logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗಣಿತದಲ್ಲಿ ನೀವು ಶಾರ್ಪ್‌ ಅಂತಾದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಪಜಲ್‌ಗೆ ಉತ್ತರ ಹೇಳಿ, ನಿಮ್ಮ ಸಮಯ ಈಗ ಶುರು

Brain Teaser: ಗಣಿತದಲ್ಲಿ ನೀವು ಶಾರ್ಪ್‌ ಅಂತಾದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಪಜಲ್‌ಗೆ ಉತ್ತರ ಹೇಳಿ, ನಿಮ್ಮ ಸಮಯ ಈಗ ಶುರು

Reshma HT Kannada

Jul 31, 2024 12:11 PM IST

google News

ಗಣಿತದಲ್ಲಿ ನೀವು ಶಾರ್ಪ್‌ ಅಂತಾದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಿ, ನಿಮ್ಮ ಸಮಯ ಈಗ ಶುರು

    • ಗಣಿತದ ಸೂತ್ರಗಳನ್ನು ಎಲ್ಲರಿಂದಲೂ ಸುಲಭವಾಗಿ ಬಿಡಿಸಲು ಸಾಧ್ಯವಿಲ್ಲ. ಕೆಲವರಿಗೆ ಗಣಿತದ ಸೂತ್ರಗಳು ಸುಲಭವಾದ್ರೆ ಇನ್ನೂ ಕೆಲವರಿಗೆ ಕಬ್ಬಿಣದ ಕಡಲೆಯಂತಿರುತ್ತದೆ. ಇಲ್ಲಿರುವ ಗಣಿತದ ಸೂತ್ರಕ್ಕೆ ನೀವು ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು ಟ್ರೈ ಮಾಡಿ.
ಗಣಿತದಲ್ಲಿ ನೀವು ಶಾರ್ಪ್‌ ಅಂತಾದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಿ, ನಿಮ್ಮ ಸಮಯ ಈಗ ಶುರು
ಗಣಿತದಲ್ಲಿ ನೀವು ಶಾರ್ಪ್‌ ಅಂತಾದ್ರೆ ಕ್ಯಾಲ್ಕುಲೆಟರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಿ, ನಿಮ್ಮ ಸಮಯ ಈಗ ಶುರು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಗಣಿತದ ಪಜಲ್‌ಗಳು ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಈ ಪಜಲ್‌ಗಳಿಗೆ ಉತ್ತರ ಹುಡುಕುವುದು ಸುಲಭದ ಮಾತಲ್ಲ. ಗಣಿತದಲ್ಲಿ ಸಖತ್‌ ಎಕ್ಸ್‌ಪರ್ಟ್‌ ಅಂತಾದ್ರೆ ಮಾತ್ರ ಇದಕ್ಕೆ ಕ್ಯಾಲ್ಕುಲೆಟರ್‌ ಇಲ್ಲದೇ ಉತ್ತರ ಕಂಡುಕೊಳ್ಳಬಹುದು. ನೀವು ಗಣಿತಪ್ರೇಮಿ ಆಗಿದ್ದರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕಲು ಟ್ರೈ ಮಾಡಿ.

ಟ್ವಿಟರ್‌ನಲ್ಲಿ ವೈರಲ್‌ ಆಗಿರುವ ಈ ಬ್ರೈನ್‌ ಟೀಸರ್‌ ಹಲವು ಟ್ವಿಟರ್‌ ಬಳಕೆದಾರರ ಮನದಲ್ಲಿ ಗೊಂದಲ ಹುಟ್ಟಿಸಿದೆ. ಇದರಲ್ಲಿ ಒಂದು ಬಾಕ್ಸ್‌ ಇದ್ದು, ಒಂದಿಷ್ಟು ಸಂಖ್ಯೆಗಳನ್ನು ಬರೆಯಲಾಗಿದೆ. ಒಂದು ಸಂಖ್ಯೆ ಮಾತ್ರ ಮಿಸ್‌ ಆಗಿದೆ. ಇಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. @Phenom962 ಎಂಬ ಟ್ವಿಟರ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. 83, 11, 2, 79, 7, 68, 14, 5 ಸಂಖ್ಯೆಗಳಿವೆ. ಇದರಲ್ಲಿ ಒಂದು ನಂಬರ್‌ ಮಾತ್ರ ಮಿಸ್‌ ಆಗಿದೆ. ಮಿಸ್‌ ಆಗಿರುವ ನಂಬರ್‌ ಯಾವುದು ಎಂದು ಕಂಡುಹಿಡಿಯಬೇಕು.

ಜುಲೈ 30ರಂದು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಈಗಾಗಲೇ 500ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಬ್ರೈನ್‌ ಟೀಸರ್‌ಗೆ ಕೆಲವರು 16 ಎಂದು ಉತ್ತರ ಕೊಟ್ಟಿದ್ದರೆ, ಕೆಲವರು 17 ಎಂದು ಉತ್ತರ ಕೊಟ್ಟಿದ್ದಾರೆ.

ಇಂತಹ ಪಜಲ್‌ಗಳಿಗೆ ಉತ್ತರ ಕಂಡುಕೊಳ್ಳುವುದರಿಂದ ಮೆದುಳು ಸಖತ್‌ ಶಾರ್ಪ್‌ ಆಗುತ್ತದೆ, ಯೋಚನಾಶಕ್ತಿಯು ವೃದ್ಧಿಸುತ್ತದೆ. ಇದರಿಂದ ಸಮಸ್ಯೆ ಪರಿಹರಿಸುವ ಗುಣವೂ ಬೆಳೆಯುತ್ತದೆ. ಈ ಬ್ರೈನ್‌ ಟೀಸರ್‌ಗೆ ನೀವು ಸರಿಯಾದ ಉತ್ತರ ಕಂಡುಹಿಡಿದರೆ ಇನ್ನದು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕಳುಹಿಸಿ. ಅವರಲ್ಲಿ ಎಷ್ಟು ಜಾಣ್ಮೆ ಇದೆ ಪರೀಕ್ಷಿಸಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

ಚಿತ್ರದಲ್ಲಿರುವ ಸಂಖ್ಯೆಗಳ ನಡುವೆ ಒಂದು ರಹಸ್ಯ ಅಡಗಿದೆ. ನಿಮ್ಮ ಮೆದುಳು ಶಾರ್ಪ್‌ ಆಗಿದ್ದು ಕಣ್ಣು ಚುರುಕಾಗಿದ್ರೆ ಈ ರಹಸ್ಯವನ್ನು ಕಂಡುಹಿಡಿಯಬಹುದು. 5ರ ನಡುವೆ ಒಂದೇ ಒಂದು ಕಡೆ S ಅಡಗಿದೆ. ಇದು ಎಲ್ಲಿದೆ ಎಂದು 10 ಸೆಕೆಂಡ್ ಒಳಗೆ ಹೇಳಬೇಕು.

Brain Teaser: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ ಚಿತ್ರದಲ್ಲಿ ಅಡಗಿರುವ ನಂಬರ್‌ ಕಂಡುಹಿಡಿಯಲು ಸಾಧ್ಯ, ಪ್ರಯತ್ನಿಸಿ ನೋಡಿ

ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಆಗಿರುವ ಬ್ರೈನ್‌ ಟೀಸರ್‌ವೊಂದರಲ್ಲಿ ಅಡಗಿರುವ ನಂಬರ್‌ ಅನ್ನು ಹುಡುಕುವ ಚಾಲೆಂಜ್‌ ನೀಡಲಾಗಿದೆ. ಈ ಚಿತ್ರ ಸಾಕಷ್ಟು ವೈರಲ್‌ ಆಗಿದ್ದು, ಚಿತ್ರದಲ್ಲಿನ ನಂಬರ್‌ ಹುಡುಕುವಲ್ಲಿ ಸಾಕಷ್ಟು ಮಂದಿ ಸೋತಿದ್ದಾರೆ. ನಿಮ್ಮದು ಹದ್ದಿನ ಕಣ್ಣಾಗಿದ್ದರೆ ಚಿತ್ರದಲ್ಲಿ ಇರುವ ಸಂಖ್ಯೆಯನ್ನು ಕಂಡುಹಿಡಿಯಿರಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ