logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಯಾವ ಕಪ್‌ನಲ್ಲಿ ಮೊದಲು ಟೀ ತುಂಬುತ್ತೆ, ನೀವು ಬುದ್ಧಿವಂತರಾದ್ರೆ 7 ಸೆಕೆಂಡ್ ಒಳಗೆ ಉತ್ತರ ಹೇಳಿ

Brain Teaser: ಯಾವ ಕಪ್‌ನಲ್ಲಿ ಮೊದಲು ಟೀ ತುಂಬುತ್ತೆ, ನೀವು ಬುದ್ಧಿವಂತರಾದ್ರೆ 7 ಸೆಕೆಂಡ್ ಒಳಗೆ ಉತ್ತರ ಹೇಳಿ

Reshma HT Kannada

Oct 24, 2024 01:00 PM IST

google News

ಬ್ರೈನ್ ಟೀಸರ್

    • ನಿಮ್ಮ ಮೆದುಳಿಗೆ ಸವಾಲು ಹಾಕುವಂತಹ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ. ಇದರಲ್ಲಿ ಮಗ್‌ನಿಂದ ಟೀ ಸುರಿಯಲಾಗುತ್ತಿದ್ದು, ಕೆಳಗಡೆ ನಾಲ್ಕು ಕಪ್‌ಗಳನ್ನ ಇರಿಸಲಾಗಿದೆ. ಇದಕ್ಕೆ ವಿವಿಧ ಮಾರ್ಗಗಳನ್ನು ಜೋಡಿಸಲಾಗಿದೆ. ಇದರಲ್ಲಿ ಯಾವ ಕಪ್‌ಗೆ ಮೊದಲು ಟೀ ತುಂಬುತ್ತೆ ಎಂದು ನೀವು ಹೇಳಬೇಕು. 7 ಸೆಕೆಂಡ್‌ನಲ್ಲಿ ಉತ್ತರ ಹೇಳುವುದು ನಿಮಗಿರುವ ಸವಾಲು.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳು ನೋಡಿದ ತಕ್ಷಣ ಗಮನ ಸೆಳೆಯುತ್ತವೆ. ಇದೇನಪ್ಪಾ ಹೀಗಿದೆ ಎಂದೆನಿಸುವ ಚಿತ್ರಗಳು ನಮ್ಮ ಮೆದುಳಿಗೆ ಸವಾಲು ಹಾಕುವುದು ಸುಳ್ಳಲ್ಲ. ಈ ಚಿತ್ರಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭದ ಮಾತಲ್ಲ. ನಮ್ಮ ಮೆದುಳು ಸಾಕಷ್ಟು ಚುರುಕಾಗಿದ್ದರಷ್ಟೇ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಸಾಕಷ್ಟು ಬುದ್ಧಿ ಉಪಯೋಗಿಸಿ ಇದಕ್ಕೆ ಉತ್ತರ ಹೇಳಬೇಕಾಗುತ್ತದೆ.

ಇಂದಿನ ಚಿತ್ರದಲ್ಲಿ ಮಗ್‌ ಹಾಗೂ ಟೀ ಕಪ್‌ಗಳಿವೆ. ಮಗ್‌ನಿಂದ ಟೀ ಹಾಕಲಾಗುತ್ತಿದ್ದು ಅದರಲ್ಲಿ ಕೆಲವು ಮಾರ್ಗಗಳನ್ನು ಜೋಡಿಸಲಾಗಿದೆ. ಕೆಳಗಡೆ ನಾಲ್ಕು ಕಪ್‌ಗಳನ್ನು ಇರಿಸಲಾಗಿದೆ. ಹಾಗಾದರೆ ಈ ಕಪ್‌ನಲ್ಲಿ ಯಾವುದಕ್ಕೆ ಮೊದಲು ಟೀ ತುಂಬುತ್ತದೆ ಎಂಬುದನ್ನು ನೀವು ಹೇಳಬೇಕು, ನಿಮಗಿರುವುದು ಕೇವಲ 7 ಸೆಕೆಂಡ್‌ ಸಮಯಗಳು. ಈ ನಾಲ್ಕು ಕಪ್‌ಗಳಲ್ಲಿ ಯಾವ ಕಪ್ ಮೊದಲು ತುಂಬುತ್ತದೆ ಎಂಬುದನ್ನು ಹೇಳಲು ನಿಮ್ಮಿಂದ ಸಾಧ್ಯವೇ ನೋಡಿ. ಈ ಪ್ರಶ್ನೆಗೆ ಐಕ್ಯೂ ಮಟ್ಟ 125ಕ್ಕಿಂತ ಹೆಚ್ಚಿದ್ದರಷ್ಟೇ ಉತ್ತರ ಹೇಳಲು ಸಾಧ್ಯವಂತೆ, ಹಾಗಾದರೆ ನಿಮ್ಮ ಐಕ್ಯೂ ಲೆವೆಲ್ ಹೇಗಿದೆ ಪರೀಕ್ಷೆ ಮಾಡಿ.

ಈ ಬ್ರೈನ್ ಟೀಸರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕಾಮೆಂಟ್ ಮಾಡುವ ಮೂಲಕ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಚಿತ್ರವನ್ನು ಸರಿಯಾಗಿ ಗಮನಿಸಿದರೆ ಮಾತ್ರ ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವಾಗುತ್ತದೆ. ಯಾಕೆಂದರೆ ಟೀ ನೇರವಾಗಿ ಯಾವ ಕಪ್‌ಗೂ ಬೀಳುತ್ತಿಲ್ಲ, ಆದರೆ ಟೀ ಸಾಗುವ ಮಾರ್ಗಗಳನ್ನು ಸರಿಯಾಗಿ ಗಮನಿಸಿ. ಆಗ ಯಾವ ಕಪ್‌ಗೆ ಟೀ ತುಂಬುತ್ತಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ.

ಇಂತಹ ಬ್ರೈನ್ ಟೀಸರ್‌ಗಳು ನಿಮ್ಮ ಯೋಚನಾಶಕ್ತಿಯನ್ನು ವೃದ್ಧಿಸುತ್ತವೆ. ನಿಮ್ಮಲ್ಲಿ ಗಮನಿಸುವ ಸಾಮರ್ಥ್ಯವನ್ನು ಬೆಳೆಸುತ್ತವೆ. ಏಕಾಗ್ರತೆ ಹೆಚ್ಚಿಸುವ ಜೊತೆಗೆ ಸಮಸ್ಯೆ ಪರಿಹರಿಸುವ ಗುಣವನ್ನು ಬೆಳೆಸುತ್ತವೆ. ನಿಮಗೆ ಬೇಸರವಾಗುತ್ತಿದೆ ಎಂದೆನಿಸಿದಾಗ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿ, ಇದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ ಬೇಸರವೂ ಕಳೆಯುತ್ತದೆ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: 4+4=8, 6+6=24 ಆದ್ರೆ 9+9= ಎಷ್ಟು? ಈ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ; ಇದಕ್ಕೆ ಉತ್ತರ ಹೇಳಲು ಪ್ರಯತ್ನಿಸಿ

ಗಣಿತದಲ್ಲಿ ಎಕ್ಸ್‌ಪರ್ಟ್‌ ಅನ್ನೋರು ಕೂಡ ಒಮ್ಮೆ ಮೆದುಳು ಕೆರೆದುಕೊಳ್ಳುವ ಹಾಗೆ ಮಾಡುವ ಪಜಲ್‌ವೊಂದು ಇಲ್ಲಿದೆ. ಇದರಲ್ಲಿ ಇರುವುದು ಸುಲಭದ ಕೂಡಿಸುವ ಲೆಕ್ಕಾಚಾರ, ಆದ್ರೂ ಇಲ್ಲಿ 4 + 4 = 8 ಆದ್ರೆ 6+6= 12 ಖಂಡಿತ ಆಗೊಲ್ಲ. ಈಗ 9+9= ಎಷ್ಟು ಎಂದು ಕಂಡು ಹಿಡಿಯಬೇಕಾಗಿರುವುದು ನಿಮಗಿರುವ ಸವಾಲು.

Brain Teaser: ಶೇ 97ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ, ಟ್ರೈ ಮಾಡಿ

ಇಲ್ಲೊಂದು ಗಣಿತದ ಸೂತ್ರವಿದ್ದು, ಇದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ಉತ್ತರ ಹೇಳಲು ಶೇ 97ರಷ್ಟು ಮಂದಿಗೆ ಸಾಧ್ಯವಾಗಿಲ್ಲ. ಯಾಕೆಂದರೆ ಇಲ್ಲಿ 3+6=21 ಆದ್ರೆ 5+8 ಎಷ್ಟು ಎಂದು ನೀವು ಕಂಡುಹಿಡಿಯಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ