logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗಣಿತ ಪ್ರಿಯರಿಗೊಂದು ಸವಾಲು; ಈ ಲೆಕ್ಕವನ್ನು ಕ್ಯಾಲ್ಕುಲೆಟರ್ ಬಳಸದೇ ಬಿಡಿಸಿ, ನಿಮ್ಮ ಉತ್ತರ ತಿಳಿಸಿ -ಬೇಗ ಶುರು ಮಾಡಿ

Brain Teaser: ಗಣಿತ ಪ್ರಿಯರಿಗೊಂದು ಸವಾಲು; ಈ ಲೆಕ್ಕವನ್ನು ಕ್ಯಾಲ್ಕುಲೆಟರ್ ಬಳಸದೇ ಬಿಡಿಸಿ, ನಿಮ್ಮ ಉತ್ತರ ತಿಳಿಸಿ -ಬೇಗ ಶುರು ಮಾಡಿ

Reshma HT Kannada

Aug 01, 2024 11:26 AM IST

google News

ಗಣಿತ ಎಕ್ಸ್‌ಪರ್ಟ್‌ಗಳಿಗೊಂದು ಸವಾಲು; ಈ ಗಣಿತ ಸೂತ್ರವನ್ನು ಕ್ಯಾಲ್ಕುಲೆಟರ್‌ ಬಳಸದೇ ಬಿಡಿಸಿ, ನಿಮ್ಮ ಉತ್ತರ ತಿಳಿಸಿ

    • ನೀವು ಗಣಿತ ಎಕ್ಸ್‌ಪರ್ಟ್‌ ಆಗಿದ್ದು, ಗಣಿತದ ಸೂತ್ರವನ್ನು ಥಟ್ಟಂತ ಬಿಡಿಸ್ತೀರಾ? ಹಾಗಾದ್ರೆ ನಿಮಗಾಗಿ ಇಲ್ಲೊಂದು ಸವಾಲಿದೆ. ಈ ಪ್ರಶ್ನೆಗೆ ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು... ಎಷ್ಟು ಸೆಕೆಂಡ್‌ಗಳಲ್ಲಿ ಉತ್ತರ ಹೇಳ್ತೀರಿ ನೋಡೋಣ.
ಗಣಿತ ಎಕ್ಸ್‌ಪರ್ಟ್‌ಗಳಿಗೊಂದು ಸವಾಲು; ಈ ಗಣಿತ ಸೂತ್ರವನ್ನು ಕ್ಯಾಲ್ಕುಲೆಟರ್‌ ಬಳಸದೇ ಬಿಡಿಸಿ, ನಿಮ್ಮ ಉತ್ತರ ತಿಳಿಸಿ
ಗಣಿತ ಎಕ್ಸ್‌ಪರ್ಟ್‌ಗಳಿಗೊಂದು ಸವಾಲು; ಈ ಗಣಿತ ಸೂತ್ರವನ್ನು ಕ್ಯಾಲ್ಕುಲೆಟರ್‌ ಬಳಸದೇ ಬಿಡಿಸಿ, ನಿಮ್ಮ ಉತ್ತರ ತಿಳಿಸಿ

ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹೇಳೋದು ಒಂಥರಾ ಖುಷಿ ನೀಡುತ್ತದೆ. ಇದು ಮೆದುಳಿಗೆ ಯೋಚಿಸುವಷ್ಟು ಕೆಲಸ ಕೊಡುತ್ತದೆ. ನಾವು ಕ್ರಿಯಾತ್ಮಕವಾಗಿ ಯೋಚಿಸುವಂತೆ ಮಾಡುತ್ತದೆ. ಕೆಲವೇ ಸೆಕೆಂಡ್‌ಗಳಲ್ಲಿ ನಮ್ಮ ಮೆದುಳು ಹಲವು ರೀತಿಯಲ್ಲಿ ಯೋಚಿಸುವಂತೆ ಮಾಡುತ್ತದೆ. ನೀವು ಬ್ರೈನ್‌ ಟೀಸರ್‌ ಪ್ರೇಮಿಯಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದಕ್ಕೆ ಉತ್ತರ ಕಂಡುಹಿಡಿಯಿರಿ ಹಾಗೂ ಇದನ್ನು ನಿಮ್ಮ ಸ್ನೇಹಿತರು ಹಾಗೂ ಮನೆಯವರ ಜೊತೆ ಹಂಚಿಕೊಳ್ಳಿ.

@toniaedison ಎಂಬ ಇನ್‌ಸ್ಟಾಗ್ರಾಂ ಥ್ರೆಡ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಉತ್ತರವೇನು? ಎಂದು ಶೀರ್ಷಿಕೆ ಬರೆದುಕೊಂಡು ಇದನ್ನು ಹಂಚಿಕೊಳ್ಳಲಾಗಿದೆ. ½ದಿಂದ 40 ಭಾಗಿಸಿ, 15 ಕೂಡಿಸಿದ್ರೆ ಉತ್ತರ ಎಷ್ಟು? ಎಂದು ಚಿತ್ರದಲ್ಲಿ ಬರೆಯಲಾಗಿದೆ.

ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾದ ಒಂದೇ ದಿನದಲ್ಲಿ 500ಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಹಲವರು ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮಾಡಿದ್ದಾರೆ.

ಹಾಗಾದರೆ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ. ನೀವು ಗಣಿತದಲ್ಲಿ ಎಷ್ಟು ಶಾರ್ಪ್‌ ಇದ್ದೀರಿ ಎಂಬುದನ್ನು ತಿಳಿಸಿ. ಇಂತಹ ಹಲವು ಬ್ರೈನ್‌ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿರುತ್ತವೆ, ಇದನ್ನು ಬಿಡಿಸುವುದರಿಂದ ನಿಮ್ಮ ಟೈಮ್‌ಪಾಸ್‌ ಆಗುವುದು ಮಾತ್ರವಲ್ಲ, ಇದು ನಿಮ್ಮ ಮೆದುಳನ್ನು ಚುರುಕು ಮಾಡುತ್ತದೆ. ನಮ್ಮ ಯೋಚನಾಶಕ್ತಿ ದಿಕ್ಕನ್ನು ಬದಲಿಸುತ್ತದೆ. ನಮ್ಮ ಮೆದುಳು ಕ್ರಿಯಾತ್ಮಕವಾಗಿ ಯೋಚಿಸುವಂತೆ ಮಾಡುತ್ತದೆ. ಸರ್ಧಾತ್ಮಕ ಪರೀಕ್ಷೆಗಳಲ್ಲೂ ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: ಗಣಿತದಲ್ಲಿ ನೀವು ಶಾರ್ಪ್‌ ಅಂತಾದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಪಜಲ್‌ಗೆ ಉತ್ತರ ಹೇಳಿ, ನಿಮ್ಮ ಸಮಯ ಈಗ ಶುರು

ಗಣಿತದ ಸೂತ್ರಗಳನ್ನು ಎಲ್ಲರಿಂದಲೂ ಸುಲಭವಾಗಿ ಬಿಡಿಸಲು ಸಾಧ್ಯವಿಲ್ಲ. ಕೆಲವರಿಗೆ ಗಣಿತದ ಸೂತ್ರಗಳು ಸುಲಭವಾದ್ರೆ ಇನ್ನೂ ಕೆಲವರಿಗೆ ಕಬ್ಬಿಣದ ಕಡಲೆಯಂತಿರುತ್ತದೆ. ಇಲ್ಲಿರುವ ಗಣಿತದ ಸೂತ್ರಕ್ಕೆ ನೀವು ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು ಟ್ರೈ ಮಾಡಿ.

Brain Teaser: 5ರ ನಡುವೆ ಒಂದು ಕಡೆ ಇಂಗ್ಲಿಷ್‌ನ S ಅಕ್ಷರ ಅಡಗಿದೆ; ಮೆದುಳು ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಎಲ್ಲಿದೆ ಹುಡುಕಿ

ಚಿತ್ರದಲ್ಲಿರುವ ಸಂಖ್ಯೆಗಳ ನಡುವೆ ಒಂದು ರಹಸ್ಯ ಅಡಗಿದೆ. ನಿಮ್ಮ ಮೆದುಳು ಶಾರ್ಪ್‌ ಆಗಿದ್ದು ಕಣ್ಣು ಚುರುಕಾಗಿದ್ರೆ ಈ ರಹಸ್ಯವನ್ನು ಕಂಡುಹಿಡಿಯಬಹುದು. 5ರ ನಡುವೆ ಒಂದೇ ಒಂದು ಕಡೆ S ಅಡಗಿದೆ. ಇದು ಎಲ್ಲಿದೆ ಎಂದು 10 ಸೆಕೆಂಡ್ ಒಳಗೆ ಹೇಳಬೇಕು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ