Personal loan: ಪರ್ಸನಲ್ ಲೋನ್ ಬೇಗನೆ ಕೈ ಸೇರ್ಬೇಕಾ? ಈ ಅಂಶಗಳನ್ನು ತಪ್ಪದೆ ಪಾಲಿಸಿ
Sep 17, 2022 05:59 PM IST
ಪರ್ಸನಲ್ ಲೋನ್ ಪಡೆಯಲು ಈ ರೀತಿ ಮಾಡಿ
- ನಿಮ್ಮ ಹಣಕಾಸಿ ಸಾಮರ್ಥ್ಯ ಎಷ್ಟಿದೆಯೋ, ಅದರೊಳಗಡೆ ನಿಮ್ಮ ಸಾಲದ ಮೊತ್ತವಿರಬೇಕು. ನಿಮ್ಮ ಆದಾಯದ ಮಟ್ಟಕ್ಕಿಂತ ಹೆಚ್ಚಿನ ಸಾಲದ ಮೊತ್ತಕ್ಕೆ ಅರ್ಜಿ ಸಲ್ಲಿಸುವುದರಿಂದ ನಿಮ್ಮ ವೈಯಕ್ತಿಕ ಸಾಲದ ಅನುಮೋದನೆಯ ಸಾಧ್ಯತೆ ಕಡಿಮೆಯಾಗಬಹುದು.
ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲಕ್ಕೆ ಹೆಚ್ಚಿನವರು ಮೊರೆ ಹೋಗುತ್ತಾರೆ. ಸಾಲಗಳಲ್ಲಿ ಸ್ವಲ್ಪ ಸುಲಭವಾಗಿ ಬೇಡಿಕೆ ಇಡಬಹುದಾದ ಸಾಲವೇ ಪರ್ಸನಲ್ ಲೋನ್. ವಿವಿಧ ಯೋಜಿತ ಮತ್ತು ಯೋಜಿತವಲ್ಲದ ಖರ್ಚು ವೆಚ್ಚಗಳಿಗೆ ಇದು ಸಹಾಯಕ. ಪರ್ಸನಲ್ ಲೋನ್‌ಗಳು ಮೇಲಾಧಾರ ಮುಕ್ತವಾಗಿರುವುದರಿಂದ, ಸಾಲ ನೀಡುವ ಬ್ಯಾಂಕ್ ಅಥವಾ ಇತರ ಸಾಲದಾತರು ಸಾಲಗಾರರನ್ನು ಸಾಲಕ್ಕಾಗಿ ಅರ್ಹತೆ ಪಡೆಯಲು ಮತ್ತು ಸಾಲದ ಅಪಾಯವನ್ನು ಕಡಿಮೆ ಮಾಡಲು ಕೆಲವು ಕಟ್ಟುನಿಟ್ಟಾದ ಅರ್ಹತಾ ಮಾನದಂಡಗಳನ್ನು ರೂಪಿಸಿರುತ್ತಾರೆ.
ಹೀಗಾಗಿ, ಯಾವುದೇ ತೊಂದರೆಗಳಿಲ್ಲದೆ ತ್ವರಿತವಾಗಿ ಸಾಲ ಅನುಮೋದನೆಗೊಳ್ಳಲು ಕೆಲವೊಂದು ಸಲಹೆಗಳನ್ನು ನಾವು ನೀಡುತ್ತೇವೆ. ಈ ಮೂಲಕ ನಿಮ್ಮ ವೈಯಕ್ತಿಕ ಸಾಲವನ್ನು ಪಡೆಯುವ ಸಾಧ್ಯತೆಗಳನ್ನು ನೀವು ಹೆಚ್ಚಿಸಬಹುದು.
1. ಸಾಲ ನೀಡಲು ಅರ್ಹತೆಯ ಮಾನದಂಡಗಳನ್ನು ತಿಳಿದುಕೊಳ್ಳಿ
ಸಾಲ ನೀಡುವವರು ನಿಗದಿತ ಅರ್ಹತಾ ಮಾನದಂಡಗಳನ್ನು ಪಾಲಿಸದ ಹೊರತು ಯಾರಿಗೂ ಸಾಲ ನೀಡುವುದಿಲ್ಲ. ಬ್ಯಾಂಕ್ ಆಗಲಿ, ಯಾರೇ ಆಗಲಿ, ಕೆಲ ನಿಬಂಧನೆಗಳನ್ನು ಪಾಲಿಸಿದ ಬಳಿಕವೇ ಸಾಲ ನೀಡುತ್ತಾರೆ. ಹೀಗಾಗಿ, ಸಾಲ ನೀಡಲು ಇರುವ ಅರ್ಹತೆಯ ಮಾನದಂಡಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಇದು ವಯಸ್ಸು, ಆದಾಯ ಮಟ್ಟ, ಉದ್ಯೋಗ ಮತ್ತು ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ನೀವು ಸುಲಭವಾಗಿ ಲೋನ್‌ಗೆ ಅರ್ಹತೆ ಪಡೆಯಲು ಆನ್‌ಲೈನ್ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಬಳಸಿ.
2. ನಿಮ್ಮಂದ ಮರುಪಾವತಿಸಲು ಸಾಧ್ಯವಾಗುವ ಮೊತ್ತಕ್ಕೆ ಅರ್ಜಿ ಸಲ್ಲಿಸಿ
ನಿಮ್ಮ ಹಣಕಾಸಿ ಸಾಮರ್ಥ್ಯ ಎಷ್ಟಿದೆಯೋ, ಅದರೊಳಗಡೆ ನಿಮ್ಮ ಸಾಲದ ಮೊತ್ತವಿರಬೇಕು. ನಿಮ್ಮ ಆದಾಯದ ಮಟ್ಟಕ್ಕಿಂತ ಹೆಚ್ಚಿನ ಸಾಲದ ಮೊತ್ತಕ್ಕೆ ಅರ್ಜಿ ಸಲ್ಲಿಸುವುದರಿಂದ ನಿಮ್ಮ ವೈಯಕ್ತಿಕ ಸಾಲದ ಅನುಮೋದನೆಯ ಸಾಧ್ಯತೆ ಕಡಿಮೆಯಾಗಬಹುದು. ನಿಮ್ಮ ಎಲ್ಲಾ ಆದಾಯದ ಮೂಲಗಳು ಮತ್ತು ಹಣಕಾಸಿನ ಬಾಧ್ಯತೆಗಳನ್ನು ಪರಿಗಣಿಸಿದ ಬಳಿಕವೇ ಸಾಲದ ಮೊತ್ತವನ್ನು ಅಂತಿಮಗೊಳಿಸಿ. ಇದು ಮುಂದೆ ಸಾಲ ಮರುಪಾವತಿಯನ್ನು ಅನುಕೂಲಕರವಾಗಿಸುತ್ತದೆ ಮತ್ತು ಡಿಫಾಲ್ಟ್ ಅಪಾಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ.
3. ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಿ
ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯ ಮಾನದಂಡವಾಗಿದೆ. ಹೀಗಾಗಿ ವೈಯಕ್ತಿಕ ಸಾಲದ ಅನುಮೋದನೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಇದು ಕೂಡಾ ಒಂದು. 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಸಾಲಕ್ಕೆ ಅನುಮೋದನೆ ಪಡೆಯುವ ನಿಮ್ಮ ಅವಕಾಶಗಳನ್ನು ಹೆಚ್ಚಿಸಬಹುದು. ಒಂದು ವೇಳೆ ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮ್ಮ EMI ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಮತ್ತು ಕಡಿಮೆ ಕ್ರೆಡಿಟ್ ಬಳಕೆಯ ಅನುಪಾತವನ್ನು ನಿರ್ವಹಿಸುವ ಮೂಲಕ ನಿಮ್ಮ ಸ್ಕೋರ್ ಅನ್ನು ಸುಧಾರಿಸಿಕೊಳ್ಳಿ.
ಸರಿಯಾದ ಮಾಹಿತಿಯನ್ನು ಒದಗಿಸಿ
ನಿಮ್ಮ ಪರ್ಸನಲ್ ಲೋನ್ ಅರ್ಜಿಯನ್ನು ಭರ್ತಿ ಮಾಡುವಾಗ, ನಿಖರವಾದ ಮಾಹಿತಿಯನ್ನು ನಮೂದಿಸುವುದನ್ನು ಖಚಿತಪಡಿಸಿಕೊಳ್ಳಿ. ತಪ್ಪು ಮಾಹಿತಿಯು ನಿಮ್ಮ ಲೋನ್ ಅನುಮೋದನೆಯ ಮೇಲೆ ಪರಿಣಾಮ ಬೀರುವುದರಿಂದ ಯಾವುದೇ ತಪ್ಪುಗಳು ಅಥವಾ ಕಾಗುಣಿತ ತಪ್ಪುಗಳಾಗದಂತೆ ಎರಡು ಬಾರಿ ಪರಿಶೀಲಿಸಿ. ಇದಲ್ಲದೆ, ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಡಿ. ನಿಮ್ಮ ಬದಿಯಿಂದ ಯಾವುದೇ ತಪ್ಪುಗಳಾಗದಂತೆ ಗಮನವಹಿಸಿ.
5. ಬಹು ಸಾಲದ ಅರ್ಜಿಗಳನ್ನು ತಪ್ಪಿಸಿ
ಹಣಕಾಸಿನ ತುರ್ತುಸ್ಥಿತಿಯ ಸಮಯದಲ್ಲಿ, ಸಾಲ ಪಡೆದುಕೊಳ್ಳುವ ಭರವಸೆಯಲ್ಲಿ ನೀವು ಏಕಕಾಲದಲ್ಲಿ ಹಲವಾರು ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು. ನೀವು ಇದನ್ನು ತಪ್ಪಿಸಬೇಕು. ಸಾಲದಾತರು ಇದನ್ನು ಕ್ರೆಡಿಟ್ ಅವಲಂಬಿತ ನಡವಳಿಕೆಯಾಗಿ ಮಾತ್ರ ನೋಡಬಹುದು. ನೀವು ಹಲವಾರು ಅಪ್ಲಿಕೇಶನ್‌ಗಳನ್ನು ಹಾಕುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಹಾನಿಯಾಗಬಹುದು. ಏಕೆಂದರೆ ಪ್ರತಿ ಸಾಲದ ಅರ್ಜಿಯೂ ಕ್ರೆಡಿಟ್ ವರದಿಯ ಆಧಾರದಲ್ಲಿ ಪರಶೀಲನೆಗೆ ಒಳಗಾಗುತ್ತದೆ. ಕಾಲಾನಂತರದಲ್ಲಿ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ.
6. ಸೂಕ್ತ ಸಹ-ಸಾಲಗಾರನನ್ನು ಸೇರಿಸಿಕೊಳ್ಳಿ
ಹೆಚ್ಚಿನ ಸಾಲದಾತರು ನಿಮ್ಮ ಪೋಷಕರು ಅಥವಾ ಸಂಗಾತಿಯನ್ನು ಸಹ ಅರ್ಜಿದಾರರಾಗಿ ಅಥವಾ ಜಾಮೀನುದಾರರಾಗಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಾರೆ. ನೀವು ಸಾಲದಾತರ ಆದಾಯದ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ, ಅಥವಾ ನಿಮ್ಮ ಕ್ರೆಡಿಟ್ ಸ್ಕೋರ್ ಮಾರ್ಕ್ ಅನ್ನು ಹೊಂದಿಲ್ಲದಿದ್ದರೆ ಇದು ವಿಶೇಷವಾಗಿ ಸಹಾಯಕವಾಗಿರುತ್ತದೆ. ನಿಮ್ಮ ಜಾಮೀನುದಾರರು ಹೆಚ್ಚಿನ ಕ್ರೆಡಿಟ್ ಸ್ಕೋರ್ ಮತ್ತು ಮಾಸಿಕ ಆದಾಯ ಹೊಂದಿದ್ದರೆ, ಆಕರ್ಷಕ ಬಡ್ಡಿ ದರಗಳಲ್ಲಿ ವೈಯಕ್ತಿಕ ಸಾಲವನ್ನು ಪಡೆಯುವ ನಿಮ್ಮ ಅವಕಾಶ ಸುಧಾರಿಸುತ್ತದೆ.
7. ನಿಮ್ಮ ಎಲ್ಲಾ ಆದಾಯದ ಮೂಲಗಳನ್ನು ನಮೂದಿಸಿ
ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ನೀವು ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಬಹುದೇ ಎಂದು ಸಾಲದಾತರು ಪರೀಶೀಲಿಸುತ್ತಾರೆ. ಆದ್ದರಿಂದ ಬಾಡಿಗೆ, ಲಾಭಾಂಶ ಸೇರಿದಂತೆ ಯಾವುದೇ ಹೆಚ್ಚುವರಿ ಆದಾಯದ ಮೂಲಗಳು ಇದ್ದರೆ ಅದನ್ನು ನಮೂದಿಸಲು ಮರೆಯದಿರಿ. ಇದು ನಿಮ್ಮ ಲೋನ್ ಅನುಮೋದನೆಯ ಅವಕಾಶಗಳ ಜತೆಗೆ ಹೆಚ್ಚಿನ ಸಾಲದ ಮೊತ್ತಕ್ಕೆ ಅರ್ಹರಾಗಬಹುದು.
8. ದೀರ್ಘಾವಧಿಯ ಸಾಲ ಮರುಪಾವತಿಯನ್ನು ಆಯ್ಕೆಮಾಡಿ
ದೀರ್ಘಾವಧಿಯ ಸಾಲದ ಅವಧಿಯು ನಿಮ್ಮ EMI ಗಳನ್ನು ಕಾಲಾನಂತರದಲ್ಲಿ ವಿಭಜಿಸುತ್ತದೆ. ಕಡಿಮೆ ಇಎಂಐ ಇದ್ದರೆ ಯಾವುದೇ ಅಪಾಯವಿಲ್ಲದೆಯೇ ಸಕಾಲಿಕವಾಗಿ ಮರುಪಾವತಿ ಮಾಡುತ್ತಾ ಬರಬಹುದು. ಈ ರೀತಿಯಾಗಿ, ನೀವು ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಬಹುದು.