logo
ಕನ್ನಡ ಸುದ್ದಿ  /  ಜೀವನಶೈಲಿ  /  Viral: ಪಾರ್ಲೆ-ಜಿ ಬಿಸ್ಕತ್‌ನಿಂದ ಆಮ್ಲೇಟ್‌ ತಯಾರಿಸಿದ ವ್ಯಾಪಾರಿ; ಮೊಯೆ ಮೊಯೆ ಎಂದು ಛೇಡಿಸಿದ್ರು ನೆಟ್ಟಿಗರು; ವಿಡಿಯೊ ವೈರಲ್‌

Viral: ಪಾರ್ಲೆ-ಜಿ ಬಿಸ್ಕತ್‌ನಿಂದ ಆಮ್ಲೇಟ್‌ ತಯಾರಿಸಿದ ವ್ಯಾಪಾರಿ; ಮೊಯೆ ಮೊಯೆ ಎಂದು ಛೇಡಿಸಿದ್ರು ನೆಟ್ಟಿಗರು; ವಿಡಿಯೊ ವೈರಲ್‌

Reshma HT Kannada

Jan 10, 2024 12:56 PM IST

google News

ಪಾರ್ಲೆಜಿ ಬಿಸ್ಕತ್‌ ಆಮ್ಲೇಟ್‌ ತಯಾರಿಸುತ್ತಿರುವ ವ್ಯಾಪಾರಿ

    • ಇತ್ತೀಚೆಗೆ ಬೀದಿ ಬದಿ ವ್ಯಾಪಾರಿಯೊಬ್ಬ ಹೊಸ ರೆಸಿಪಿಯೊಂದನ್ನು ಟ್ರೈ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಈ ರೆಸಿಪಿ ನೋಡಿದವರು, ಭಗವಂತಾ ಇದನ್ನೆಲ್ಲಾ ನೋಡೋಕೆ ನಮಗೆ ಇನ್ನೂ ಕಣ್ಣು ಕೊಟ್ಟಿದ್ದೀಯಾ ಎಂದು ಕೆಲವರು ಕೇಳಿದ್ರೆ, ಇನ್ನೂ ಕೆಲವರು ಮೊಯೇ ಮೊಯೇ ಹಾಡು ಹೇಳಿದ್ದಾರೆ. ಹಾಗಾದ್ರೆ ಈ ರೆಸಿಪಿ ಆದ್ರೂ ಏನು?
ಪಾರ್ಲೆಜಿ ಬಿಸ್ಕತ್‌ ಆಮ್ಲೇಟ್‌ ತಯಾರಿಸುತ್ತಿರುವ ವ್ಯಾಪಾರಿ
ಪಾರ್ಲೆಜಿ ಬಿಸ್ಕತ್‌ ಆಮ್ಲೇಟ್‌ ತಯಾರಿಸುತ್ತಿರುವ ವ್ಯಾಪಾರಿ

ಜಗತ್ತಿನಲ್ಲಿ ಬಹುತೇಕರು ಇಷ್ಟಪಟ್ಟು ತಿನ್ನುವ ಖಾದ್ಯ ಆಮ್ಲೇಟ್‌. ಸಿಂಪಲ್‌ ಆಗಿ ಬಹಳ ಬೇಗ ಮಾಡಬಹುದಾದ ಈ ಆಮ್ಲೇಟ್‌ ಅನ್ನು ಬ್ರೇಕ್‌ಫಾಸ್ಟ್‌, ಲಂಚ್‌, ಡಿನ್ನರ್‌ ಎಲ್ಲಾ ಸಮಯದಲ್ಲೂ ತಿನ್ನುತ್ತಾರೆ. ಅದಕ್ಕೆ ತರಕಾರಿ, ಉಪ್ಪು ಖಾರ ಸೇರಿಸಿ ತಯಾರಿಸಿ ರುಚಿ ಹೆಚ್ಚಿಸಿಕೊಳ್ಳಬಹುದು. ಆಮ್ಲೇಟ್‌ ಅನ್ನು ಹಲವರು ಹಲವು ವಿಧಗಳಲ್ಲಿ ತಯಾರಿಸುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಾಪಾರಿ ಮಾಡಿರುವ ಆಮ್ಲೇಟ್‌ ನೋಡಿದ್ರೆ ಬಹುಶಃ ನಿಮಗೆ ವಾಕರಿಕೆ ಬರಬಹುದು. ಕೆಲವರಿಗೆ ಇದೇನಪ್ಪಾ ಒಂದ್‌ ಸರಿ ಟ್ರೈ ಮಾಡ್ಬೇಕು ಅಂತಾನೂ ಅನ್ನಿಸಬಹುದು. ಅದೇನಪ್ಪಾ ಅಂಥದ್ದು ಅಂತೀರಾ. ಅದೇ ನೋಡಿ ಪಾರ್ಲೆ-ಜಿ ಬಿಸ್ಕತ್‌ ಆಮ್ಲೇಟ್‌. ಇಂತಹ ವಿಲಕ್ಷಣ ಕಾಂಬಿನೇಷನ್‌ನ ಆಮ್ಲೇಟ್‌ ತಯಾರಿಸುವ ವ್ಯಾಪಾರಿಯ ವಿಡಿಯೊ ಈಗ ವೈರಲ್‌ ಆಗಿದೆ.

foodb_unk ಎಂಬ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆ ಆಮ್ಲೇಟ್‌ ವ್ಯಾಪಾರಿ ಮೊದಲು ಮೊಟ್ಟೆಯನ್ನು ಒಡೆದು ಪಾತ್ರೆಯೊಂದಕ್ಕೆ ಹಾಕುತ್ತಾನೆ. ನಂತರ ಮಸಾಲೆ ಹಾಗೂ ಹೆಚ್ಚಿದ ತರಕಾರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಇದನ್ನು ಪ್ಯಾನ್‌ ಮೇಲೆ ಸುರಿಯುತ್ತಾನೆ. ನಂತರ ಆಮ್ಲೇಟ್‌ ಬೇಯಿಸಲು ಆರಂಭಿಸುತ್ತಾನೆ. ಆಮ್ಲೇಟ್‌ ಅರೆಬೆಂದ ನಂತರ ಪಾರ್ಲೆ-ಜಿ ಬಿಸ್ಕತ್‌ ತೆಗೆದುಕೊಂಡು ಆಮ್ಲೇಟ್‌ ಮೇಲೆ ಇರಿಸುತ್ತಾನೆ. ನಂತರ ಮಯೋನಿಸ್‌ ಜೊತೆ ಸಿಂಗರಿಸಿ ತಿನ್ನಲು ಕೊಡುತ್ತಾನೆ.

ಇದನ್ನೂ ಓದಿ: Viral: ಕಾರ್ಪೋರೇಟ್‌ ಜಗತ್ತಿಗೆ ಬಾಯ್‌ ಹೇಳಿ, ವಡಾ ಪಾವ್‌ಗೆ ಹಾಯ್‌ ಎಂದ ಬೆಂಗಳೂರು ಯುವಕ; ನಿಮ್‌ ಲೈಫ್‌ ಸೂಪರ್‌ ಗುರು ಅಂದ್ರು ನೆಟ್ಟಿಗರು

ಕೆಲವು ದಿನಗಳ ಹಿಂದೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ ಮಾಡಿದಾಗಿನಿಂದ ಇಲ್ಲಿಯವರೆಗೆ 14 ಮಿಲಿಯನ್‌ ಮಂದಿ ಈ ವಿಡಿಯೊ ವೀಕ್ಷಿಸಿದ್ದಾರೆ. ಹಲವರು ಲೈಕ್‌, ಕಾಮೆಂಟ್‌ ಮಾಡಿದ್ದಾರೆ.

ವಿಡಿಯೊಗೆ ಜನರ ಪ್ರತಿಕ್ರಿಯೆ ಹೀಗಿದೆ.

ʼಈ ಮನುಷ್ಯನಿಗೆ ಎಗ್‌ ಬ್ಯಾನ್‌ ಮಾಡ್ಬೇಕುʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಇದೇನು ಅಸಹ್ಯʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಇವನಿಗೆ ಖಂಡಿತ ಶಿಕ್ಷೆ ಆಗಬೇಕುʼ ಅಂತ ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ʼಮೊಯೆ ಮೊಯೆ ಆಮ್ಲೇಟ್‌ʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಸರಿ ನಿಮ್ಗೂ ಏನಾದ್ರೂ ಪಾರ್ಲೆ ಜಿ ಆಮ್ಲೇಟ್‌ ತಿನ್‌ಬೇಕು ಅನ್ನಿದ್ರೆ ಈ ವಿಡಿಯೊ ನೋಡಿ ಟ್ರೈ ಮಾಡಿ, ಹೊಸ ರೆಸಿಪಿ ಕಲಿತ ಹಾಗೋ ಆಗುತ್ತೆ. ರೆಸಿಪಿ ಚೆನ್ನಾಗಿಲ್ಲ ಅಂದ್ರೆ ನಮ್ಮನ್ನ ಮಾತ್ರ ಬೈಕೊಬೇಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ