Brain Teaser: ಕೂಡಿಸುವ ಲೆಕ್ಕದಲ್ಲಿ ನೀವು ಪಕ್ಕಾ ಇದ್ರೆ ಇಲ್ಲಿರುವ ಪ್ರಶ್ನೆಗೆ ಕ್ಯಾಲ್ಕುಲೆಟರ್ ಬಳಸದೇ ಉತ್ತರ ಹೇಳಿ? ನಿಮಗಿದು ಚಾಲೆಂಜ್
Mar 07, 2024 06:34 PM IST
ಕೂಡಿಸುವ ಲೆಕ್ಕದಲ್ಲಿ ನೀವು ಪಕ್ಕಾ ಇದ್ರೆ ಇಲ್ಲಿರುವ ಪ್ರಶ್ನೆಗೆ ಕ್ಯಾಲ್ಕುಲೆಟರ್ ಬಳಸದೇ ಉತ್ತರ ಹೇಳಿ? ನಿಮಗಿದು ಚಾಲೆಂಜ್
- ಗಣಿತಪ್ರೇಮಿಗಳು ನೀವಾದ್ರೆ ಈ ಬ್ರೈನ್ ಟೀಸರ್ ನಿಮ್ಮ ಜಾಣತನಕ್ಕೆ ಸವಾಲು ಹಾಕುವುದು ಸುಳ್ಳಲ್ಲ. ಇಲ್ಲಿರುವ ಸುಲಭ ಕೂಡಿಸುವ ಲೆಕ್ಕಾಚಾರ, ಇದಕ್ಕೆ ಕ್ಯಾಲ್ಕುಲೆಟರ್ ಬಳಸದೇ ಉತ್ತರ ಹೇಳಿದ್ರೆ ನಿಮ್ಮಷ್ಟ ಜಾಣರು ಯಾರಿಲ್ಲ.
ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿದ ಬ್ರೈನ್‌ಟೀಸರ್ ಪಜಲ್‌ವೊಂದು ಇನ್‌ಸ್ಟಾ ಬಳಕೆದಾರರ ತಲೆ ಕೆಡಿಸಿದೆ. ಇಲ್ಲಿರುವ ಗಣಿತದ ಪಜಲ್‌ಗೆ ನೀವು ಯಾವ ಸೂತ್ರ ಅನ್ವಯಿಸುವುದು ಏನೂ ಬೇಕಿಲ್ಲ. ಇದು ಸರಳ ಕೂಡಿಸುವ ಲೆಕ್ಕಾಚಾರ. ಆದ್ರೆ ನೀವಿದಕ್ಕೆ ಕ್ಯಾಲ್ಕುಲೆಟರ್ ಬಳಸುವಂತಿಲ್ಲ. ಈಗಾಗಲೇ ಸಾಕಷ್ಟು ಗಣಿತ ಎಕ್ಸ್‌ಪರ್ಟ್‌ಗಳು ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡು ಹಿಡಿಯಲು ತಲೆಕೆಡಿಸಿಕೊಂಡಿದ್ದಾರೆ. ಅಲ್ಲದೇ ಹಲವರು ಉತ್ತರ ಏನಿರಬಹುದು ಎಂದು ತಮ್ಮ ತಮ್ಮ ತಮ್ಮಲ್ಲೇ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ. ಕೂಡಿಸುವ ಲೆಕ್ಕಕ್ಕೆ ಯಾಕಿಷ್ಟು ತಲೆ ಕೆಡಿಸಿಕೊಳ್ಳಬೇಕು ಎಂದು ನೀವು ಅಂದುಕೊಳ್ಳಬಹುದು. ಆದರೆ ಇದು ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಸರಿ ನೀವು ಟ್ರೈ ಮಾಡಿ ಉತ್ತರ ಏನಿರಬಹುದು ಹೇಳಿ.
ಹೀಗಿದೆ ಬ್ರೈನ್ ಟೀಸರ್
ʼಮೆದುಳಿನಲ್ಲೇ ಲೆಕ್ಕಾಚಾರ ಹಾಕಿ. 1000 ರೂ ತೆಗೆದುಕೊಳ್ಳಿ. ಅದಕ್ಕೆ 40 ರೂ ಸೇರಿಸಿ. ಪುನಃ 1000 ರೂ ಸೇರಿಸಿ. ಮತ್ತೆ 30 ರೂ ಸೇರಿಸಿ. ಮತ್ತೆ 1000 ರೂ ಸೇರಿಸಿ. ಈಗ ಪುನಃ 1000 ರೂ ಸೇರಿಸಿ, ಈಗ 10 ರೂಪಾಯಿ, ಸೇರಿಸಿ. ಈ ನಿಮ್ಮ ಬಳಿ ಎಷ್ಟು ಹಣವಿದೆ?
ಈ ಬ್ರೈನ್ ಟೀಸರ್ ಅನ್ನು ನಿನ್ನೆ ಪೋಸ್ಟ್ ಮಾಡಲಾಗಿತ್ತು. ಈಗಾಗಲೇ 1 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದರೆ, 2.5 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡುವ ಮೂಲಕ ತಮ್ಮ ಉತ್ತರ ಹಂಚಿಕೊಂಡಿದ್ದಾರೆ.
ಈ ಬ್ರೈನ್ ಟೀಸರ್‌ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರ ಹೇಳಿದ್ದಾರೆ. ಇಬ್ಬರು 1,100 ಎಂದರೆ ಇನ್ನೊಬ್ಬರು 2100 ಎಂದಿದ್ದಾರೆ. ಇನ್ನೊಬ್ಬರು 4100 ಎಂದು ಕಾಮೆಂಟ್ ಮಾಡಿದ್ದಾರೆ.
ನೋಡೋಣ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರ ಏನಿರಬಹುದು. ನೀವು ಗಣಿತದಲ್ಲಿ ನಿಜಕ್ಕೂ ಜಾಣರಾದ್ರೆ ಇದಕ್ಕೆ ನೀವು ಉತ್ತರ ಹುಡುಕಿಯೇ ಹುಡುಕುತ್ತೀರಿ, ನಿಮ್ಮ ಜಾಣತನಕ್ಕೆ ಇದೊಂದು ಸವಾಲು.
ಈ ಬ್ರೈನ್ ಟೀಸರ್‌ಗಳನ್ನೂ ಓದಿ ಉತ್ತರ ಹೇಳಿ
Brain Teaser: ಮಳೆಯಲ್ಲಿ ಕೊಡೆ ಇಲ್ಲದೇ ನಿಂತಿದ್ರು ಸುರೇಶನ ಕೂದಲು ಒದ್ದೆಯಾಗ್ತಿಲ್ಲ, ಕಾರಣ ಏನು; ಜಾಣರಾದ್ರೆ ಉತ್ತರ ಹೇಳಿ
ಒಗಟು ಬಿಡಿಸುವುದರಲ್ಲಿ ನೀವು ಜಾಣರಾದ್ರೆ ನಿಮಗಾಗಿ ಇಲ್ಲಿದೆ ಒಂದು ಮೆದುಳಿಗೆ ಹುಳ ಬಿಡುವ ಸವಾಲು. ಪ್ರಶ್ನೆ ಏನೋ ಸರಳ ಇದೆ, ಆದ್ರೆ ಉತ್ತರ ಹೇಳೋಕೆ ನೀವು ಬುದ್ದಿ ಖರ್ಚು ಮಾಡಲೇಬೇಕು. ಕೊಡೆ, ಟೋಪಿ ಇಲ್ಲದೇ ಮಳೆಯಲ್ಲಿ ಹೊರಗಡೆ ನಿಂತಿದ್ರು ಸುರೇಶನ ಕೂದಲು ಸ್ವಲ್ಪವೂ ಒದ್ದೆಯಾಗ್ತಿಲ್ಲ, ಯಾಕೆ?
Brain Teaser: ಕಳ್ಳ ಕದ್ದಿದ್ದು 100 ರೂ, ಅಂಗಡಿಯವರು ಕೊಟ್ಟಿದ್ದು 30 ರೂ; ಹಾಗಾದ್ರೆ ಅಂಗಡಿಯವರಿಗಾದ ನಷ್ಟವೆಷ್ಟು; ಉತ್ತರ ಹೇಳಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಗಣಿತದ ಪಜಲ್‌ವೊಂದು ಗಣಿತ ಪ್ರೇಮಿಗಳ ತಲೆ ಕೆಡಿಸಿದೆ. ಮೇಲ್ನೋಟಕ್ಕೆ ಇದಕ್ಕೆ ಉತ್ತರ ಸರಳ ಎನ್ನಿಸಿದರೂ ಇದು ಮೆದುಳಿಗೆ ಹುಳ ಬಿಡುವಂತೆ ಮಾಡುವುದು ಖಂಡಿತ. ನೀವು ಗಣಿತದಲ್ಲಿ ಶಾರ್ಪ್ ಇದ್ರೆ ಉತ್ತರ ಕಂಡುಹಿಡಿಯೋಕೆ ಟ್ರೈ ಮಾಡಿ.
(This copy first appeared in Hindustan Times Kannada website. To read more like this please logon to kannada.hindustantimes.com)