Brain Teaser: Aಯ ಮೌಲ್ಯವೆಷ್ಟು? ಗಣಿತದಲ್ಲಿ ನೀವು ಜೀನಿಯಸ್ ಅಂತಾದ್ರೆ ಈ ಸೂತ್ರಕ್ಕೆ ಥಟ್ಟಂತ ಉತ್ತರ ಹೇಳಿ
Jul 07, 2024 07:45 AM IST
Aಯ ಮೌಲ್ಯವೆಷ್ಟು? ಗಣಿತದಲ್ಲಿ ನೀವು ಜೀನಿಯಸ್ ಅಂತಾದ್ರೆ ಈ ಸೂತ್ರಕ್ಕೆ ಥಟ್ಟಂತ ಉತ್ತರ ಹೇಳಿ
- ಶಾಲಾ ದಿನಗಳಲ್ಲಿ ಗಣಿತದ ಸಮೀಕರಣಗಳು ನಮಗೆ ಭಯ ಹುಟ್ಟಿಸಿರುವುದು ಸುಳ್ಳಲ್ಲ. ಹಾಗಂತ ಇವು ಎಲ್ಲರಿಗೂ ಕಬ್ಬಿಣ ಕಡಲೆಯಲ್ಲ. ಗಣಿತ ಎಕ್ಸ್‌ಪರ್ಟ್‌ಗಳು ಎಂತಹ ಇಕ್ವೇಷನ್‌ಗಳನ್ನಾದ್ರೂ ಸುಲಭವಾಗಿ ಬಿಡಿಸುತ್ತಾರೆ. ಇಲ್ಲೊಂದು ಅಂಥದ್ದೇ ಸಮೀಕರಣವಿದೆ. ನೀವು ಗಣಿತ ಪ್ರೇಮಿಯಾದ್ರೆ ಇದಕ್ಕೆ ಉತ್ತರ ಹೇಳಲು ಪ್ರಯತ್ನಿಸಿ.
ಗಣಿತ ನಿಮ್ಮ ಮೆಚ್ಚಿನ ಸಬ್ಜೆಕ್ಟಾ, ಗಣಿತದಲ್ಲಿ ನಿಮಗೆ ಔಟ್ ಆಫ್ ಔಟ್ ಮಾರ್ಕ್ಸ್ ಬರ್ತಾ ಇತ್ತಾ. ಇತ್ತೀಚಿನ ದಿನಗಳಲ್ಲಿ ನೀವು ಯಾವುದೇ ಗಣಿತದ ಸೂತ್ರಗಳನ್ನು ಬಿಡಿಸಿಲ್ವಾ, ಈಗ ಮತ್ತೆ ಗಣಿತ ವಿಷಯದಲ್ಲಿ ನಿಮ್ಮ ಶಾರ್ಪ್‌ನೆಸ್ ತೋರುವ ಬಯಕೆ ನಿಮಗಾಗಿದ್ಯಾ, ಹಾಗಾದ್ರೆ ಈ ಬ್ರೈನ್ ಟೀಸರ್‌ಗೆ ನೀವು ಉತ್ತರ ಕಂಡುಹಿಡಿಯಬೇಕು. ನೀವು ಗಣಿತದಲ್ಲಿ ನಿಜಕ್ಕೂ ಜೀನಿಯಸ್ಸ್ ಅಂತಾದ್ರೆ ಥಟ್ಟಂತ ಉತ್ತರ ಹೇಳಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವು ಬ್ರೈನ್ ಟೀಸರ್‌ಗಳು ಹರಿದಾಡುತ್ತವೆ. ಇವುಗಳಲ್ಲಿ ಕೆಲವು ಸಾಕಷ್ಟು ವೈರಲ್ ಆಗುತ್ತವೆ. ಬ್ರೈನ್ ಟೀಸರ್ ಪ್ರೇಮಿಗಳು ಉತ್ತರ ಕಂಡುಹಿಡಿಯಲು ತಮ್ಮ ಮೆದುಳನ್ನು ಸಾಕಷ್ಟು ಖರ್ಚು ಮಾಡುತ್ತಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬ್ರೈನ್ ಟೀಸರ್ ಅಪ್‌ಲೋಡ್ ಆಗುವುದಕ್ಕಾಗಿಯೇ ಕಾಯುತ್ತಿರುತ್ತಾರೆ. ನೀವು ಅಂತಹವರ ಗುಂಪಿಗೆ ಸೇರುವುದಾದರೆ ನಿಮಗಿದು ಹೇಳಿ ಮಾಡಿಸಿದ ಬ್ರೈನ್ ಟೀಸರ್.
@perfect_mindIQ ಎಂಬ ಹೆಸರಿನ ಟ್ವಿಟರ್ ಖಾತೆ ಹೊಂದಿರುವ ವ್ಯಕ್ತಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇಂದಿನ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ, ಹಾಗಾದ್ರೆ ಎಯ ಮೌಲ್ಯವೆಷ್ಟು ಎಂದು ಬರೆದುಕೊಂಡಿದ್ದಾರೆ. 18/3(A-4/2)=24 ಹಾಗಾದ್ರೆ A = ಎಷ್ಟು? ಎಂದು ಪ್ರಶ್ನೆ ಕೇಳಲಾಗಿದೆ. ಈ ಬ್ರೈನ್ ಟೀಸರ್ ಚಿತ್ರದಲ್ಲಿ ಐನ್‌ಸ್ಟೈನ್ ಫೋಟೊ ಕೂಡ ಕಾಣಬಹುದು.
ಜುಲೈ 1 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ ಹಲವರು ವೀಕ್ಷಿಸಿದ್ದಾರೆ. ಕೆಲವು ಗಣಿತ ಎಕ್ಸ್‌ಪರ್ಟ್‌ಗಳು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.
ʼA-4÷2=4, A=6ʼ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼ6( A - 2 ) = 24 6A -12 = 24 6A = 36 A = 6ʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. =>6(A-2)=24, =>(A-2)=4, =>A=6 ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಈ ಬ್ರೈನ್ ಟೀಸರ್‌ಗೆ ಹಲವರು 6 ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಸಮೀಕರಣವನ್ನು ಬಿಡಿಸಿದ ರೀತಿ ಮಾತ್ರ ಬೇರೆ ಬೇರೆ ಇದೆ. ಅವರ ಉತ್ತರ ಏನೇ ಇರಲಿ, ನಿಮ್ಮ ಉತ್ತರವೇನು ಹೇಳಿ.
ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುವುದು ಮಾತ್ರವಲ್ಲ, ಬುದ್ಧಿಯನ್ನು ಚುರುಕಾಗಿಸುತ್ತದೆ. ಸಮಸ್ಯೆಯನ್ನು ಪರಿಹರಿಸುವ ಕೌಶಲ ವೃದ್ಧಿಯಾಗುವಂತೆ ಸಹಾಯ ಮಾಡುತ್ತದೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 1+4=5, 2+5=12 ಆದ್ರೆ 8+11 = ಎಷ್ಟು? ಗಣಿತದಲ್ಲಿ ನೀವು ನಿಜಕ್ಕೂ ಪಂಟರಾದ್ರೆ 5 ಸೆಕೆಂಡ್ ಒಳಗೆ ಉತ್ತರ ಹೇಳಿ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀಡುವ ಲಾಜಿಕಲ್ ಗಣಿತ ನಮ್ಮ ತಲೆಗೆ ಹುಳ ಬಿಟ್ಟ ಫೀಲಿಂಗ್ ನೀಡುವುದು ಸುಳ್ಳಲ್ಲ. ಅಂತಹ ಲಾಜಿಕಲ್ ಗಣಿತಗಳನ್ನೇ ಬ್ರೈನ್ ಟೀಸರ್‌ಗಳಲ್ಲೂ ಬಳಸಲಾಗುತ್ತದೆ. ಇಲ್ಲಿರುವ ಇಂದಿನ ಬ್ರೈನ್ ಟೀಸರ್ ಕೂಡ ಗಣಿತದ ಪಜಲ್ ಹೊಂದಿದೆ. ಇದಕ್ಕೆ 5 ಸೆಕೆಂಡ್ ಒಳಗೆ ಉತ್ತರ ಹೇಳಬೇಕು.