Brain Teaser: ಮೊದಲು ಯಾವ ಗ್ಲಾಸ್ ತುಂಬುತ್ತೆ? ನಿಮ್ಮ ಮೆದುಳು ಚುರುಕಾಗಿದ್ರೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ
Jun 23, 2024 10:10 AM IST
ಮೊದಲು ಯಾವ ಗ್ಲಾಸ್ ತುಂಬುತ್ತೆ? ಮೆದುಳು ಚುರುಕಾಗಿದ್ರೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ
- ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂದು ತಿಳಿಯಬೇಕು ಅನ್ನೋ ಆಸೆ ನಿಮಗಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಿ. 15 ಸೆಕೆಂಡ್‌ನಲ್ಲಿ ಯಾವ ಗ್ಲಾಸ್ ಮೊದಲು ತುಂಬುತ್ತೆ ಎಂದು ಹೇಳಿದ್ರೆ ನೀವು ನಿಜಕ್ಕೂ ಶಾರ್ಪ್. ನಿಮ್ಮ ಸಮಯ ಈಗ ಶುರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳಿಗೆ ಮೇಲ್ನೋಟಕ್ಕೆ ಉತ್ತರ ಕಂಡುಕೊಳ್ಳುವುದು ಸುಲಭ ಎನ್ನಿಸುತ್ತದೆ. ಆದರೆ ಅದಕ್ಕೆ ಇಂತಿಷ್ಟೇ ನಿರ್ದಿಷ್ಟ ಸಮಯದಲ್ಲಿ ಉತ್ತರ ಹೇಳುವುದು ಖಂಡಿತ ಸುಲಭದ ಮಾತಲ್ಲ. ಮೆದುಳು ಶಾರ್ಪ್ ಇದ್ದು, ಐಕ್ಯೂ ಲೆವೆಲ್ ಹೈ ಇದ್ದರಷ್ಟೇ ಥಟ್ಟಂತ ಉತ್ತರ ಹೇಳಲು ಸಾಧ್ಯ. ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಟ್ಟು 7 ಗ್ಲಾಸ್‌ಗಳಿವೆ. ಒಂದು ನಳ್ಳಿಯಿಂದ ನೀರು ಸೋರುತ್ತಿದ್ದು, 7 ಗ್ಲಾಸ್‌ಗಳಲ್ಲಿ ಯಾವ ಗ್ಲಾಸ್‌ಗೆ ಮೊದಲು ನೀರು ತುಂಬುತ್ತದೆ ಎಂದು ಕಂಡುಹಿಡಿಯಬೇಕು, ಅದು ಕೇವಲ 15 ಸೆಕೆಂಡ್‌ಗಳಲ್ಲಿ.
@Brainy_Bits_Hub ಎಂಬ ಎಕ್ಸ್‌ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ʼಯಾವ ಗ್ಲಾಸ್ ಮೊದಲು ತುಂಬುತ್ತದೆ?ʼ ಎಂದು ಬರೆದುಕೊಂಡು ಈ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಜೂನ್ 8 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 21 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕೆಲವರು ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ. ಹಲವರು ಎಕ್ಸ್ ಬಳಕೆದಾರರು 5 ಎಂದು ಉತ್ತರ ನೀಡಿದ್ದರೆ, ಇನ್ನೂ ಕೆಲವರು 6 ಎಂದು ಉತ್ತರಿಸಿದ್ದಾರೆ. ಹಾಗಾದ್ರೆ ನಿಮ್ಮ ಪ್ರಕಾರ ಯಾವ ಗ್ಲಾಸ್ ಮೊದಲು ತುಂಬುತ್ತದೆ ಉತ್ತರ ಹೇಳಿ.
ಇಂತಹ ಬ್ರೈನ್ ಟೀಸರ್‌ಗಳು ಮಕ್ಕಳಿಂದ ಹಿಡಿದು ದೊಡ್ಡವವರೆಗೆ ಮೆದುಳನ್ನು ಚುರುಕುಗೊಳಿಸುತ್ತವೆ. ನಮ್ಮ ಗಮನಶಕ್ತಿ ಹಾಗೂ ಯೋಚನಾಶಕ್ತಿಯನ್ನು ವೃದ್ಧಿಸಲು ಇವು ಸಹಕಾರಿ. ಬ್ರೈನ್ ಟೀಸರ್‌ಗಳು ನಿಮ್ಮ ಕಣ್ಣನ್ನು ಶಾರ್ಪ್ ಮಾಡುತ್ತವೆ. ಇವು ಟೈಮ್ ಪಾಸ್ ಮಾಡಲು ಕೂಡ ಉತ್ತಮ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 7 ಕಪ್‌ಗಳಲ್ಲಿ ಮೊದಲು ಯಾವ ಕಪ್ ತುಂಬುತ್ತೆ, ಉತ್ತರ ಹೇಳಿ ಜಾಣತನ ತೋರಿ; ನಿಮಗಿದು ಚಾಲೆಂಜ್
ʼಯಾವ ಕಪ್‌ಗೆ ಮೊದಲು ನೀರು ತುಂಬುತ್ತೆ?ʼ ಇನ್‌ಸ್ಟಾಗ್ರಾಂ ಥ್ರೆಡ್‌ನಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷಿಸುವುದು ಸುಳ್ಳಲ್ಲ. 7 ಕಪ್‌ಗಳಲ್ಲಿ ಮೊದಲು ಯಾವ ಕಪ್‌ಗೆ ನೀರು ತುಂಬುತ್ತೆ ಎನ್ನುವುದು ನಿರ್ಧರಿಸಿ ಉತ್ತರ ಹೇಳಿ. ನಿಮ್ಮ ಜಾಣತನ ತೋರಿ.
Brain Teaser: ಯಾವ ಟ್ಯಾಂಕ್‌ನಲ್ಲಿ ಮೊದಲು ನೀರು ತುಂಬುತ್ತೆ, ಉತ್ತರ ಕಂಡುಹಿಡಿಯಿರಿ; ಈ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡುವುದು ಪಕ್ಕಾ
Brain Teaser in Kannada: ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಈ ಚಿತ್ರದಲ್ಲಿ ಎ ಯಿಂದ ಎಲ್‌ವರೆಗೆ ಒಂದಿಷ್ಟು ಟ್ಯಾಂಕ್‌ಗಳಿವೆ. ಇದಕ್ಕೆ ಮೇಲಿನಿಂದ ಕೊಳಾಯಿ ಸಹಾಯದಿಂದ ನೀರು ಬಿಡಲಾಗುತ್ತಿದೆ. ಈ ಟ್ಯಾಂಕ್‌ಗಳಲ್ಲಿ ಮೊದಲು ಯಾವ ಟ್ಯಾಂಕ್ ತುಂಬುತ್ತೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್.