logo
ಕನ್ನಡ ಸುದ್ದಿ  /  ಜೀವನಶೈಲಿ  /  Valentines Day: ಬಂದೇ ಬಿಡ್ತು ಪ್ರೇಮಿಗಳ ದಿನ; ಸಂಗಾತಿಯ ಮನ ಗೆಲ್ಲಲು ಈ ವಿಶೇಷ ದಿನಕ್ಕೆ ಹೀಗಿರಲಿ ತಯಾರಿ

Valentines Day: ಬಂದೇ ಬಿಡ್ತು ಪ್ರೇಮಿಗಳ ದಿನ; ಸಂಗಾತಿಯ ಮನ ಗೆಲ್ಲಲು ಈ ವಿಶೇಷ ದಿನಕ್ಕೆ ಹೀಗಿರಲಿ ತಯಾರಿ

Reshma HT Kannada

Feb 18, 2024 03:41 PM IST

google News

ಪ್ರೇಮಿಗಳ ದಿನದಂದು ಸಂಗಾತಿಯ ಮನಗೆಲ್ಲಲು ಹೀಗಿರಲಿ ತಯಾರಿ

    • ಪ್ರೇಮಿಗಳ ದಿನ ಸಮೀಪದಲ್ಲೇ ಇದೆ. ಈ ವರ್ಷ ನಿಮ್ಮ ಪ್ರೇಮಿಗೆ ಸ್ಪೆಷಲ್‌ ಸರ್ಪ್ರೈಸ್‌ ನೀಡಬೇಕು ಎಂಬ ಯೋಚನೆ ನಿಮಗಿದ್ರೆ ಅದಕ್ಕಾಗಿ ಒಂದಿಷ್ಟು ತಯಾರಿ ಖಂಡಿತ ಬೇಕು. ಈ ವರ್ಷದ ಪ್ರೇಮಿಗಳ ದಿನವನ್ನು ಅತಿ ಮಧುರ ಎನ್ನಿಸುವ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾ.
ಪ್ರೇಮಿಗಳ ದಿನದಂದು ಸಂಗಾತಿಯ ಮನಗೆಲ್ಲಲು ಹೀಗಿರಲಿ ತಯಾರಿ
ಪ್ರೇಮಿಗಳ ದಿನದಂದು ಸಂಗಾತಿಯ ಮನಗೆಲ್ಲಲು ಹೀಗಿರಲಿ ತಯಾರಿ

ವ್ಯಾಲೆಂಟೈನ್ಸ್‌ ಡೇ ಬಂತೆಂದರೆ ಜಗತ್ತಿನಲ್ಲೆಲ್ಲಾ ಪ್ರೇಮದ ಅಮಲು ಹರಡಿರುತ್ತಾರೆ. ಎಲ್ಲೆಲ್ಲೂ ಪ್ರೇಮದ ಆಲಾಪವೇ ಕಿವಿಗೆ ಆನಿಸುತ್ತದೆ. ಪ್ರೇಮ ಎಂಬುದೇ ಹಾಗೆ, ಇದಕ್ಕೆ ಜಗತ್ತನ್ನೇ ಮರೆಸುವ ಶಕ್ತಿ ಇದೆ. ನೀವು ಪ್ರೇಮಲೋಕದಲ್ಲಿ ತೇಲಾಡುತ್ತಿದ್ದು, ಈ ಬಾರಿಯ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಬೇಕು ಅಂತಿದ್ರೆ ಅದಕ್ಕಾಗಿ ಒಂದಿಷ್ಟು ತಯಾರಿ ಖಂಡಿತ ಬೇಕು. ಹಾಗಿದ್ರೆ ಈ ತಯಾರಿ ಮಾಡೋದು ಹೇಗೆ? ಅದಕ್ಕಾಗಿ ಇಲ್ಲಿದೆ ಒಂದಿಷ್ಟು ಐಡಿಯಾ.

ಮೊದಲೇ ಪ್ಲಾನ್‌ ಮಾಡಿ

ವ್ಯಾಲೆಂಟೈನ್ಸ್‌ ಡೇಯನ್ನ ಅವಿಸ್ಮರಣೀಯವಾಗಿಸಬೇಕು ಅಂದ್ರೆ ಅದಕ್ಕಾಗಿ ಒಂದಿಷ್ಟು ತಯಾರಿ ಕಂಡಿತ ಬೇಕು. ಮೊದಲೇ ಪ್ಲಾನ್‌ ಮಾಡಿ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ಲಾನ್‌ ಇಂಪ್ಲಿಮೆಂಟೇಷನ್‌ಗೆ ಸಿದ್ಧತೆ ನಡೆಸಿ. ನೀವು ಒಂದೊಳ್ಳೆ ರೆಸ್ಟೋರೆಂಟ್‌ ನಿಮ್ಮ ಸಂಗಾತಿಯನ್ನು ಕರೆದುಕೊಂಡು ಹೋಗಬೇಕು ಅಂತಿದ್ರೆ ಗಮನಿಸಿ. ಹೋಟೆಲ್‌ಗಳು ತಿಂಗಳುಗಳ ಮೊದಲೇ ಬುಕ್‌ ಆಗಿರುತ್ತವೆ. ಪ್ರವಾಸಿ ತಾಣಗಳು ಕೂಡ ಮೊದಲೇ ಕಾಯ್ದಿರಿಸಲಾಗುತ್ತದೆ. ಆ ಕಾರಣಕ್ಕೆ ನೀವು ವೆಲ್‌ ಇನ್‌ ಅಡ್ವಾನ್ಸ್‌ ತಯಾರಿ ನಡೆಸುವುದು ಮುಖ್ಯವಾಗುತ್ತದೆ.

ಡಾನ್ಸ್‌ ಕಲಿಯಿರಿ

ಈ ದಿನದಂದು ಜೊತೆಯಾಗಿ ಸಂಗೀತದ ಆಲಾಪಕ್ಕೆ ಹೆಜ್ಜೆ ಹಾಕುವುದು ಕೂಡ ಖುಷಿ ನೀಡುತ್ತದೆ. ಅದಕ್ಕಾಗಿ ಡಾನ್ಸ್‌ ಸ್ಟೆಪ್‌ಗಳನ್ನು ಪ್ರಾಕ್ಟೀಸ್‌ ಮಾಡಿ. ಈ ಡಿಜಿಟಲ್‌ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ಯೂಟೆರಿಯಲ್‌ಗಳು ನಿಮಗೆ ಸಿಗುತ್ತವೆ. ಅಲ್ಲಿಂದ ನೀವು ನಿಮ್ಮಿಷ್ಟದ ಡಾನ್ಸ್‌ಗೆ ಹೆಜ್ಜೆ ಹಾಕುವುದು ಹೇಗೆ ಎಂಬುದನ್ನು ಅಭ್ಯಾಸ ಮಾಡಬಹುದು.

ಕ್ರಾಫ್ಟ್‌ ಗಿಫ್ಟ್‌

ನಿಮ್ಮ ಸಂಗಾತಿಗೆ ವಿಶೇಷವಾದ ಉಡುಗೊರೆ ನೀಡಬೇಕು ಎಂದು ನೀವು ಬಯಸುತ್ತಿದ್ದರೆ, ಅದಕ್ಕಾಗಿ ನೀವೇ ಕ್ರಾಫ್ಟ್‌ಗಳಿಂದ ಗಿಫ್ಟ್‌ ರಚಿಸಬಹುದು. ಹೃದಯಾಕಾರದ ಗಿಫ್ಟ್‌ಗಳನ್ನು ತಯಾರಿಸಬಹುದು. ಟೆಡ್ಡಿಬೇರ್‌ಗೆ ನಿಮ್ಮ ಸಂಗಾತಿಗೆ ಇಷ್ಟವಾಗುವಂತೆ ಅಲಂಕರಿಸಿ ನೀಡಬಹುದು. ಚಾಕೊಲೇಟ್‌ ಇರಿಸಲು ಬುಟ್ಟಿ ತಯಾರು ಮಾಡಬಹುದು. ಅಂತಹ ಕರಕುಶಲವನ್ನು ಕಲಿಯಲು ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ ಅವಕಾಶವಿದೆ.

ಕ್ಯಾಂಡಲ್‌ ಲೈಟ್‌ ಡಿನ್ನರ್‌

ಆಹಾರಗಳ ಜೊತೆ ನಿಮ್ಮ ಪ್ರೇಮವನ್ನು ನಿವೇದಿಸಬೇಕು ಅಂತಿದ್ರೆ ಅದು ಕೂಡ ಗುಡ್‌ ಐಡಿಯಾ. ಈ ಸಮಯದಲ್ಲಿ ಬಹುತೇಕ ಹೋಟೆಲ್‌ಗಳು ಕಪಲ್‌ಗಳಿಗಾಗಿ ವಿಶೇಷ ಆಫರ್‌ಗಳನ್ನು ನೀಡುತ್ತವೆ. ರಿಯಾಯಿತಿ ದರದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಬಹುದು. ಆದರೆ ಇದು ನಿಮಗೆ ಇಷ್ಟವಾಗದೇ ಇದ್ದರೆ, ಮನೆಯಲ್ಲೇ ಒಂದು ಹೋಟೆಲ್‌ ರೂಪವನ್ನು ಸೃಷ್ಟಿಸಬಹುದು. ನಿಮ್ಮ ಸಂಗಾತಿಗೆ ನೀವು ನಿಮ್ಮ ಕೈಯಾರೆ ಅಡುಗೆ ಮಾಡಿ ತಿನ್ನಿಸಬಹುದು. ಕ್ಯಾಂಡಲ್‌ ಡಿನ್ನರ್‌ ಆಯೋಜಿಸುವ ಮೂಲಕ ನಿಮ್ಮ ಬದುಕಿನ ಅಮೂಲ್ಯ ದಿನವನ್ನು ಸುಂದರವಾಗಿಸಿಕೊಳ್ಳಬಹುದು. ಅದಕ್ಕಾಗಿ ಒಂದು ಟೇಬಲ್‌ ಸಿದ್ಧಪಡಿಸಿ. ಆ ಟೇಬಲ್‌ ಮೇಲೆ ಅಂದು ಏನೇನು ಇರಿಸಬೇಕು ಎಂದು ಸಿದ್ಧತೆಯೂ ಇರಲಿ.

ಪ್ರಪೋಸ್‌ ಮಾಡುವುದಕ್ಕೂ ಪ್ಲಾನ್‌ ಇರಲಿ

ನೀವು ಈಗಾಗಲೇ ಪ್ರೀತಿಯಲ್ಲಿ ಬಿದ್ದವರಾಗಲಿ, ಮದುವೆಯಾಗಿ ಸಂಗಾತಿಗೆ ಪ್ರೇಮ ನಿವೇದನೆ ಮಾಡುತ್ತಿರಲಿ ಅಥವಾ ಮೊದಲ ಬಾರಿಗೆ ಪ್ರೇಮಿ ಎದುರು ಪ್ರೇಮ ನಿವೇದನೆ ಮಾಡಿಕೊಳ್ಳುವವರಾಗಲಿ ಪ್ರೇಮಿ ಎದುರು ಮಂಡಿಯೂರಿ ರೋಸ್‌ ನೀಡುವುದಕ್ಕಿಂತ ಡಿಫ್ರೆಂಟ್‌ ಆಗಿ ಹೇಗೆ ಪ್ರೇಮ ನಿವೇದನೆ ಮಾಡಬಹುದು ಎಂಬುದನ್ನು ಅಭ್ಯಾಸ ಮಾಡಿ. ಅದಕ್ಕಾಗಿ ಒಂದಿಷ್ಟು ಪ್ಲಾನ್‌ ಮಾಡಿ. ನಿಮ್ಮ ಸಂಗಾತಿ ಬದುಕಿನಲ್ಲಿ ಈ ದಿನವನ್ನು ಮರೆಯಬಾರದು ಈ ರೀತಿ ಭಿನ್ನವಾದ ದಾರಿ ಹುಡುಕಿ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ