logo
ಕನ್ನಡ ಸುದ್ದಿ  /  ಜೀವನಶೈಲಿ  /  Trending Ethnic Jewellery: ಮದುವೆ ಸೀಸನ್‌: ಅಲಂಕಾರಕ್ಕೂ ಅಂದಕ್ಕೂ ಈ ಆಭರಣಗಳೇ ಭೂಷಣ; ಈ ವರ್ಷದ ಟ್ರೆಂಡಿ ಸಾಂಪ್ರದಾಯಿಕ ಆಭರಣಗಳಿವು

Trending Ethnic Jewellery: ಮದುವೆ ಸೀಸನ್‌: ಅಲಂಕಾರಕ್ಕೂ ಅಂದಕ್ಕೂ ಈ ಆಭರಣಗಳೇ ಭೂಷಣ; ಈ ವರ್ಷದ ಟ್ರೆಂಡಿ ಸಾಂಪ್ರದಾಯಿಕ ಆಭರಣಗಳಿವು

Reshma HT Kannada

Apr 12, 2023 11:12 AM IST

google News

ಸಾಂಪ್ರದಾಯಿಕ ಟ್ರೆಂಡಿ ಆಭರಣಗಳು

    • ಈ ಮದುವೆಯ ಪರ್ವಕಾಲ. ಈ ಸೀಸನ್‌ನಲ್ಲಿ ಎಲ್ಲಿ ನೋಡಿದರು ಗಟ್ಟಿಮೇಳದ್ದೇ ಸದ್ದು. ಮದುವೆ ಎಂದ ಮೇಲೆ ಅಲಂಕಾರ ಇರಲೇಬೇಕು. ಅಲಂಕಾರಕ್ಕೆ ಆಭರಣವೇ ಭೂಷಣ. ಈ ಮದುವೆ ಸೀಸನ್‌ನಲ್ಲಿ ಅಂದವನ್ನು ಹೆಚ್ಚಿಸಿಕೊಳ್ಳಲು ಈ ಟ್ರೆಂಡಿ ಸಾಂಪ್ರದಾಯಿಕ ಆಭರಣಗಳು ನಿಮ್ಮ ಜೊತೆಯಾಗಲಿ.
ಸಾಂಪ್ರದಾಯಿಕ ಟ್ರೆಂಡಿ ಆಭರಣಗಳು
ಸಾಂಪ್ರದಾಯಿಕ ಟ್ರೆಂಡಿ ಆಭರಣಗಳು

ಏಪ್ರಿಲ್‌ ತಿಂಗಳು ಆರಂಭವಾಯಿತು ಎಂದರೆ ಮದುವೆಯ ಸೀಸನ್‌ ಆರಂಭವಾಯಿತು ಅಂತಲೇ ಅರ್ಥ. ಮದುವೆ ಎಂದರೆ ಅಲಂಕಾರ. ನಮ್ಮದೇ ಮದುವೆ ಇರಲಿ, ಬೇರೆಯವರ ಮದುವೆ ಇರಲಿ ಅಲಂಕಾರವಿಲ್ಲದೆ ಮದುವೆಯಿಲ್ಲ.

ಅದರಲ್ಲೂ ಹೆಣ್ಣುಮಕ್ಕಳು ಅಲಂಕಾರಪ್ರಿಯರೂ. ವಸ್ತ್ರ, ಒಡವೆಯಿಂದ ಸುಂದರವಾಗಿ ಅಲಂಕರಿಸಿಕೊಳ್ಳುವುದು ಅವರಿಗೆ ಅಚ್ಚುಮೆಚ್ಚು. ಮದುವೆ ಸಂದರ್ಭದಲ್ಲಿ ಸರಳವಾಗಿ ಕಾಣಿಸುವುದನ್ನು ಯಾವ ಹೆಣ್ಣುಮಕ್ಕಳು ಮೆಚ್ಚುವುದಿಲ್ಲ. ಆ ಕಾರಣಕ್ಕೆ ಐಷಾರಾಮಿಯಾಗಿ ಕಾಣುವ ದಿರಿಸು, ಆಭರಣ, ಚಪ್ಪಲಿ, ಬ್ಯಾಗ್‌ಗಳು ಇವರ ದೇಹವನ್ನು ಅಲಂಕರಿಸುತ್ತವೆ. ಈ ವರ್ಷದ ಮದುವೆ ಸೀಸನ್‌ನಲ್ಲಿ ಈ ಟ್ರೆಂಡಿ ಸಾಂಪ್ರದಾಯಿಕ ಆಭರಣಗಳು ನಿಮ್ಮ ಅಂದವನ್ನು ಹೆಚ್ಚಿಸಬಹುದು. ಇವು ನಿಮ್ಮನ್ನು ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ಐಷಾರಾಮಿಯಾಗಿಯೂ ಕಾಣುವಂತೆ ಮಾಡುತ್ತವೆ.

ಚೋಕರ್‌ ಸೆಟ್‌

ಕಳೆದ ಕೆಲ ವರ್ಷಗಳಿಂದ ಚೋಕರ್‌ ನೆಕ್ಲೇಸ್‌ ಹೆಚ್ಚು ಚಾಲ್ತಿಯಲ್ಲಿದೆ. ಇದು ಕೊರಳನ್ನು ತಬ್ಬುವಂತಿರುತ್ತದೆ. ಮುತ್ತು, ಹವಳ, ವಜ್ರ, ಮಣಿಗಳು, ಸಂಪೂರ್ಣ ಚಿನ್ನದ ಚೋಕರ್‌ ಹೀಗೆ ಚೋಕರ್‌ ನೆಕ್ಲೇಸ್‌ನಲ್ಲಿ ವಿವಿಧ ರೀತಿ ಇವೆ. ಚೋಕರ್‌ ನೆಕ್ಲೇಸ್‌ ಜೊತೆಗೆ ಅದೇ ವಿನ್ಯಾಸ ಕಿವಿಯೋಲೆಯ ಸೆಟ್‌ ಕೂಡ ಧರಿಸಬಹುದು. ಇದು ನಿಮ್ಮ ಅಂದವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಅನುಮಾನವಿಲ್ಲ. ಚೋಕರ್‌ ಸೆಟ್‌ ಅನ್ನು ಸೀರೆ, ಲೆಹಂಗಾ, ಘಾಗ್ರಾ, ಚೂಡಿದಾರ್‌ ಜೊತೆಗೆ ಧರಿಸಬಹುದು.

ಬಹುಬಣ್ಣದ ಸೆಟ್‌

ಬಹುಬಣ್ಣದ ಹರಳು, ಹವಳ, ಮಣಿಗಳ ಸೆಟ್‌ ಸದ್ಯ ಟಾಪ್‌ ಟ್ರೆಂಡ್‌. ಹಿಂದೆಲ್ಲಾ ಈ ವಿನ್ಯಾಸದ ಆಭರಣಗಳು ಇದ್ದರೂ ಬೇಡಿಕೆ ಕಡಿಮೆ ಇತ್ತು. ಆಗ ಇದಕ್ಕೆ ಟ್ರೆಂಡಿ ಟಚ್‌ ನೀಡಿ ಬೇಡಿಕೆ ಹೆಚ್ಚುವಂತೆ ಮಾಡಿದ್ದಾರೆ ಫ್ಯಾಷನ್‌ ವಿನ್ಯಾಸಕರು. ಬಹುಬಣ್ಣದ ಸರ, ಕಿವಿಯೋಲೆ, ಬಳೆ, ಬಿಂದಿ (ಬೈತಲೆ ಬೊಟ್ಟು) ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು, ಮಾತ್ರವಲ್ಲ ಇದು ಐಷಾರಾಮಿ ನೋಟಕ್ಕೂ ಹೇಳಿ ಮಾಡಿಸಿದಂತಿರುತ್ತದೆ. ಇದು ಸೀರೆ, ಲೆಹೆಂಗಾ, ಘಾಗ್ರಾದಂತಹ ಉಡುಪಿನೊಂದಿಗೆ ಹೆಚ್ಚು ಹೊಂದುತ್ತದೆ.

ಆಡಂಬರದ ಕಿವಿಯೋಲೆ

ಅಗಲವಾದ, ಆಡಂಬರದ ಐಷಾರಾಮಿ ಎನ್ನಿಸುವ ಕಿವಿಯೋಲೆಗಳು ಇತ್ತೀಚಿನ ಟ್ರೆಂಡ್‌, ಅಲ್ಲದೆ ಹೆಣ್ಣುಮಕ್ಕಳಿಗೆ ಇವು ಅಚ್ಚುಮೆಚ್ಚು ಕೂಡ. ಬಾಲಿ, ಆಂಟಿಕ್‌ ಜ್ಯುವೆಲರಿಯಲ್ಲಿ ಈ ರೀತಿ ಅಗಲವಾದ ಕಿವಿಯೋಲೆ ವಿನ್ಯಾಸಗಳು ಹೆಚ್ಚಿರುತ್ತವೆ. ಇದು ದುಂಡುಮುಖ ಇರುವವರಿಗೆ ಹೆಚ್ಚು ಹೊಂದುತ್ತದೆ. ಸೆಲೆಬ್ರಿಟಿಗಳು ಕೂಡ ಈ ರೀತಿಯ ವಿನ್ಯಾಸವಿರುವ ಕಿವಿಯೋಲೆಯನ್ನು ಮೆಚ್ಚಿ ಧರಿಸಿದ್ದಾರೆ. ಈ ಕಿವಿಯೋಲೆಯೊಂದಿಗೆ ಕುಂದನ್‌ ಉಂಗುರ ಧರಿಸುವುದರಿಂದ ನಿಮ್ಮ ಸ್ಟೈಲ್‌ಗೆ ನೀವೇ ಸಾಟಿ ಎನ್ನಿಸಿಕೊಳ್ಳುತ್ತೀರಿ.

ಮುತ್ತಿನ ಆಭರಣಗಳು

ಮುತ್ತಿನ ಆಭರಣಗಳು 90ರ ದಶಕದಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು. ಆ ನಂತರ ಅದಕ್ಕೆ ಬೇಡಿಕೆ ಕೊಂಚ ಕಡಿಮೆಯಾಗಿತ್ತು. ಆದರೆ ಈಗ ಪುನಃ ಮುತ್ತಿನ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ. ಮುತ್ತಿನ ಸುತ್ತೆಳೆಯ ಸರ, ಮುತ್ತಿನ ನೆಕ್ಲೇಸ್‌, ಕಿವಿಯೋಲೆ ಇವು ಮದುವೆ ಸಂದರ್ಭದಲ್ಲಿ ಗಮನ ಸೆಳೆಯುತ್ತವೆ, ಅಲ್ಲದೆ ಧರಿಸಿದವರ ನೋಟವನ್ನೇ ಬದಲಿಸುತ್ತದೆ. ಸೀರೆ, ಲಂಗ-ದಾವಣಿ, ಘಾಗ್ರಾದೊಂದಿಗೆ ಈ ಸೆಟ್‌ ಹೆಚ್ಚು ಹೊಂದುತ್ತದೆ.

ವಜ್ರದ ಸೆಟ್‌

ವಜ್ರಕ್ಕೆ ಎಂದಿಗೂ ಬೇಡಿಕೆ ಕಡಿಮೆಯಾಗುವುದಿಲ್ಲ. ವಜ್ರದಲ್ಲಿ ಭಿನ್ನ ವಿನ್ಯಾಸದ ಆಭರಣಗಳು ಮಾರುಕಟ್ಟೆ ಲಭ್ಯವಿವೆ. ಬಣ್ಣದ ವಜ್ರದ ಹರಳಿದ ನೆಕ್ಲೇಸ್‌ ಈ ವರ್ಷದ ಟ್ರೆಂಡ್‌. ಇದರೊಂದಿಗೆ ವಜ್ರದ ತೆಳ್ಳನೆಯ ನೆಕ್ಲೇಸ್‌ ಹಾಗೂ ಕಿವಿಯೋಲೆ ಕೂಡ ಹೆಚ್ಚು ಪ್ರಚಲಿತದಲ್ಲಿದೆ. ವಜ್ರದ ಸೆಟ್‌ ಅನ್ನು ಎಲ್ಲಾ ರೀತಿಯ ಸಾಂಪ್ರದಾಯಿಕ ಉಡುಪುಗಳ ಜೊತೆಗೂ ಧರಿಸಲು ಸೂಕ್ತ ಎನ್ನಿಸುತ್ತದೆ. ವಜ್ರದ ಆಭರಣಗಳು ನಿಮ್ಮ ಅಂದ ಹೆಚ್ಚಿಸುವ ಜೊತೆಗೆ ಘನತೆಯನ್ನೂ ಹೆಚ್ಚಿಸುತ್ತವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ