logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಮೆದುಳಿಗೊಂದು ಸವಾಲು, 10 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಹೇಳಿ?

Brain Teaser: ನಿಮ್ಮ ಮೆದುಳಿಗೊಂದು ಸವಾಲು, 10 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಹೇಳಿ?

Reshma HT Kannada

Jul 19, 2024 11:11 AM IST

google News

ನಿಮ್ಮ ಮೆದುಳಿಗೊಂದು ಸವಾಲು, 10 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಹೇಳಿ?

    • ಮಳೆಗಾಲದ ಬೇಸರ ಕಳೆಯಲು ದಾರಿ ಹುಡುಕುವವರಿಗೆ ಬ್ರೈನ್‌ ಟೀಸರ್‌ಗಿಂತ ಉತ್ತಮ ಇನ್ನೊಂದಿಲ್ಲ. ಇದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಸವಾಲುಗಳನ್ನು ಪರಿಹರಿಸುವ ಗುಣವು ವೃದ್ಧಿಸುತ್ತದೆ. ಈ ಬ್ರೈನ್‌ ಟೀಸರ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಕಂಡುಹಿಡಿಯಿರಿ. ನಿಮಗಿದು ಸವಾಲ್‌.
ನಿಮ್ಮ ಮೆದುಳಿಗೊಂದು ಸವಾಲು, 10 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಹೇಳಿ?
ನಿಮ್ಮ ಮೆದುಳಿಗೊಂದು ಸವಾಲು, 10 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಹೇಳಿ?

ದೈನಂದಿನ ಕೆಲಸಗಳಿಂದ ಮೆದುಳಿಗೆ ಜಡ್ಡು ಹಿಡಿದಂತಾಗಿದ್ಯಾ, ಮೆದುಳನ್ನು ಚುರುಕಾಗಿಸಲು ದಾರಿ ಹುಡುಕ್ತಾ ಇದೀರಾ, ಹಾಗಿದ್ರೆ ಬೈನ್‌ ಟೀಸರ್‌ಗಳಿಗೆ ಉತ್ತರ ಹುಡುಕಲು ಟ್ರೈ ಮಾಡಿ. ಬ್ರೈನ್‌ ಟೀಸರ್‌ಗಳು ಮನಸ್ಸಿಗೆ ಮೋಜು ನೀಡುವುದು ಮಾತ್ರವಲ್ಲ, ಕಣ್ಣು ಮೆದುಳನ್ನು ಶಾರ್ಪ್‌ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂತಹ ಹಲವು ಬ್ರೈನ್‌ ಟೀಸರ್‌ಗಳ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್‌ ಮಾಡುವಾಗ ನಿಮ್ಮ ಕಣ್ಣಿಗೆ ಬೀಳಬಹುದು. ಅಂತಹ ಬ್ರೈನ್‌ ಟೀಸರ್‌ಗಳಲ್ಲಿ ಇಲ್ಲಿರುವ ಚಿತ್ರವೂ ಒಂದು.

ಡೈಸ್‌ ಹೊಂದಿರುವ ಈ ಚಿತ್ರದಲ್ಲಿ ಒಂದಿಷ್ಟು ನಂಬರ್‌ಗಳನ್ನು ಬರೆಯಲಾಗಿದೆ. ಡೈಸ್‌ಗಳ ಕೆಳಗೆ ಕೂಡ ಸಾಲಾಗಿ ಸಂಖ್ಯೆಗಳನ್ನು ಬರೆಯಲಾಗಿದೆ. ಈ ನಂಬರ್‌ಗಳಲ್ಲಿ ಒಂದು ಸಂಖ್ಯೆ ಮಾತ್ರ ಮಿಸ್‌ ಆಗಿದೆ. ಆ ಸಂಖ್ಯೆ ಯಾವುದು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ಕೇವಲ 10 ಸೆಕೆಂಡ್‌ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಚಿತ್ರದಲ್ಲಿ ಮಿಸ್‌ ಆಗಿರುವ ಸಂಖ್ಯೆಯನ್ನು ಕಂಡುಹಿಡಿಯಬೇಕು. ಇದಕ್ಕಾಗಿ ನೀವು ಖಂಡಿತ ಬುದ್ಧಿ ಖರ್ಚು ಮಾಡಬೇಕು. 

ಚಿತ್ರದಲ್ಲಿ 5 ಡೈಸ್‌ಗಳಿದ್ದು, ಅದರಲ್ಲಿ ಬೇರೆ ಬೇರೆ ಸಂಖ್ಯೆಗಳನ್ನು ಬರೆಯಲಾಗಿದೆ. ಅದರ ಕೆಳಗೆ 19, 11, 11 ? 12 ಸಂಖ್ಯೆಗಳಿವೆ.

ಇಂತಹ ಮಿಸ್‌ ಆಗಿರುವ ನಂಬರ್‌ ಅನ್ನು ಕಂಡುಹಿಡಿಯಿರಿ ಎಂದು ಬರೆದುಕೊಂಡಿರುವ ಬ್ರೈನ್‌ ಟೀಸರ್‌ಗಳನ್ನು ನೀವು ಸಾಕಷ್ಟು ಗಮನಿಸಿರಬಹುದು. ಇದು ಸಮಸ್ಯೆಗಳನ್ನು ವಿಶ್ಲೇಷಣಾತ್ಮಕ ಚಿಂತನೆಗಳಿಂದ ಬಗೆಹರಿಸಲು ನಮಗೆ ದಾರಿ ಮಾಡಿಕೊಡುತ್ತದೆ. ಇದರ ಮೂಲಕ ಸಮಸ್ಯೆಯನ್ನು ಹೇಗೆ ಕ್ರಿಯಾಶೀಲವಾಗಿ ಪರಿಹರಿಸಬಹುದು ಎಂದು ಕಂಡುಕೊಳ್ಳಬಹುದು. "ಸಂಖ್ಯೆಯನ್ನು ಹುಡುಕಿ" ಮೆದುಳಿನ ಕಸರತ್ತುಗಳನ್ನು ಪರಿಹರಿಸುವ ಒಬ್ಬರ ಸಾಮರ್ಥ್ಯವನ್ನು ಸುಧಾರಿಸಲು, ವಿವಿಧ ರೀತಿಯ ಅನುಕ್ರಮಗಳು ಮತ್ತು ಮಾದರಿಗಳೊಂದಿಗೆ ನಿಯಮಿತವಾಗಿ ಅಭ್ಯಾಸ ಮಾಡುವುದು ಪ್ರಯೋಜನಕಾರಿಯಾಗಿದೆ.

ಈ ಬ್ರೈನ್‌ ಟೀಸರ್‌ ಅನ್ನೂ ಓದಿ 

Brain Teaser: ನಿಮ್ಮದು ಹದ್ದಿನ ಕಣ್ಣಿನಷ್ಟೇ ಶಾರ್ಪ್‌ ಆದ್ರೆ 10 ಸೆಕೆಂಡ್‌ ಒಳಗೆ Fixed ಪದ ಎಲ್ಲಿದೆ ಕಂಡುಹಿಡಿಯಿರಿ, ನಿಮಗಿದು ಚಾಲೆಂಜ್‌

ರೆಡ್ಡಿಟ್‌ನಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ಕಣ್ಣಿಗೆ ಸವಾಲು ಹಾಕೋದು ಖಂಡಿತ. ಇದೊಂದು ಇಂಗ್ಲಿಷ್‌ ಅಕ್ಷರಗಳ ಪಜಲ್‌ ಆಗಿದ್ದು, ಚಿತ್ರದಲ್ಲಿ fixed ಪದ ಎಲ್ಲಿದೆ ಎಂಬುದನ್ನು ನೀವು 10 ಸೆಕೆಂಡ್‌ ಒಳಗೆ ಕಂಡುಹಿಡಿಯಬೇಕು. ಇದು ನಿಮ್ಮ ಇಂಗ್ಲಿಷ್‌ ಜ್ಞಾನವನ್ನು ಪರೀಕ್ಷೆ ಮಾಡೋದು ಖಂಡಿತ.

Brain Teaser: 51, 14, 65 ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ನೀವು ಜಾಣರಾದ್ರೆ 10 ಸೆಕೆಂಡ್‌ ಒಳಗೆ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಇದರಲ್ಲಿ ವೃತ್ತವೊಂದಿದ್ದು, ಒಂದು ಸಂಖ್ಯೆ ಮಿಸ್‌ ಆಗಿದೆ. ಇದಕ್ಕೆ ಮೂರು ಆಯ್ಕೆ ನೀಡಲಾಗಿದ್ದು ಆ 3 ಸಂಖ್ಯೆಗಳಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಎಂದು ನೀವು ಕಂಡುಹಿಡಿಯಬೇಕು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ