Brain Teaser: ಯಾವ ಪೈಪ್‌ನ ನೀರು ಬಕೆಟ್ ತುಂಬಿಸುತ್ತಿದೆ, ಬುದ್ಧಿ ಉಪಯೋಗಿಸಿ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ
Sep 30, 2024 03:42 PM IST
ಬ್ರೈನ್ ಟೀಸರ್
- ನೀವು ಸಖತ್ ಬುದ್ಧಿವಂತರು ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಇರುವ 4 ಪೈಪ್‌ಗಳಲ್ಲಿ ಯಾವ ಪೈಪ್‌ನ ನೀರು ಬಕೆಟ್ ತುಂಬಿಸುತ್ತಿದೆ ಎಂಬುದನ್ನು ನೀವು 15 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗೆ ಕಂಡಿದ್ದೇ ಸತ್ಯವಲ್ಲ, ನೆನಪಿರಲಿ.
ಬ್ರೈನ್ ಟೀಸರ್‌ಗಳು ಒಂಥರಾ ಹುಚ್ಚು ಹಿಡಿಸುವಂತಿರುವುದು ಸುಳ್ಳಲ್ಲ. ಇದಕ್ಕೆ ಉತ್ತರ ಹುಡುಕಬೇಕು ಎಂದು ಹೊರಟರೆ ಉತ್ತರ ಸಿಗುವವರೆಗೂ ಸುಮ್ಮನೆ ಇರಲು ಸಾಧ್ಯವಾಗುವುದಿಲ್ಲ, ಅಷ್ಟರ ಮಟ್ಟಿಗೆ ಇದು ನಮ್ಮನ್ನು ಸೆಳೆಯುತ್ತದೆ. ಇದಕ್ಕಾಗಿ ನಾವು ಸಾಕಷ್ಟು ಯೋಚಿಸಬೇಕಾಗುತ್ತದೆ. ಇದರಿಂದ ನಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ.
ಇಂತಹ ಬ್ರೈನ್ ಟೀಸರ್ ನಮ್ಮನ್ನ ಕ್ರಿಯಾತ್ಮಕವಾಗಿ ಯೋಚಿಸುವಂತೆ ಮಾಡುತ್ತವೆ. ಇದರಿಂದ ಸಮಸ್ಯೆ ಪರಿಹರಿಸುವ ಗುಣ ವೃದ್ಧಿಯಾಗುತ್ತದೆ. ಇದು ಮೋಜು ನೀಡುವ ಚಟುವಟಿಕೆಯೂ ಹೌದು. ಇದು ನಮ್ಮ ಮೆದುಳನ್ನು ಚುರುಕಾಗುವಂತೆ ಮಾಡುತ್ತದೆ. ಒಟ್ಟಾರೆ ಬ್ರೈನ್ ಟೀಸರ್‌ಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುವುದು ಸುಳ್ಳಲ್ಲ.
ಇಂದಿನ ಬ್ರೈನ್ ಟೀಸರ್‌ನಲ್ಲಿ 4 ನಳ್ಳಿಗಳಿಗೆ ಪೈಪ್ ಜೋಡಿಸಿ ಕೆಳಗಡೆ ಬಿಡಲಾಗಿದೆ. ಅಲ್ಲೊಂದು ಬಕೆಟ್ ಅನ್ನು ಕೂಡ ಇರಿಸಲಾಗಿದೆ. ಆ ಬಕೆಟ್‌ಗೆ ಯಾವ ಪೈಪ್‌ನಿಂದ ನೀರು ತುಂಬುತ್ತಿದೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ಈ ಬ್ರೈನ್ ಟೀಸರ್‌ಗೆ ನೀವು ಕೇವಲ 15 ಸೆಕೆಂಡ್ ಒಳಗೆ ಉತ್ತರ ಹೇಳಬೇಕು.
ನೀವು ನಿಜಕ್ಕೂ ಬುದ್ಧಿವಂತರಾಗಿದ್ರೆ ಬುದ್ಧಿ ಜೊತೆಗೆ ಕಣ್ಣನ್ನು ಬಳಸಿ ಸರಿಯಾಗಿ ಗಮನಿಸಿ. ಇಲ್ಲಿಂದ ನೀರು ಬರುತ್ತಿದೆ ಎಂಬುದನ್ನು ಕಂಡುಹಿಡಿಯಿರಿ. ನಿಮ್ಮಿಂದ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾದರೇ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಹೇಳಿ, ಅವರ ಜಾಣತನವನ್ನೂ ಪರೀಕ್ಷೆ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಕಾರು ಅಪಘಾತದ ದೃಶ್ಯವಿರುವ ಈ ಬ್ರೈನ್ ಟೀಸರ್‌ನಲ್ಲಿ 3 ವ್ಯತ್ಯಾಸಗಳಿವೆ; ಅವು ಯಾವುವು, 33 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ
ವಾರಾಂತ್ಯವನ್ನು ಎಂಜಾಯ್ ಮಾಡಿದ ನಿಮಗೆ ಸೋಮವಾರದ ಬೇಸರ ಕಾಡ್ತಾ ಇದ್ಯಾ? ಹಾಗಾದ್ರೆ ಇಲ್ಲಿದೆ ಒಂದು ಮೆದುಳಿಗೆ ಕೆಲಸ ಕೊಡುವ ಬ್ರೈನ್ ಟೀಸರ್. ಕಾರು ಅಪಘಾತದ ದೃಶ್ಯ ಇರುವ ಈ ಚಿತ್ರದಲ್ಲಿ 3 ವ್ಯತ್ಯಾಸಗಳಿವೆ. ಅದೇನು ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು, ಟ್ರೈ ಮಾಡಿ.
Brain Teaser: ಗಣಿತದಲ್ಲಿ ನೀವು ಪಂಟರಾಗಿದ್ರೆ ನಿಮಗಿದೆ ಇಲ್ಲೊಂದು ಚಾಲೆಂಜ್, ಈ ಬ್ರೈನ್ ಟೀಸರ್‌ಗೆ ಉತ್ತರವೇನು, 10 ಸೆಕೆಂಡ್‌ನಲ್ಲಿ ಹೇಳಿ
ಶಾಲಾ ದಿನಗಳನ್ನ ನೆನಪಿಸುವ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ. ಇದರಲ್ಲಿ ಒಂದಿಷ್ಟು ಆಕೃತಿಗಳಿದ್ದು ಅದಕ್ಕೆ ಇಂತಿಷ್ಟು ಮೊತ್ತ ಎಂದು ನಿಗದಿ ಮಾಡಲಾಗಿದೆ. ಈ ಎಲ್ಲಾ ಆಕೃತಿಗಳ ಒಟ್ಟು ಮೊತ್ತ ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು. ಅದು ನಿಮಗಿರುವ ಚಾಲೆಂಜ್.