Brain Teaser: 1+4=5, 2+5=12 ಆದ್ರೆ 8+11 = ಎಷ್ಟು? ಗಣಿತದಲ್ಲಿ ನೀವು ನಿಜಕ್ಕೂ ಪಂಟರಾದ್ರೆ 5 ಸೆಕೆಂಡ್ ಒಳಗೆ ಉತ್ತರ ಹೇಳಿ
Jul 02, 2024 12:19 PM IST
1+4=5, 2+5=12 ಆದ್ರೆ 8+11 = ಎಷ್ಟು? ಗಣಿತದಲ್ಲಿ ನೀವು ನಿಜಕ್ಕೂ ಪಂಟರಾದ್ರೆ 5 ಸೆಕೆಂಡ್ ಒಳಗೆ ಉತ್ತರ ಹೇಳಿ
- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀಡುವ ಲಾಜಿಕಲ್ ಗಣಿತ ನಮ್ಮ ತಲೆಗೆ ಹುಳ ಬಿಟ್ಟ ಫೀಲಿಂಗ್ ನೀಡುವುದು ಸುಳ್ಳಲ್ಲ. ಅಂತಹ ಲಾಜಿಕಲ್ ಗಣಿತಗಳನ್ನೇ ಬ್ರೈನ್ ಟೀಸರ್‌ಗಳಲ್ಲೂ ಬಳಸಲಾಗುತ್ತದೆ. ಇಲ್ಲಿರುವ ಇಂದಿನ ಬ್ರೈನ್ ಟೀಸರ್ ಕೂಡ ಗಣಿತದ ಪಜಲ್ ಹೊಂದಿದೆ. ಇದಕ್ಕೆ 5 ಸೆಕೆಂಡ್ ಒಳಗೆ ಉತ್ತರ ಹೇಳಬೇಕು.
ಸಾಮಾಜಿಕ ಜಾಲತಾಣದಲ್ಲಿ ಬ್ರೈನ್ ಟೀಸರ್‌ವೊಂದು ವೈರಲ್ ಆಗುತ್ತಿದೆ. ಈ ಬ್ರೈನ್ ಟೀಸರ್‌ನಲ್ಲಿ ಗಣಿತ ಪಜಲ್‌ವೊಂದಿದೆ. ಈ ಪಜಲ್ ನೋಡೋಕೆ ಸುಲಭ ಎನ್ನಿಸಿದ್ರೂ ಇದಕ್ಕೆ ಉತ್ತರ ಕಂಡುಹಿಡಿಯುವುದು ಸುಲಭದ ಮಾತಲ್ಲ. ಈ ಲಾಜಿಕಲ್ ಗಣಿತ ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಗಣಿತದಲ್ಲಿ ನೀವು ಪಂಟರು ಅಂತಾದ್ರೆ 5 ಸೆಕೆಂಡ್ ಒಳಗೆ ಈ ಗಣಿತದ ಪಜಲ್‌ಗೆ ಉತ್ತರವೇನು ಎಂದು ಹೇಳಬೇಕು.
@Rainmaker1973 ಎಂಬ ಟ್ವಿಟರ್ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಈ ಕ್ಲಾಸಿಕಲ್ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ? ಎಂದು ಇದರಲ್ಲಿ ಪ್ರಶ್ನೆ ಕೇಳಲಾಗಿದೆ. 1+4=5, 2+5= 12, 3+6=21 ಆದ್ರೆ, 8+11= ಎಷ್ಟು? ಎಂದು ಈ ಗಣಿತದ ಪಜಲ್‌ನಲ್ಲಿ ಪ್ರಶ್ನೆ ಕೇಳಲಾಗಿದೆ.
ಜೂನ್ 23 ರಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ಬ್ರೈನ್ ಟೀಸರ್ ಇದಾಗಿದೆ. ಈಗಾಗಲೇ 4 ಸಾವಿರಕ್ಕೂ ಅಧಿಕ ಮಂದಿ ಈ ಬ್ರೈನ್ ಟೀಸರ್ ಅನ್ನು ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ಉತ್ತರ ಕಂಡುಕೊಂಡಿದ್ದಾರೆ.
ʼನನ್ನ ಉತ್ತರ 96, ಚಾಪ್‌ಜಿಪಿಟಿಯಲ್ಲಿ ಉತ್ತರ 40 ಎಂದು ತೋರಿಸಿತು. ಎರಡೂ ಉತ್ತರ ಸರಿʼ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
1 + 4(1) = 5, 2 + 5(2) = 12, 3 + 6(3) = 21, 8 + 11(4) = 52 ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 92 ಅಥವಾ 96 ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. 8*11=88 ಎಂದು ನಾಲ್ಕನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. 40,96,88,129,888 ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 4 ಚೌಕ ಕೂಡಿಸಿದ್ರೆ 5 ಆದ್ರೆ, 9 ಚೌಕ ಸೇರಿ ಎಷ್ಟಾಗುತ್ತೆ? ನಿಮ್ಮ ಮೆದುಳು ಚುರುಕಿದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಟ್ವಿಟರ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಲಾಜಿಕಲ್ ಗಣಿತ ಬಲ್ಲವರಷ್ಟೇ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಧ್ಯ. ನಿಮ್ಮ ಮೆದುಳು ಸಖತ್ ಶಾರ್ಪ ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ ತಟ್ಟಂತ ಉತ್ತರ ಹೇಳಿ. ನಿಮ್ಮ ಸಮಯ ಈಗ ಶುರು.
Brain Teaser: A+A+A=39 ಆದ್ರೆ, A+B+C= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತದ ಪಜಲ್ ಬಿಡಿಸೋದು ನೋಡಿದಷ್ಟು ಸುಲಭವಲ್ಲ. ಅದಕ್ಕೆ ಮೆದುಳು ಚುರುಕಾಗಿ ಕೆಲಸ ಮಾಡಬೇಕು. ಬುದ್ಧಿ ಥಟ್ಟಂತ ಗ್ರಹಿಸಬೇಕು. ನಿಮ್ಮ ಮೆದುಳು ಗಣಿತದ ಪಜಲ್ ಬಿಡಿಸುವುದರಲ್ಲಿ ಶಾರ್ಪ್ ಅಂತ ನಿಮಗೆ ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.