ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ತಪ್ಪದೆ ಈ ಸ್ಟೋರಿ ಓದಿ
Jul 17, 2024 09:36 AM IST
ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ತಪ್ಪದೆ ಈ ಸ್ಟೋರಿ ಓದಿ
- ಕಳೆದ ಕೆಲವು ವರ್ಷಗಳಲ್ಲಿ, ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆ ಮಹತ್ತರವಾಗಿ ವಿಸ್ತರಿಸಿದೆ. ಇದರಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲು ಅನಧಿಕೃತ ಡೀಲರ್‌ಗಳಿಂದಲೇ ಕೂಡಿದೆ. ಹೀಗಾಗಿ, ನೀವು ಬಳಸಿದ ಕಾರನ್ನು ಖರೀದಿಸುವ ಮುನ್ನ ಹತ್ತು ಬಾರಿ ಯೋಚಿಸಬೇಕು. ಈ ಕುರಿತ ಕೆಲವೊಂದಿಷ್ಟು ಟಿಪ್ಸ್ ಇಲ್ಲಿ ನೀಡಲಾಗಿದೆ.
ಸೆಕೆಂಡ್ ಹ್ಯಾಂಡ್ ಕಾರು ಖರೀದಿದಾರರಿಗೆ ಇದು ಅತ್ಯಂತ ಮಹತ್ವದ ಸುದ್ದಿಯಾಗಿದೆ. ಬೆಂಗಳೂರು, ಮೈಸೂರು, ದೆಹಲಿ ಮತ್ತು ಭಾರತದ ಅನೇಕ ರಾಜ್ಯಗಳು, ಕಳೆದ ಕೆಲವು ವರ್ಷಗಳಿಂದ ಬಳಸಿದ ಕಾರು ಮಾರುಕಟ್ಟೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜನರು ನನಗೊಂದು ಕಾರು ಬೇಕೆಂದು ಎಲ್ಲಿಂದಲಾದರೂ ಸೆಕೆಂಡ್ ಹ್ಯಾಂಡ್ ಕಾರನ್ನು ಪರಿಶೀಲಿಸದೆ ಖರೀದಿಸುತ್ತಾರೆ. ಆದರೆ, ನಂತರ ಅದು ಅವರಿಗೆ ತಲೆನೋವಾಗಿ ಪರಿಣಮಿಸುತ್ತದೆ. ನೀವು ಕಡಿಮೆ ಬಜೆಟ್ ಕಾರೆಂದು ಅದನ್ನು ಖರೀದಿಸುತ್ತಿದ್ದರೆ, ಜಾಗರೂಕರಾಗಿರಿ. ಏಕೆಂದರೆ ಮುಂದಿನ ದಿನಗಳಲ್ಲಿ ನೀವು ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗಬಹುದು.
ಕಾರಿನ ಇತಿಹಾಸ
ಬಳಸಿದ ಕಾರನ್ನು ಖರೀದಿಸುವ ಮುನ್ನ ಅದರ ಇತಿಹಾಸ ತಿಳಿಯುವುದು ಬಹಳ ಮುಖ್ಯ. ಅದನ್ನು ಹೇಗೆ ಬಳಸಲಾಗಿದೆ, ಎಷ್ಟು ಬಾರಿ ಅಪಘಾತವಾಗಿದೆ, ಅಥವಾ ಎಷ್ಟು ಮತ್ತು ಹೇಗೆ ಸರ್ವಿಸ್ ಮಾಡಲಾಗಿದೆ ಎಂದು ತಿಳಿಯಬೇಕು. ಕಾರುಗಳು ಡ್ಯಾಮೇಜ್ ಆಗಿದ್ದರೆ ಅದನ್ನು ಮರೆ ಮಾಡುವ ಅನೇಕ ಸಾಧನಗಳು ಇಂದು ಮಾರುಕಟ್ಟೆಯಲ್ಲಿವೆ. ಹೀಗಾಗಿ ನೀವು ಸೆಕೆಂಟ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಏನಾದರು ಹಾನಿ ಅಥವಾ ದೋಷಗಳನ್ನು ಹೊಂದಿದೆಯೆ ಎಂದು ಪರಿಶೀಲಿಸಿ. ಇಲ್ಲವಾದಲ್ಲಿ ಅದು ಭವಿಷ್ಯದಲ್ಲಿ ದುಬಾರಿ ರಿಪೇರಿಗೆ ಕಾರಣವಾಗಬಹುದು.
ಹೆಚ್ಚಿನ ನಿರ್ವಹಣೆ ವೆಚ್ಚ
ಹಳೆಯ ಕಾರುಗಳಲ್ಲಿ ಕೆಲವು ಯಾಂತ್ರಿಕ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ರಿಪೇರಿ ಮತ್ತು ನಿರ್ವಹಣೆಗೆ ಪದೇ ಪದೇ ಖರ್ಚು ಬೀಳುತ್ತದೆ.
ಕಡಿಮೆ ಸುರಕ್ಷತಾ ವೈಶಿಷ್ಟ್ಯ
ಹಳೆಯ ಕಾರುಗಳು ಹೊಸ ಮಾದರಿಗಳನ್ನು ಹೊಂದಿರುವ ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದಿಲ್ಲ. ಇವುಗಳಲ್ಲಿ, ಏರ್‌ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳು ಇರುವುದಿಲ್ಲ. ಅಪಘಾತದ ಸಂದರ್ಭದಲ್ಲಿ, ಗಂಭೀರವಾದ ಗಾಯಗಳು ಅಥವಾ ಸಾವುಗಳನ್ನು ತಡೆಗಟ್ಟುವಲ್ಲಿ ಈ ಸುರಕ್ಷತಾ ವೈಶಿಷ್ಟ್ಯಗಳು ಪ್ರಮುಖ ಪಾತ್ರವಹಿಸುತ್ತವೆ.
ಕಡಿಮೆ ಮೈಲೇಜ್
ಹಳೆಯ ಕಾರುಗಳು ಸಾಮಾನ್ಯವಾಗಿ ಹೊಸ ಮಾದರಿಗಳಿಗಿಂತ ಕಡಿಮೆ ಇಂಧನ ದಕ್ಷತೆಯನ್ನು ಹೊಂದಿರುತ್ತವೆ. ಇದು ಹೆಚ್ಚಿನ ಪೆಟ್ರೋಲ್ ಅಥವಾ ಡೀಸೆಲ್ ವೆಚ್ಚಗಳಿಗೆ ಕಾರಣವಾಗುತ್ತದೆ. ಪರಿಸರದ ಮೇಲೆ ಕೂಡ ನಕಾರಾತ್ಮಕ ಪರಿಣಾಮ ಬೀರಬಹುದು.
ಗ್ಯಾರಂಟಿ ಇರುವುದಿಲ್ಲ
ಉಪಯೋಗಿಸಿದ ಕಾರುಗಳು ಸಾಮಾನ್ಯವಾಗಿ ಯಾವುದೇ ಗ್ಯಾರಂಟಿ ಹೊಂದಿರುವುದಿಲ್ಲ. ಅಂದರೆ ಏನಾದರೂ ಕಾರಿಗೆ ಹಾನಿಯಾದರೆ ಅದರ ರಿಪೇರಿ ವೆಚ್ಚ ನೀವೇ ಪಾವತಿಸಬೇಕಾಗುತ್ತದೆ. ಹೊಸ ಮಾದರಿ ಕಾರಾದರೆ ವಾರಂಟಿಗಳೊಂದಿಗೆ ಬರುತ್ತವೆ.
ಮೌಲ್ಯದಲ್ಲಿ ಕುಸಿತ
ಬಳಸಿದ ಕಾರುಗಳ ಮರುಮಾರಾಟ ಮೌಲ್ಯವು ಹೊಸ ಮಾದರಿಗಳಿಗಿಂತ ವೇಗವಾಗಿ ಕುಸಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವರ್ಷಗಳ ನಂತರ ಕಾರನ್ನು ಮಾರಾಟ ಮಾಡಲು ಬಯಸಿದರೆ, ನೀವು ಪಾವತಿಸಿದ್ದಕ್ಕಿಂತ ಕಡಿಮೆ ಪಡೆಯುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವ ಮುನ್ನ ಅದರ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಸಂಪೂರ್ಣವಾಗಿ ಯೋಚಿಸಿ. ನೀವು ಯಾವುದೇ ಸ್ಥಳದಿಂದ ಕಾರನ್ನು ಖರೀದಿಸಿದರೆ ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ. ಇಲ್ಲವಾದಲ್ಲಿ ಸಾಕಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ. ಪ್ರಮಾಣೀಕೃತ ಮೆಕ್ಯಾನಿಕ್‌ನಿಂದ ಕಾರನ್ನು ಪರೀಕ್ಷಿಸಿ. ಕಾರಿನ ಹಿಸ್ಟರಿ ಮತ್ತು ಮೈಲೇಜ್ ಪರಿಶೀಲಿಸಿ.
ವರದಿ: ವಿನಯ್ ಭಟ್.
ಇನ್ನಷ್ಟು ಟೆಕ್ನಾಲಜಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ವೈರಲ್ ಆಯ್ತು ಬೆಂಗಳೂರಿನ ಆಟೊಮೆಟಿಕ್ ಪಾನಿಪುರಿ ವೆಂಡಿಂಗ್ ಮಷೀನ್, ಬೆಂಗ್ಳೂರು ತುಂಬಾ ಫಾಸ್ಟ್ ಕಣ್ರಿ ಅಂದ್ರು ನೆಟ್ಟಿಗರು