logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಕಣ್ಣು ಎಷ್ಟು ಚುರುಕಾಗಿದೆ ಪರೀಕ್ಷೆ ಮಾಡ್ಬೇಕಾ, ಹಾಗಾದ್ರೆ ಈ ಚಿತ್ರದಲ್ಲಿ ಕಿರೀಟ ಎಲ್ಲಿದೆ ಹುಡುಕಿ, ನಿಮಗಿದು ಸವಾಲು

Brain Teaser: ನಿಮ್ಮ ಕಣ್ಣು ಎಷ್ಟು ಚುರುಕಾಗಿದೆ ಪರೀಕ್ಷೆ ಮಾಡ್ಬೇಕಾ, ಹಾಗಾದ್ರೆ ಈ ಚಿತ್ರದಲ್ಲಿ ಕಿರೀಟ ಎಲ್ಲಿದೆ ಹುಡುಕಿ, ನಿಮಗಿದು ಸವಾಲು

Reshma HT Kannada

Oct 05, 2024 01:11 PM IST

google News

ಬ್ರೈನ್ ಟೀಸರ್

    • ಇಲ್ಲೊಂದು ಬೆಡ್‌ರೂಮ್ ದೃಶ್ಯದ ಚಿತ್ರವಿದೆ. ಇದರಲ್ಲಿ ಬೆಡ್, ಬೆಡ್‌ಶೀಟ್‌ ಜೊತೆಗೆ ಒಂದಿಷ್ಟು ಇತರ ವಸ್ತುಗಳೂ ಇವೆ. ಈ ಎಲ್ಲಾ ವಸ್ತುಗಳ ನಡುವೆ ಕಿರೀಟವೊಂದು ಅಡಗಿದೆ. ಆ ಕಿರೀಟ ಎಲ್ಲಿದೆ ಎಂದು ಹುಡುಕುವುದು ನಿಮಗಿರುವ ಸವಾಲು. ನಿಮಗಿರುವುದು ಕೇವಲ 10 ಸೆಕೆಂಡ್ ಸಮಯ.  ನಿಮ್ಮಿಂದ ಕಿರೀಟ ಹುಡುಕಲು ಸಾಧ್ಯವೇ ನೋಡಿ. 
ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ ಚಿತ್ರಗಳು ಎಂದರೆ ಕೇವಲ ಚಿತ್ರಗಳಲ್ಲ, ಇದು ನಮ್ಮ ಕಣ್ಣು ಹಾಗೂ ಮೆದುಳಿನ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಒಂದು ವಿಭಿನ್ನ ದೃಶ್ಯಕಾವ್ಯ ಎಂಬುದು ಸುಳ್ಳಲ್ಲ. ಈ ಚಿತ್ರಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ಸಾಧಾರಣ ಬುದ್ಧಿವಂತಿಕೆ ಇದ್ದರೆ ಇದಕ್ಕೆ ಉತ್ತರ ಹೇಳಲು ಸಾಧ್ಯವಾಗುವುದಿಲ್ಲ.

ಕೆಲವೊಂದು ಬ್ರೈನ್ ಟೀಸರ್‌ಗಳು ಮೆದುಳಿನ ಜೊತೆಗೆ ಕಣ್ಣಿಗೂ ಪರೀಕ್ಷೆ ನೀಡುತ್ತವೆ. ಇಲ್ಲೊಂದು ಅಂಥದ್ದೆ ಬ್ರೈನ್ ಟೀಸರ್ ಚಿತ್ರವಿದೆ. ಇದು ಬೆಡ್‌ರೂಮ್ ದೃಶ್ಯ ಇರುವ ಬ್ರೈನ್ ಟೀಸರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಒಂದು ಕಿರೀಟ ಕೂಡ ಇದೆ. ಅದು ಎಲ್ಲಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು.

ಈ ಚಿತ್ರದಲ್ಲಿ ಬೆಡ್‌, ಬೆಡ್‌ಶೀಟ್‌, ಚಪ್ಪಲಿ, ಬೆಡ್‌ಲ್ಯಾಂಪ್‌, ಮಿರರ್‌, ಹೂಕುಂಡ, ಪುಸಕ್ತಗಳು, ಗಡಿಯಾರ ಫೋಟೊ ಫ್ರೇಮ್ ಎಲ್ಲವೂ ಇವೆ. ಈ ಎಲ್ಲದರ ಮಧ್ಯೆ ಕಿರೀಟ ಎಲ್ಲಿದೆ ಎಂಬುದು ಹುಡುಕುವುದು ನಿಮಗೆ ಖಂಡಿತ ಚಾಲೆಂಜ್ ಎನ್ನಿಸಬಹುದು. ಯಾಕೆಂದರೆ ನೀವು ಕೇವಲ 10 ಸೆಕೆಂಡ್‌ ಒಳಗೆ ಈ ಚಿತ್ರದಲ್ಲಿ ಕಿರೀಟ ಎಲ್ಲಿದೆ ಎಂದು ಹುಡುಕಬೇಕು.

ಇಂತಹ ಬ್ರೈನ್ ಟೀಸರ್ ಚಿತ್ರಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುವುದರಿಂದ ನಮ್ಮಲ್ಲಿ ಯೋಚನಾಶಕ್ತಿ ವೃದ್ಧಿಯಾಗುತ್ತದೆ. ಇದಕ್ಕೆ ಉತ್ತರ ಹುಡುಕುವ ಸಲುವಾಗಿ ಮನಸ್ಸು ಸಾಕಷ್ಟು ಯೋಚಿಸುತ್ತದೆ. ಏಕಾಗ್ರತೆ ಬೆಳೆಸಿಕೊಳ್ಳುತ್ತದೆ. ಹಾಗಾದರೆ ಈ ಚಿತ್ರದಲ್ಲಿ ಕಿರೀಟ ಎಲ್ಲಿದೆ ಎಂದು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಯ್ತೇ ನೋಡಿ.

ಈ ಬ್ರೈನ್ ಟೀಸರ್‌ಗಳಿಗೆ ನಿರಂತರವಾಗಿ ಉತ್ತರ ಹುಡುಕುವುದರಿಂದ ಮೆದುಳು ಚುರುಕಾಗುವುದು ಮಾತ್ರವಲ್ಲ ಇದರಿಂದ ಸಮಸ್ಯೆ ಪರಿಹರಿಸುವ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ಇದನ್ನು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೂ ಕಳುಹಿಸಿ ಅವರ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಕೆಲಸವನ್ನೂ ಮಾಡಬಹುದು. ಇದರಿಂದ ಮೋಜಿನ ಜೊತೆ ಗ್ರಹಿಸುವ ಶಕ್ತಿಯು ಹೆಚ್ಚುತ್ತದೆ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ, ಅದು ಯಾವುದು? ನಿಮಗಿರೋದು 5 ಸೆಕೆಂಡ್‌ ಸಮಯ, ಥಟ್ಟಂತ ಹೇಳಿ

ನಿಮ್ಮ ಕಣ್ಣಿನ ದೃಷ್ಟಿಗೆ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಕಂಡುಹಿಡಿಯಲು ನಿಮಗಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್. ಒಂದೇ ರೀತಿ ಇರುವ ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ. ಅದು ಯಾವುದು, 5 ಸೆಕೆಂಡ್‌ನಲ್ಲಿ ನೀವು ಕಂಡುಹಿಡಿಯಬೇಕು. ನಿಮಗಿದು ಚಾಲೆಂಜ್‌.

Brain Teaser: ಯಾವ ಪೈಪ್‌ನ ನೀರು ಬಕೆಟ್ ತುಂಬಿಸುತ್ತಿದೆ, ಬುದ್ಧಿ ಉಪಯೋಗಿಸಿ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನೀವು ಸಖತ್ ಬುದ್ಧಿವಂತರು ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಇರುವ 4 ಪೈಪ್‌ಗಳಲ್ಲಿ ಯಾವ ಪೈಪ್‌ನ ನೀರು ಬಕೆಟ್ ತುಂಬಿಸುತ್ತಿದೆ ಎಂಬುದನ್ನು ನೀವು 15 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗೆ ಕಂಡಿದ್ದೇ ಸತ್ಯವಲ್ಲ, ನೆನಪಿರಲಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ