ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಅಯೋಧ್ಯೆ ಟ್ರಿಪ್ ಪ್ಲಾನ್ ಇದ್ಯಾ; ಹಾಗಿದ್ರೆ ಸುತ್ತಲಿನ ಈ ಜಾಗಗಳನ್ನೂ ಮಿಸ್ ಮಾಡದೇ ನೋಡಿ ಬನ್ನಿ
Apr 08, 2024 03:48 PM IST
ಅಯೋಧ್ಯೆ ಟ್ರಿಪ್
- ಬೇಸಿಗೆ ರಜೆಗಳು ಆರಂಭವಾಗಿದೆ, ಈ ವರ್ಷದ ರಜೆಯಲ್ಲಿ ಅಯೋಧ್ಯೆಗೆ ತೆರಳಿ ಬಾಲರಾಮನ ದರ್ಶನ ಮಾಡಿ ಬರೋಣ ಎಂದು ನೀವು ಪ್ಲಾನ್ ಮಾಡಿದ್ದರೆ ಒಂದು ವಾರದ ಟ್ರಿಪ್ ಆಯೋಜಿಸಿ. ಆಗ ಅಯೋಧ್ಯೆ ರಾಮಮಂದಿರ ಜೊತೆಗೆ ಸುತ್ತಲೂ ಇರುವ ಈ ಪ್ರಸಿದ್ಧ ಪ್ರವಾಸಿತಾಣಗಳನ್ನು ನೋಡಿಬರಬಹುದು. ಇದು ನಿಮ್ಮ ಜೀವನದ ಬೆಸ್ಟ್ ಟ್ರಿಪ್ ಆಗುವುದರಲ್ಲಿ ಅನುಮಾನವಿಲ್ಲ. (ಬರಹ: ಪ್ರಿಯಾಂಕ ಗೌಡ)
ಬೇಸಿಗೆ ಕಾಲ ಶುರುವಾಗಿದ್ದು, ಮಕ್ಕಳು ಈಗಾಗಲೇ ರಜೆಯ ಉತ್ಸಾಹದಲ್ಲಿದ್ದಾರೆ. ಈ ಸಮಯದಲ್ಲಿ ಎಲ್ಲಿಗಾದರೂ ಪ್ರವಾಸ ಕೈಗೊಳ್ಳಬೇಕು ಎಂದು ನೀವು ಯೋಜಿಸುತ್ತಿದ್ದರೆ, ಅಯೋಧ್ಯೆಗೆ ತೆರಳಬಹುದು. ಅಯೋಧ್ಯೆ ಅಂದಾಕ್ಷಣ ಥಟ್ಟನೆ ನೆನಪಾಗುವುದೇ ರಾಮ ಜನ್ಮ ಭೂಮಿ. ಅಯೋಧ್ಯೆಯು ಸರಯೂ ನದಿಯ ದಡದಲ್ಲಿದ್ದು, ಇದೊಂದು ಆಧ್ಯಾತ್ಮಿಕ ಮತ್ತು ಆಕರ್ಷಕ ತಾಣವಾಗಿದೆ. ಶ್ರೀ ರಾಮ ಭಕ್ತರ ಹಲವು ವರ್ಷಗಳ ಕನಸು ನನಸಾಗಿದ್ದು, ಇತ್ತೀಚೆಗಷ್ಟೇ ಈ ದೇವಾಲಯ ಅದ್ಧೂರಿಯಾಗಿ ಉದ್ಘಾಟನೆಗೊಂಡಿರುವುದು ತಿಳಿದಿದ್ದೇ. ಅಯೋಧ್ಯೆಗೆ ಭೇಟಿ ನೀಡಿದಾಗ ದೇವಾಲಯ ಮಾತ್ರವಲ್ಲ, ಇಲ್ಲಿ ಸಮೀಪದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ನೀವು ವಾರಗಳ ಕಾಲ ಅಯೋಧ್ಯೆ ಟ್ರಿಪ್ ಹೋಗೋ ಪ್ಲಾನ್ ಇದ್ರೆ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ ಬನ್ನಿ.
1. ಲಕ್ನೋ
ಉತ್ತರ ಪ್ರದೇಶದ ರಾಜಧಾನಿ ಲಕ್ನೋವನ್ನು ನವಾಬರ ನಗರ ಎಂದೂ ಕರೆಯುತ್ತಾರೆ. ಇದು ಉತ್ತರ ಭಾರತದ ಸಾಂಸ್ಕೃತಿಕ ರಾಜಧಾನಿಯಾಗಿದ್ದು, ಗೋಮತಿ ನದಿಯ ದಡದಲ್ಲಿದೆ.
ಲಕ್ನೋದಲ್ಲಿ ಭೇಟಿ ನೀಡಬೇಕಾದ ಪ್ರವಾಸಿ ಸ್ಥಳಗಳು:
- ಮೋತಿ ಮಹಲ್
- ಬಡಾ ಇಮಾಂಬರ
- ಚೋಟಾ ಇಮಾಂಬರಾ
- 1857 ಸ್ಮಾರಕ ವಸ್ತುಸಂಗ್ರಹಾಲಯ
- ಜುಮ್ಮಾ ಮಸೀದಿ
- ಸಿಕಂದರ್ ಬಾಗ್
- ರೂಮಿ ದರ್ವಾಜಾ
- ಕೈಸರ್‌ಬಾಗ್ ಅರಮನೆ
2. ಪ್ರಯಾಗ್ ರಾಜ್
ಈ ಹಿಂದೆ ಅಲಹಾಬಾದ್ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್ ರಾಜ್, ಭಾರತದ ನಾಲ್ಕು ಪವಿತ್ರ ನಗರಗಳಲ್ಲಿ ಒಂದಾಗಿದೆ. ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭವನ್ನು ಆಯೋಜಿಸುತ್ತದೆ. ಇಲ್ಲಿ ಭಾರತದ ಎರಡು ಅತ್ಯಂತ ಪವಿತ್ರ ನದಿಗಳಾದ ಗಂಗಾ ಮತ್ತು ಯಮುನಾ ಸಂಗಮವಾಗುತ್ತದೆ.
ಪ್ರಯಾಗ್‌ರಾಜ್‌ಗೆ ಭೇಟಿ ನೀಡಬೇಕಾದ ಪ್ರವಾಸಿ ಸ್ಥಳಗಳು:
- ಸಂಗಮ್
- ಪಾತಾಳಪುರಿ ದೇವಾಲಯ
- ಅಲಹಾಬಾದ್ ಕೋಟೆ
- ಖುಸ್ರೋ ಬಾಗ್
- ಅಲಹಾಬಾದ್ ಮ್ಯೂಸಿಯಂ
- ಅಲಹಾಬಾದ್ ಉಚ್ಚ ನ್ಯಾಯಾಲಯ
- ಆಲ್ಫ್ರೆಡ್ ಪಾರ್ಕ್
- ಲಲಿತಾ ದೇವಿ ದೇವಸ್ಥಾನ
3. ಮಿರ್ಜಾಪುರ
ಮಿರ್ಜಾಪುರ್ ಉತ್ತರ ಪ್ರದೇಶದ ಒಂದು ಜಿಲ್ಲೆ. ಇದು ಹಲವಾರು ಘಾಟ್‌ಗಳು ಮತ್ತು ಭಾರತದ ಬ್ರಿಟಿಷ್ ಆಳ್ವಿಕೆಯ ಪ್ರಾಚೀನ ತಾಣಗಳಾಗಿವೆ.
ಮಿರ್ಜಾಪುರದಲ್ಲಿ ಭೇಟಿ ನೀಡಬೇಕಾದ ಪ್ರವಾಸಿ ಸ್ಥಳಗಳು:
- ಸಿರ್ಸಿ ಅಣೆಕಟ್ಟು
- ತಾಂಡಾ ಜಲಪಾತ
- ಕಾಲಭೈರವ ದೇವಾಲಯ
- ಮೆಜಾ ಅಣೆಕಟ್ಟು
- ಪಕ್ಕಾ ಘಾಟ್
- ಚುನಾರ್ ಕೋಟೆ
4. ವಾರಣಸಿ
ವಾರಣಸಿಯು ಹಿಂದೂಗಳ ಏಳು ಪವಿತ್ರ ನಗರಗಳಲ್ಲಿ ಒಂದಾಗಿದೆ. ಇದನ್ನು ಭಾರತದ ಪವಿತ್ರ ನಗರ ಎಂದೂ ಕರೆಯುತ್ತಾರೆ. ವಾರಣಾಸಿಯನ್ನು ಕಾಶಿ ಅಥವಾ ಬನಾರಸ್ ಎಂದೂ ಕರೆಯಲಾಗುತ್ತದೆ. ವಾರಣಾಸಿಯು ಗಂಗಾನದಿಯ ಪಶ್ಚಿಮ ದಂಡೆಯ ಮೇಲಿದೆ. ಜನರು ಗಂಗಾನದಿಯ ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಇಲ್ಲಿಗೆ ಬರುತ್ತಾರೆ.
ವಾರಣಾಸಿಯಲ್ಲಿ ಭೇಟಿ ನೀಡಬಹುದಾದ ಪ್ರವಾಸಿ ಸ್ಥಳಗಳು:
- ವಿಶ್ವನಾಥ ದೇವಾಲಯ
- ಪಂಚಗಂಗಾ ಘಾಟ್
- ಮಣಿಕರ್ಣಿಕಾ ಘಾಟ್
- ಬನಾರಸ್ ಹಿಂದೂ ವಿಶ್ವವಿದ್ಯಾಲಯ
- ರಾಮನಗರ ಕೋಟೆ ಮತ್ತು ವಸ್ತುಸಂಗ್ರಹಾಲಯ
- ಅಸ್ಸಿ ಘಾಟ್
- ದರ್ಭಾಂಗಾ ಘಾಟ್
- ವಾರಣಾಸಿ ಘಾಟ್
5. ಆಗ್ರಾ
ಇಲ್ಲಿ ವಿಶ್ವವಿಖ್ಯಾತ ತಾಜ್‌ಮಹಲ್ ಇದೆ. ವೈಭವಯುತವಾದ ತಾಜ್‌ಮಹಲ್ ಮಾತ್ರವಲ್ಲದೆ, ಆಗ್ರಾವು ಎರಡು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ. ಆಗ್ರಾವು ದೆಹಲಿಯಿಂದ 216 ಕಿಲೋಮೀಟರ್ ದೂರದಲ್ಲಿದೆ. ಆಗ್ರಾದ ಇತಿಹಾಸವು 11ನೇ ಶತಮಾನದಷ್ಟು ಹಿಂದಿನದು. ಇದು ಹಿಂದೂ ಮತ್ತು ಮುಸ್ಲಿಂ ರಾಜವಂಶಗಳಿಂದ ಆಳಲ್ಪಟ್ಟಿದೆ.
ಆಗ್ರಾದಲ್ಲಿ ಭೇಟಿ ನೀಡಬಹುದಾದ ಸ್ಥಳಗಳು:
- ತಾಜ್ ಮಹಲ್
- ಆಗ್ರಾ ಕೋಟೆ
- ಮೊಘಲ್ ದೊರೆ ಅಕ್ಬರನ ಸಮಾಧಿ
- ಜಾಮಾ ಮಸೀದಿ
- ಮೆಹತಾಬ್ ಬಾಗ್
- ಮೋತಿ ಮಸೀದಿ
6. ಕೌಶಾಂಬಿ
ಬೌದ್ಧರಿಗೆ, ಕೌಶಾಂಬಿ ಪ್ರಮುಖ ಯಾತ್ರಾ ಸ್ಥಳವಾಗಿದೆ. ಕೌಶಂಬಿಯಲ್ಲಿ ಯಮುನಾ ನದಿಯ ಉದ್ದಕ್ಕೂ ಅನ್ವೇಷಿಸಲು ಕೆಲವು ಕುತೂಹಲಕಾರಿ ತಾಣಗಳು ಕೋಟೆಗಳು, ಸ್ತೂಪಗಳು ಮತ್ತು ಇತರ ಸ್ಮಾರಕಗಳಿವೆ.
7. ಫೈಜಾಬಾದ್
ಗಂಗಾ ನದಿಯ ಸಣ್ಣ ಉಪನದಿಯಾದ ಘಾಘ್ರಾ ನದಿಯ ದಡದಲ್ಲಿದೆ ಫೈಜಾಬಾದ್.
ಫೈಜಾಬಾದ್‌ನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು ಇಲ್ಲಿವೆ:
- ಗುಲಾಬ್ ಬಾರಿ
- ಗುಪ್ತರ್ ಘಾಟ್
- ಮೋತಿ ಮಹಲ್
- ರಿಷಭದೇವ್ ರಾಜ್‌ಘಾಟ್ ಉದ್ಯಾನ
ಅಯೋಧ್ಯೆಯ ಸಮೀಪ ವಾರಾಂತ್ಯದ ವಿಹಾರಕ್ಕೆ ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಅಲ್ಲಿ ನೀವು ನಿಮ್ಮ ವಾರಾಂತ್ಯವನ್ನು ಸುಂದರವಾಗಿ ಕಳೆಯಬಹುದು.