logo
ಕನ್ನಡ ಸುದ್ದಿ  /  ಜೀವನಶೈಲಿ  /  Varamahalakshmi Festival: ವರಮಹಾಲಕ್ಷ್ಮಿಗೆ ನೈವೇದ್ಯಕ್ಕಾಗಿ ಯಾವ ತಿಂಡಿಗಳನ್ನು ತಯಾರಿಸಬಹುದು? ಇಲ್ಲಿದೆ ಮಾಹಿತಿ

Varamahalakshmi Festival: ವರಮಹಾಲಕ್ಷ್ಮಿಗೆ ನೈವೇದ್ಯಕ್ಕಾಗಿ ಯಾವ ತಿಂಡಿಗಳನ್ನು ತಯಾರಿಸಬಹುದು? ಇಲ್ಲಿದೆ ಮಾಹಿತಿ

HT Kannada Desk HT Kannada

Aug 20, 2023 07:24 PM IST

google News

ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಬಹುದಾದ ನೈವೇದ್ಯಗಳ ಬಗ್ಗೆ ಮಾಹಿತಿ

  • ಹಬ್ಬ ಎಂದರೆ ಪೂಜೆ, ಅಲಂಕಾರ, ರಂಗೋಲಿ ಮಾತ್ರವಲ್ಲ, ಆ ದಿನ ಅಡುಗೆ ಮನೆಯಲ್ಲೂ ವಿಶೇಷತೆ ಇದ್ದೇ ಇರುತ್ತದೆ. ಅರಿಶಿನ ಕುಂಕುಮಕ್ಕಾಗಿ ಮನೆಗೆ ಬರುವವರಿಗೆ, ನೆಂಟರಿಷ್ಟರಿಗೆ ವಿವಿಧ ಅಡುಗೆ ತಯಾರಿಸಿ ಅವರಿಗೆ ಬಡಿಸುವುದೇ ದೊಡ್ಡ ಸಂಭ್ರಮ. ಆದರೆ ಅದೆಲ್ಲಕ್ಕಿಂತ ಮೊದಲು ಲಕ್ಷ್ಮಿಗೆ ನೈವೇದ್ಯ ಇಡಬೇಕಾಗಿರುವುದು ಬಹಳ ಮುಖ್ಯ.

ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಬಹುದಾದ ನೈವೇದ್ಯಗಳ ಬಗ್ಗೆ ಮಾಹಿತಿ
ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಬಹುದಾದ ನೈವೇದ್ಯಗಳ ಬಗ್ಗೆ ಮಾಹಿತಿ (Twitter, Facebook)

ಶ್ರಾವಣ ಮಾಸದಲ್ಲಿ ಪ್ರಮುಖವಾಗಿ ಆಚರಿಸುವ ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು 5 ದಿನಗಳಷ್ಟೇ ಬಾಕಿ ಇದೆ. ಆಗಸ್ಟ್‌ 25 ರಂದು ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬಕ್ಕೆ ಈಗಿನಿಂದಲೇ ತಯಾರಿ ಆರಂಭವಾಗಿದೆ. ಅನೇಕರು ಈಗಾಗಲೇ ಹಬ್ಬಕ್ಕೆ ಬೇಕಾದ ಶಾಪಿಂಗ್‌ ಮುಗಿಸಿದ್ದಾರೆ. ಕೆಲವರು ಲಕ್ಷ್ಮಿಗೆ ಉಡಿಸಬಹುದಾದ ಸೀರೆಯನ್ನೂ ಖರೀದಿಸಿ ಉಡಿಸಲು ರೆಡಿ ಮಾಡಿಟ್ಟುಕೊಂಡಿದ್ದಾರೆ. ಬ್ಯಾಕ್‌ಡ್ರಾಪ್‌, ರಂಗೋಲಿ ಹೇಗಿರಬೇಕೆಂದೂ ಪ್ಲಾನ್‌ ಮಾಡಿದ್ಧಾರೆ.

ವರಮಹಾಲಕ್ಷ್ಮಿಗೆ ನೈವೇದ್ಯ

ಹಾಗೇ ಹಬ್ಬ ಎಂದರೆ ಪೂಜೆ, ಅಲಂಕಾರ, ರಂಗೋಲಿ ಮಾತ್ರವಲ್ಲ, ಆ ದಿನ ಅಡುಗೆ ಮನೆಯಲ್ಲೂ ವಿಶೇಷತೆ ಇದ್ದೇ ಇರುತ್ತದೆ. ಅರಿಶಿನ ಕುಂಕುಮಕ್ಕಾಗಿ ಮನೆಗೆ ಬರುವವರಿಗೆ, ನೆಂಟರಿಷ್ಟರಿಗೆ ವಿವಿಧ ಅಡುಗೆ ತಯಾರಿಸಿ ಅವರಿಗೆ ಬಡಿಸುವುದೇ ದೊಡ್ಡ ಸಂಭ್ರಮ. ಆದರೆ ಅದೆಲ್ಲಕ್ಕಿಂತ ಮೊದಲು ಲಕ್ಷ್ಮಿಗೆ ನೈವೇದ್ಯ ಇಡಬೇಕಾಗಿರುವುದು ಬಹಳ ಮುಖ್ಯ. ವರಮಹಾಲಕ್ಷ್ಮಿ ವ್ರತ ಮಾಡುವವರು ಲಕ್ಷ್ಮಿಗೆ ಯಾವ ತಿಂಡಿ ಬಹಳ ಪ್ರಿಯ? ಹಬ್ಬಕ್ಕೆ ಏನೆಲ್ಲಾ ನೈವೇದ್ಯ ತಯಾರಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕು.

ಪಾಯಸ: ಲಕ್ಷ್ಮಿಗೆ ಪಾಯಸ ಎಂದರೆ ಬಹಳ ಇಷ್ಟ. ಶಾವಿಗೆ, ಗಸಗಸೆ, ಕೊಬ್ಬರಿ, ಅಕ್ಕಿ ಪಾಯಸ ಯಾವುದೇ ರೀತಿಯ ಪಾಯಸವನ್ನು ನೀವು ತಯಾರಿಸಿ ದೇವಿಗೆ ನೈವೇದ್ಯವನ್ನಾಗಿ ಇಡಬಹುದು.

ಸಜ್ಜಿಗೆ: ರವೆ, ತುಪ್ಪ, ಒಣದ್ರಾಕ್ಷಿ, ಗೋಡಂಬಿಗಳಿಂದ ಮಾಡಿದ ಸಜ್ಜಿಗೆಯನ್ನು ನೀವು ದೇವಿಗೆ ನೈವೇದ್ಯವನ್ನಾಗಿ ತಯಾರಿಸಬಹುದು. ಶ್ರೀಮನ್ನಾರಾಯಣನಿಗೆ ಸಜ್ಜಿಗೆ ಪ್ರಸಾದ ಹೇಗೆ ಪ್ರಿಯವೋ ಲಕ್ಷ್ಮಿಗೆ ಕೂಡಾ ಸಜ್ಜಿಗೆ ಎಂದರೆ ಬಹಳ ಇಷ್ಟ.

ಕೋಸಂಬರಿ: ಹೆಸರುಬೇಳೆ, ಸೌತೆಕಾಯಿ ಹಾಗೂ ಇನ್ನಿತರ ಸಾಮಗ್ರಿಗಳಿಂದ ತಯಾರಿಸುವ ಕೋಸಂಬರಿ ಬಹುತೇಕ ಎಲ್ಲಾ ಸಮಾರಂಭಗಳಲ್ಲಿ ತಯಾರಿಸಲಾಗುತ್ತದೆ. ಹಾಗೇ ರಾಮನವಮಿ, ದುರ್ಗಾಪೂಜೆ ಜೊತೆಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಕೂಡಾ ಹೆಸರುಬೇಳೆ ಕೋಸಂಬರಿ ತಯಾರಿಸಿ ದೇವಿಗೆ ನೈವೇದ್ಯ ಮಾಡಲಾಗುತ್ತದೆ.

ಕರ್ಜಿಕಾಯಿ: ಕೊಬ್ಬರಿ ಸಕ್ಕರೆ ಮಿಶ್ರಣ ಹಾಗೂ ಮೈದಾಹಿಟ್ಟಿನಿಂದ ತಯಾರಿಸುವ ಈ ಸಿಹಿ ತಿಂಡಿ ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಸಬಹುದು.

ಒಬ್ಬಟ್ಟು: ಭಾರತೀಯ ಸಂಪ್ರದಾಯದಲ್ಲಿ ಅದರಲ್ಲೂ ದಕ್ಷಿಣ ಬಾರತದಲ್ಲಿ ಒಬ್ಬಟ್ಟಿಗೆ ಬಹಳ ಪ್ರಾಮುಖ್ಯತೆ ಇದೆ. ಇದನ್ನು ಮದುವೆ, ಮುಂಜಿ ಸೇರಿದಂತೆ ಅನೇಕ ಸಮಾರಂಭಗಳಲ್ಲಿ ತಯಾರಿಸಲಾಗುತ್ತದೆ. ನೀವು ಲಕ್ಷ್ಮಿಗೆ ನೈವೇದ್ಯವಾಗಿ ಇಡಲು ಕಾಯಿ ಒಬ್ಬಟ್ಟು ತಯಾರಿಸಬಹುದು.

ಇವಿಷ್ಟೇ ಅಲ್ಲದೆ ಕಡ್ಲೆಕಾಳಿನ ಉಸ್ಲಿ, ಬಾಳೆಹಣ್ಣಿನ ರಸಾಯನ, ಪುಳಿಯೋಗರೆ, ಚಕ್ಲಿ, ಬೆಲ್ಲದನ್ನವನ್ನು ಕೂಡಾ ನೈವೇದ್ಯವಾಗಿ ಇಡಬಹುದು. ಸಾಧ್ಯವಾದರೆ ಇವಿಷ್ಟು ನೈವೇದ್ಯಗಳಲ್ಲಿ ಯಾವುದಾದರೂ ಐದನ್ನು ನೈವೇದ್ಯಕ್ಕಾಗಿ ತಯಾರಿಸಿ. ಒಂದು ವೇಳೆ ನಿಮಗೆ 5 ರೀತಿಯ ನೈವೇದ್ಯ ಮಾಡಲು ಆಗದಿದ್ದಲ್ಲಿ ಸಜ್ಜಿಗೆ ಅಥವಾ ಒಂದು ಲೋಟ ಹಾಲನ್ನಾದರೂ ಇಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ