logo
ಕನ್ನಡ ಸುದ್ದಿ  /  ಜೀವನಶೈಲಿ  /  Viral Puzzle: ಗಣಿತ ಪ್ರೇಮಿಗಳೇ, ಇಲ್ಲಿದೆ ನಿಮಗೊಂದು ಹೊಸ ಪಜಲ್‌; ಮಳೆಗಾಲದಲ್ಲಿ ಮೆದುಳಿಗೆ ಒಂಚೂರು ಕೆಲಸ ಕೊಡಿ; ಪಜಲ್‌ ಬಿಡಿಸಿ

Viral Puzzle: ಗಣಿತ ಪ್ರೇಮಿಗಳೇ, ಇಲ್ಲಿದೆ ನಿಮಗೊಂದು ಹೊಸ ಪಜಲ್‌; ಮಳೆಗಾಲದಲ್ಲಿ ಮೆದುಳಿಗೆ ಒಂಚೂರು ಕೆಲಸ ಕೊಡಿ; ಪಜಲ್‌ ಬಿಡಿಸಿ

Reshma HT Kannada

Jul 04, 2023 10:52 AM IST

google News

ಈ ಗಣಿತದ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ?

    • Brain Teaser: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಗಣಿತದ ಪಜಲ್‌ಗಳು, ಬ್ರೈನ್‌ ಟೀಸರ್‌ಗಳು, ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಮೆದುಳಿಗೆ ಹುಳ ಬಿಡುವುದರಲ್ಲಿ ಸಂದೇಹವಿಲ್ಲ. ಇವು ಮೆದುಳು ಹಾಗೂ ಕಣ್ಣನ್ನು ಚುರುಕುಗೊಳಿಸುತ್ತವೆ. ಇಲ್ಲೊಂದು ಗಣಿತದ ಪಜಲ್‌ನ ಟೀಸರ್‌ ಇದೆ. ಇದು ನೋಡಲು ಸುಲಭವಾಗಿರುವಂತೆ ಕಂಡರು ತಲೆಗೆ ಹುಳ ಬಿಡುವುದರಲ್ಲಿ ಅನುಮಾನವಿಲ್ಲ.  
ಈ ಗಣಿತದ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ?
ಈ ಗಣಿತದ ಪಜಲ್‌ ಬಿಡಿಸಲು ನಿಮ್ಮಿಂದ ಸಾಧ್ಯವೇ?

ಇತ್ತೀಚೆಗೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌ ಎಲ್ಲಿ ನೋಡಿದರೂ ಬ್ರೈನ್‌ ಟೀಸರ್, ಗಣಿತ ಪಜಲ್‌ಗಳು ಹರಿದಾಡುತ್ತಿರುತ್ತವೆ. ಅಲ್ಲದೆ ಇವು ನಿಮ್ಮ ಮಂಡೆಬಿಸಿ ಮಾಡುವುದೂ ಹೌದು. ಇವು ಮೆದುಳನ್ನು ಹಿಡಿದಿಡುವ ಕೆಲಸ ಮಾಡುತ್ತವೆ. ಅವು ನಮ್ಮ ಯೋಚನಾಶಕ್ತಿಯ ಮಿತಿಯನ್ನು ಹೆಚ್ಚಿಸುತ್ತವೆ. ನಮ್ಮ ಮೆದುಳಿನ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬೇರೆಯದ್ದೇ ಮಾರ್ಗವನ್ನು ಅನುಸರಿಸಲು ಸಹಾಯ ಮಾಡುತ್ತವೆ. ನೀವು ಪಜಲ್‌ ಬಿಡಿಸಲು ಇಷ್ಟ ಪಡುವವರಾದರೆ ನಿಮಗಾಗಿ ಇಲ್ಲೊಂದು ಗಣಿತ ಪಜಲ್‌ ತಂದಿದ್ದೇವೆ.

ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ಪಜಲ್‌ ಅನ್ನು ಹಂಚಿಕೊಂಡಿದ್ದಾರೆ. ʼಪ್ರಶ್ನೆಯ ಜಾಗಕ್ಕೆ ನಿಮ್ಮ ಉತ್ತರವೇನು?ʼ ಎಂದು ಅವರು ಪ್ರಶ್ನೆ ಕೇಳಿದ್ದಾರೆ. 18+15=313, 14+12=326, 7+18=235, ಆದರೆ 10+40=? ಎಷ್ಟು ಎಂಬುದು ಪ್ರಶ್ನೆಯಾಗಿದೆ.

ಆಸಕ್ತಿದಾಯಕ ಮ್ಯಾಥ್ಸ್‌ ಪಜಲ್‌ ಇಲ್ಲಿದೆ

ಕೆಲವು ದಿನಗಳ ಹಿಂದೆ ಈ ಪೋಸ್ಟ್‌ ಅನ್ನು ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಹಲವರು ಈ ಪೋಸ್ಟ್‌ ಮೇಲೆ ಗಮನ ಹರಿಸಿದ್ದಾರೆ, ಮಾತ್ರವಲ್ಲ ಪಜಲ್‌ ಬಿಡಿಸಲು ಆಸಕ್ತಿ ತೋರಿದ್ದಾರೆ. ಇದಕ್ಕೆ ಹಲವರು ಲೈಕ್ಸ್‌ ಹಾಗೂ ಕಾಮೆಂಟ್ಸ್‌ ಮಾಡಿದ್ದಾರೆ.

ಪಜಲ್‌ ಬಿಡಿಸಿ, ಜನ ಉತ್ತರ ನೀಡಿದ್ದು ಹೀಗೆ:

ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಉತ್ತರವನ್ನು ವಿವರಿಸಿ ಬರೆದಿದ್ದು ಹೀಗೆ: 14+19=33=> ಮಧ್ಯದ ಸಂಖ್ಯೆ 1 ಸೇರಿಸಿ => 313,25+13=38 => ಮಧ್ಯದಲ್ಲಿ 2 ಸೇರಿಸಿ => 7+18=25 ಮಧ್ಯದಲ್ಲಿ 3 ಸೇರಿಸಿ =>235, 10 + 40= 50=>ಮಧ್ಯದಲ್ಲಿ 4 ಸೇರಿಸಿ => 540 ಎಂದು ಉತ್ತರವನ್ನು ಕಂಡುಕೊಂಡಿದ್ದಾರೆ. ಇನ್ನೂ ಹಲವರು 540 ಎಂದು ಉತ್ತರಿಸಿದ್ದಾರೆ. ನಿಮಗೇನ್ನನ್ನಿಸುತ್ತದೆ? ಉತ್ತರ 540 ಇರಬಹುದೇ? ನೀವು ಈ ಪಸಲ್‌ ಬಿಡಿಸಲು ಪ್ರಯತ್ನಿಸಿ.

ಇನ್ನಷ್ಟು ಪಜಲ್‌, ಬ್ರೈನ್‌ ಟೀಸರ್‌ಗಳು ಇಲ್ಲಿವೆ

Viral Brain Teaser: ಕ್ಯಾಲ್ಕುಲೇಟರ್ ಬಳಸದೇ 10 ಸೆಕೆಂಡ್‌ನಲ್ಲಿ ಈ ಗಣಿತದ ಪಜಲ್‌ ಬಿಡಿಸಲು ಸಾಧ್ಯವೇ; ನಿಮ್ಮ ಮೆದುಳಿಗಿಲ್ಲಿದೆ ಕಸರತ್ತು

Maths Puzzle: ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದು ನಿಮ್ಮ ಮೆದುಳನ್ನು ಕೊರೆಯುವುದು ಖಂಡಿತ. ನೀವು ಗಣಿತ ಪ್ರಿಯರು ಹೌದೇ ಎಂದಾದರೆ ಕ್ಯಾಲ್ಕುಲೇಟರ್ ಇಲ್ಲದೆ ಈ ಗಣಿತದ ಪಜಲ್‌ ಅನ್ನು ಬಿಡಿಸಬೇಕು. ಈ ಚಾಲೆಂಚ್‌ ಸ್ವೀಕರಿಸುತ್ತೀರಾ? ಹಾಗಾದರೆ ಮುಂದೆ ನೋಡಿ.

ಇಂದು ಭಾನುವಾರ, ಮಳೆಗಾಲ ಬೇರೆ ಹೊರಗಡೆ ಹೋಗಲು ಮಳೆ ಬಿಡುತ್ತಿಲ್ಲ, ಹಾಗಾಗಿ ಬೇಸರ ಕಾಡುತ್ತಿದ್ಯಾ? ಯಾವುದಾದರೂ ಆಸಕ್ತಿಕರ ಬ್ರೈನ್‌ ಟೀಸರ್‌ ಇದ್ದರೆ ಬಿಡಿಸಬಹುದಿತ್ತು, ಅಂದುಕೊಳ್ಳುತ್ತಿದ್ದೀರಾ? ನಿಮ್ಮ ಮೆದುಳಿಗೆ ಕೆಲಸ ಕೊಡಬೇಕು ಅನ್ನಿಸಿದರೆ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಗಣಿತದ ಪಜಲ್‌ನ ಈ ಬ್ರೈನ್‌ ಟೀಸರ್‌ ನಿಮ್ಮ ತಲೆಗೆ ಹುಳ ಬಿಡುವುದು ಫಿಕ್ಸ್‌. ಮೇಲ್ನೋಟಕ್ಕೆ ಸರಳವಾಗಿರುವಂತೆ ಕಾಣುವ ಈ ಪಜಲ್‌ ಅನ್ನು 10 ಸೆಕೆಂಡ್‌ ಒಳಗೆ ಬಿಡಿಸಬೇಕು. ಇದಕ್ಕಿರುವ ಕಂಡೀಷನರ್‌ ಎಂದರೆ ನೀವು ಯಾವುದೇ ಕಾರಣಕ್ಕೂ ಕ್ಯಾಲ್ಕುಲೇಟರ್‌ ಬಳಸಬಾರದು. ಫಜಲ್‌ ಬಿಡಿಸಲು ನೀವು ರೆಡಿನಾ?

Optical Illusion: ಅರೇ ಇದೇನಿದು, ಚಿತ್ರದಲ್ಲಿನ ಚೌಕ ಅಲುಗಾಡ್ತಾ ಇದ್ಯಾ; ಸರಿಯಾಗಿ ನೋಡಿ; ನಿಮಗೂ ಹಂಗೆ ಅನ್ನಿಸ್ತಾ; ಕಣ್ಣಿಗೊಂದು ಸವಾಲ್‌

A Challenge To The Eyes: ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡಲಾದ ಚಿತ್ರವೊಂದು ಈಗ ಜನರನ್ನು ದಿಗ್ಭ್ರಮೆಗೊಳಿಸಿದೆ. ಈ ಆಪ್ಟಿಕಲ್‌ ಇಮೇಜ್‌ ನೋಡಿದವರೆಲ್ಲಾ ಶಾಕ್‌ ಆಗುತ್ತಿದ್ದಾರೆ. ಹಾಗಾದರೆ ಚಿತ್ರದಲ್ಲಿ ಅಂಥದ್ದೇನಿದೆ ನೀವು ನೋಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ