Brain Teaser: ಯಾವ ಗ್ಲಾಸ್‌ನಲ್ಲಿ ಮೊದಲು ನೀರು ತುಂಬುತ್ತೆ? ಯೋಚಿಸಿ ಉತ್ತರ ಹೇಳಿ, ನಿಮ್ಮ ಸಮಯ ಈಗ ಶುರು
Oct 09, 2024 12:52 PM IST
ಬ್ರೈನ್ ಟೀಸರ್
- ಮೆದುಳಿಗೆ ಹುಳ ಬಿಡುವ ವಿಚಾರಗಳನ್ನು ಕೆದಕುವುದು ನಿಮಗೆ ಇಷ್ಟನಾ, ಹಾಗಾದ್ರೆ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ 7 ಲೋಟಗಳಿವೆ. ಈ ಲೋಟಗಳಲ್ಲಿ ಯಾವ ಲೋಟಕ್ಕೆ ಮೊದಲು ನೀರು ತುಂಬುತ್ತದೆ ಎಂಬುದನ್ನು ಹೇಳುವುದು ನಿಮಗಿರುವ ಸವಾಲು. 10 ಸೆಕೆಂಡ್ ಒಳಗೆ ಉತ್ತರ ಹೇಳಿ.
ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಚೆನ್ನಾಗಿಯೇ ಕೆಲಸ ಕೊಡುತ್ತವೆ. ಖಾಲಿ ಕೂತ ಮೆದುಳಿಗೆ ಇದರಿಂದ ಸಾಕಷ್ಟು ಕೆಲಸ ಸಿಗುತ್ತದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಸಲುವಾಗಿ ಸಾಕಷ್ಟು ಯೋಚಿಸಬೇಕಾಗುತ್ತದೆ. ಆದರೂ ಇದರಿಂದ ಒಂದು ರೀತಿ ಮಜಾ ಸಿಗುತ್ತದೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತವೆ.
ಗಣಿತದ ಪಜಲ್, ಲಾಜಿಕಲ್ ರೀಸನಿಂಗ್, ಪ್ರಶ್ನೋತ್ತರಗಳಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದಕ್ಕೆ ಉತ್ತರ ಹುಡುಕುವವರೆಗೂ ನಾವು ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಕೆಲವೊಮ್ಮ ಮೆದುಳಿಗೆ ಕೈ ಹಾಕಿ ಪರಪರ ಅಂತ ಕೆರ್ಕೊಂಡ್ರು ಉತ್ತರ ಸಿಗುವುದಿಲ್ಲ.
ಇಂದಿನ ಬ್ರೈನ್ ಟೀಸರ್ ಅನ್ನು ನೀವು ಸಾಕಷ್ಟು ಗಮನ ಕೊಟ್ಟು ನೋಡಿದಾಗ ಉತ್ತರ ಕಂಡುಕೊಳ್ಳಬಹುದು. ಅಲ್ಲದೇ ಇದಕ್ಕೆ ಉತ್ತರ ಹುಡುಕಲು ನಿಮ್ಮ ಮೆದುಳೊಂದಿಗೆ ಕಣ್ಣು ಕೂಡ ಸಖತ್ ಶಾರ್ಪ್ ಆಗಿರಬೇಕು.
The Medical City Hospital ಫೇಸ್‌ಬುಕ್‌ನಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಯಾವ ಗ್ಲಾಸ್‌ಗೆ ಮೊದಲು ನೀರು ತುಂಬುತ್ತದೆ ಎಂಬುದನ್ನು ಹೇಳುವುದು ನಿಮಗಿರುವ ಸವಾಲಾಗಿದೆ. ‘ನಿಮಗೆ ಗೊತ್ತಾ, ಬ್ರೈನ್ ಟೀಸರ್‌ಗಳಿಂದ ಮೆದುಳನ್ನು ಸಕ್ರಿಯವಾಗಿ ಇರಿಸಿಕೊಳ್ಳಬಹುದು. ಉತ್ತಮ ಅರಿವಿನ ಆರೋಗ್ಯಕ್ಕೂ ಇದು ಕೊಡುಗೆ ನೀಡಬಹುದು‘ ಎಂದು ಶೀರ್ಷಿಕೆ ಬರೆದುಕೊಂಡು ಇದನ್ನು ಹಂಚಿಕೊಳ್ಳಲಾಗಿದೆ. ಸರಿ ಹಾಗಾದ್ರೆ ಇದಕ್ಕೆ 10 ಸೆಕೆಂಡ್‌ನಲ್ಲಿ ಉತ್ತರ ಕಂಡುಕೊಳ್ಳಲು ನಿಮ್ಮಿಂದ ಸಾಧ್ಯವೇ ಪರೀಕ್ಷೆ ಮಾಡಿ.
ಶೇ 99ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆನಿಮ್ಮ ಉತ್ತರವೇನು ಹೇಳಿ. ಈ ಪ್ರಶ್ನೆಗೆ ನಿಮ್ಮಿಂದ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ನಿಮ್ಮ ಆತ್ಮೀಯರಿಗೂ ಇದನ್ನು ಕಳುಹಿಸಿ, ಇವರಿಂದ ಯಾವ ಉತ್ತರ ಬರುತ್ತದೆ ಎಂಬುದನ್ನು ನಿರೀಕ್ಷಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ನಲ್ಲಿ 'ಎ'ಗೂ 'ಡಿ'ಗೂ ಇರುವ ಸಂಬಂಧವೇನು ಹೇಳಿ? ಬುದ್ಧಿ ಉಪಯೋಗಿಸಿ ಉತ್ತರಿಸಿ
ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಯಂತಿರುವ ಈ ಬ್ರೈನ್ ಟೀಸರ್ ಸಂಬಂಧಗಳ ರಹಸ್ಯವನ್ನು ಬಿಚ್ಚಿಡುವಂಥದ್ದು. ಎ ಹಾಗೂ ಡಿ ನಡುವೆ ಇರುವ ಸಂಬಂಧ ಏನು ಎಂಬುದನ್ನು ನೀವು ಹೇಳಬೇಕು.
Brain Teaser: 888ರ ಸಾಲಿನಲ್ಲಿ ಒಂದೇ ಒಂದು ಕಡೆ 808 ಇದೆ, ಅದು ಎಲ್ಲಿದೆ ಎಂದು 10 ಸೆಕೆಂಡ್‌ನಲ್ಲಿ ಹುಡುಕಬೇಕು, ನಿಮಗಿದು ಚಾಲೆಂಜ್
ಮೇಲಿಂದ ಕೆಳಗೆ ಉದ್ದದಿಂದ ಅಡ್ಡಕ್ಕೆ 888 ಎಂದು ಬರೆಯಲಾಗಿರುವ ಈ ಚಿತ್ರದಲ್ಲಿ ಒಂದೇ ಒಂದು ಕಡೆ 808 ಸಂಖ್ಯೆ ಇದೆ. ಅದು ಎಲ್ಲಿದೆ ಎಂಬದನ್ನು ನೀವು 10 ಸೆಕೆಂಡ್ ಒಳಗೆ ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಕಣ್ಣು ನಿಜಕ್ಕೂ ಚುರುಕಾಗಿದೆ ಅಂದ್ರೆ 808 ಎಲ್ಲಿದೆ ಹೇಳಿ.