logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಕಣ್ಣು ನಿಜಕ್ಕೂ ಸೂಕ್ಷ್ಮವಾಗಿದ್ರೆ 5 ಸೆಕೆಂಡ್‌ನಲ್ಲಿ ಹೂಗಳ ನಡುವೆ ಅಡಗಿರುವ ಚಿಟ್ಟೆಗಳನ್ನು ಹುಡುಕಿ

Brain Teaser: ನಿಮ್ಮ ಕಣ್ಣು ನಿಜಕ್ಕೂ ಸೂಕ್ಷ್ಮವಾಗಿದ್ರೆ 5 ಸೆಕೆಂಡ್‌ನಲ್ಲಿ ಹೂಗಳ ನಡುವೆ ಅಡಗಿರುವ ಚಿಟ್ಟೆಗಳನ್ನು ಹುಡುಕಿ

Reshma HT Kannada

Oct 07, 2023 10:08 AM IST

google News

ಚಿತ್ರದಲ್ಲಿ ಅಡಗಿರುವ ಚಿಟ್ಟೆಗಳನ್ನು ಹುಡುಕಿ

    • ಇಲ್ಲೊಂದು ಹೂಗಳ ರಾಶಿ ಇರುವ ಬ್ರೈನ್‌ ಟೀಸರ್‌ ಚಿತ್ರವಿದೆ. ಈ ಚಿತ್ರ ನಿಮ್ಮ ಗಮನ ವೀಕ್ಷಣಾ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ, ಅಲ್ಲದೆ ಇದು ನಿಮಗೆ ಸವಾಲು ಎಸೆಯುತ್ತದೆ, ಆ ಸವಾಲು ಎಂದರೆ ಚಿತ್ರದಲ್ಲಿ ಚಿಟ್ಟೆಗಳನ್ನು ಹುಡುಕಬೇಕು. ಅದು ಕೇವಲ 5 ಸೆಕೆಂಡ್‌ನಲ್ಲಿ.
ಚಿತ್ರದಲ್ಲಿ ಅಡಗಿರುವ ಚಿಟ್ಟೆಗಳನ್ನು ಹುಡುಕಿ
ಚಿತ್ರದಲ್ಲಿ ಅಡಗಿರುವ ಚಿಟ್ಟೆಗಳನ್ನು ಹುಡುಕಿ

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಎಲ್ಲಿ ನೋಡಿದ್ರು ಬ್ರೈನ್‌ ಟೀಸರ್‌, ಆಪ್ಟಿಕಲ್‌ ಇಲ್ಯೂಷನ್‌ಗಳೇ ಕಾಣ ಸಿಗುತ್ತವೆ. ಇವು ನಿಮ್ಮ ತಲೆಗೆ ಹುಳ ಬಿಡುವುದರಲ್ಲಿ ಎತ್ತಿದ ಕೈ.

ಈ ಬ್ರೈನ್‌ ಟೀಸರ್‌ಗಳನ್ನು ಬಿಡಿಸಲು ನಿಮ್ಮ ಕಣ್ಣು ಹಾಗೂ ಮೆದುಳು ಎರಡೂ ಚುರುಕಾಗಿರಬೇಕು. ಇದು ಆಸಕ್ತಿ ಮೂಡಿಸುವ ಜೊತೆಗೆ ಟೈಂಪಾಸ್‌ ಮಾಡಲು ಕೂಡ ಉತ್ತಮ. ಹಾಗಾಗಿ ಹಲವರು ಬ್ರೈನ್‌ ಟೀಸರ್‌ ಅನ್ನು ಇಷ್ಟಪಡುತ್ತಾರೆ. ಮಾತ್ರವಲ್ಲ, ನಿಮ್ಮ ಪ್ರೀತಿಪಾತ್ರರಿಗೆ ಚಾಲೆಂಜ್‌ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.

ಸರಿ ಹಾಗಾದ್ರೆ ನೀವು ಬ್ರೈನ್‌ ಟೀಸರ್‌ ಇಷ್ಟ ಪಡುವವರಾದ್ರೆ ನಿಮಗಾಗಿ ಇಲ್ಲೊಂದು ಚಿತ್ರವಿದೆ. ಇದು ನಿಮ್ಮ ಕಣ್ಣು, ಮೆದುಳಿನ ಜೊತೆಗೆ ಗಮನ ಶಕ್ತಿಯನ್ನು ಪರೀಕ್ಷಿಸುತ್ತದೆ.

ಈ ಬ್ರೈನ್‌ ಟೀಸರ್‌ನಲ್ಲಿ ಒಂದಿಷ್ಟು ಹೂಗಳನ್ನು ಜೋಡಿಸಿ ಇಡಲಾಗಿದೆ. ಈ ಹೂಗಳ ನಡುವೆ ಅಡಗಿರುವ ನಾಲ್ಕು ಚಿಟ್ಟೆಗಳನ್ನು ನೀವು ಹುಡುಕಬೇಕು, ಇದು ನಿಮಗಿರುವ ಟಾಸ್ಕ್‌, ನಿಮ್ಮದು ಹದ್ದಿನ ಕಣ್ಣಾಗಿದ್ದರೆ ಖಂಡಿತ ನಿಮಗೆ ಚಿಟ್ಟೆಗಳು ಸಿಗುತ್ತವೆ.

ಈ ಬ್ರೈನ್‌ ಟೀಸರ್‌ಗಳನ್ನು ನೋಡಿ

Brain Teaser: 5 ಸೆಕೆಂಡ್‌ನಲ್ಲಿ ಬೆಕ್ಕುಗಳ ಮಧ್ಯೆ ಅವಿತಿರುವ ನಾಯಿಮರಿಯನ್ನು ಹುಡುಕಿ; ಇಲ್ಲಿದೆ ನಿಮಗೊಂದು ಹೊಸ ಚಾಲೆಂಜ್‌

ಬ್ರೈನ್‌ ಟೀಸರ್‌ ಚಾಲೆಂಜ್‌ ಸ್ವೀಕರಿಸೋಕೆ ನಿಮಗೆ ಇಷ್ಟನಾ? ಹಾಗಾದ್ರೆ ಇಲ್ಲೊಂದು ಬ್ರೈನ್‌ ಟೀಸರ್‌ ಚಿತ್ರವಿದೆ. ಇದರಲ್ಲಿ ಒಂದಿಷ್ಟು ಬೆಕ್ಕುಗಳಿವೆ. ಈ ಬೆಕ್ಕುಗಳ ಮಧ್ಯೆ ನಾಯಿಯ ಕೂಡ ಸೇರಿಕೊಂಡಿದೆ. 5 ಸೆಕೆಂಡ್‌ನಲ್ಲಿ ನಾಯಿ ಮರಿಯನ್ನು ಕಂಡುಹಿಡಿಯಬೇಕು, ಇದು ನಿಮಗಿರುವ ಚಾಲೆಂಜ್‌. ನಿಮ್ಮ ಸಮಯ ಈಗ ಶುರು...

ಈ ಬ್ರೈನ್‌ ಟೀಸರ್‌ ಅನ್ನು ಪೂರ್ತಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

Optical Illusion: ಮೋಡ, ಕೆಂಬಣ್ಣದ ತುಟಿ; ಚಿತ್ರ ಕಂಡಾಕ್ಷಣ ನಿಮ್ಮ ಕಣ್ಣಿಗೆ ಗೋಚರಿಸಿದ್ದೇನು; ವ್ಯಕ್ತಿತ್ವವನ್ನು ತಿಳಿಸಲಿದೆ ಈ ಚಿತ್ರ

ಸೂರ್ಯಾಸ್ತದ ಛಾಯೆ ಹೊಂದಿರುವ ಆ ಆಸಕ್ತಿದಾಯಕ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ನಿಮ್ಮ ಜೀವನದಲ್ಲಿರುವ ವ್ಯಕ್ತಿಗಳು ಹಾಗೂ ನೀವು ಆಶಾವಾದಿಗಳೋ ಅಥವಾ ನಿರಾಶಾವಾದಿಗಳೋ ಎಂಬುದನ್ನು ತಿಳಿಸಲಿದೆ. ಆಪ್ಟಿಕಲ್‌ ಇಲ್ಯೂಷನ್‌ ತಜ್ಞ ಮಿಯಾ ಯಿಲಿನ್‌ ಟಿಕ್‌ಟಾಕ್‌ ವಿಡಿಯೊದಲ್ಲಿ ಈ ವಿಲಕ್ಷಣ ಆಪ್ಟಿಕಲ್‌ ಇಮೇಜ್‌ ಅನ್ನು ಹಂಚಿಕೊಂಡಿದ್ದಾರೆ. ಈ ಸಮುದ್ರ, ಸೂರ್ಯಾಸ್ತ, ರಂಗೇರಿರುವ ಬಾನು ಈ ನಡುವೆ ಒಂದು ತುಟಿಯಾಕಾರ ಚಿತ್ರದಲ್ಲಿ ಕಾಣಬಹುದು. ಈ ಚಿತ್ರವನ್ನು ತಕ್ಷಣಕ್ಕೆ ಕಂಡಾಗ ನಿಮಗೆ ಕೆಂಬಣ್ಣದ ತುಟಿ ಅಥವಾ ಮೋಡ.. ಮೊದಲು ಏನು ಕಾಣಿಸಿತು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವು ಅವಲಂಬಿತವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ