logo
ಕನ್ನಡ ಸುದ್ದಿ  /  ಜೀವನಶೈಲಿ  /  ಯುರೋಪ್‌ ಪ್ರವಾಸ: ಕಡಿಮೆ ಖರ್ಚಿನಲ್ಲಿ ಯುರೋಪ್‌ ಸುತ್ತಬೇಕೆ? ಬಜೆಟ್‌ ಪ್ರವಾಸಿಗರಿಗೆ ಇಲ್ಲಿದೆ ಟಿಪ್ಸ್‌

ಯುರೋಪ್‌ ಪ್ರವಾಸ: ಕಡಿಮೆ ಖರ್ಚಿನಲ್ಲಿ ಯುರೋಪ್‌ ಸುತ್ತಬೇಕೆ? ಬಜೆಟ್‌ ಪ್ರವಾಸಿಗರಿಗೆ ಇಲ್ಲಿದೆ ಟಿಪ್ಸ್‌

Reshma HT Kannada

Nov 29, 2024 12:30 PM IST

google News

ಯುರೋಪ್ ಪ್ರವಾಸ

    • ಪ್ರಪಂಚದ ಅತ್ಯಂತ ಸುಂದರ ದೇಶಗಳಲ್ಲಿ ಯುರೋಪ್ ಕೂಡ ಒಂದು. ಚಳಿಗಾಲದಲ್ಲಿ ಯುರೋಪ್‌ ಪಾಂತ್ರ್ಯದ ಸೌಂದರ್ಯವನ್ನು ಸವಿಯುವುದೇ ಅಂದ. ಪ್ರಪಂಚದ ಹಲವು ಅದ್ಭುತಗಳು ಇಲ್ಲಿವೆ. ನಿಮಗೂ ಯುರೋಪ್ ಟ್ರಿಪ್ ಕನಸಾಗಿರಬಹುದು. ನೀವು ಯುರೋಪ್ ಪ್ರವಾಸ ಮಾಡುವ ಪ್ಲಾನ್‌ನಲ್ಲಿದ್ದರೆ ಕಡಿಮೆ ಖರ್ಚಿನಲ್ಲಿ ಯುರೋಪ್ ನೋಡಿ ಬರಲು ಇಲ್ಲಿದೆ ಟಿಪ್ಸ್. 
ಯುರೋಪ್ ಪ್ರವಾಸ
ಯುರೋಪ್ ಪ್ರವಾಸ (PC: Canva)

ವಿದೇಶ ಪ್ರವಾಸ ಹಲವರ ಕನಸಾಗಿರುತ್ತದೆ. ವಿವಿಧ ದೇಶಗಳ ಸುಂದರ ತಾಣಗಳನ್ನು ಫೋಟೊ, ವಿಡಿಯೊಗಳಲ್ಲಿ ನೋಡಿದಾಗ ನಾನು ಒಮ್ಮೆ ಅಲ್ಲಿಗೆ ಹೋಗಬೇಕು, ಹೋಗಿ ಫೋಟೊ ಕ್ಲಿಕ್ಕಿಸಿಕೊಳ್ಳಬೇಕು ಎಂದು ಮನಸ್ಸು ಬಯಸುವುದು ಸಹಜ. ಅದರಲ್ಲೂ ಪ್ರಪಂಚದ ಸುಂದರ ದೇಶಗಳನ್ನ ಹೊಂದಿರುವ ಯುರೋಪ್‌ಗೆ ಒಮ್ಮೆ ಹೋಗಬೇಕೆಂಬ ಆಸೆ ಬಹುತೇಕ ಎಲ್ಲರಿಗೂ ಇರುತ್ತದೆ. ಜೀವನದಲ್ಲಿ ಒಮ್ಮೆಯಾದ್ರೂ ಯರೋಪ್‌ಗೆ ಪ್ರವಾಸ ಹೋಗಬೇಕು ಎಂದುಕೊಂಡು ಹಲವರು ಅಂದುಕೊಳ್ಳುತ್ತಿರುತ್ತಾರೆ.

ಇಲ್ಲಿನ ಐಫೆಲ್ ಟವರ್ ಮುಂದೆ ಫೋಟೊ ತೆಗೆಸಿಕೊಳ್ಳುವ ಆಸೆ ಯಾರಿಗಿಲ್ಲ ಹೇಳಿ. ಜಗತ್ತಿನ ಅತ್ಯುದ್ಭುತಗಳಲ್ಲಿ ಐಫೆಲ್‌ ಟವರ್‌ ಕೂಡ ಒಂದು. ಪ್ಯಾರಿಸ್‌ನಲ್ಲಿ ಸುತ್ತಾಡುವುದೂ ನಿಜಕ್ಕೂ ಸ್ವರ್ಗದಲ್ಲಿ ಸುತ್ತಾಡಿದಂತೆ. ಟವರ್ ಆಫ್ ಲಂಡನ್‌, ಲೌವ್ರೆ ಮ್ಯೂಸಿಯಂ, ಪೆರುಗ್ವೆ ಸೇರಿದಂತೆ ಹತ್ತು ಹಲವು ತಾಣಗಳನ್ನು ನೀವು ನೋಡಲೇಬೇಕು. ಆದರೆ ಯರೋಪ್ ಪ್ರವಾಸ ಎಂದಾಗ ಖರ್ಚು ಹೆಚ್ಚಾಗುತ್ತದೆ, ನಮ್ಮ ಬಜೆಟ್‌ನಲ್ಲಿ ಅಲ್ಲಿಗೆಲ್ಲಾ ಹೋಗಲು ಸಾಧ್ಯವೇ ಅಂದುಕೊಳ್ಳುವವರೂ ಇದ್ದಾರೆ. ಹಾಗಂತ ಕಡಿಮೆ ಬಜೆಟ್‌ನಲ್ಲಿ ಯುರೋಪ್ ಪ್ರವಾಸ ಸಾಧ್ಯವಿಲ್ಲ ಎಂದಲ್ಲ. ನೀವು ಯುರೋಪ್ ಪ್ರವಾಸವನ್ನ ಕಡಿಮೆ ಬಜೆಟ್‌ನಲ್ಲಿ ಮಾಡಬೇಕು ಅಂತಿದ್ದರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಟಿಪ್ಸ್‌. ಈ ಸಲಹೆಗಳನ್ನ ನೀವು ಪಾಲಿಸಿದ್ರೆ ಖಂಡಿತ ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಕತ್ತರಿ ಬೀಳುತ್ತೆ ಅನ್ನೋ ಭಯ ಇರೊಲ್ಲ.

ನೀವು ನೋಡಬೇಕಾಗಿರುವ ತಾಣಗಳ ಪಟ್ಟಿ ಮಾಡಿ

ಯುರೋಪ್ ಪ್ರವಾಸ ಎಂದಾಕ್ಷಣ ಎಲ್ಲವನ್ನೂ ನೋಡಬೇಕು ಎನ್ನುವ ಹಂಬಲ ಬೇಡ. ಆದರೆ ಯಾವ ಜಾಗಕ್ಕೆ ಹೋಗಬೇಕು, ಏನನ್ನು ನೋಡಬೇಕು ಎಂಬುದನ್ನು ಮೊದಲೇ ಸರಿಯಾಗಿ ಗುರುತು ಹಾಕಿಕೊಂಡಿರಿ. ಯುರೋಪ್‌ನಲ್ಲೂ ಹಂಗೇರಿ, ಪೊಲೆಂಡ್ ಹಾಗೂ ಬಲ್ಗೇರಿಯಾದಂತಹ ಕಡಿಮೆ ಬಜೆಟ್‌ನಲ್ಲಿ ಸುತ್ತಾಡಬಹುದಾದ, ಉಳಿದುಕೊಳ್ಳಬಹುದಾದ ದೇಶಗಳಿವೆ. ಯುರೋಪ್‌ನ ಪಶ್ಚಿಮ ಹಾಗೂ ಉತ್ತರ ಭಾಗದಲ್ಲಿ ದುಬಾರಿಯಾಗಿದೆ. ಹಾಗಾಗಿ ಈ ಜಾಗಗಳಲ್ಲಿ ಉಳಿಯುವ ಅಥವಾ ತಿರುಗಾಡುವ ಪ್ಲಾನ್ ಮಾಡದೇ ಇರುವುದು ಉತ್ತಮ.

ಮುಂಚಿತವಾಗಿ ಪ್ಲಾನ್ ಮಾಡಿ

ನೀವು ಯಾವುದೇ ದೇಶಕ್ಕೆ ಪ್ರಯಾಣ ಮಾಡುವುದಿದ್ದರೂ ಮೊದಲು ಮಾಡಬೇಕಾದ ಕೆಲಸ ಎಂದರೆ ಮುಂಚಿತವಾಗಿ ಪ್ಲಾನ್ ಮಾಡುವುದು. ಇದರಿಂದ ನಿಮಗೆ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಯಾಕೆಂದರೆ ಸೀಸನ್‌ ಅಂತ ಅಂದಾಗ ದರವೂ ಜಾಸ್ತಿ ಆಗಿರುತ್ತದೆ. ಮುಂಚಿತವಾಗಿ ದಿನಾಂಕ ಗೊತ್ತು ಮಾಡಿಕೊಂಡು ವಿಮಾನದ ಟಿಕೆಟ್ ಬುಕ್ ಮಾಡುವುದು ಕೂಡ ಹಣ ಉಳಿತಾಯಕ್ಕೆ ದಾರಿಯಾಗಿದೆ. ಇದರೊಂದಿಗೆ ಆ ದೇಶದಲ್ಲಿ ಸೀಸನ್‌ ಅಲ್ಲ ಸಮಯದಲ್ಲಿ ಹೋಗುವುದರಿಂದ ನಮಗೆ ಕೊಂಚ ಹಣ ಉಳಿತಾಯವಾಗುವುದರಲ್ಲಿ ಎರಡು ಮಾತಿಲ್ಲ.

ಸಾರ್ವಜನಿಕ ಸಾರಿಗೆ ಉಪಯೋಗಿಸಿ

ವಿದೇಶಗಳಿಗೆ ಹೋದಾಗ ನಾವು ಆದಷ್ಟು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಬೇಕು. ಟ್ರೈನ್, ಬಸ್‌, ಜೊತೆಗೆ ನಮ್ಮ ಬಜೆಟ್‌ಗೆ ಹೊಂದುವ ಫ್ಲೈಟ್‌ಗಳಲ್ಲಿ ಪ್ರಯಾಣ ಮಾಡಿ. ಈ ಬಗ್ಗೆ ಎಲ್ಲಾ ಮೊದಲೇ ಗೂಗಲ್‌ ಸರ್ಚ್ ಮಾಡಿ ಅಥವಾ ಈಗಾಗಲೇ ಹೋಗಿ ಬಂದವರ ಬಳಿ ಕೇಳಿ ತಿಳಿದುಕೊಳ್ಳಿ.

ಉಳಿದುಕೊಳ್ಳುವ ಸ್ಥಳ ಇದಾಗಿರಲಿ 

ಯುರೋಪ್ ಪ್ರವಾಸಕ್ಕೆ ಹೋಗುವುದಿದ್ದರೆ ನೀವು ಹೋಟೆಲ್‌ಗಳಲ್ಲಿ ಉಳಿದಿಕೊಳ್ಳುವ ಯೋಚನೆ ಮಾಡಿದರೆ ಖಂಡಿತ ದುಬಾರಿಯಾಗುತ್ತದೆ. ನೀವು ಉಳಿದುಕೊಳ್ಳುವ ದರದಲ್ಲೂ ಸಾಕಷ್ಟು ಉಳಿತಾಯ ಮಾಡಬೇಕಾಗುತ್ತದೆ. ಹಾಗಾಗಿ ಹಾಸ್ಟೆಲ್‌ಗಳು, ಗೆಸ್ಟ್‌ಹೌಸ್‌ಗಳನ್ನ ಆಯ್ಕೆ ಮಾಡಿ. ಇದರಲ್ಲಿ ನಿಮಗೆ ಕಡಿಮೆ ಬಜೆಟ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇರುತ್ತದೆ.

ಸ್ಥಳೀಯರಂತೆ ಆಹಾರ ಸೇವಿಸಿ

ಬೇರೆ ದೇಶಗಳಿಗೆ ಹೋದಾಗ ಎದುರಾಗುವ ಪ್ರಮುಖ ಸಮಸ್ಯೆಗಳಲ್ಲಿ ಆಹಾರವೂ ಒಂದು. ಯಾಕೆಂದರೆ ನಮ್ಮ ದೇಶಕ್ಕೆ ಹೋಲಿಸಿದರೆ ವಿದೇಶಗಳಲ್ಲಿ ಆಹಾರ ಸಂಸ್ಕೃತಿ ಸಂಪೂರ್ಣ ಭಿನ್ನವಾಗಿರುತ್ತದೆ. ಹಾಗಂತ ಅಲ್ಲಿನ ಹೋಟೆಲ್‌ಗಳಲ್ಲಿ ಅಥವಾ ಭಾರತೀಯ ಆಹಾರಗಳನ್ನ ಹುಡುಕಿ ಹೋದರೆ ಹಣ ದುಪ‍್ಪಟ್ಟು ಖರ್ಚಾಗುವುದು ಪಕ್ಕಾ. ಅದಕ್ಕಾಗಿ ನೀವು ಅಲ್ಲಿನ ಸ್ಥಳೀಯರ ಆಹಾರ ತಿನ್ನುವುದನ್ನು ಅಭ್ಯಾಸ ಮಾಡಬೇಕು.

ಕಡಿಮೆ ಖರ್ಚಿನ ಸ್ಥಳ ಆಯ್ಕೆ ಮಾಡಿಕೊಳ್ಳಿ

ಕೆಲವು ಪ್ರಮುಖ ದೇಶಗಳಲ್ಲಿ ಉಚಿತವಾದ ವಾಕಿಂಗ್ ಟೂರ್‌ಗಳನ್ನು ಆಯೋಜಿಸಿರುತ್ತಾರೆ. ಇದನ್ನು ನೀವು ಆಯ್ಕೆ ಮಾಡಿಕೊಂಡರೆ ಇದರಿಂದ ಹಣ ಉಳಿಸಬಹುದು.

ಡಿಸ್ಕೌಂಟ್ ಹಾಗೂ ಕೂಪನ್‌ಗಳನ್ನ ಬಳಸಿಕೊಳ್ಳಿ

ಈಗೀಗ ಎಲ್ಲದರೂ ಆಫರ್‌, ಡಿಸ್ಕೌಂಟ್‌ಗಳ ಸುರಿಮಳೆ ಇರುತ್ತದೆ. ಗೂಗಲ್‌ ಪೇ, ಫೋನ್‌ ಪೇ ಎಲ್ಲದರಲ್ಲೂ ಆಫರ್ ಕೂಪನ್‌ಗಳು ಸಿಗುತ್ತವೆ. ಇದನ್ನೆಲ್ಲಾ ನೀವು ನಿಮ್ಮ ಫಾರಿನ್‌ ಟ್ರಿಪ್‌ನಲ್ಲಿ ಸಾಧ್ಯವಾಗುವ ಕಡೆಯಲ್ಲಿ ಬಳಸಿ. ಇದರೊಂದಿಗೆ ಕ್ರೆಡಿಟ್‌ ಕ್ರಾಡ್ ಹಾಗೂ ಕೆಲವು ಬ್ಯಾಂಕ್‌ನ ಡೆಬಿಟ್‌ ಕಾರ್ಡ್‌ಗಳು ಕೂಡ ಸಾಕಷ್ಟು ಆಫರ್‌ ನೀಡುತ್ತವೆ. ಇನ್ನು ಟಿಕೆಟ್ ಬುಕ್ಕಿಂಗ್ ಸಮಯದಲ್ಲೂ ಆಫರ್ ಸಿಗುತ್ತದೆ. ಅದನ್ನು ಕೂಡ ಬಳಸಿಕೊಳ್ಳಿ. ಇದರಿಂದ ನೀವು ಸಾಕಷ್ಟು ಹಣ ಉಳಿಸಬಹುದು.

ಗುಂಪಿನಲ್ಲಿ ಹೋಗುವುದು ಉತ್ತಮ 

ಯರೋಪ್‌ ಪ್ರವಾಸಕ್ಕೆ ನೀವು ಒಬ್ಬರೇ ಹೋಗುವುದಕ್ಕಿಂತ ಗುಂಪಿನಲ್ಲಿ ಹೋಗುವುದಕ್ಕೆ ಆದ್ಯತೆ ನೀಡಿ. ಇದರಿಂದ ಕೂಡ ಹಣ ಉಳಿತಾಯ ಮಾಡಬಹುದು. ಇದರಿಂದ ನಿಮಗೆ ಬಜೆಟ್ ಫ್ರೆಂಡ್ಲಿ ಯುರೋಪ್ ಟ್ರಿಪ್ ಮಾಡಲು ಸಾಧ್ಯ.

ಉಚಿತ ಹಬ್ಬ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ

ಭಾರತದಂತೆ ಯುರೋಪ್‌ನಲ್ಲೂ ಕೆಲವು ಹಬ್ಬ, ಕಾರ್ಯಕ್ರಮಗಳು ಉಚಿತವಾಗಿ ನಡೆಯುತ್ತವೆ. ಸ್ಟ್ರೀಟ್‌ ಷೋಗಳು ಕೂಡ ಸಾಕಷ್ಟು ನಡೆಯುತ್ತವೆ. ಇಂತಹವುಗಳಲ್ಲಿ ಹೆಚ್ಚು ಭಾಗವಹಿಸಿ ಇದರಿಂದ ಹಣ ಉಳಿತಾಯವಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ