Tuesday Motivation: ಇಲ್ಲಿ ಯಾವುದೂ ಶಾಶ್ವತವಲ್ಲ; ನಾವು ಮಾಡುವ ಕೆಲಸಗಳಿಂದ ನೆನಪುಗಳು ಮಾತ್ರ ಉಳಿಯುತ್ತವೆ
Feb 20, 2024 06:57 AM IST
ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಆದರೆ ನಾವು ಮಾಡುವ ಕೆಲಸಗಳು ಮಾತ್ರ ನೆನಪುಗಳಾಗಿ ಉಳಿಯುತ್ತವೆ. (Unsplash)
- Tuesday Motivation in Kannada: ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಆದರೆ ಎಲ್ಲವೂ ನಮ್ಮೊಂದಿಗೆ ಇರುತ್ತವೆ ಎಂದುಕೊಂಡು ಅದು ಬೇಕು, ಇದು ಬೇಕು ಅಂತ ಜಗಳ ಮಾಡುತ್ತೇವೆ. ಅಂತ್ಯವಿಲ್ಲದ ಆಸೆಗಳಲ್ಲೇ ಜೀವನ ಕಳೆಯುತ್ತೇವೆ.
ಈ ಪ್ರಪಂಚದಲ್ಲಿ ಎಲ್ಲವೂ ಕಾಲಾನಂತರದಲ್ಲಿ ಹೋಗುತ್ತವೆ. ಆದರೆ ಎಲ್ಲವೂ ನಮ್ಮೊಂದಿಗೆ ಇರುತ್ತವೆ ಎಂದು ನಾವು ಭಾವಿಸುತ್ತೇವೆ. ಇವುಗಳಿಗಾಗಿ ಜಗಳ ಮಾಡುತ್ತೇವೆ. ಸಂಬಂಧಗಳನ್ನು ಕೂಡ ಮುರಿದುಕೊಳ್ಳುತ್ತೇವೆ. ಒಬ್ಬರ ಮೇಲೆ ನಾವು ತೋರಿಸುವ ಪ್ರೀತಿ ಕೂಡ ಶಾಶ್ವತವಲ್ಲ. ನಾವು ಇತರರಿಗೆ ನೀಡುವ ನೆನಪುಗಳು ಮಾತ್ರ ಮುಖ್ಯ. ಇವುಗಳ ಮೂಲಕ ನಮ್ಮನ್ನು ನೆನಪಿಸಿಕೊಳ್ಳಬಹುದು.
ದುಃಖಗಳು ಶಾಶ್ವತವಾಗಿ ಉಳಿಯುವುದಿಲ್ಲ. ಸಂತೋಷಗಳು ಅಷ್ಟೇ ಶಾಶ್ವತವಾಗಿ ಉಳಿಯೋದಿಲ್ಲ. ಈ ಕ್ಷಣಗಳು ಕರಿ ಹೋಗುತ್ತವೆ. ಮತ್ತೆ ಎಂದೂ ವಾಪಸ್ ಬರೋದಿಲ್ಲ. ನಾವು ಉಸಿರಾಡುವ ಉಸಿರು ಕೂಡ ಒಂದು ದಿನ ನಿಲ್ಲಬೇಕು. ಅಲ್ಲಿಯವರೆಗೆ ನಾವು ಇತರರೊಂದಿಗೆ ಎಷ್ಟು ಸಂತೋಷವಾಗಿರುತ್ತೇವೆ ಎಂಬುದು ಮುಖ್ಯ. ಸತ್‌ತ ನಂತರ ನಮ್ಮನ್ನು ನೋಡಿಕೊಳ್ಳುವವರು ಯೂರೂ ಇಲ್ಲ. ಬದುಕಿರುವಾಗ ನಗುವಿನ ಜೊತೆಗೆ ನಗುವನ್ನು ಹಂಚಿಕೊಳ್ಳಬೇಕು.
ಅದು ಕಷ್ಟದ ಪರಿಸ್ಥಿತಿ ಇರಬಹುದು, ಸುಖದ ಪರಿಸ್ಥಿತಿ ಇರಬಹುದು. ಇದ್ಯಾವುದೂ ಶಾಶ್ವತವಲ್ಲ ಅನ್ನೋದು ಎಲ್ಲರಿಗೂ ತಿಳಿದಿರಬೇಕು. ಆದರೆ ಇದರ ಬಗ್ಗೆಯೇ ಹೆಚ್ಚು ಯೋಚಿಸಬೇಡಿ. ಪ್ರಸ್ತುತ ಭಾವನೆಗಳ ಮೇಲೆ ಮಾತ್ರ ಬದುಕುತ್ತಾರೆ. ಬಂಧಗಳಿಂದ ದೂರವಿರುತ್ತಾರೆ. ಯಾರೊಂದಿಗಾದರೂ ಮಾತನಾಡುವ ಮೊದಲು ಒಮ್ಮೆ ಯೋಚಿಸಿದರೆ ಜಗಳಗಳೇ ಬರೋದಿಲ್ಲ. ಇವತ್ತು ನಡೆದು ಹೋಗಿದೆ, ನಾಳೆ ನಡೆಯುವುದಿಲ್ಲ, ನಾಡಿದ್ದು ಎಂದಿಗೂ ನಡೆಯೋದಿಲ್ಲ. ದಿನಗಳು ಬದಲಾಗುತ್ತಿದ್ದತೆ ಕ್ಷಣಕ್ಷಣಕ್ಕೂ ಬರುವ ಕೋಪವನ್ನು ಸಾಯುವವರೆಗೂ ಯಾರ ಮೇಲೂ ತೋರಿಸಬಾರದು.
ಬದುಕಿನ ಪಯಣದಲ್ಲಿ ಸಮಸ್ಯೆ, ಸಂತೋಷ, ದುಃಖಗಳು ಶಾಶ್ವತವಲ್ಲ
ಈ ಜಗತ್ತಿನಲ್ಲಿ ಯಾವುದೂ ಶಾಶ್ವತಲ್ಲ. ಆದರೆ ನಾವು ಬದುಕಿರುವವರೆಗೂ ನೆನಪುಗಳು ಶಾಶ್ವತ. ನಮ್ಮ ಸುತ್ತಮುತ್ತಲಿನ ಹಾಗೂ ನಮ್ಮೊಂದಿಗೆ ಇರಲಿ, ಬಿಡಲಿ ಆ ಜನಗಳ ಬಗ್ಗೆ ನಕಾರಾತ್ಮಕವಾಗಿ ಮಾಡುವ ಬದಲು ಖುಷಿಯನ್ನು ಅವರ ಒಳ್ಳೆಯ ವಿಚಾರಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ. ಬದುಕಿನ ಪಯಣದಲ್ಲಿ ಹಲವು ಸಮಸ್ಯೆ, ಸಂತೋಷಗಳು, ದುಃಖಗಳು, ಹಲವು ಪರಿಚಯಗಳು ಆಗುತ್ತವೆ. ಆದರೆ ಯಾವುದೂ ಶಾಶ್ವತವಾಗಿ ಉಳಿಯುವುದಿಲ್ಲ.
ಅದಕ್ಕಾಗಿಯೇ ಜೀವನದಲ್ಲಿ ಎಲ್ಲವನ್ನೂ ಧನಾತ್ಮಕವಾಗಿ ನೋಡಬೇಕು. ಏಕೆಂದರೆ ಧನಾತ್ಮಕವಾಗಿ ಯೋಚಿಸಿದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಸಿಗುತ್ತದೆ. ನೆಗೆಟಿವ್ ಆಗಿ ಯೋಚಿಸಿದರೆ ಸಣ್ಣ ಸಮಸ್ಯೆಯೂ ದೊಡ್ಡದಾಗಿ ಕಾಣಿಸುತ್ತದೆ. ಇರೋ ತನಕ ಸಂತೋಷವಾಗಿರಿ. ನಾಲ್ಕು ಜನರೊಂದಿಗೆ ನಗುವನ್ನು ಹಂಚಿಕೊಳ್ಳುತ್ತಿರಬೇಕು. ಅದು ನಮ್ಮ ಜೀವನದ ಅರ್ಥ. ಇಲ್ಲವಾದರೆ ಹೋದ ಮೇಲೂ ಶಾಪ ಹಾಕುತ್ತಲೇ ಇರುತ್ತಾರೆ.
ಹುಟ್ಟಿದ ಕ್ಷಣವೂ ಶಾಶ್ವತವಲ್ಲ, ಸಾವಿನ ಕ್ಷಣವೂ ಶಾಶ್ವತವಲ್ಲ. ಸಮಯ ಕರಗುತ್ತದೆ. ಯಾರಿಗಾಗಿಯೂ ನಿಲ್ಲುವುದಿಲ್ಲ. ನಮ್ಮ ನಡುವಿನ ಸಂಬಂಧಗಳು ಸಹ ಶಾಶ್ವತವಲ್ಲ. ನಿಮ್ಮ ದೇಹದಿಂದ ಉಸಿರುವ ಹೊರಬಂದ ನಂತರ ನಿಮ್ಮ ಹೆಸರು ಕೂಡ ಇರೋದಿಲ್ಲ. ಅದನ್ನು ಬಾಡಿ ಅಥವಾ ಶವ ಅಂತ ಕರೆಯುತ್ತಾರೆ. ಸಾವಿನ ನಂತರವೂ ಬದುಕಲು ನೀವು ನೀಡುವ ಉತ್ತಮ ಕೆಲಸಗಳ ನೆನಪುಗಳು ಮಾತ್ರ ಇತರರ ಜೀವನದಲ್ಲಿ ಶಾಶ್ವತವಾಗಿ ಉಳಿಯುತ್ತವೆ.
ಜೀವನದಲ್ಲಿ ತೋರಿದ ಪ್ರೀತಿ ಮತ್ತು ಜವಾಬ್ದಾರಿಗಳು ಸಹ ಶಾಶ್ವತವಲ್ಲ. ಅದಕ್ಕಾಗಿಯೇ ನೀವು ಯಾರ ಮೇಲೂ ಹೆಚ್ಚು ಭಾವುಕರಾಗಬಾರದು. ಅವರು ದೂರವಾಗಿ ನಿಲ್ಲಲು ಸಾಧ್ಯವಿಲ್ಲ. ನಿಮ್ಮನ್ನು ನೀವು ಪ್ರೀತಿಸಬೇಕು. ನೀವು ಎಲ್ಲರನ್ನ ಇಷ್ಟಪಟ್ಟರೆ, ಅವರೂ ನಿಮ್ಮನ್ನು ಇಷ್ಟಪಡುತ್ತಾರೆ. ಆದರೆ ಜೀವನದಲ್ಲಿ ನಟನೆ ಮಾಡೋದು ಎಂದೂ ಉಳಿಯಲಾರದು. (This copy first appeared in Hindustan Times Kannada website. To read more like this please logon to kannada.hindustantimes.com).
ವಿಭಾಗ