logo
ಕನ್ನಡ ಸುದ್ದಿ  /  ಜೀವನಶೈಲಿ  /  Electric Shock: ವಿದ್ಯುತ್ ಶಾಕ್ ಹೊಡೆದರೆ ಈ ತಪ್ಪು ಮಾಡಬೇಡಿ; ಪ್ರಥಮ ಚಿಕಿತ್ಸೆ ಏನೆಂದು ತಿಳಿದುಕೊಳ್ಳಿ

Electric Shock: ವಿದ್ಯುತ್ ಶಾಕ್ ಹೊಡೆದರೆ ಈ ತಪ್ಪು ಮಾಡಬೇಡಿ; ಪ್ರಥಮ ಚಿಕಿತ್ಸೆ ಏನೆಂದು ತಿಳಿದುಕೊಳ್ಳಿ

HT Kannada Desk HT Kannada

Dec 11, 2022 06:29 PM IST

google News

ಸಾಂದರ್ಭಿಕ ಚಿತ್ರ

    • ವಿದ್ಯುತ್ ಆಘಾತದಿಂದ ಸುಟ್ಟಗಾಯಗಳಾದ ಸಂದರ್ಭದಲ್ಲಿ, ಈ ಕೆಳಗಿನ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ಅಗತ್ಯವಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿದ್ಯುತ್ ಶಾಕ್ ಹೊಡೆದಾಗ ಏನು ಮಾಡಬೇಕೆಂದು ಅನೇಕರಿಗೆ ತಿಳಿದಿರುವುದಿಲ್ಲ. ಒಂದು ವೇಳೆ ಕರೆಂಟ್‌ ಶಾಕ್‌ ಹೊಡೆದರೆ, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವವರೆಗೂ ಯಾವುದೇ ಚಿಕಿತ್ಸೆಯೂ ಸಿಗುವುದಿಲ್ಲ. ಹೀಗಾದರೆ, ಅಪಘಾತಕ್ಕೀಡಾದವರ ಜೀವಕ್ಕೆ ಅಪಾಯವಾಗಬಹುದು. ಅದಕ್ಕಾಗಿಯೇ ವಿದ್ಯುತ್ ಅವಘಡದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವುದು ತುಂಬಾ ಮುಖ್ಯ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೆ, ಚಿಕಿತ್ಸೆ ಕಷ್ಟವಾಗುತ್ತದೆ. ಇದಕ್ಕಾಗಿ ಅಗತ್ಯ ಮಾಹಿತಿ ಇಲ್ಲಿದೆ ನೋಡಿ.

ವಿದ್ಯುತ್ ಅವಘಡ ಸಂಭವಿಸಿದಾಗ ಏನು ಮಾಡಬೇಕು?

ನಮ್ಮ ದೇಹವೇ ವಿದ್ಯುತ್ ವಾಹಕ. ಕರೆಂಟ್ ಕಂಬ ಅಥವಾ ತಂತಿಯನ್ನು ಸ್ಪರ್ಶಿಸಿ ಯಾರಿಗಾದರು ಆಘಾತ ಉಂಟಾದರೆ, ಮೊದಲಿಗೆ ಆ ವ್ಯಕ್ತಿಯನ್ನು ಅದರಿಂದ ಮುಕ್ತಗೊಳಿಸಬೇಕು. ಮುಕ್ತಗೊಳಿಸದ ಹೊರತಾಗಿ ಅವರನ್ನು ಸ್ಪರ್ಶಿಸುವ ಅಥವಾ ನೇರವಾಗಿ ಕೈಯಿಂದ ಬಿಡಿಸುವ ಪ್ರಯತ್ನ ಮಾಡಬಾರದು. ಒಂದು ವೇಳೆ ವ್ಯಕ್ತಿಯನ್ನು ಹಾಗೆಯೇ ಮುಟ್ಟಿದರೆ, ಅವನ ಮೂಲಕ ಹಿಡಿದವನ ದೇಹಕ್ಕೂ ವಿದ್ಯುತ್ ಹರಿಯುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರವೇ. ವಿದ್ಯುತ್ ಆಘಾತವು ತೀವ್ರವಾದ ಸುಟ್ಟಗಾಯಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಅಪಘಾತವು ತೀವ್ರವಾಗಿದ್ದರೆ, ಅದು ಸಾವು ಅಥವಾ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.

ತುರ್ತು ಚಿಕಿತ್ಸೆ ಯಾವಾಗ ಬೇಕು?

ವಿದ್ಯುತ್ ಆಘಾತದಿಂದ ಸುಟ್ಟಗಾಯಗಳಾದ ಸಂದರ್ಭದಲ್ಲಿ, ಈ ಕೆಳಗಿನ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ಅಗತ್ಯವಿದೆ.

1. ಉಸಿರಾಟದ ತೊಂದರೆ

2. ಹೃದಯ ಬಡಿತದಲ್ಲಿ ವ್ಯತ್ಯಾಸ

3. ಹೃದಯ ಸ್ತಂಭನ ಅಥವಾ ಹೃದಯಾಘಾತ

4. ಮೂರ್ಛೆ ಹೋದಾಗ

5. ಪ್ರಜ್ಞೆ ಕಳೆದುಕೊಂಡಾಗ

ಪ್ರಾಥಮಿಕ ಚಿಕಿತ್ಸೆ ಏನು?

ಯಾರಿಗಾದರೂ, ವಿದ್ಯುತ್‌ ತಗುಲಿದಾಗ ಪ್ರಾಥಮಿಕ ಚಿಕಿತ್ಸೆ ತುಂಬಾ ಮುಖ್ಯ. ಒದ್ದೆಯಾದ ಕೈ ಮತ್ತು ಕಾಲುಗಳಿಂದ ವಿದ್ಯುತ್ ಮೂಲವನ್ನು ಎಂದಿಗೂ ಮುಟ್ಟಬೇಡಿ. ಹಾಗೆ ಮಾಡುವುದರಿಂದ ವಿದ್ಯುತ್‌ ಅವಘಡಕ್ಕೆ ನೀವು ಕೂಡಾ ಒಳಗಾಗುತ್ತೀರಿ.

ವಿದ್ಯುತ್ ಸರಬರಾಜು ನಿಲ್ಲಿಸಬೇಕು. ಇದು ಸಾಧ್ಯವಾಗದಿದ್ದರೆ, ನಿರ್ಜೀವ ವಸ್ತು ಅಥವಾ ಒಣ ಮರದ ಸಹಾಯದಿಂದ ಶಾಕ್‌ ಹೊಡೆದವರನ್ನು ಬಿಡಿಸಿ. ಹಸಿ ವಸ್ತುಗಳನ್ನು ಬಳಸಬೇಡಿ.

ಬಿಡಿಸಿದ ನಂತರ, ಬಾಧಿತ ವ್ಯಕ್ತಿಯು ಉಸಿರಾಡುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅವರ ನಾಡಿಮಿಡಿತವನ್ನು ಪರಿಶೀಲಿಸಿ. ಆಘಾತಕ್ಕೊಳಗಾದ ವ್ಯಕ್ತಿಯನ್ನು ಹೆಚ್ಚು ಅಲುಗಾಡಿಸಬೇಡಿ.

ಆಘಾತಕ್ಕೊಳಗಾದ ವ್ಯಕ್ತಿಯನ್ನು ಮಲಗಿಸಬೇಕು. ಅವರ ಕಾಲುಗಳನ್ನು ಮೇಲಕ್ಕೆತ್ತಬೇಕು ಮತ್ತು ಅವರ ತಲೆಯನ್ನು ಸ್ವಲ್ಪ ಕೆಳಕ್ಕೆ ಇಳಿಸಬೇಕು.

ಸ್ನಾಯು ನೋವು ಅಥವಾ ಸೆಳೆತ ಅಥವಾ ಹೃದಯ ಬಡಿತದಲ್ಲಿ ಬದಲಾವಣೆಯನ್ನು ಗಮನಿಸಿದರೆ, ತಕ್ಷಣ ತುರ್ತು ವೈದ್ಯಕೀಯ ಚಿಕಿತ್ಸೆಯ ಏರ್ಪಾಡು ಮಾಡಿ.

ಬಲಿಪಶುವಿನ ಉಸಿರಾಟ ಸರಾಗವಾಗಿಲ್ಲದಿದ್ದರೆ, ಅಥವಾ ಮಾತನಾಡದಿದ್ದರೆ, ತಕ್ಷಣವೇ CPR ಮಾಡಿ.

ಸುಟ್ಟ ಭಾಗಗಳನ್ನು ಸ್ವಚ್ಛವಾದ ಬಟ್ಟೆಯಿಂದ ಮುಚ್ಚಿ. ಕಂಬಳಿ ಅಥವಾ ಟವೆಲ್ ಬಳಸಬೇಡಿ. ಅದರ ದಾರ ಅಥವಾ ಎಳೆ ಸುಟ್ಟಗಾಯಕ್ಕೆ ಅಂಟಿಕೊಳ್ಳಬಹುದು. ಅದರಿಂದ ಸೋಂಕು ಆಗಬಹುದು. ಹೀಗಾಗಿ ಸುಟ್ಟ ಗಾಯಗಳಿಗೆ ಅಂಟಿಕೊಳ್ಳದಂತಹ ಬಟ್ಟೆಯನ್ನು ಬಳಸಿ.

ಪ್ರತಿ ಅವಘಡಗಳು ಸಂಭವಿಸಿದಾಗ ಧೈರ್ಯ ತಂದುಕೊಳ್ಳುವುದು ತುಂಬಾ ಮುಖ್ಯ. ನೀವು ಭಯಪಡುವುದರ ಜತೆಗೆ ಬಲಿಪಶುಗಳನ್ನು ಕೂಡಾ ಭಯಪಡಿಸಬೇಡಿ. ಹೀಗಾಗಿ ಅವರಿಗೆ ಧೈರ್ಯ ತುಂಬಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ