logo
ಕನ್ನಡ ಸುದ್ದಿ  /  ಜೀವನಶೈಲಿ  /  Vivo Smartphones: ಮಾರುಕಟ್ಟೆಗೆ ಬರಲು ಸಜ್ಜಾದ ವಿವೊ X100, ವಿವೊ X100 ಪ್ರೋ; ಈ ಫೋನ್‌ಗಳ ವೈಶಿಷ್ಟ್ಯ ಹೀಗಿದೆ

Vivo Smartphones: ಮಾರುಕಟ್ಟೆಗೆ ಬರಲು ಸಜ್ಜಾದ ವಿವೊ X100, ವಿವೊ X100 ಪ್ರೋ; ಈ ಫೋನ್‌ಗಳ ವೈಶಿಷ್ಟ್ಯ ಹೀಗಿದೆ

HT Kannada Desk HT Kannada

Dec 11, 2023 06:07 PM IST

google News

ವಿವೊ X100 ಸರಣಿ ಸ್ಮಾರ್ಟ್‌ಫೋನ್‌ಗಳು (PC: vivo)

    • ವಿವೊ ಕಳೆದ ತಿಂಗಳು ನವೆಂಬರ್‌ನಲ್ಲಿ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್‌ಗಳಾದ X100 ಮತ್ತು X100 ಪ್ರೋ ಅನ್ನು ಚೀನಾದಲ್ಲಿ ಬಿಡುಗಡೆಗೊಳಿಸಿತ್ತು. ಈಗ ಅದು ಆ ಎರಡೂ ಫೋನ್‌ಗಳನ್ನು ಜಾಗತಿಕವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ.
ವಿವೊ X100 ಸರಣಿ ಸ್ಮಾರ್ಟ್‌ಫೋನ್‌ಗಳು (PC: vivo)
ವಿವೊ X100 ಸರಣಿ ಸ್ಮಾರ್ಟ್‌ಫೋನ್‌ಗಳು (PC: vivo)

ವಿಶ್ವದ ಪ್ರಮುಖ ಮೊಬೈಲ್‌ ಫೋನ್‌ ಬ್ರಾಂಡ್‌ಗಳಲ್ಲಿ ಒಂದಾದ ವಿವೊ ತನ್ನ ಸ್ಟೈಲಿಶ್‌ ಲುಕ್‌, ವೈಶಿಷ್ಟ್ಯ ಮತ್ತು ಉತ್ತಮ ಗುಣಮಟ್ಟದ ಕ್ಯಾಮರಾ ಸೆಟಪ್‌ಗಳಿಗೆ ಹೆಸರುವಾಸಿಯಾಗಿದೆ. ಈಗ ಇದು ಹೊಸ ವಿವೊ X100 ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ವಿವೊ X100 ಮತ್ತು ವಿವೊ X100 ಪ್ರೋ ಅನ್ನು ಡಿಸೆಂಬರ್‌ 14ರಂದು ಜಾಗತಿಕವಾಗಿ ಬಿಡುಗಡೆ ಮಾಡಲಿದೆ. ವಿವೊನ ಈ ಹೊಸ ಮೊಬೈಲ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 9300 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ. ಎಂದಿನಂತೆ ಇದು ಹಿಂಬದಿಯಲ್ಲಿ ಗುಣಮಟ್ಟದ ಟ್ರಿಪಲ್‌ ಕ್ಯಾಮರಾ ಸೆಟ್‌ಅಪ್‌ ನೊಂದಿಗೆ ಬರಲಿದೆ. ಜೊತೆಗೆ ಇದು ಟೆಲಿಫೋಟೋ ಕ್ಯಾಮರಾವನ್ನು ಹೊಂದಿರುತ್ತದೆ. ಇದರಲ್ಲಿ, ಆಪ್ಟಿಕಲ್ ಸಿಸ್ಟಮ್ಸ್ ಮತ್ತು ಆಪ್ಟೋಎಲೆಕ್ಟ್ರಾನಿಕ್ಸ್‌ ತಯಾರಕ ಜರ್ಮನ್ ಕಂಪನಿಯಾದ ಝೈಸ್‌ನ ಸಹಯೋಗದೊಂದಿಗೆ ಕ್ಯಾಮರಾ ಸೆಟ್‌ಅಪ್‌ಗಳನ್ನು ಹೊಂದಿಸಲಾಗಿದೆ. ಇದು ಫಾಸ್ಟ್‌ ಚಾರ್ಜಿಂಗ್‌ ಅನ್ನೂ ಸಹ ಬೆಂಬಲಿಸಲಿದೆ.

ಲಾಂಚ್‌ ಡೇಟ್‌ ಮತ್ತು ಸಮಯ

ವಿವೊ ಈ ಎರಡೂ ಹೊಸ ಹ್ಯಾಂಡ್‌ಸೆಟ್‌ಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಲ್ಯಾಂಡಿಂಗ್‌ ಪೇಜ್‌ನೊಂದಿಗೆ ನೋಂದಾಯಿಸಲಾಗಿದೆ. ಅದು ಡಿಸೆಂಬರ್‌ 14 ಕ್ಕೆ ನಿಗದಿಯಾಗಿರುವ ಬಿಡುಗಡೆ ಕಾರ್ಯಕ್ರಮವನ್ನು ಹೈಲೈಟ್‌ ಮಾಡಲಿದೆ. ಕಂಪನಿಯು ಭಾರತದಲ್ಲೂ ಈ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪ್ರಾಂಭಿಸಲು ಸಿದ್ಧವಾಗಿದೆ. ಆದರೆ ನಿರ್ದಿಷ್ಟ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ.

ವಿವೊ ಹೊಸ ಹ್ಯಾಂಡ್‌ಸೆಟ್‌ನ ವೈಶಿಷ್ಟ್ಯಗಳು

ವಿವೊ ನ ಹೊಸ X100 ಮತ್ತು X 100 ಪ್ರೋ ಹ್ಯಾಂಡ್‌ಸೆಟ್‌ಗಳನ್ನು ಕಂಪನಿಯು ಕಳೆದ ತಿಂಗಳು ನವೆಂಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆಗೊಳಿಸಿತ್ತು. ಈಗ ಅದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚೀನಾದಲ್ಲಿ ಬಿಡುಗಡೆಯಾಗಿದ್ದ ಹೊಸ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 14 ಆಧರಿತ OriginOS 4 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಹ್ಯಾಂಡ್‌ ಸೆಟ್‌ 6.78 ಇಂಚಿನ ನಾಲ್ಕೂ ಸೈಡ್‌ನಲ್ಲೂ ಬಾಗಿದೆ AMOLED 8T LTPO ಡಿಸ್ಪ್ಲೇ ಹೊಂದಿದೆ. ಇದು 4nm ಡೈಮೆನ್ಸಿಟಿಯ 9300 ಚಿಪ್‌ಸೆಟ್‌ನಿಂದ ಚಲಿಸಲಿದೆ. ಈ ಸ್ಮಾರ್ಟ್‌ಫೋನ್‌ 16ಜಿಬಿ RAM ಹೊಂದಿದ್ದು, ಸುಮಾರು 1TB UFS 4.0 ಇನ್‌ಬಿಲ್ಟ್‌ ಸಂಗ್ರಹಣೆ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಯಲ್ ಬ್ಲೂ, ಚೆನ್ ಯೆ ಬ್ಲಾಕ್, ವೈಟ್ ಮೂನ್‌ಲೈಟ್ ಮತ್ತು ಸನ್‌ಸೆಟ್ ಆರೆಂಜ್ ಬಣ್ಣದೊಂದಿಗೆ ಮಾರಾಟ ಮಾಡಲಾಗುತ್ತದೆ.

ಕ್ಯಾಮರಾ ವೈಶಿಷ್ಟ್ಯ

ಎಂದಿನಂತೆ ವಿವೊ ಛಾಯಾಗ್ರಹಣಕ್ಕಾಗಿ ಫೋನ್‌ನಲ್ಲಿ ಟ್ರಿಪಲ್‌ ರಿಯರ್‌ ಕ್ಯಾಮರಾ ಸೆಟ್‌ಅಪ್‌ ಅಳವಡಿಸಿದೆ. ವಿವೊ X100 ಸ್ಟ್ಯಾಂಡರ್ಡ್‌ ಸ್ಮಾರ್ಟ್‌ಫೋನ್‌ ಕ್ಯಾಮರಾವು ಸೋನಿ IMX920 VCS ಬಯೋನಿಕ್ ಮುಖ್ಯ ಶೂಟರ್ ನೊಂದಿಗೆ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮರಾ ಮತ್ತು 64 ಮೆಗಾಪಿಕ್ಸೆಲ್‌ನ ಝೈಸ್‌ APO ಟೆಲಿಫೋಟೋ ಕ್ಯಾಮರಾವನ್ನು ಹೊಂದಿರುತ್ತದೆ.

ವಿವೊ X100 ಪ್ರೋ ಮಾದರಿಯ ಸ್ಮಾರ್ಟ್‌ಫೋನ್‌ ಸೋನಿ IMX989 1-ಇಂಚಿನ ಮಾದರಿ ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಶೂಟರ್ ಮತ್ತು 50-ಮೆಗಾಪಿಕ್ಸೆಲ್ ಝೈಸ್ APO ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರುತ್ತದೆ. ಎರಡೂ ಮಾದರಿಯ ಸ್ಮಾರ್ಟ್‌ಫೋನ್‌ಗಳು 50 ಮೆಗಾಪಿಕ್ಸೆಲ್‌ ಅಲ್ಟ್ರಾ–ವೈಡ್‌ ಆಂಗಲ್‌ ಶೂಟರ್‌ ಅನ್ನು ಹೊಂದಿರುತ್ತದೆ.

ಬ್ಯಾಟರಿ

ಇನ್ನು ಬ್ಯಾಟರಿಯ ಬಗ್ಗೆ ಹೇಳುವುದಾದರೆ, ವಿವೊ X100 ಸ್ಮಾರ್ಟ್‌ಫೋನ್‌ 120W ವೈರ್‍ಡ ಚಾರ್ಚಿಂಗ್‌ನೊಂದಿಗೆ 5,000 mAh ಬ್ಯಾಟರಿಯೊಂದಿಗೆ ಬರಲಿದೆ. Vivo X100 Pro ಸ್ಮಾರ್ಟ್‌ಫೋನ್‌ 100W ವೈರ್‍ಡ ಚಾರ್ಜಿಂಗ್‌ನೊಂದಿಗೆ 5,400mAh ಬ್ಯಾಟರಿ ಬೆಂಬಲಿಸಲಿದೆ. ಕಂಪನಿಯ ಪ್ರಕಾರ ಈ ಎರಡೂ ಸ್ಮಾರ್ಟ್‌ಪೋನ್‌ಗಳು ಧೂಳು ಮತ್ತು ನೀರಿನ್ನು ಪ್ರತಿರೋಧಿಸಲು IP68 ರೇಟಿಂಗ್‌ನ ರಕ್ಷಣೆ ಪಡೆದುಕೊಂಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ