೆ ಬಂದ ದಿನಾಂಕ ಮತ್ತು ಸಮಯವನ್ನು ಸಹ ನಮೂದಿಸಿ ಮತ್ತು ಅದನ್ನು ವರದಿ ಮಾಡಿ.
ನಂತರ ನಿಮ್ಮ ವಿವರಗಳನ್ನು ನಮೂದಿಸಿ. ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಮತ್ತು ದೂರನ್ನು ಸಲ್ಲಿಸಿ.
ವಿಭಾಗ