logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗಣರಾಜ್ಯೋತ್ಸವ ಥೀಮ್‌ನ ಬ್ರೈನ್‌ ಟೀಸರ್‌ನಲ್ಲಿದೆ ಒಂದಿಷ್ಟು ರಸಪ್ರಶ್ನೆ; ಇದಕ್ಕೆ ಉತ್ತರ ಹೇಳ್ತೀರಾ?

Brain Teaser: ಗಣರಾಜ್ಯೋತ್ಸವ ಥೀಮ್‌ನ ಬ್ರೈನ್‌ ಟೀಸರ್‌ನಲ್ಲಿದೆ ಒಂದಿಷ್ಟು ರಸಪ್ರಶ್ನೆ; ಇದಕ್ಕೆ ಉತ್ತರ ಹೇಳ್ತೀರಾ?

Reshma HT Kannada

Feb 18, 2024 12:42 PM IST

google News

ಗಣರಾಜ್ಯೋತ್ಸವ ಥೀಮ್‌ನ ಬ್ರೈನ್‌ ಟೀಸರ್‌ನಲ್ಲಿದೆ ಒಂದಿಷ್ಟು ರಸಪ್ರಶ್ನೆ; ಇದಕ್ಕೆ ಉತ್ತರ ಹೇಳ್ತೀರಾ?

    • ಇಂದು (ಜ.6) ಭಾರತದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ. ದೆಹಲಿಯ ಕರ್ತವ್ಯಫಥ್‌ ಹಾಗೂ ಬೆಂಗಳೂರಿನ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕಮ ಅದ್ಧೂರಿಯಾಗಿ ನಡೆಯುತ್ತಿದೆ. ಈ ಹೊತ್ತಿನಲ್ಲಿ ನಿಮಗಾಗಿ ಇಲ್ಲಿದೆ ಗಣರಾಜ್ಯೋತ್ಸವ ಥೀಮ್‌ನ ಒಂದಿಷ್ಟು ರಸಪ್ರಶ್ನೆ. ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? 
ಗಣರಾಜ್ಯೋತ್ಸವ ಥೀಮ್‌ನ ಬ್ರೈನ್‌ ಟೀಸರ್‌ನಲ್ಲಿದೆ ಒಂದಿಷ್ಟು ರಸಪ್ರಶ್ನೆ; ಇದಕ್ಕೆ ಉತ್ತರ ಹೇಳ್ತೀರಾ?
ಗಣರಾಜ್ಯೋತ್ಸವ ಥೀಮ್‌ನ ಬ್ರೈನ್‌ ಟೀಸರ್‌ನಲ್ಲಿದೆ ಒಂದಿಷ್ಟು ರಸಪ್ರಶ್ನೆ; ಇದಕ್ಕೆ ಉತ್ತರ ಹೇಳ್ತೀರಾ?

ಪ್ರತಿವರ್ಷ ಜನವರಿ 26 ರಂದು ನಾವು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಈ ವರ್ಷ 75ನೇ ಗಣರಾಜ್ಯೋತ್ಸವವಿದೆ. 1950 ರಲ್ಲಿ ಭಾರತೀಯ ಸಂವಿಧಾನವು ಜಾರಿಗೆ ಬಂದ ದಿನ ಇದಾಗಿದೆ. ಈ ದಿನವನ್ನು ದೇಶದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ನವದೆಹಲಿ ಕರ್ತವ್ಯಪಥ್‌ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಕರ್ಷಕ ಪರೇಡ್‌ ನಡೆಯುತ್ತದೆ.

ಪ್ರಜಾಪ್ರಭುತ್ವ ಕಡೆಗೆ ಭಾರತವು ಹೆಜ್ಜೆ ಇರಿಸಿದ ಈ ಪ್ರಮುಖ ದಿನವನ್ನು ನೆನಪಿಸುವ ಗಣರಾಜ್ಯೋತ್ಸವವನ್ನು ಆಚರಿಸಲು ನಾವು ಸಿದ್ಧರಾಗಿರುವ ಈ ಹೊತ್ತಿನಲ್ಲಿ ಕೆಲವು ಸವಾಲು ಅಥವಾ ರಸಪ್ರಶ್ನೆಗಳನ್ನು ನಿಮಗಾಗಿ ನೀಡಲಾಗಿದೆ.

ನಿಯಮಗಳೇನು?

ಈ ರಸಪ್ರಶ್ನೆಯ ನಿಯಮಗಳು ಸರಳವಾಗಿವೆ. ಪ್ರತಿಯೊಂದರ ವಿರುದ್ಧವೂ ಸರಿ ಹಾಗೂ ತಪ್ಪು ಆಯ್ಕೆಗಳನ್ನು ನೀಡಲಾಗಿದೆ. ಈ ಬ್ರೈನ್‌ ಟೀಸರ್‌ನಲ್ಲಿ ನೀಡಲಾಗಿರುವ ಹೇಳಿಕೆಗಳು ಸರಿನೋ ಅಥವಾ ತಪ್ಪೋ ಎಂಬುದನ್ನು ನೀವು ನಿರ್ಧರಿಸಿ ಹೇಳಬೇಕಾಗಿದೆ.

1. ಬೀಟಿಂಗ್‌ ರಿಟ್ರೀಟ್‌ ಗಣರಾಜ್ಯೋತ್ಸವದ ಮುಕ್ತಾಯವನ್ನು ಸೂಚಿಸುತ್ತದೆ?

a. ಸರಿ

b. ತಪ್ಪು

2. ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2024ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಎಐ ಆಧರಿತ ಟ್ಯಾಬ್ಲೋ ಪ್ರದರ್ಶಿಸುತ್ತಿದೆ?

a. ಸರಿ

b. ತಪ್ಪು

3. ಗಣರಾಜ್ಯೋತ್ಸವಕ್ಕೂ ಒಂದು ದಿನ ಮೊದಲು ರಾಷ್ಟ್ರಪತಿಗಳು ಪದ್ಮ ಪ್ರಶಸ್ತಿಯನ್ನು ವಿತರಿಸುತ್ತಾರೆ?

a. ಸರಿ

b. ತಪ್ಪು

4. ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಪತಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ?

a. ಸರಿ

b. ತಪ್ಪು

5. ಗಣರಾಜ್ಯೋತ್ಸವದಂದು ಪ್ರಧಾನಿಯವರು ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ?

a. ಸರಿ

b. ತಪ್ಪು

6. 2024ರ ಗಣರಾಜ್ಯೋತ್ಸವದಲ್ಲಿ ಇಸ್ರೋ ಚಂದ್ರಯಾನ 3ಕ್ಕೆ ಸಂಬಂಧಿಸಿದ ವಿಶೇಷ ಟ್ಲಾಬೋ ಪ್ರದರ್ಶನ ಮಾಡಲಿದೆ?

a. ಸರಿ

b. ತಪ್ಪು

7. ಫ್ರೆಂಚ್‌ ಸೈನ್ಯವು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಮೊದಲ ವಿದೇಶಿ ಸೇನಾ ತುಕಡಿಯಾಗಿದೆ.

a. ಸರಿ

b. ತಪ್ಪು

8. 1954ರಲ್ಲಿ ರಾಜ್‌ಪಥ್‌ (ಈಗೀನ ಕರ್ತವ್ಯ ಪಥ್‌ನಲ್ಲಿ ಮೊದಲ ಬಾರಿ ಪರೇಡ್‌ ನಡೆಯಿತು

a. ಸರಿ

b. ತಪ್ಪು

9. 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 2024ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುತ್ತಿವೆ.

a. ಸರಿ

b. ತಪ್ಪು

10. ಬೀಟಿಂಗ್‌ ರಿಟ್ರೀಟ್‌ ಸಮಾರಂಭವು ಜನವರಿ 30,2024 ವಿಜಯ್‌ ಚೌಕ್‌ನಲ್ಲಿ ನಡೆಯಲಿದೆ

a. ಸರಿ

b. ತಪ್ಪು

ಗಣರಾಜ್ಯೋತ್ಸವ ದಿನದಂದು ಭಾರತದ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ನಂತರ ಮಿಲಿಟರಿ ಕವಾಯತುಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನಡೆಯುತ್ತವೆ.

ಗಣರಾಜ್ಯೋತ್ಸವ ಪರೇಡ್‌ 2024

ಪ್ರತಿವರ್ಷ ಗಣರಾಜ್ಯೋತ್ಸವ ಪರೇಡ್‌ಗೆ ವಿಶೇಷ ಥೀಮ್‌ ಅನ್ನು ಆಯ್ಕೆ ಮಾಡಲಾಗುತ್ತದೆ. ಈ ವರ್ಷ ವಿಕ್ಷಿತ್‌ ಭಾರತ್‌ ಮತ್ತು ಭಾರತ್‌ ಲೋಕತಂತ್ರ ಕಿ ಮಾತೃಕಾ ಎಂಬುದು ಥೀಮ್‌ ಆಗಿದೆ. 2024ರ ಗಣರಾಜೋತ್ಸವ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಭಾಗವಹಿಸಲಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ