logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಬುದ್ಧಿವಂತರಿಗಾಗಿ ಈ ಪ್ರಶ್ನೆ, ಚಿತ್ರದಲ್ಲಿ ಖಾಲಿ ಇರುವ ಜಾಗವನ್ನು ನೀವು ತುಂಬಿಸಬೇಕು, ನಿಮಗಿರೋದು 15 ಸೆಕೆಂಡ್ ಸಮಯ

Brain Teaser: ಬುದ್ಧಿವಂತರಿಗಾಗಿ ಈ ಪ್ರಶ್ನೆ, ಚಿತ್ರದಲ್ಲಿ ಖಾಲಿ ಇರುವ ಜಾಗವನ್ನು ನೀವು ತುಂಬಿಸಬೇಕು, ನಿಮಗಿರೋದು 15 ಸೆಕೆಂಡ್ ಸಮಯ

Reshma HT Kannada

Oct 25, 2024 06:25 PM IST

google News

ಬ್ರೈನ್ ಟೀಸರ್

    • ಮೆದುಳಿಗೆ ಕೆಲಸ ಕೊಡಬೇಕು ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಬಣ್ಣದ ಚೌಕವಿರುವ ಈ ಚಿತ್ರದಲ್ಲಿ ಒಂದು ಕಡೆ ಖಾಲಿ ಬಿಡಲಾಗಿದೆ, ಅಲ್ಲಿ ಯಾವ ಪ್ಯಾರ್ಟನ್ ಬರುತ್ತೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮಗಿರುವ 15 ಸೆಕೆಂಡ್ ಸಮಯ, ಟ್ರೈ ಮಾಡಿ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಸಂಜೆ ಹೊತ್ತಿಗೆ ಸುಮ್ಮನೆ ಕೂತು ಬೇಸರ ಅನ್ನಿಸ್ತಾ ಇದ್ರೆ ಇಲ್ಲೊಮ್ಮೆ ನೋಡಿ. ಇಲ್ಲಿರುವ ಬ್ರೈನ್ ಟೀಸರ್‌ಗೆ ನಿಮ್ಮ ಬೇಸರ ದೂರ ಮಾಡುತ್ತೆ. ಈ ಚಿತ್ರದಲ್ಲಿ ವಿವಿಧ ಬಣ್ಣದ ಬಾಕ್ಸ್‌ಗಳನ್ನ ಜೋಡಿಸಿಲಾಗಿದೆ. ಇದರಲ್ಲಿ ಒಂದು ಕಡೆ ಮಾತ್ರ 4 ಬಾಕ್ಸ್ ಖಾಲಿ ಇಡಲಾಗಿದೆ. ಈ ಖಾಲಿ ಇರುವ ಬಾಕ್ಸ್‌ನಲ್ಲಿ ಯಾವ ಪ್ಯಾರ್ಟನ್ ಬರಬೇಕು ಎಂಬದನ್ನು ನೀವು ಕಂಡುಹಿಡಿಯಬೇಕು.

ಇಂತಹ ಬ್ರೈನ್ ಟೀಸರ್ ಚಿತ್ರಗಳನ್ನು ಮೇಲ್ನೋಟಕ್ಕೆ ನೋಡಿದಾಗ ಉತ್ತರ ಕಂಡುಹಿಡಿಯುವುದು ಸುಲಭ ಎಂದು ನಿಮಗೆ ಅನ್ನಿಸಬಹುದು. ಆದರೆ ಇದಕ್ಕೆ ನಿಖರವಾದ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭದ ಮಾತಲ್ಲ. ಯಾಕೆಂದರೆ ನಾವು ಅಂದುಕೊಂಡ ಉತ್ತರ ಖಂಡಿತ ಅದಾಗಿರುವುದಿಲ್ಲ.

ಇಂದಿನ ಬ್ರೈನ್ ಟೀಸರ್‌ಗೆ ನೀವು ಕೇವಲ 15 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು, ಆ ಕಾರಣಕ್ಕೆ ಬುದ್ಧಿವಂತರಿಗೊಂದು ಪ್ರಶ್ನೆ ಎಂದು ಇಲ್ಲಿ ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ ನಾಲ್ಕು ಬಾಕ್ಸ್ ಖಾಲಿ ಇದ್ದು ಅಲ್ಲಿ ಯಾವ ಪ್ಯಾರ್ಟನ್ ಬರಬೇಕು ಎಂಬುದನ್ನು ನೀವು ಜೋಡಿಸಬೇಕು ಅಂದರೆ ಮನಸ್ಸಿನಲ್ಲೇ ಜೋಡಿಸಿ ಉತ್ತರ ಕಂಡುಕೊಳ್ಳಬೇಕು.

ಇಂತಹ ಬ್ರೈನ್ ಟೀಸರ್‌ಗಳು ಮೆದುಳಿಗೆ ಕೆಲಸ ಕೊಡುವ ಮೂಲಕ ನಮ್ಮನ್ನು ಒಂದಿಷ್ಟು ಹೊತ್ತು ಎಂಗೇಜ್ ಮಾಡುವುದು ಮಾತ್ರವಲ್ಲ, ಇದರಿಂದ ನಮ್ಮಲ್ಲಿ ಏಕಾಗ್ರತೆ ಹೆಚ್ಚುವಂತೆ ಮಾಡುತ್ತದೆ. ಇದು ನಮ್ಮಲ್ಲಿ ಯೋಚಿಸುವ ಶಕ್ತಿಯನ್ನು ವೃದ್ಧಿಸಿ ಸಮಸ್ಯೆ ಪರಿಹರಿಸುವ ಗುಣವನ್ನು ಬೆಳೆಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತಿದ್ದು, ಇದಕ್ಕೆ ಉತ್ತರ ಹೇಳುವ ಮೂಲಕ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡಿಕೊಳ್ಳಬಹುದು, ಮಾತ್ರವಲ್ಲ ನಿಮ್ಮ ಸ್ನೇಹಿತರು, ಆತ್ಮೀಯರ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡಬಹುದು.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದ್ಯಾ, ನಿಮಗಾಗಿ ಇಲ್ಲಿದೆ ಒಂದು ಚಾಲೆಂಜ್‌; ಚಿತ್ರದಲ್ಲಿರುವ ನಂಬರ್ ಎಷ್ಟು ಹೇಳಿ

ನಿಮ್ಮ ಕಣ್ಣು ತುಂಬಾನೇ ಶಾರ್ಪ್ ಇದೆ ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಎಕ್ಸ್‌ನಲ್ಲಿ ವೈರಲ್ ಆಗಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಟ್ರೈ ಮಾಡಿ. ಚಿತ್ರದಲ್ಲಿ ನಂಬರ್ ಯಾವುದು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ.

Brain Teaser: A+A=2, B+B=4, ಆದರೆ A+B*2= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಈ ಪಜಲ್‌ಗೆ 10 ಸೆಕೆಂಡ್‌ಗಳಲ್ಲಿ ಉತ್ತರ ಹೇಳಿ

ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಇಲ್ಲಿರುವ ಸುಲಭ ಗಣಿತಕ್ಕೆ ಉತ್ತರ ಹೇಳಲು ಸಾಧ್ಯವಾಗದೇ ಹಲವರು ತಲೆ ಕೆರೆದುಕೊಂಡಿದ್ದಾರೆ. ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಅಂತಾದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳು ಸಾಧ್ಯವೇ ಪ್ರಯತ್ನಿಸಿ. A+B*2= ಎಷ್ಟು ಎಂದು ನೀವು ಕಂಡುಹಿಡಿಯಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ