logo
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಪಕ್ಷಿ, ಕುದುರೆ ನಿಮಗೆ ತಕ್ಷಣಕ್ಕೆ ಕಾಣಿಸಿದ್ದೇನು; ನಿಮ್ಮ ಮನೋಭಾವ ಹೇಗೆ ಎಂದು ತಿಳಿಸುತ್ತೆ ಈ ಚಿತ್ರ

Optical Illusion: ಪಕ್ಷಿ, ಕುದುರೆ ನಿಮಗೆ ತಕ್ಷಣಕ್ಕೆ ಕಾಣಿಸಿದ್ದೇನು; ನಿಮ್ಮ ಮನೋಭಾವ ಹೇಗೆ ಎಂದು ತಿಳಿಸುತ್ತೆ ಈ ಚಿತ್ರ

Reshma HT Kannada

Dec 03, 2023 08:49 PM IST

google News

ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು?

    • ಇಲ್ಲಿರುವ ಆಪ್ಟಿಕಲ್‌ ಇಲ್ಯೂಷನ್‌ನಲ್ಲಿ ಪಕ್ಷಿ ಹಾಗೂ ಕುದುರೆ ಎರಡೂ ಕಾಣಿಸುತ್ತವೆ. ಚಿತ್ರ ಕಂಡಾಕ್ಷಣ ನಿಮಗೆ ಮೊದಲು ಯಾವುದು ಕಾಣಿಸುತ್ತದೆ ಅದು ನಿಮ್ಮ ವ್ಯಕ್ತಿತ್ವವಾಗಿರುತ್ತದೆ. ಹಾಗಾದರೆ ಚಿತ್ರ ನೋಡುವ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ. 
ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು?
ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು?

ಮೆದುಳಿಗೆ ಮೋಜು ನೀಡುವ ಆಪ್ಟಿಕಲ್‌ ಇಲ್ಯೂಷನ್‌ಗಳು ಮನಸ್ಸಿಗೆ ಖುಷಿ ನೀಡುತ್ತವೆ. ಇದು ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಹಾಗೂ ನಮ್ಮ ವ್ಯಕ್ತಿತ್ವ ಎಂಥದ್ದು ಎಂಬ ಪರೀಕ್ಷೆಯನ್ನು ಮಾಡುವ ಗುಣವನ್ನೂ ಹೊಂದಿದೆ. ಬ್ರೈಟ್‌ ಸೈಡ್‌ ಎಂಬ ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಹಂಚಿಕೊಳ್ಳಲಾದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಆಸಕ್ತಿ ಮೂಡಿಸುವಂತಿದೆ. ಇದು ಪ್ರೀತಿ ಹಾಗೂ ಜಗಳದ ಬಗ್ಗೆ ನಿಮ್ಮ ಮನೋಭಾವದ ಬಗ್ಗೆ ಈ ಆಪ್ಟಿಕಲ್‌ ಇಲ್ಯೂಷನ್‌ ತಿಳಿಸುತ್ತದೆ.

ಈ ಚಿತ್ರದಲ್ಲಿ ಮೇಲ್ನೋಟಕ್ಕೆ ಎರಡು ಪಕ್ಷಿಗಳು ಕೊಂಬೆ ಮೇಲೆ ಕುಳಿತಿರುವಂತೆ ಕಾಣುತ್ತದೆ. ಆದರೆ ಈ ಚಿತ್ರವನ್ನು ಗಮನವಿಟ್ಟು ನೋಡಿದಾಗ ಕುದುರೆಯೊಂದು ಕುದುರೆಯೊಂದು ಪಕ್ಷಿಗಳ ಕೆಳಭಾಗದಲ್ಲಿ ಇರುವುದನ್ನು ಗಮನಿಸಬಹುದಾಗಿದೆ. ಈ ಚಿತ್ರದಲ್ಲಿ ಎರಡು ಅಂಶಗಳು ಭಿನ್ನವಾದ ಅರ್ಥವನ್ನು ಹೊಂದಿದೆ. ಇದು ನಿಮ್ಮ ವ್ಯಕ್ತಿತ್ವದ ಒಳಾರ್ಥವನ್ನು ಪರಿಚಯಿಸುತ್ತದೆ.

ಮೊದಲ ಬಾರಿಗೆ ನಿಮಗೆ ಎರಡು ಪಕ್ಷಿಗಳು ಕಂಡರೆ ನೀವು ನೇರ ಸ್ವಭಾವದ ವ್ಯಕ್ತಿಗಳು ಎಂದರ್ಥ. ನಿಮ್ಮ ಭಾವನೆಗಳ ಬಗ್ಗೆ ತೆರೆದುಕೊಳ್ಳಲು ಆರಂಭಿಸಿದರೆ ನಿಮ್ಮ ಎಲ್ಲಾ ಭಾವನೆಗಳನ್ನು ಅಂಜಿಕೆಯಿಲ್ಲದೆ ಇತರರೊಂದಿಗೆ ಹಂಚಿಕೊಳ್ಳುತ್ತೀರಿ. ಜೀವನದ ಬಗ್ಗೆ ನಿಮ್ಮ ಗುರಿಗಳು ನೇರವಾಗಿರುತ್ತವೆ. ನಿಮ್ಮ ಗುರಿಗಳ ಮೇಲೆ ನೀವು ಹೆಚ್ಚು ಗಮನ ಹರಿಸುತ್ತೀರಿ. ಪ್ರೀತಿಯ ವಿಚಾರದಲ್ಲಿ ನೀವು ಒಂದು ದಾಪುಗಾಲು ಮುಂದೆ ಇರುತ್ತೀರಿ. ಪ್ರೀತಿಯ ಬಗ್ಗೆ ಯಾರಿಗೂ ಐಡಿಯಾಗಳನ್ನು ಕೊಡುವುದಿಲ್ಲ.

ನಿಮಗೆ ಚಿತ್ರದಲ್ಲಿ ಕುದುರೆ ಕಂಡೆ ನೀವು ನಿಮ್ಮ ದೃಷ್ಟಿಕೋನದ ಬಗ್ಗೆ ಹೆಚ್ಚು ಗಮನ ಹರಿಸುವವರಾಗಿರುತ್ತೀರಿ. ನೀವು ಸುಮ್ಮ ಸುಮ್ಮನೆ ಜಗಳವಾಡಲು ಇಷ್ಟಪಡುವವರಲ್ಲ. ಆರ್ಗ್ಯುಮೆಂಟ್‌ ಬದಲು ಶಾಂತವಾಗಿ ಇರಲು ಇಷ್ಟಪಡುತ್ತೀರಿ. ಇದು ನಿಮ್ಮನ್ನು ಸುಮ್ಮ ಸುಮ್ಮನೆ ಇಲ್ಲದ ರಗಳೆಗಳಿಂದ ದೂರ ಇರಲು ಸಹಾಯ ಮಾಡುತ್ತದೆ. ಇದು ಕೆಲವೊಂದು ಅವಕಾಶಗಳು ನಿಮ್ಮ ಕೈ ತಪ್ಪಿ ಹೋಗಲು ಕಾರಣವಾಗಬಹುದು.

ಈ ನಿಮಗೆ ನಿಮ್ಮ ವ್ಯಕ್ತಿತ್ವ ಎಂಥದ್ದು ಎಂಬುದು ಅರಿವಾಯ್ತು ಅಲ್ವಾ? ಒಟ್ಟಾರೆ ಹೇಳಬೇಕು ಅಂದ್ರೆ ಆಪ್ಟಿಕಲ್‌ ಇಲ್ಯೂಷನ್‌ಗಳು ನಿಮ್ಮ ಮನಸ್ಸಿಗೆ ಖುಷಿ ನೀಡುವುದರಲ್ಲಿ ಎರಡು ಮಾತಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ