Travel Guide: ರಾಮಗರ್ಗಾ, ಕನಕ ಭವನ; ಅಯೋಧ್ಯೆ ಬಾಲರಾಮನ ದರ್ಶನ ಪಡೆದು ಸಮೀಪದಲ್ಲೇ ಇರುವ ಈ ಸ್ಥಳಗಳಿಗೂ ಹೋಗಿ ಬನ್ನಿ
Feb 22, 2024 10:58 PM IST
ಅಯೋಧ್ಯೆ ಸುತ್ತಮುತ್ತ ಇರುವ ಪ್ರವಾಸಿ ತಾಣಗಳು
Ayodhya: ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಆದ ಬಳಿಕ ರಾಮಮಂದಿರಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಏರಿಕೆಯಾಗಿದೆ. ನೀವು ಕೂಡ ರಾಮಮಂದಿರಕ್ಕೆ ಪ್ರಯಾಣ ಬೆಳೆಸಬೇಕು ಎಂದುಕೊಂಡಿದ್ದರೆ ಅಯೋಧ್ಯೆಯಲ್ಲಿ ಇನ್ನೂ ಯಾವ್ಯಾವ ಸ್ಥಳಗಳ ದರ್ಶನ ನೀವು ಮಾಡಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಬಾಲರಾಮನ ಪ್ರತಿಷ್ಠಾಪನೆ ಕಾರ್ಯವನ್ನು ಮಾಡಿದ ಬಳಿಕ ಇದೀಗ ಮತ್ತೆ ರಾಮನಗರಿಯ ವೈಭವ ಮರಳಿ ಬಂದಿದೆ. ವಿವಾದದ ಗೂಡಾಗಿದ್ದ ಅಯೋಧ್ಯೆಯು ಈಗ ಹಿಂದೂ ಸಂಸ್ಕೃತಿಯ ಆಗರವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯೆಂದು ಹಿಂದಿನಿಂದಲೂ ಹಿಂದೂಗಳು ಪ್ರತಿಪಾದಿಸುತ್ತಲೇ ಬಂದಿದ್ದರು. ಈ ಹಿಂದೆ ಕೂಡಾ ಅದೇ ಸ್ಥಳದಲ್ಲಿ ರಾಮಮಂದಿರವಿತ್ತು. ಆದರೆ ಮುಸ್ಲಿಂ ದೊರೆಗಳ ಆಳ್ವಿಕೆಯಲ್ಲಿ ಮಂದಿರವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿತ್ತು. ಇದಾದ ಬಳಿಕ ಹಿಂದೂಗಳ ಸಾಕಷ್ಟು ವರ್ಷಗಳ ಹೋರಾಟದ ಬಳಿಕ ಇದೀಗ ಮತ್ತೆ ಬಾಲರಾಮ ಅಯೋಧ್ಯೆಯಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಹಿಂದೂಗಳು ತಂಡೋಪತಂಡವಾಗಿ ಅಯೋಧ್ಯೆಗೆ ಭೇಟಿ ನೀಡುತ್ತಲೇ ಇದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ದರ್ಶನ ಪಡೆಯುವ ನೀವು ಇದರ ಜೊತೆಯಲ್ಲಿ ಇನ್ನೂ ಯಾವ್ಯಾವ ಸ್ಥಳಕ್ಕೆ ಭೇಟಿ ನೀಡಬಹುದು ಎಂಬುದಕ್ಕೆ ಇಲ್ಲಿವೆ ಮಾಹಿತಿ
ವಾಹನದ ಮೂಲಕ ಅಥವಾ ಪ್ರಯಾಸಕರವಾದ ಚಾರಣ ಮಾಡುವ ಮೂಲಕ ಭಕ್ತರು ಹನುಮಾನ್ ಗರ್ಹಿ ಎಂಬ ರಮಣೀಯ ಪ್ರದೇಶದ ವೀಕ್ಷಣೆ ಮಾಡಬಹುದಾಗಿದೆ. ಐತಿಹಾಸಿಕ ಬೆಟ್ದ ಮೇಲೆ ಇರುವ ದೇವಾಲಯದ ಕೋಟೆಯು ಆಂಜನೇಯನಿಗೆ ಸಮರ್ಪಿತವಾಗಿದೆ. ಗುಡ್ಡದ ಮೇಲಿರುವ ಆಂಜನೇಯನ ಈ ದೇಗುಲದ ಮೂಲಕ ಅಂಜನೇಯ ಇಡೀ ಅಯೋಧ್ಯೆಯನ್ನು ಕಾಯುತ್ತಾನೆ ಎಂದು ಹೇಳಲಾಗುತ್ತದೆ. ಗರ್ಭಗುಡಿಯಲ್ಲಿ ಸೀತೆ ಹಾಗೂ ರಾಮನ ಮೂರ್ತಿ ಕೂಡಾ ಇದೆ.
ಹನುಮಾನ್ ಗರ್ಹಿ: ಬೆಟ್ಟದ ಮೇಲಿರುವ ಕೋಟೆಯ ಸಿಟಾಡೆಲ್ ದೇವಾಲಯ ವಾಹನದ ಮೂಲಕ ಅಥವಾ ಪ್ರಯಾಸಕರ ಹೆಜ್ಜೆಗಳ ಮೂಲಕ ಧೈರ್ಯಶಾಲಿ ಭಕ್ತರಿಗೆ ಪ್ರವೇಶಿಸಬಹುದಾದ ರಮಣೀಯ ಹನುಮಾನ್ ಗರ್ಹಿ - ಐತಿಹಾಸಿಕ ಬೆಟ್ಟದ ಮೇಲಿನ ದೇವಾಲಯದ ಕೋಟೆಯು ಬಲಿಷ್ಠ ವಾನರ ಯೋಧ ಭಗವಾನ್ ಹನುಮಂತನಿಗೆ ಸಮರ್ಪಿತವಾಗಿದೆ ಮತ್ತು ನಗರದ ಹೊರವಲಯದಲ್ಲಿ ಭದ್ರವಾಗಿ ಕಾವಲು ಕಾಯುತ್ತಿರುವ ರಾಮ-ಸೀತಾ ದೇವತೆಯ ರೂಪಗಳನ್ನು ಗರ್ಭಗುಡಿಯೊಳಗೆ ಇರಿಸಲಾಗಿದೆ.
ಕನಕ ಭವನ : ಭಗವಾನ್ ರಾಮ -ಸೀತೆಯ ರಾಜಭವನ. 84 ಅಡಿ ವಿಸ್ತೀರ್ಣ ಹೊಂದಿರುವ ಈ ಕೋಟೆಯು ಚಿನ್ನದ ಮಂದಿರ ಅಥವಾ ಕನಕ ಭವನ ಎಂದು ಸ್ಥಳೀಯವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇದು ಭಗವಾನ್ ರಾಮ ಹಾಗೂ ಸೀತೆ ನೆಲೆಸಿದ್ದ ಮೂಲ ಅರಮನೆ ಎಂದು ಹೇಳಲಾಗುತ್ತದೆ. ಇಲ್ಲಿನ ವಾಸ್ತು ಶಿಲ್ಪ ಹಾಗೂ ಪವಿತ್ರ ವಿಗ್ರಹಗಳು ಹಳೆ ರಾಜ ವೈಭವವನ್ನು ನೆನಪಿಸುತ್ತದೆ.
ನಾಗೇಶ್ವರನಾಥ ದೇವಾಲಯ: ಪುರಾತನ ಜ್ಯೋತಿರ್ಲಿಂಗ ದೇಗುಲ ಪೌರಾಣಿಕ ತ್ರೇತಾಯುಗಕ್ಕೂ ಮುನ್ನವೇ ಶಿವನಿಗೆ ಸಮರ್ಪಿತವಾದ 12 ಪವಿತ್ರ ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾದ ನಾಗೇಶ್ವರನಾಥ ದೇವಾಲಯವನ್ನು ಅಯೋಧ್ಯೆ ಹೊಂದಿದೆ.
ತುಳಸಿ ಸ್ಮಾರಕ ಭವನ: ಅಯೋಧ್ಯೆಗೆ ಭೇಟಿ ನೀಡಿದವರು ಅತ್ಯುತ್ತಮ ಕಾವ್ಯಗಳಾದ ರಾಮಚರಿತ ಮಾನಸ ಹಾಗೂ ವಿಯನ ಪತ್ರಿಕೆಗಳನ್ನು ರಚಿಸಿದ ತುಳಸಿದಾದರ ಸ್ಮಾರಕ ಭವನಕ್ಕೆ ಭೇಟಿ ನೀಡಲೇಬೇಕು. ಹೀಗಾಗಿ ರಾಮಭಕ್ತರು ಇದೊಂದು ಜಾಗಕ್ಕೆ ಖಂಡಿತ ಭೇಟಿ ನೀಡಲೇಬೇಕು.