logo
ಕನ್ನಡ ಸುದ್ದಿ  /  ಜೀವನಶೈಲಿ  /  ಏರ್‌ಪೋರ್ಟ್‌ನಿಂದ ಬೆಂಗಳೂರು ನಗರದವರೆಗೆ ಬಿಎಂಟಿಸಿಯಲ್ಲಿ ಏಕಾಂಗಿ ಪಯಣ, ಅದ್ಭುತ ಅನುಭವ ಎಂದ ಪ್ರಯಾಣಿಕ; ಫೋಟೊ ವೈರಲ್‌

ಏರ್‌ಪೋರ್ಟ್‌ನಿಂದ ಬೆಂಗಳೂರು ನಗರದವರೆಗೆ ಬಿಎಂಟಿಸಿಯಲ್ಲಿ ಏಕಾಂಗಿ ಪಯಣ, ಅದ್ಭುತ ಅನುಭವ ಎಂದ ಪ್ರಯಾಣಿಕ; ಫೋಟೊ ವೈರಲ್‌

Reshma HT Kannada

Dec 15, 2023 04:59 PM IST

google News

ಏರ್‌ಪೋರ್ಟ್‌ನಿಂದ ಬೆಂಗಳೂರಿನವರೆಗೆ ಬಿಎಂಟಿಸಿಯಲ್ಲಿ ಏಕಾಂಗಿಯಾಗಿ ಪಯಣಿಸಿದ ಹರಿಹರನ್‌ ಸಿಬ್ಬಂದಿ ಜೊತೆ ತೆಗೆಸಿಕೊಂಡ ಫೋಟೊ

    • ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರದವರೆಗೆ ಏಕಾಂಗಿಯಾಗಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ ವ್ಯಕ್ತಿ, ಬಿಎಂಟಿಸಿಯನ್ನು ಹಾಡಿ ಹೊಗಳಿದ್ದಾರೆ. ಮಾತ್ರವಲ್ಲ ತಮ್ಮ ಅನುಭವವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಫೋಟೊ ಕೂಡ ಶೇರ್‌ ಮಾಡಿದ್ದಾರೆ. ಇವರ ಪೋಸ್ಟ್‌ ಈಗ ವೈರಲ್‌ ಆಗಿದ್ದು, ಹಲವರು ಕಾಮೆಂಟ್‌ ಮಾಡಿ ಬಿಎಂಟಿಸಿಗೆ ಮೆಚ್ಚುಗೆ ಸೂಚಿಸಿದ್ದಾರೆ. 
ಏರ್‌ಪೋರ್ಟ್‌ನಿಂದ ಬೆಂಗಳೂರಿನವರೆಗೆ ಬಿಎಂಟಿಸಿಯಲ್ಲಿ ಏಕಾಂಗಿಯಾಗಿ ಪಯಣಿಸಿದ ಹರಿಹರನ್‌ ಸಿಬ್ಬಂದಿ ಜೊತೆ ತೆಗೆಸಿಕೊಂಡ ಫೋಟೊ
ಏರ್‌ಪೋರ್ಟ್‌ನಿಂದ ಬೆಂಗಳೂರಿನವರೆಗೆ ಬಿಎಂಟಿಸಿಯಲ್ಲಿ ಏಕಾಂಗಿಯಾಗಿ ಪಯಣಿಸಿದ ಹರಿಹರನ್‌ ಸಿಬ್ಬಂದಿ ಜೊತೆ ತೆಗೆಸಿಕೊಂಡ ಫೋಟೊ

ಬೆಂಗಳೂರಿನಲ್ಲಿ ಬದುಕುವವರಿಗೆ ಹೊಸ ಹೊಸ ಅನುಭವಗಳು ಆಗುತ್ತಲೇ ಇರುತ್ತವೆ. ಈ ಅನುಭವಗಳು ಮನಸ್ಸಿಗೆ ಖುಷಿ ನೀಡುವುದು ಸುಳ್ಳಲ್ಲ. ಇಲ್ಲೊಬ್ಬ ವ್ಯಕ್ತಿ ಇಂತಥದ್ದೇ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂಥದ್ದೇನಪ್ಪಾ ಆಗಿದೆ ಅಂದುಕೊಳ್ಳುತ್ತಿದ್ದೀರಾ, ಖಂಡಿತ ವಿಷಯ ಇದೆ. ಮುಂದೆ ಓದಿ.

ಬೆಂಗಳೂರು ವಿಮಾನ ನಿಲ್ದಾಣದಿಂದ ನಗರಕ್ಕೆ ಹಿಂದಿರುಗುತ್ತಿದ್ದ ಬಿಎಂಟಿಸಿ ಬಸ್‌ವೊಂದರಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡಿದ ವ್ಯಕ್ತಿಯ ಕಥೆಯಿದು. ಡ್ರೈವರ್‌ ಕಂಡಕ್ಟರ್‌ ಹೊರತು ಪಡಿಸಿದರೆ ಇಡೀ ಬಸ್ಸಿಗೆ ಈ ವ್ಯಕ್ತಿಯೊಬ್ಬನೇ ಪ್ರಯಾಣಿಕ. ಇದು ನಿಜಕ್ಕೂ ಒಂಥರಾ ವಿಶಿಷ್ಟ ಅನುಭವ.

ಇದು ಹರಿಹರನ್‌ ಎಸ್‌. ಎಸ್‌. ಅವರ ಸ್ಟೋರಿ. ಹರಿಹರನ್‌ ತಮ್ಮ ಏಕಾಂಗಿ ಬಿಎಂಟಿಸಿ ಪಯಣದ ಅನುಭವವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಒಬ್ಬನೇ ಒಬ್ಬ ವ್ಯಕ್ತಿಗಾಗಿ ಬಸ್‌ ಓಡಿಸಿದ ಬಿಎಂಟಿಸಿ ಸಿಬ್ಬಂದಿಯನ್ನು ಹಲವರು ಕಾಮೆಂಟ್‌ ಮೂಲಕ ಶ್ಲಾಘಿಸಿದ್ದಾರೆ.

ʼನಾನು ಏರ್‌ಪೋರ್ಟ್‌ನಿಂದ ಮರಳಿ ಬರುತ್ತಿದ್ದೆ. ಈ ಇಬ್ಬರು ಮಹನೀಯರು ನನಗಾಗಿ ಬಸ್‌ ಓಡಿಸಿದ್ದಾರೆ. ಒಬ್ಬ ವ್ಯಕ್ತಿಗಾಗಿ ಬಸ್‌ ಓಡಿಸುವ ಬಿಎಂಟಿಸಿ ಸಿಬ್ಬಂದಿಯ ಸಮಯ ಪರಿಪಾಲನೆ ನಿಜಕ್ಕೂ ನನಗೆ ಇಷ್ಟವಾಯ್ತು. ಅವರು ನಂಗೆ ಒಳ್ಳೆ ಕಂಪನಿ ಕೊಟ್ರು. ನನ್ನನ್ನು ಸುರಕ್ಷಿತವಾಗಿ ಮನೆ ತಲುಪುವಂತೆ ಮಾಡಿದ್ರು. ಟ್ರಾಫಿಕ್‌ ತುಂಬಿದ ಈ ನಗರಿಯಲ್ಲಿ ಒಬ್ಬನೇ ಬಿಎಂಟಿಸಿಯಲ್ಲಿ ಬಂದಿದ್ದು ಒಂಥರ ವಿಚಿತ್ರ ಎನ್ನಿಸಿತುʼ ಎಂದು ಹರಿಹರನ್‌ ಬರೆದುಕೊಂಡಿದ್ದಾರೆ. ಅಲ್ಲದೆ ಹರಿಹರನ್‌ ಖಾಲಿ ಬಸ್ಸಿನಲ್ಲಿ ಚಾಲಕ, ನಿರ್ವಾಹಕರ ಜೊತೆಗಿರುವ ಫೋಟೊ ಹಂಚಿಕೊಂಡಿದ್ದಾರೆ.

ಡಿಸೆಂಬರ್‌ 11 ರಂದು ಈ ಪೋಸ್ಟ್‌ ಹಂಚಿಕೊಂಡಿದ್ದಾರೆ ಹರಿಹರನ್‌. ಈ ಪೋಸ್ಟ್‌ ಹಂಚಿಕೊಂಡಾಗಿನಿಂದ ಇಲ್ಲಿಯವರೆಗೆ 500 ಮಂದಿ ವೀಕ್ಷಿಸಿದ್ದಾರೆ. ಅವರು ಈ ಪೋಸ್ಟ್‌ ಅನ್ನು ಲೈಕ್‌ ಮಾಡಿದ್ದಾರೆ. ಕೆಲವರು ಕಾಮೆಂಟ್‌ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಬೆಂಗಳೂರು ಏರ್‌ಪೋರ್ಟ್‌ ಹಾಗೂ ಬೆಂಗಳೂರು ನಗರದ ನಡುವೆ ಸಂಚರಿಸುವ ಬಸ್‌ನಲ್ಲಿ ಸಿಬ್ಬಂದಿ ಸುಸಂಸ್ಕೃತರು ಹಾಗೂ ಪ್ರಯಾಣಿಕರಿಗೆ ತುಂಬಾ ಸಹಾಯ ಮಾಡುತ್ತದೆʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಇದೊಂದು ನಮ್ಮ ಬೆಂಗಳೂರು ವಿಷಯʼ ಎಂದು ಮೆಚ್ಚುಗೆಯ ಕಾಮೆಂಟ್‌ ಮಾಡಿದ್ದಾರೆ.

ʼನಿಜ ಅವರು ಬಹಳ ಸಮಯಪ್ರಜ್ಞೆವುಳ್ಳವರು. ನಾನು ಮೆಜೆಸ್ಟಿಕ್‌ ಬಸ್‌ ಟರ್ಮಿನಲ್‌ ಪ್ರಯಾಣ ಮಾಡಿದ್ದೆ. ಒಬ್ಬನೇ ಒಬ್ಬ ಪ್ರಯಾಣಿಕನಾಗಿ ಬಸ್‌ ಓಡುವುದು ಎಂದರೆ ಅವರ ವೃತ್ತಿಧರ್ಮವನ್ನು ಎತ್ತಿ ತೋರಿಸುತ್ತದೆ ಎಂದು ಮೂರನೇ ವ್ಯಕ್ತಿ ಪೋಸ್ಟ್‌ ಮಾಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ