Personality Test: ಚಿತ್ರ ನೋಡಿದಾಕ್ಷಣ ಕಂಡಿದ್ದೇನು? ನಿಮ್ಮ ಕಣ್ಣಿಗೆ ಮೊದಲು ಕಾಣುವ ವಸ್ತು ಹೇಳುತ್ತೆ ನಿಮ್ಮ ವ್ಯಕ್ತಿತ್ವ
Nov 29, 2023 09:34 AM IST
Personality: ಫಟ್ ಅಂತ ನೋಡಿದ ತಕ್ಷಣ ನಿಮಗೆ ಕಂಡ ಚಿತ್ರ ಯಾವುದು? ನಿಮ್ಮ ಕಣ್ಣಿಗೆ ಮೊದಲು ಕಾಣುವ ವಸ್ತು ಹೇಳುತ್ತೆ ನಿಮ್ಮ ವ್ಯಕ್ತಿತ್ವ
- ಈ ಚಿತ್ರವನ್ನು ಸರಿಯಾಗಿ ನೋಡಿ. ನಿಮಗೆ ಮೊದಲು ಈ ಚಿತ್ರದಲ್ಲಿ ಏನು ಕಂಡಿತು? ಮೊದಲು ನೀವು ಬಟ್ಟೆ ರಾಶಿಯನ್ನು ನೋಡಿದಿರೋ ಅಥವಾ ಪ್ರಾಣಿಯನ್ನು ಕಂಡಿದ್ದೀರೋ? ನೀವು ಈ ಚಿತ್ರದಲ್ಲಿ ಏನನ್ನು ಮೊದಲು ನೋಡಿದ್ದೀರಿ ಎನ್ನುವುದು ನಿಮ್ಮ ವ್ಯಕ್ತಿತ್ವ ಏನು ಎಂದು ಹೇಳುತ್ತದೆ.
ಆಪ್ಟಿಕಲ್ ಇಲ್ಯೂಷನ್‌ಗಳು ನಿಮ್ಮ ಮೆದುಳಿಗೆ ಕೆಲಸ ಕೊಡುವ ಚಿತ್ರವಾಗಿರುತ್ತವೆ. ನೀವು ಏನನ್ನೋ ನೋಡಿರುತ್ತೀರಿ. ಆದರೆ ಆ ಚಿತ್ರದಲ್ಲಿ ಇನ್ನೇನೋ ಇರುತ್ತದೆ. ಹೀಗೆ ದೃಷ್ಟಿಭ್ರಮೆಯ ಚಿತ್ರಗಳು ಕೆಲವೊಮ್ಮೆ ನಮ್ಮನ್ನೇ ದಡ್ಡರನ್ನಾಗಿಸಿಬಿಡುತ್ತವೆ. ಆದರೆ ಈ ರೀತಿಯ ಚಿತ್ರಗಳು ಕೆಲವೊಮ್ಮೆ ನಮ್ಮ ವ್ಯಕ್ತಿತ್ವಗಳನ್ನೂ ಹೇಳುತ್ತವೆಯಂತೆ. ಅದು ಹೇಗೆ ಎಂದು ಯೋಚಿಸುತ್ತಿದ್ದೀರೇ? ನೀವು ಯಾವುದೇ ಒಂದು ದೃಷ್ಠಿಭ್ರಮೆಯ ಚಿತ್ರವನ್ನು ನೋಡಿದಾಗ ಮೊದಲು ನಿಮ್ಮ ಕಣ್ಣಿಗೆ ಏನು ಕಾಣುತ್ತದೆಯೋ ಅದು ನಿಮ್ಮ ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ನೀವು ಜೀವನವನ್ನು ಯಾವ ರೀತಿ ನೋಡುತ್ತೀರಿ ಎನ್ನುವುದು ಸಹ ನಿಮ್ಮ ಕಣ್ಣಿಗೆ ಮೊದಲು ಕಾಣುವ ಚಿತ್ರದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಈಗ ಇಲ್ಲಿ ನೀಡಲಾಗಿರುವ ಚಿತ್ರವನ್ನು ಥಟ್ ಅಂತಾ ನೋಡಿದಾಗ ಅನೇಕರಿಗೆ ಅಲ್ಲಿ ಒಂದು ಎಮ್ಮೆ ಅಥವಾ ಕುದುರೆ ಇರುವಂತೆ ಕಾಣಬಹುದು. ಇನ್ನೂ ಕೆಲವರಿಗೆ ಬಟ್ಟೆಗಳನ್ನು ಒಣಗಿಸಿ ಹಾಕಿದಂತೆ ಕೂಡ ಕಾಣಬಹುದು. ಇವುಗಳಲ್ಲಿ ನಿಮ್ಮ ಕಣ್ಣಿಗೆ ಯಾವುದು ಮೊದಲು ಕಂಡಿತು ಅನ್ನೋದ್ರ ಮೇಲೆ ನೀವು ಜೀವನವನ್ನು ಹೆಚ್ಚು ಧನಾತ್ಮಕವಾಗಿ ಸ್ವೀಕರಿಸುತ್ತಿರೋ ಅಥವಾ ಋಣಾತ್ಮಕವಾಗಿ ಸ್ವೀಕರಿಸುತ್ತೀರೋ ಎನ್ನುವುದು ನಿರ್ಧಾರವಾಗುತ್ತದೆ. ಅಲ್ಲದೇ ಇನ್ನೊಬ್ಬರ ಮೇಲೆ ನೀವಿಡುವ ನಂಬಿಕೆ ಎಂಥಾದ್ದು ಎಂಬುದು ಕೂಡ ಇದರಲ್ಲೇ ನಿರ್ಣಯವಾಗುತ್ತದೆ. ಮಿಯಾ ಯಿಲಿನ್ ಎಂಬುವರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಬಟ್ಟೆ ಕಾಣುವುದು
ಈ ಫೋಟೋವನ್ನು ನೋಡಿದಾಕ್ಷಣ ನಿಮಗೆ ಏನಾದರೂ ಬಟ್ಟೆಯನ್ನು ನೇತುಹಾಕಿರುವಂತೆ ಕಂಡು ಬಂದಿದ್ದರೆ ನೀವು ಜೀವನವನ್ನು ಹೆಚ್ಚು ಧನಾತ್ಮಕ ರೀತಿಯಲ್ಲಿ ನೋಡುವವರು ಎಂದು ಅರ್ಥವಂತೆ. ನೀವು ಸಾಮಾನ್ಯವಾಗಿ ಎಲ್ಲರೊಂದಿಗೆ ಬೇಗೆ ಬಂಧವನ್ನು ಬೆಸೆದುಕೊಳ್ಳುವಂತಹ ಗುಣವನ್ನು ಹೊಂದಿರುತ್ತೀರಿ. ನೀವು ಭೂತಕಾಲ ಅಥವಾ ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವವರಲ್ಲ. ಈಕ್ಷಣವನ್ನು ಹೆಚ್ಚು ಅನಂದಿಸುವ ಗುಂಪಿಗೆ ನೀವು ಸೇರುತ್ತೀರಿ. ಆದರೆ ನಿಮ್ಮ ಕಂಫರ್ಟ್ ಝೋನ್ನಿಂದ ಹೊರಗೆ ಬಂದು ಯಾವುದೇ ಸಾಹಸಮಯ ಕೆಲಸಗಳಿಗೆ ಕೈ ಹಾಕಲು ಹಿಂಜರಿಯುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ಪ್ರತಿಯೊಂದು ಕ್ಷಣದಲ್ಲೂ ನೀವು ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತೀರಿ.
ಪ್ರಾಣಿ
ಇನ್ನು ಫಾರ್ಮ್ನಲ್ಲಿ ಪ್ರಾಣಿಯೊಂದು ನಿಂತಿರುವಂತೆ ನಿಮಗೆ ಭಾಸವಾಗಿದ್ದರೆ ನೀವು ಜೀವನವನ್ನು ಸ್ವಲ್ಪ ಋಣಾತ್ಮಕ ದೃಷ್ಟಿಯಿಂದ ನೋಡುವವರು ಎಂಬ ಅರ್ಥವಿದೆ. ನೀವು ತುಂಬಾ ಪ್ರ್ಯಾಕ್ಟಿಕಲ್ ಅಲ್ಲದೇ ನೀವು ಇನ್ನೊಬ್ಬರ ಮೇಲೆ ಅವಲಂಬಿತರಾಗುವವರಲ್ಲ. ಜೀವನದ ಯಾವುದೇ ಚಾಲೆಂಜ್ಗಳನ್ನು ಎದುರಿಸುವ ಸಾಮರ್ಥ್ಯ ನಿಮಗೆ ಇರುತ್ತದೆ. ನಿಮ್ಮ ನಂಬಿಕೆಯ ಲಾಭ ಪಡೆದುಕೊಳ್ಳುವವರಿಗೆ ನಿಮ್ಮಲ್ಲಿ ಕ್ಷಮೆ ಎನ್ನುವುದು ಸಿಗುವುದಿಲ್ಲ. ನಾವು ಯಾರನ್ನೂ ಅಷ್ಟು ಸುಲಭವಾಗಿ ನಂಬುವವರು ಕೂಡ ಅಲ್ಲ ಎಂದು ಈ ಚಿತ್ರವು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.