Thursday Motivation: ನಿಜವಾದ ಪ್ರೀತಿ ಹೇಗಿರುತ್ತೆ; ಈ ಗುಣಗಳು ನಿಮ್ಮಲ್ಲಿ ಇವೆಯೇ ಪರಿಶೀಲಿಸಿಕೊಳ್ಳಿ
Feb 08, 2024 06:38 AM IST
ಗುರುವಾರದ ಪ್ರೇರಣೆಯ ಸರಣಿಯಲ್ಲಿ ನಿಜವಾದ ಪ್ರೀತಿ ಹೇಗಿರುತ್ತೆ; ಈ ಗುಣಗಳು ನಿಮಲ್ಲಿಯೂ ಇವೆಯೇ ಪರಿಶೀಲಿಸಿಕೊಳ್ಳಿ
Thursday Motivation: ನೀವು ಇತರರನ್ನು ಪ್ರೀತಿಸುತ್ತೇವೆ ಎಂದು ಯೋಚಿಸಿದರೆೆ ಸಾಕಾಗುವುದಿಲ್ಲ. ನಿಮ್ಮಲ್ಲಿ ಪ್ರೀತಿಯ ಗುಣಗಳಿವೆಯೇ ಎಂದು ಅನ್ನೋದನ್ನ ತಿಳಿದುಕೊಳ್ಳಬೇಕು. ಕೆಲವರು ತಮ್ಮ ಸ್ವಾರ್ಥವನ್ನೇ ಪ್ರೀತಿ ಎಂದು ಭಾವಿಸುತ್ತಾರೆ.
Thursday Motivation In Kannada: ಪ್ರೀತಿ ಎರಡಕ್ಷರದ ಪದ. ಆದರೆ ಎರಡು ಜೀವಗಳು, ಎರಡು ಕುಟುಂಬಗಳು, ಇಡೀ ಸಮಾಜವೇ ಈ ಪ್ರೀತಿಯ ಮೇಲೆ ಅವಲಂಬಿಸಿದೆ. ಹೀಗಾಗಿಯೇ ಎಂದೂ ಕೂಡ ಪ್ರೀತಿಯನ್ನು ಕೀಳಾಗಿ ಕಾಣಬೇಡಿ, ಹಗುರವಾಗಿ ಮಾತನಾಡಬೇಡಿ. ಪ್ರೀತಿ ನಿಸ್ವಾರ್ಥವಾಗಿರಬೇಕು, ಆದರೆ ಅನೇಕ ಜನರು ಸ್ವಾರ್ಥದ ಪ್ರೀತಿಗೆ ಬಲಿಯಾಗುತ್ತಿದ್ದಾರೆ.
ಕೆಲವರು ಪ್ರಮಾಣಿಕವಾಗಿ ಪ್ರೀತಿಸುತ್ತಿದ್ದೇವೆ ಎಂದುಕೊಳ್ಳುತ್ತಾರೆ. ನಿಜವಾಗಿ ಹೇಳಬೇಕೆಂದರೆ ಅವರಿಗೆ ಪರಿಶುದ್ಧವಾದ ಪ್ರೀತಿಯ ಅರ್ಥವೇ ತಿಳಿದಿರುವುದಿಲ್ಲ. ಪರರ ಸ್ವಾರ್ಥ ಪ್ರೀತಿಗೆ ಬಲಿಯಾದವರು ಬಹಳ ಮಂದಿ ಇದ್ದಾರೆ. ನೀವು ಜನಿವಾದ ಪ್ರೀತಿಯಲ್ಲಿದ್ದೀರಾ ಎಂದು ತಿಳಿಯಲು ನಿಮ್ಮಲ್ಲಿ ಕೆಲವು ಉತ್ತಮ ಗುಣಗಳಿವೆಯೇ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳಬಹುದು.
ಪ್ರೀತಿ ಬಲವಾದ ಅಡಿಪಾಯವೇ ನಂಬಿಕೆ
ನೀವು ಪ್ರೀತಿಸುವ ವ್ಯಕ್ತಿಯನ್ನು ಅಳೆಯಲಾಗದಷ್ಟು, ಅಂತ್ಯವಿಲ್ಲದಷ್ಟು ಪ್ರೀತಿಸಿದರಷ್ಟೇ ಸಾಕಾಗುವುದಿಲ್ಲ ಅವರ ಮೇಲೆ ನಂಬಿಕೆ ಇಡಬೇಕು. ಪ್ರೀತಿಯ ಅಡಿಪಾಯವೇ ನಂಬಿಕೆ. ನೀವು ಇತರರನ್ನು ಅನುಮಾನಿಸುತ್ತಾ ಮತ್ತು ಅವಮಾನಿಸುತ್ತಾ ಹೋದರೆ ಅದು ಪ್ರೀತಿಯಲ್ಲ. ನೀವು ಇಷ್ಟಪಟ್ಟವರ ಫೋನ್ ಚೆಕ್ ಮಾಡುವುದು, ಅವರು ಎಲ್ಲಿಗೆ ಹೋಗುತ್ತಿದ್ದಾರೆ, ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಪರಿಶೀಲಿಸುವುದು ಅನುಮಾನ ಮತ್ತು ಸ್ವಾರ್ಥವನ್ನು ತೋರಿಸುತ್ತದೆ. ಇದು ನಿಜವಾದ ಪ್ರೀತಿಯಲ್ಲ. ಆದ್ದರಿಂದ ನೀವು ನಿಜವಾದ ಪ್ರೇಮಿಯಾಗಿದ್ದರೆ ನಿಮ್ಮ ಗೆಳತಿ ಅಥವಾ ಗೆಳೆಯನ ಮೇಲೆ ಸಂಪೂರ್ಣವಾಗಿ ನಂಬಿಕೆ ಇಡುವುದು.
ನೀವು ಅವರೊಂದಿಗೆ ಇರುವಾಗ ನಿಮ್ಮ ಗೆಳತಿ ಅಥವಾ ಪ್ರೇಮಿಗೆ ಸುರಕ್ಷಿತ ಭಾವ ಮೂಡಬೇಕು, ಖುಷಿಯಾಗಿರಬೇಕು. ಆದರೆ ನೀವು ಅವರಿಗೆ ಮುಜುಗರ, ಅನಾನುಕೂಲ ಮತ್ತು ಅಸುರಕ್ಷಿತ ಭಾವನೆಯನ್ನು ಉಂಟು ಮಾಡಿದರೆ ನಿಮ್ಮದು ನಿಜವಾದ ಪ್ರೀತಿಯಲ್ಲ ಎಂದು ಅರ್ಥ. ನೀವು ಪ್ರೀತಿಸುವ ಯಾರಾದರೂ ನಿಮ್ಮೊಂದಿಗೆ ಇದ್ದಾಗ ಸುರಕ್ಷಿತ ಭಾವನೆ ಇರುತ್ತದೆ. ಆಗ ಮಾತ್ರ ಅವರು ನಿಮ್ಮವರಾಗುತ್ತಾರೆ. ಅವರು ಇಲ್ಲದಿದ್ದರೆ, ನಿಮ್ಮ ಪ್ರೀತಿಯು ದೋಷಪೂರಿತವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಪ್ರೀತಿಗಿಂತ ಹಣಕ್ಕೆ ಬೆಲೆ ಕೊಡುವವರು ಹೆಚ್ಚು ಮಂದಿ ಇದ್ದಾರೆ. ನೀವು ಅಂತಹ ವ್ಯಕ್ತಿಯೇ ಅಥವಾ ಇಲ್ಲವೇ ಎಂದು ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ. ನೀವು ಪ್ರೀತಿಗಿಂತ ಹಣಕ್ಕೆ ಹೆಚ್ಚು ಬೆಲೆ ನೀಡಿದರೆ ನಿಮ್ಮನ್ನು ನಿಜವಾದ ಪ್ರೇಮಿ ಎಂದು ಕರೆಯಲಾಗದು. ನೀವು ಪ್ರೀತಿಸುವ ವ್ಕ್ತಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಹಣದ ಅಗತ್ಯವಿದೆ. ಆದರೆ ನಿಜವಾದ ಪ್ರೀತಿಗೆ ಹಣದೊಂದಿಗೆ ಯಾವುದೇ ಸಂಬಂಧಿವಿಲ್ಲ. ನೀವು ಇತರರ ಹಣಕ್ಕೆ ಆಕರ್ಷಿತರಾಗಿದ್ದಾರೆ ನಿಮ್ಮದು ನಿಜವಾದ ಪ್ರೀತಿ ಅಲ್ಲ. ಬಡವರನ್ನೂ ಪ್ರೀತಿಸುವ ಮನಸ್ಸು ನಿಮ್ಮಲ್ಲಿರಬೇಕು.
ಪ್ರೀತಿ ಎಂದರೆ ನೀವು ಇತರರಿಂದ ತೆಗೆದುಕೊಳ್ಳುವುದಷ್ಟೇ ಅಲ್ಲ, ನೀವು ಅವರಿಗೆ ನೀಡುವುದು ಕೂಡ ಮುಖ್ಯ. ನೀವು ಅವರಿಗೆ ಗೌರವ ಮತ್ತು ಪ್ರೀತಿಯನ್ನು ನೀಡಿದರೆ ಮಾತ್ರ ಅವರು ನಿಮ್ಮ ಜೀವನದಲ್ಲಿ ಉಳಿಯುತ್ತಾರೆ. ನಿಮ್ಮ ಪ್ರೀತಿಪಾತ್ರರನ್ನು, ಅವರ ಕುಟುಂಬದ ಸದಸ್ಯರನ್ನು ಮತ್ತು ಸಮಾಜವನ್ನು ನೀವು ಸೌಜನ್ಯ ಮತ್ತು ಗೌರವದಿಂದ ನಡೆಸಿಕೊಂಡರೆ, ನೀವು ಕೂಡ ಅದೇ ರೀತಿಯ ಸೌಜನ್ಯ ಮತ್ತು ಗೌರವವನ್ನು ಪಡೆಯುತ್ತೀರಿ. ಇವೆಲ್ಲವೂ ನಿಮ್ಮ ಮೇಲಿನ ಇತರರ ಪ್ರೀತಿಯನ್ನು ಹೆಚ್ಚಿಸುತ್ತದೆ.
ಕೆಟ್ಟ ಲಕ್ಷಣಗಳು ಕೆಟ್ಟ ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿಯನ್ನು ಯಾರೂ ಪ್ರಾಮಾಣಿಕವಾಗಿ ಪ್ರೀತಿಸುವುದಿಲ್ಲ. ಆದ್ದರಿಂದ ನೀವು ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದರೆ ಆದಷ್ಟು ಬೇಗ ಅವುಗಳನ್ನು ತ್ಯಜಿಸಿ. ನಿಜವಾದ ಪ್ರೀತಿಯನ್ನು ಪಡೆಯಲು ಮೊದಲು ನೀವು ಪರಿಶುದ್ಧವಾಗಿರಬೇಕು. ಮನೆಯಲ್ಲಿರುವವರನ್ನು ಗೌರವಿಸಬೇಕು. ಸಮಾಜಕ್ಕೆ ಬೆಲೆ ಕೊಡಬೇಕು. ಅಂತಹವರಿಗೆ ಮಾತ್ರ ನಿಜವಾದ ಪ್ರೀತಿ ಮತ್ತು ಉತ್ತಮ ಜೀವನ ಸಿಗುತ್ತದೆ. ನಿಸ್ವಾರ್ಥದ ಪ್ರೀತಿ ಸಿಗಬೇಕಾದರೆ ನಿಜವಾಗಿಯೂ ನೀವು ಅದೃಷ್ಟ ಮಾಡಿರಬೇಕು. ನೀವು ಆ ಅದೃಷ್ಟದ ವ್ಯಕ್ತಿಯಾಗಬೇಕಾದರೆ ಎಲ್ಲರೂ ಬಯಸುತ್ತಾರೆ. (This copy first appeared in Hindustan Times Kannada website. To read more like this please logon to kannada.hindustantime.com)
ವಿಭಾಗ