logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 4 ಚೌಕ ಕೂಡಿಸಿದ್ರೆ 5 ಆದ್ರೆ, 9 ಚೌಕ ಸೇರಿ ಎಷ್ಟಾಗುತ್ತೆ? ನಿಮ್ಮ ಮೆದುಳು ಚುರುಕಿದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: 4 ಚೌಕ ಕೂಡಿಸಿದ್ರೆ 5 ಆದ್ರೆ, 9 ಚೌಕ ಸೇರಿ ಎಷ್ಟಾಗುತ್ತೆ? ನಿಮ್ಮ ಮೆದುಳು ಚುರುಕಿದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Reshma HT Kannada

Jul 01, 2024 11:53 AM IST

google News

4 ಚೌಕ ಕೂಡಿಸಿದ್ರೆ 5 ಆದ್ರೆ 9 ಚೌಕ ಸೇರಿ ಎಷ್ಟಾಗುತ್ತೆ, ಥಟ್ಟಂತ ಉತ್ತರ ಹೇಳಿ

    • ಟ್ವಿಟರ್‌ನಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಲಾಜಿಕಲ್‌ ಗಣಿತ ಬಲ್ಲವರಷ್ಟೇ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಲು ಸಾಧ್ಯ. ನಿಮ್ಮ ಮೆದುಳು ಸಖತ್‌ ಶಾರ್ಪ ಅನ್ನಿಸಿದ್ರೆ ಈ ಬ್ರೈನ್‌ ಟೀಸರ್‌ಗೆ ತಟ್ಟಂತ ಉತ್ತರ ಹೇಳಿ. ನಿಮ್ಮ ಸಮಯ ಈಗ ಶುರು.
4 ಚೌಕ ಕೂಡಿಸಿದ್ರೆ 5 ಆದ್ರೆ 9 ಚೌಕ ಸೇರಿ ಎಷ್ಟಾಗುತ್ತೆ, ಥಟ್ಟಂತ ಉತ್ತರ ಹೇಳಿ
4 ಚೌಕ ಕೂಡಿಸಿದ್ರೆ 5 ಆದ್ರೆ 9 ಚೌಕ ಸೇರಿ ಎಷ್ಟಾಗುತ್ತೆ, ಥಟ್ಟಂತ ಉತ್ತರ ಹೇಳಿ (@Brainy_Bits_Hub)

ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್‌ ಮಾಡುವಾಗ ಕಣ್ಣಿಗೆ ಬೀಳುವ ಬ್ರೈನ್‌ ಟೀಸರ್‌ಗಳು ನಿಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವುದು ಸುಳ್ಳಲ್ಲ. ಹಾಗಂತ ಇದರಿಂದ ಎಸ್ಕೇಪ್‌ ಆಗಿ ಮುಂದೆ ಸಾಗುವುದಕ್ಕೂ ಮನಸ್ಸು ಒಪ್ಪುವುದಿಲ್ಲ. ಇದಕ್ಕೆ ಉತ್ತರ ಕಂಡುಹಿಡಿಯದೇ ಇರಲು ಸಾಧ್ಯವಿಲ್ಲ ಎಂಬಂತೆ ಮನಸ್ಸು ಅದಕ್ಕೆ ಉತ್ತರ ಹುಡುಕಲು ತವಕಿಸುತ್ತದೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬ್ರೈನ್‌ ಟೀಸರ್‌ಗಳು ವೈರಲ್‌ ಆಗುತ್ತವೆ. ಇಲ್ಲೊಂದು ಅಂಥದ್ದೇ ಬ್ರೈನ್‌ ಟೀಸರ್‌ ಚಿತ್ರವಿದೆ.

ಈ ಬ್ರೈನ್‌ ಟೀಸರ್‌ನಲ್ಲಿ ಚೌಕಾಕಾರದ 2 ಬಾಕ್ಸ್‌ ಇದೆ. ಬಾಕ್ಸ್‌ನಲ್ಲಿ ಭಿನ್ನವಾದ ಕುಳಿಗಳಿವೆ. ಈ ಕುಳಿಗಳನ್ನು ಸೇರಿಸಿ ಒಂದು ಮೊತ್ತವನ್ನು ನಿಗದಿ ಪಡಿಸಲಾಗಿದೆ. ನಾಲ್ಕು ಕುಳಿಗಳು ಅಥವಾ ಚೌಕಗಳು ಸೇರಿದ್ರೆ 5 ಆಗುತ್ತೆ, ಹಾಗಾದ್ರೆ 9 ಚೌಕಗಳು ಸೇರಿ ಎಷ್ಟಾಗುತ್ತೆ ಅನ್ನೋದನ್ನು ಕಂಡುಹಿಡಿಯುವುದು ಇಂದು ನಿಮಗಿರುವ ಸವಾಲು.

@Brainy_Bits_Hub ಎಂಬ ಎಕ್ಸ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಜೂನ್‌ 10 ರಂದು ಪೋಸ್ಟ್‌ ಮಾಡಲಾದ ಈ ಬ್ರೈನ್‌ ಟೀಸರ್‌ ಅನ್ನು ಈಗಾಗಲೇ 16 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 475ಕ್ಕೂ ಹೆಚ್ಚು ಮಂದಿ ಕಾಮೆಂಟ್‌ ಮಾಡಿದ್ದಾರೆ.

14,13,12,11.5, ಹೀಗೆ ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದ್ದರೂ ಕೂಡ ಹಲವರು ಈ ಬ್ರೈನ್‌ ಟೀಸರ್‌ಗೆ 14 ಉತ್ತರ ಎಂದೇ ಕಾಮೆಂಟ್‌ ಮಾಡಿದ್ದಾರೆ. ನೀವು ಲಾಜಿಕಲ್‌ ಗಣಿತ ಎಕ್ಸ್‌ಪರ್ಟ್‌ ಆದ್ರೆ ಇಲ್ಲಿರುವ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು ತಿಳಿಸಿ.

ಇಂತಹ ಬ್ರೈನ್‌ ಟೀಸರ್‌ಗಳಿಗೆ ನಿರಂತರವಾಗಿ ಉತ್ತರ ಹುಡುಕುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಮಾತ್ರವಲ್ಲ ಇದರಿಂದ ಯೋಚನಾಶಕ್ತಿಯು ವೃದ್ಧಿಯಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಇಂತಹ ಮೆದುಳಿಗೆ ಹುಳ ಬಿಡುವ ಬ್ರೈನ್‌ ಟೀಸರ್‌ ಮಾದರಿಯ ಪ್ರಶ್ನೆಗಳನ್ನು ಕೇಳುವುದು ಸುಳ್ಳಲ್ಲ. ಇವುಗಳನ್ನು ಬಿಡಿಸುವ ಕೌಶಲವು ಮನರಂಜನೆಯನ್ನೂ ನೀಡುತ್ತವೆ. ಇದನ್ನು ನೀವಷ್ಟೇ ಓದಿ ಸುಮ್ಮನಾಗಬೇಡಿ. ನಿಮ್ಮವರೊಂದಿಗೂ ಹಂಚಿಕೊಳ್ಳಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: A+A+A=39 ಆದ್ರೆ, A+B+C= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದ ಪಜಲ್‌ ಬಿಡಿಸೋದು ನೋಡಿದಷ್ಟು ಸುಲಭವಲ್ಲ. ಅದಕ್ಕೆ ಮೆದುಳು ಚುರುಕಾಗಿ ಕೆಲಸ ಮಾಡಬೇಕು. ಬುದ್ಧಿ ಥಟ್ಟಂತ ಗ್ರಹಿಸಬೇಕು. ನಿಮ್ಮ ಮೆದುಳು ಗಣಿತದ ಪಜಲ್‌ ಬಿಡಿಸುವುದರಲ್ಲಿ ಶಾರ್ಪ್‌ ಅಂತ ನಿಮಗೆ ಅನ್ನಿಸಿದ್ರೆ ಈ ಬ್ರೈನ್‌ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.

Brain Teaser: ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಅನ್ನಿಸಿದ್ರೆ 5 ಸೆಕೆಂಡ್‌ನೊಳಗೆ ಚಿತ್ರದಲ್ಲಿ C ಅಕ್ಷರ ಎಲ್ಲಿದೆ ಕಂಡು ಹಿಡಿಯಿರಿ

ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾದ ಬ್ರೈನ್‌ ಟೀಸರ್‌ ಚಿತ್ರವೊಂದು ನಿಮ್ಮ ಕಣ್ಣಿನ ಸೂಕ್ಷ್ಮತೆಯನ್ನು ಪರೀಕ್ಷಿಸುತ್ತದೆ. ಚಿತ್ರದಲ್ಲಿ ಇಂಗ್ಲಿಷ್‌ನ C ಅಕ್ಷರ ಎಲ್ಲಿದೆ ಎಂಬುದನ್ನು 5 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಇದು ನಿಮ್ಮ ಗಮನಶಕ್ತಿ ಹಾಗೂ ಕಣ್ಣನ್ನು ಪರೀಕ್ಷೆ ಮಾಡುವ ಚಿತ್ರವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ