logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಶೇ 95ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? 1+3=4 ಆದ್ರೆ 4+6=ಎಷ್ಟು?

Brain Teaser: ಶೇ 95ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? 1+3=4 ಆದ್ರೆ 4+6=ಎಷ್ಟು?

Reshma HT Kannada

Oct 04, 2024 01:30 PM IST

google News

ಬ್ರೈನ್ ಟೀಸರ್

    • ‘ನನ್ ಮೆದುಳು ಯಾಕೋ ಇನ್ನೂ ಚುರುಕಾಗಬೇಕು‘ ಅಂದುಕೊಳ್ಳುವವರಿಗಾಗಿ ಇಲ್ಲೊಂದು ಬ್ರೈನ್ ಟೀಸರ್‌ ಇದೆ. ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇಲ್ಲಿರುವುದು ಸುಲಭ ಗಣಿತದ ಲೆಕ್ಕಾಚಾರ, ಆದ್ರೂ ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡುಹಿಡಿಯುವುದು ನಿಮಗಿರುವ ಸವಾಲು. ಟ್ರೈ ಮಾಡಿ, ಮೆದುಳಿಗೆ ಕೆಲಸ ಕೊಡಿ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳಿಂದ ಮೆದುಳು ಚುರುಕಾಗುತ್ತದೆ ಎಂಬುದು ಸುಳ್ಳಲ್ಲ. ಯಾಕೆಂದರೆ ಇದಕ್ಕಾಗಿ ನಾವು ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ನಮ್ಮಲ್ಲಿ ಯೋಚನಾಶಕ್ತಿಯನ್ನು ವೃದ್ಧಿಸುವ ಬ್ರೈನ್‌ ಟೀಸರ್‌ಗಳು ಏಕಾಗ್ರತೆಯನ್ನೂ ಹೆಚ್ಚಿಸುತ್ತವೆ. ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದು ಸವಾಲು ಎನ್ನಿಸಿದರೂ ಒಂದು ರೀತಿಯ ಮೋಜು ಸಿಗುವುದು ಸುಳ್ಳಲ್ಲ. ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಚಿತ್ರವಿದೆ.

ಇಂದಿನ ಬ್ರೈನ್ ಟೀಸರ್‌ನಲ್ಲಿ ಗಣಿತದ ಪಜಲ್‌ ಇದೆ. ಇದರಲ್ಲಿ ಸುಲಭವಾಗಿ ಕೂಡಿಸುವ ಲೆಕ್ಕಾಚಾರವಿದೆ. ಆದರೆ ಇದು ಖಂಡಿತ ನೋಡಿದಷ್ಟು ಸುಲಭವಲ್ಲ. ಇದಕ್ಕೆ ಉತ್ತರ ಹೇಳುವುದು ನಿಜಕ್ಕೂ ಸವಾಲು. ಯಾಕೆಂದರೆ 1+3=4 ಆದ್ರೆ 2+4=6 ಖಂಡಿತ ಆಗೊಲ್ಲ. ಹಾಗಾದ್ರೆ ಪ್ರಶ್ನೆ ಏನು ಎಂಬುದನ್ನು ನೋಡಿ.

Colan Infotech Pvt Ltd ಎಂಬ ಟ್ವಿಟರ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್ ಚಿತ್ರವಿದು. ಇದರಲ್ಲಿ ಗಣಿತ ಲೆಕ್ಕವಿದೆ. 1+3= 4, 2+4=10, 3 + 5=18, 4+6 ಎಷ್ಟು ಎಂಬುದು ಇಲ್ಲಿರುವ ಪ್ರಶ್ನೆಯಾಗಿದೆ. ಮೊದಲೇ ಹೇಳಿದಂತೆ ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಇದಕ್ಕೆ ಉತ್ತರ ಹುಡುಕುವಾಗ ಕಷ್ಟ ಎನ್ನಿಸಬಹುದು. ಆ ಕಾರಣಕ್ಕೆ ಶೇ 95 ರಷ್ಟು ಮಂದಿ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವಲ್ಲಿ ಸೋತಿದ್ದಾರೆ. ಹಾಗಾದರೆ ಅದಕ್ಕೆ ನಿಮ್ಮ ಉತ್ತರವೇನು ಹೇಳಿ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದು ನಿಜಕ್ಕೂ ಖುಷಿ ನೀಡುತ್ತದೆ. ಇದರಿಂದ ಒಂದಿಷ್ಟು ಕಾಲ ಮೆದುಳು ಬೇರೆಲ್ಲಾ ಚಿಂತೆಗಳನ್ನು ಬದಿಗೊತ್ತಿ ಉತ್ತರಕ್ಕಾಗಿ ಮೆದುಳು ಯೋಚಿಸುವಂತೆ ಮಾಡುತ್ತದೆ. ಇನ್ಯಾಕೆ ತಡ, ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ, ಅದು ಯಾವುದು? ನಿಮಗಿರೋದು 5 ಸೆಕೆಂಡ್‌ ಸಮಯ, ಥಟ್ಟಂತ ಹೇಳಿ

ನಿಮ್ಮ ಕಣ್ಣಿನ ದೃಷ್ಟಿಗೆ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಕಂಡುಹಿಡಿಯಲು ನಿಮಗಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್. ಒಂದೇ ರೀತಿ ಇರುವ ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ. ಅದು ಯಾವುದು, 5 ಸೆಕೆಂಡ್‌ನಲ್ಲಿ ನೀವು ಕಂಡುಹಿಡಿಯಬೇಕು. ನಿಮಗಿದು ಚಾಲೆಂಜ್‌.

Brain Teaser: ಲಿವಿಂಗ್ ರೂಮ್‌ನ ಈ ಚಿತ್ರದಲ್ಲಿ 5 ಪದಗಳು ಅಡಗಿವೆ; ಅವು ಯಾವುವು, 70 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್‌

ಗಾಂಧಿ ಜಯಂತಿಗೆ ರಜೆ ಇರುವ ಕಾರಣ ಖಾಲಿ ಕೂತು ಬೋರ್ ಆಗ್ತಾ ಇದ್ಯಾ? ನಿಮ್ಮ ಮೆದುಳಿಗೆ ಕೆಲಸ ನೀಡಿ, ಮೋಜು ಸಿಗಬೇಕು ಅಂತಿದ್ರೆ ಬ್ರೈನ್ ಟೀಸರ್‌ಗೆ ಹುಡುಕುವ ಪ್ರಯತ್ನ ಮಾಡಿ. ಇಲ್ಲಿರುವ ಚಿತ್ರದಲ್ಲಿ 5 ಇಂಗ್ಲಿಷ್‌ ಪದಗಳಿವೆ. ಅವು ಯಾವುದು ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ