logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಕಣ್ಣಿಗೊಂದು ಪರೀಕ್ಷೆ, ಈ ಚಿತ್ರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ; ನಿಮ್ಮ ಸಮಯ ಈಗ ಶುರು...

Brain Teaser: ನಿಮ್ಮ ಕಣ್ಣಿಗೊಂದು ಪರೀಕ್ಷೆ, ಈ ಚಿತ್ರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ; ನಿಮ್ಮ ಸಮಯ ಈಗ ಶುರು...

Reshma HT Kannada

Jul 25, 2024 10:51 AM IST

google News

ನಿಮ್ಮ ಕಣ್ಣಿಗೊಂದು ಪರೀಕ್ಷೆ, ಈ ಚಿತ್ರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ; ನಿಮ್ಮ ಸಮಯ ಈಗ ಶುರು...

    • ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌, ಮೆದುಳು ಕೂಡ ಯಾವುದನ್ನಾದರೂ ಬೇಗ ಗ್ರಹಿಸುತ್ತೆ ಅನ್ನೋ ಫೀಲ್‌ ನಿಮಗಿದ್ರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಲು ಪ್ರಯತ್ನಿಸಿ. ಇಲ್ಲಿರುವ ಮುಖದ ಆಕಾರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ, ನಿಮ್ಮ ಸಮಯ ಈಗ ಶುರು.
ನಿಮ್ಮ ಕಣ್ಣಿಗೊಂದು ಪರೀಕ್ಷೆ, ಈ ಚಿತ್ರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ; ನಿಮ್ಮ ಸಮಯ ಈಗ ಶುರು...
ನಿಮ್ಮ ಕಣ್ಣಿಗೊಂದು ಪರೀಕ್ಷೆ, ಈ ಚಿತ್ರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ; ನಿಮ್ಮ ಸಮಯ ಈಗ ಶುರು...

ಮಳೆಗಾಲದಲ್ಲಿ ನಾವು ಎಷ್ಟೇ ಚುರುಕಾಗಿರಬೇಕು ಅಂದುಕೊಂಡ್ರು ಮೆದುಳು ಕೆಲಸ ಮಾಡೋಲ್ಲ, ಬೇಸರ ಕಾಡುತ್ತೆ. ದೇಹ ಜಡ್ಡು ಹಿಂಡಿದಂತಾಗುತ್ತೆ. ಇಂಥ ಸಮಯದಲ್ಲಿ ನಿಮ್ಮ ಮೆದುಳು ಚುರುಕಾಗಬೇಕು ಅಂದ್ರೆ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕುವ ಪ್ರಯತ್ನ ಮಾಡಬೇಕು. ಇದರಿಂದ ನಿಮ್ಮ ಬೇಸರ ಕಳೆಯುವ ಜೊತೆಗೆ ಸಮಸ್ಯೆ ಪರಿಹರಿಸುವ ಗುಣವೂ ವೃದ್ಧಿಯಾಗುತ್ತೆ. ಬ್ರೈನ್‌ ಟೀಸರ್‌ಗಳು ಸಾಕಷ್ಟು ಗೊಂದಲ ಹುಟ್ಟಿಸುವಂತಿದ್ದು ಇವು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುತ್ತವೆ.

ಇಲ್ಲೊಂದು ಮುಖದ ಆಕಾರದ ಬ್ರೈನ್‌ ಟೀಸರ್‌ ಇದೆ. ಇದರಲ್ಲಿ ಒಂದಿಷ್ಟು ಸಂಖ್ಯೆಗಳನ್ನು ಬರೆಯಲಾಗಿದೆ. ಈ ಚಿತ್ರದಲ್ಲಿ ಎಷ್ಟು ಸಂಖ್ಯೆಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಇದರಿಂದ ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಎಂಬುದನ್ನು ಗುರುತಿಸಬಹುದು.

@brainteaser_hub ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ವಿಶಿಷ್ಟ ಶೈಲಿಯಲ್ಲಿ ಜೋಡಿಸಲಾದ ಈ ಬ್ರೈನ್‌ ಟೀಸರ್‌ನಲ್ಲಿರುವ ಸಂಖ್ಯೆಗಳನ್ನು ಜೋಡಿಸುವುದು ನಿಮಗಿರುವ ಸವಾಲು. ಇದನ್ನು ನೀವು ಎಷ್ಟು ಬೇಗ ಪರಿಹರಿಸುತ್ತೀರಿ ನೋಡೋಣ, ನಿಮ್ಮ ಸಮಯ ಈಗ ಶುರು.

ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ ಪೋಸ್ಟ್‌ ಅನ್ನು ಸಾಕಷ್ಟು ಮಂದಿ ವೀಕ್ಷಿಸಿದ್ದಾರೆ. ಹಲವರು ಲೈಕ್‌ ಮಾಡಿದ್ದಾರೆ. ಇನ್ನೂ ಕೆಲವರು ಉತ್ತರ ಕಂಡುಕೊಳ್ಳುವ ಪ್ರುಯತ್ನ ಮಾಡಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

'14 ಎಂದು ನಾನು ಯೋಚಿಸುತ್ತಿದ್ದೇನೆ. ಒಂದೆರಡು ಸೊನ್ನೆಗಳು ಮತ್ತು ಕಾಂಬೊ ಸಂಖ್ಯೆಗಳು 96, 55, ಇತ್ಯಾದಿ ಇರಬಹುದು. ಗೊತ್ತಿಲ್ಲʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

'14, ಸೊನ್ನೆ ಸೇರಿ 15' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಉತ್ತರ 11ʼ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ಹಲವರು ಈ ಬ್ರೈನ್‌ ಟೀಸರ್‌ಗೆ ಉತ್ತರ 11 ಎಂದು ಕಾಮೆಂಟ್‌ ಮಾಡಿದ್ದರೆ ಇನ್ನೂ ಕೆಲವರು 12 ಎಂದು ಕಾಮೆಂಟ್‌ ಮಾಡಿದ್ದಾರೆ. ಕೆಲವರು 13 ಎಂದು ಕೂಡ ಹೇಳಿದ್ದಾರೆ. ಹಾಗಾದರೆ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು, ನಿಮ್ಮ ಕಣ್ಣಿಗೆ ಚಿತ್ರದಲ್ಲಿ ಎಷ್ಟು ನಂಬರ್‌ಗಳು ಕಾಣಿಸುತ್ತಿವೆ ಹೇಳಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ

ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಇಲ್ಲೊಂದು ಮೆದುಳಿಗೆ ಹುಳ ಬಿಡುವ ಬ್ರೈನ್‌ ಟೀಸರ್‌ ಇದೆ. ಇದಕ್ಕೆ ಉತ್ತರ ಹುಡುಕಲು ನೀವು ಖಂಡಿತ ಬುದ್ಧಿ ಉಪಯೋಗಿಸಬೇಕು. ನಿಮ್ಮ ಬುದ್ಧಿಮತ್ತೆ, ಕೌಶಲಕ್ಕೆ ಈ ಬ್ರೈನ್‌ ಟೀಸರ್‌ ಸವಾಲು ಹಾಕುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಉತ್ತರ ಹುಡುಕಲು ಟ್ರೈ ಮಾಡಿ.

Brain Teaser: ನಿಮ್ಮ ಮೆದುಳಿಗೊಂದು ಸವಾಲು, 10 ಸೆಕೆಂಡ್‌ ಒಳಗೆ ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಹೇಳಿ?

ಮಳೆಗಾಲದ ಬೇಸರ ಕಳೆಯಲು ದಾರಿ ಹುಡುಕುವವರಿಗೆ ಬ್ರೈನ್‌ ಟೀಸರ್‌ಗಿಂತ ಉತ್ತಮ ಇನ್ನೊಂದಿಲ್ಲ. ಇದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಸವಾಲುಗಳನ್ನು ಪರಿಹರಿಸುವ ಗುಣವು ವೃದ್ಧಿಸುತ್ತದೆ. ಈ ಬ್ರೈನ್‌ ಟೀಸರ್‌ನಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಕಂಡುಹಿಡಿಯಿರಿ. ನಿಮಗಿದು ಸವಾಲ್‌.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ