logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಇಲ್ಲಿರುವ ಸೂತ್ರ ಬಳಸಿಕೊಂಡು ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಬೇಕು, ಗಣಿತ ಎಕ್ಸ್‌ಪರ್ಟ್ಸ್‌ ಟ್ರೈ ಮಾಡಿ

Brain Teaser: ಇಲ್ಲಿರುವ ಸೂತ್ರ ಬಳಸಿಕೊಂಡು ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಬೇಕು, ಗಣಿತ ಎಕ್ಸ್‌ಪರ್ಟ್ಸ್‌ ಟ್ರೈ ಮಾಡಿ

Reshma HT Kannada

Apr 18, 2024 12:47 PM IST

google News

ಕೂಡಿಸು, ಕಳೆ, ಗುಣಿಸು, ಭಾಗಿಸು ಹಾಗೂ ಬ್ರಾಕೆಟ್‌ ಈ ಯಾವುದನ್ನಾದರೂ ಬಳಸಿಕೊಂಡು ಇಲ್ಲಿರುವ 4 ಅಂಕೆಗಳಲ್ಲಿ 10ಕ್ಕೆ ಸಮನಾದುದನ್ನು ಕಂಡುಹಿಡಿಯಿರಿ (Reddit/@puzzles)

    • ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಮೇಲ್ನೋಟಕ್ಕೆ ಸುಲಭ ಎಂದು ಕಂಡರೂ ಇದನ್ನು ಬಿಡುಸಲು ಆರಂಭಿಸಿದಾಗ ನಿಮಗೆ ಗೊಂದಲ ಉಂಟಾಗುವುದರಲ್ಲಿ ಅನುಮಾನವಿಲ್ಲ. ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಇದ್ರೆ ಉತ್ತರ ಹೇಳೋಕೆ ಟ್ರೈ ಮಾಡಿ.
ಕೂಡಿಸು, ಕಳೆ, ಗುಣಿಸು, ಭಾಗಿಸು ಹಾಗೂ ಬ್ರಾಕೆಟ್‌ ಈ ಯಾವುದನ್ನಾದರೂ ಬಳಸಿಕೊಂಡು ಇಲ್ಲಿರುವ 4 ಅಂಕೆಗಳಲ್ಲಿ 10ಕ್ಕೆ ಸಮನಾದುದನ್ನು ಕಂಡುಹಿಡಿಯಿರಿ  (Reddit/@puzzles)
ಕೂಡಿಸು, ಕಳೆ, ಗುಣಿಸು, ಭಾಗಿಸು ಹಾಗೂ ಬ್ರಾಕೆಟ್‌ ಈ ಯಾವುದನ್ನಾದರೂ ಬಳಸಿಕೊಂಡು ಇಲ್ಲಿರುವ 4 ಅಂಕೆಗಳಲ್ಲಿ 10ಕ್ಕೆ ಸಮನಾದುದನ್ನು ಕಂಡುಹಿಡಿಯಿರಿ (Reddit/@puzzles)

ಗಣಿತದಲ್ಲಿ ಎಂತಹ ಸೂತ್ರ, ಸಮೀಕರಣ ಇದ್ರು ಅದನ್ನು ಥಟ್ಟಂತ ಬಿಡಿಸ್ತೀನಿ ಅನ್ನುವ ಆತ್ಮವಿಶ್ವಾಸ ನಿಮಗಿದ್ಯಾ, ಹಾಗಿದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದು ನಿಮ್ಮ ಗಣಿತ ಕೌಶಲವನ್ನು ಪರೀಕ್ಷೆ ಮಾಡುವುದು ಸುಳ್ಳಲ್ಲ. ಇದು ಗಣಿತದ ಬೇಸಿಕ್‌ಗಳನ್ನು ಹೊಂದಿದ್ದರೂ ಉತ್ತಮ ಕಂಡುಹಿಡಿಯಲು ಕೂತಾಗ ನಿಮಗೆ ತಲೆ ಬಿಟ್ಟು ಹಿಡಿಸೋದು ಪಕ್ಕಾ. ಆರಂಭದಲ್ಲಿ ಕಂಡಾಗ ಇದೇನು ಮಹಾ, ಇದು ತುಂಬಾ ಸುಲಭ ಎಂದು ನಿಮಗೆ ಅನ್ನಿಸಬಹುದು. ಆದರೆ ಉತ್ತರ ಅಷ್ಟು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ ಬಿಡಿ. ಸರಿ ಹಾಗಿದ್ರೆ ಈ ಚಾಲೆಂಜ್‌ ಸ್ವೀಕರಿಸಲು ನೀವು ಸಿದ್ಧರಿದ್ದೀರಾ?

ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡ ಬ್ರೈನ್‌ ಟೀಸರ್‌ ಇದಾಗಿದೆ. puzzles ಎಂಬ ರೆಡ್ಡಿಟ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ಈ ಪೇಜ್‌ನಲ್ಲಿ ಇದೇ ರೀತಿಯ ಹಲವು ಬ್ರೈನ್‌ ಟೀಸರ್‌ಗಳಿವೆ. ಇಲ್ಲಿರುವ ಕೂಡಿಸು, ಕಳೆ, ಗುಣಿಸು, ಭಾಗಿಸು ಹಾಗೂ ಬ್ರಾಕೆಟ್‌ಗಳನ್ನು ಬಳಸಿಕೊಂಡು 10ಕ್ಕೆ ಸಮನಾದ 4 ಸಂಖ್ಯೆಗಳನ್ನು ಕಂಡುಹಿಡಿಯಬೇಕು ಎಂದು ಅವರು ಬರೆದುಕೊಂಡಿದ್ದಾರೆ.

ಏಪ್ರಿಲ್‌ 14ರಂದು ಈ ಪೋಸ್ಟ್‌ ಹಂಚಿಕೊಳ್ಳಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಹಲವರು ಲೈಕ್ಸ್‌, ಕಾಮೆಂಟ್‌ ಮಾಡಿದ್ದಾರೆ. ಕೆಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼನಂಬರ್‌ಗಳನ್ನು ಊಹಿಸಿಕೊಂಡೆ. ಅವು ಅದೇ ಆರ್ಡರ್‌ನಲ್ಲಿ ಇರಬೇಕು ಎಂದೇನಿಲ್ಲ. ಹಾಗಾಗಿ (9-1)/2+6" ಎಂದು ರೆಡ್ಡಿಟ್‌ ಬಳಕೆದಾರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಇದಕ್ಕೆ ಉತ್ತರ ಹುಡುಕಲು ಕೊಂಚ ಸಮಯ ಹಿಡಿಯಿತು. ಆದರೆ ಕೊನೆಗೂ ಉತ್ತರ ಸಿಕ್ಕಿತು. (9-1)*2-6 ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼ9+(1**(6+2))ʼ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ಅವರೆಲ್ಲರ ಕಥೆ ಬಿಡಿ ನೀವು ನಿಜಕ್ಕೂ ಗಣಿತದಲ್ಲಿ ಶಾರ್ಪ್‌ ಇದ್ರೆ, ಗಣಿತದ ಸೂತ್ರ ಅನ್ವಯಿಸಿ ಲೆಕ್ಕ ಮಾಡೋದು ನಿಮಗೆ ಇಷ್ಟ ಆದ್ರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಿರಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಪಜಲ್‌ ಪ್ರಿಯರಿಗಾಗಿ ಇಲ್ಲಿದೆ ಹೊಸ ಚಾಲೆಂಜ್‌, ಎ,ಬಿ,ಸಿಯ ಮೌಲ್ಯವೆಷ್ಟು; ಕ್ಯಾಲ್ಕುಲೇಟರ್‌ ಬಳಸದೇ ಉತ್ತರ ಹೇಳಿ

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ವೈರಲ್‌ ಸುಡುಕೊ ಒಂದಕ್ಕೆ ಉತ್ತರ ಕಂಡುಹಿಡಿಯಲು ನೆಟ್ಟಿಗರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ. ನೋಡಲು ಸರಳ ಎನ್ನಿಸುವ ಈ ಪಜಲ್‌ಗೆ ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಕಂಡುಹಿಡಿಯಬೇಕು, ನಿಮ್ಮಿಂದ ಸಾಧ್ಯವೇ ನೋಡಿ.

Brain Teaser: ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಈ ಸುಲಭ ಗಣಿತಕ್ಕೆ ಥಟ್ಟಂತ ಉತ್ತರ ಹೇಳಿ ಜಾಣತನ ತೋರಿ

ನೀವು ಗಣಿತಪ್ರೇಮಿಯೇ, ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಈ ಬಾಕ್ಸ್‌ನಲ್ಲಿ ಒಂದು ಸಂಖ್ಯೆ ಮಿಸ್‌ ಆಗಿದೆ. ಆ ನಂಬರ್‌ ಯಾವುದು ಎಂದು ಕಂಡುಹಿಡಿಯಿರಿ. ನಿಮಗೊಂದು ಹೊಸ ಸವಾಲು. ಪೆನ್ನು-ಪೇಪರ್‌, ಕ್ಯಾಲ್ಕುಲೇಟರ್‌ ಬಳಸುವಂತಿಲ್ಲ ನೆನಪಿರಲಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ