logo
ಕನ್ನಡ ಸುದ್ದಿ  /  ಜೀವನಶೈಲಿ  /  Viral News: ಚಿಕ್ಕ ವಯಸ್ಸಿಗೇ ವಿಶ್ವ ದಾಖಲೆ ಬರೆದ ಆಂಧ್ರಪ್ರದೇಶದ 4 ತಿಂಗಳ ಕಂದಮ್ಮ; ಈ ಹೆಣ್ಣು ಮಗು ಮಾಡಿದ ಸಾಧನೆ ಆದ್ರೂ ಏನು?

Viral News: ಚಿಕ್ಕ ವಯಸ್ಸಿಗೇ ವಿಶ್ವ ದಾಖಲೆ ಬರೆದ ಆಂಧ್ರಪ್ರದೇಶದ 4 ತಿಂಗಳ ಕಂದಮ್ಮ; ಈ ಹೆಣ್ಣು ಮಗು ಮಾಡಿದ ಸಾಧನೆ ಆದ್ರೂ ಏನು?

Rakshitha Sowmya HT Kannada

Feb 20, 2024 05:37 PM IST

google News

ಚಿಕ್ಕ ವಯಸ್ಸಿಗೇ ವಿಶ್ವ ದಾಖಲೆ ಬರೆದ ಆಂಧ್ರಪ್ರದೇಶದ 4 ತಿಂಗಳ ಕಂದಮ್ಮ

  • Viral News: ಆಂಧ್ರಪ್ರದೇಶದ ನಾಡಿಗಾಮಾ ಗ್ರಾಮದ ದಂಪತಿಯ 4 ತಿಂಗಳ ಹೆಣ್ಣು ಮಗು, ಇಷ್ಟು ಚಿಕ್ಕ ವಯಸ್ಸಿಗೆ ದಾಖಲೆ ಬರೆದಿದೆ. ಸುಮಾರು 120 ಬಗೆಯ ಪ್ರಾಣಿ, ಪಕ್ಷಿಗಳ ಫೋಟೋಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿದೆ.

ಚಿಕ್ಕ ವಯಸ್ಸಿಗೇ ವಿಶ್ವ ದಾಖಲೆ ಬರೆದ ಆಂಧ್ರಪ್ರದೇಶದ 4 ತಿಂಗಳ ಕಂದಮ್ಮ
ಚಿಕ್ಕ ವಯಸ್ಸಿಗೇ ವಿಶ್ವ ದಾಖಲೆ ಬರೆದ ಆಂಧ್ರಪ್ರದೇಶದ 4 ತಿಂಗಳ ಕಂದಮ್ಮ (PC: @InformedAlerts)

Viral News: ಸಾಧನೆ ಮಾಡಿ ನಾಲ್ಕು ಜನರ ಬಳಿ ಹೊಗಳಿಸಿಕೊಳ್ಳೋದು ಅಂದ್ರೆ ಯಾರು ತಾನೇ ಬೇಡ ಅಂತಾರೆ, ಆದರೆ ಸಾಧನೆಯ ಹಾದಿ ಅಷ್ಟು ಸುಲಭ ಅಲ್ಲ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಅದಕ್ಕಾಗಿ ಕಠಿಣ ಶ್ರಮ ಪಡಬೇಕು. ಕಷ್ಟ, ನೋವು, ಸುಖ ಎಲ್ಲವನ್ನೂ ಬದಿಗಿಟ್ಟು ಕೆಲಸ ಮಾಡಬೇಕು.

ಸಾಧನೆ ಮಾಡಬೇಕೆಂದರೆ ಇಂತಿಷ್ಟೇ ವಯಸ್ಸಿನ ಮಿತಿಯಿಲ್ಲ, ಜಾತಿ ಧರ್ಮದ ಹಂಗಿಲ್ಲ. ಸಾಧನೆ ಮಾಡುವ ಮನಸ್ಸಿದ್ದರೆ ಸಾಕು. ಎಷ್ಟೋ ಜನರಿಗೆ ತಾವು ಇಂತಿಷ್ಟೇ ವಯಸ್ಸಿಗೇ ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಕಂಡಿರುತ್ತಾರೆ. ಕೆಲವರು 60 ವರ್ಷದ ನಂತರ ಸಾಧನೆ ಮಾಡುತ್ತಾರೆ. ಆದರೆ ಇಲ್ಲೊಂದು ಕಂದಮ್ಮ 4ನೇ ತಿಂಗಳಿಗೆ ಸಾಧನೆ ಮಾಡಿ ನೋಬಲ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದೆ. ಏನು! 4 ತಿಂಗಳ ಮಗು ಸಾಧನೆ ಮಾಡ್ತಾ? ಆ ಕಂದಮ್ಮ ಮಾಡಿದ ಸಾಧನೆ ಆದ್ರೂ ಏನು? ಅಂತ ಆಶ್ಚರ್ಯ ಆಗ್ತಿದ್ಯಾ? ಹೌದು ಆಶ್ಚರ್ಯ ಎನಿಸಿದರೂ ಇದು ಸತ್ಯ.

ಮಗು ಆರೋಗ್ಯವಾಗಿ ಜನಿಸಬೇಕಾದರೆ ಗರ್ಭಿಣಿಯಾಗಿದ್ದಾಗ ಒಳ್ಳೆ ಆಹಾರ ಸೇವಿಸಬೇಕು ಎನ್ನುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಕ್ಕಳು ಊಹೆಗೂ ನಿಲುಕುದಂತೆ ಹೈಪರ್‌ ಆಕ್ಟಿವ್‌ ಎನಿಸಿಕೊಳ್ಳುತ್ತವೆ. ಇದಕ್ಕೆ ಆಂಧ್ರಪ್ರದೇಶದ ಈ ಮಗುವೇ ಸಾಕ್ಷಿ. ಈ ಪುಟಾಣಿ ಹೆಸರು ಕೈವಲ್ಯ, ಹೆತ್ತವರು ಆಂಧ್ರಪ್ರದೇಶದ ನಾಡಿಗಾಮಾ ಹಳ್ಳಿಯವರು. ಈ ಮಗು 4 ತಿಂಗಳಲ್ಲೇ ಸುಮಾರು 120 ವಿಭಿನ್ನ ರೀತಿಯ ಪ್ರಾಣಿಗಳು, ಪಕ್ಷಿಗಳು ಹಾಗೂ ಇನ್ನಿತರ ವಸ್ತುಗಳನ್ನು ಗುರುತಿಸುತ್ತಿದೆ. ಇದಕ್ಕೂ ಮುನ್ನ ಮಗುವಿನ ಪ್ರತಿಭೆಯನ್ನು ಗಮಿನಿಸಿದ್ದ ತಾಯಿ, ಕಂದನ ಚಟುವಟಿಕೆಯನ್ನು ವಿಡಿಯೋ ಮಾಡಿ ನೊಬೆಲ್‌ ವರ್ಡ್ಡ್‌ ರೆಕಾರ್ಡ್‌ ತಂಡಕ್ಕೆ ಕಳಿಸಿಕೊಟ್ಟಿದ್ದರು.

ನೋಬಲ್ ವರ್ಲ್ಡ್ ರೆಕಾರ್ಡ್ಸ್ ತಂಡವು ಮಗುವಿನ ತಾಯಿ ಕಳಿಸಿಕೊಟ್ಟಿದ್ದ ವೀಡಿಯೊವನ್ನು ಪರಿಶೀಲಿಸಿದ್ದಾರೆ. ವಿಡಿಯೋದಲ್ಲಿ ಮಗು 12 ಹೂವುಗಳು, 27 ಹಣ್ಣುಗಳು, 27 ತರಕಾರಿಗಳು, 27 ಪ್ರಾಣಿಗಳು ಮತ್ತು 27 ಪಕ್ಷಿಗಳು ಸೇರಿ 120 ಫ್ಲಾಷ್‌ಕಾರ್ಡ್‌ಗಳನ್ನು ಗುರುತಿಸಿದೆ. ಫೆಬ್ರವರಿ 3, 2024 ರಂದು ಮಗುವಿನ ಹೆಸರು ದಾಖಲೆ ಪುಸ್ತಕಕ್ಕೆ ಸೇರಿದೆ. ಅದು ಸಾಬಿತಾದ ನಂತರ ಮಗುವಿಗೆ ಪ್ರಮಾಣ ಪತ್ರ ನೀಡಿದ್ದಾರೆ. ಈ ಮೂಲಕ ಈ 4 ತಿಂಗಳ ಮಗು ಇಷ್ಟು ಚಿಕ್ಕ ವಯಸ್ಸಿನಲ್ಲೇ ವಿಶ್ವ ದಾಖಲೆಗೆ ಸೇರಿದೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಮಗುವಿನ ಸಾಧನೆಗೆ ಹೆತ್ತವರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಗು ಇನ್ನಷ್ಟು ಸಾಧನೆ ಮಾಡಲಿ, ಆಕೆಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಿ ಎಂದು ನೆಟಿಜನ್ಸ್‌ ಕೂಡಾ ಮಗುವಿಗೆ ಹಾರೈಸುತ್ತಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ