Tuesday Motivation: ಮಂಗಳವಾರದ ಸ್ಫೂರ್ತಿಮಾತು; ಮತ್ತೊಬ್ಬರ ಖುಷಿಯಲ್ಲಿ ತಮ್ಮ ನಗು ಕಾಣುವುದೇ ನಿಜವಾದ ಪ್ರೀತಿ
Feb 13, 2024 08:43 AM IST
ಮಂಗಳವಾರದ ಸ್ಫೂರ್ತಿಮಾತು
Tuesday Motivation: ಪ್ರೀತಿಯನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳಬೇಕು. ನೀವು ಇಷ್ಟಪಡುವ ವ್ಯಕ್ತಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಹೆಚ್ಚಿನ ಜನರಿಗೆ, ಪ್ರೀತಿಯ ಮೊದಲ ಕೆಲವು ದಿನಗಳು ಬಹಳ ಹೊಸದು. ಯಾವುದೇ ಬಾಂಧವ್ಯ ಗಟ್ಟಿಯಾಗಬೇಕಾದರೆ ಹೊಸದನ್ನು ಸೃಷ್ಟಿಸಬೇಕು.
Tuesday Motivation: ಅವರು ಪಕ್ಕದಲ್ಲಿದ್ದರೆ ಈ ಜಗತ್ತನ್ನೇ ಗೆಲ್ಲಬಹುದು ಎಂಬ ಭಾವನೆ ಮೂಡುವುದು ಪ್ರೀತಿಯಲ್ಲಿ ಮಾತ್ರ. ಪ್ರೀತಿಸುವವರ ಹೃದಯವು ಪ್ರೀತಿಪಾತ್ರರಿಗಾಗಿ ಏನನ್ನಾದರೂ ಮಾಡುವಂತೆ ಪ್ರೇರೇಪಿಸುತ್ತದೆ. ಪ್ರೀತಿಪಾತ್ರರು ಕೇಳಿದರೆ, ಚಂದಿರನನ್ನೂ ಭೂಮಿಗೆ ಇಳಿಸುವ ಆಲೋಚನೆ ಮನಸಿಗೆ ಬರುತ್ತದೆ. ಪ್ರೀತಿಯ ಶಕ್ತಿಯೇ ಅಂಥದ್ದು. ಆದ್ದರಿಂದ ಕವಿಗಳು ಕೂಡಾ ಪ್ರೀತಿಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವುದಿಲ್ಲ.
ನೀವು ಪ್ರೀತಿಸಿದವರಿಗಾಗಿ ತ್ಯಾಗ ಮಾಡಿ
ಪ್ರೀತಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಏಕೆಂದರೆ ಪ್ರೀತಿಯಲ್ಲಿ ಏನೋ ಒಂದು ರೀತಿಯ ಚೆಂದ ಅನುಭವ ದೊರೆಯುತ್ತದೆ. ಅಂತ ಪ್ರೀತಿಯನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳಬೇಕು. ನೀವು ಇಷ್ಟಪಡುವ ವ್ಯಕ್ತಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಹೆಚ್ಚಿನ ಜನರಿಗೆ, ಪ್ರೀತಿಯ ಮೊದಲ ಕೆಲವು ದಿನಗಳು ಬಹಳ ಹೊಸದು. ಯಾವುದೇ ಬಾಂಧವ್ಯ ಗಟ್ಟಿಯಾಗಬೇಕಾದರೆ ಹೊಸದನ್ನು ಸೃಷ್ಟಿಸಬೇಕು. ನೀವು ಪ್ರೀತಿಸುವ ವ್ಯಕ್ತಿಗಾಗಿ ದಿನದ ಸ್ವಲ್ಪ ಸಮಯವನ್ನು ಮೀಸಲಿಡಿ. ಅವರನ್ನು ಸಂತೋಷಪಡಿಸಿದರೆ ಮಾತ್ರ ಜೀವನದುದ್ದಕ್ಕೂ ನೀವು ಸಂತೋಷವಾಗಿರುತ್ತೀರಿ. ನಿಮಗೆ ಅಭ್ಯಾಸವಿಲ್ಲದಿದ್ದರೂ ಅವರಿಗಾಗಿ ಹಾಡುಗಳನ್ನು ಹಾಡಿ. ನಿಮಗೆ ಇಷ್ಟವಿಲ್ಲದಿದ್ದರೂ ನಿಮ್ಮ ಪ್ರೀತಿಪಾತ್ರರಿಗಾಗಿ ಕವಿತೆಗಳನ್ನು ಬರೆಯಿರಿ. ನೀವು ಒಬ್ಬರಿಗೊಬ್ಬರು ಸಣ್ಣ ಪುಟ್ಟ ತಪ್ಪುಗಳನ್ನು ಸರಿ ಪಡಿಸಿಕೊಂಡು ತ್ಯಾಗಗಳನ್ನು ಮಾಡುತ್ತಾ ಜೀವನವನ್ನು ಆನಂದಿಸಿ.
ಸಂಗಾತಿಗೆ ನಿಮ್ಮ ಪ್ರೀತಿಯನ್ನು ಅರ್ಥ ಮಾಡಿಸಿ
ಜೀವನದಲ್ಲಿ ಸಂತೋಷವಾಗಿರಲು ಆಸ್ತಿ ಬೇಕಿಲ್ಲ. ನಮ್ಮನ್ನು ನಾವು ಆಸ್ತಿ ಎಂದು ಪರಿಗಣಿಸಿ ಜೀವನ ಪರ್ಯಂತ ನಮ್ಮನ್ನು ಪ್ರೀತಿಸುವ ವ್ಯಕ್ತಿಯ ಜೊತೆಗಿದ್ದರೆ ಸಾಕು. ನಮ್ಮ ಇಷ್ಟಗಳು, ನನ್ನ ಕಷ್ಟಗಳು, ನನ್ನ ಸಂತೋಷಗಳು ಎಲ್ಲವನ್ನೂ ತನ್ನದೆಂದು ಹಂಚಿಕೊಳ್ಳುವ ವ್ಯಕ್ತಿ ನಿಮ್ಮ ಜೀವನಕ್ಕೆ ಬಂದರೆ ಅವರನ್ನು ಕಳೆದುಕೊಳ್ಳಬೇಡಿ. ನೀನು ನನಗಾಗಿ ಹುಟ್ಟದೇ ಇರಬಹುದು. ಆದರೆ ನನ್ನ ಪ್ರೀತಿ ನಿನಗಾಗಿ ಹುಟ್ಟಿದೆ. ನಾನು ನಿಮ್ಮ ಜೀವನದಲ್ಲಿ ಇಲ್ಲದಿರಬಹುದು ಆದರೆ ನೀವು ಯಾವಾಗಲೂ ನನ್ನ ಮನಸ್ಸಿನಲ್ಲಿ ಇರುತ್ತೀರಿ. ನೀನು ನನ್ನ ಪಕ್ಕದಲ್ಲಿದ್ದಾಗ ಪ್ರಪಂಚದಲ್ಲಿ ಏನಾಗುವುದೋ ಗೊತ್ತಿಲ್ಲ. ಏಕೆಂದರೆ ನೀನೇ ನನ್ನ ಪ್ರಪಂಚವಾಗುತ್ತೀಯ. ನೀನು ದೂರದಲ್ಲಿದ್ದರೆ ನನಗೆ ಪ್ರಪಂಚದೊಂದಿಗೆ ಯಾವುದೇ ಸಂಬಂಧವಿಲ್ಲ. ಏಕೆಂದರೆ ನೀನು ಕಾಣದ ಜಗತ್ತಿನಲ್ಲಿ ನನಗೆ ಯಾವುದೂ ಇಷ್ಟವಿಲ್ಲ ಎಂಬ ಮಾತುಗಳು ಕೇಳಲು ಎಷ್ಟು ಚೆಂದ ಅಲ್ಲವೇ?
ಪ್ರತಿಯೊಂದು ಪ್ರೇಮಕಥೆಯೂ ಅದ್ಭುತ
ಪ್ರತಿಯೊಂದು ಪ್ರೇಮಕಥೆಯೂ ಅದ್ಭುತ, ಆದರೆ ನಮ್ಮ ಪ್ರೇಮಕಥೆ ಅದಕ್ಕಿಂತ ಮಿಗಿಲಾದುದು ಎಂಬ ಭಾವನೆ ನಿಮ್ಮಲ್ಲಿ ಇರಲಿ. ಆಗ ಮಾತ್ರ ನೀವು ಒಬ್ಬರಿಗೊಬ್ಬರು ಇನ್ನಷ್ಟು ಪ್ರೀತಿಯಿಂದ ಇರಲು ಸಾಧ್ಯ. ಆತ ನನಗೆ ಬಹಳ ವಿಶೇಷ, ಆಕೆ ನನಗೆ ಬಹಳ ವಿಶೇಷ ಎಂಬುದು ನಿಮ್ಮ ಅರಿವಿನಲ್ಲಿ ಇರಲಿ.
ವಿಭಾಗ