logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದ್ಯಾ, ನಿಮಗಾಗಿ ಇಲ್ಲಿದೆ ಒಂದು ಚಾಲೆಂಜ್‌; ಚಿತ್ರದಲ್ಲಿರುವ ನಂಬರ್ ಎಷ್ಟು ಹೇಳಿ

Brain Teaser: ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದ್ಯಾ, ನಿಮಗಾಗಿ ಇಲ್ಲಿದೆ ಒಂದು ಚಾಲೆಂಜ್‌; ಚಿತ್ರದಲ್ಲಿರುವ ನಂಬರ್ ಎಷ್ಟು ಹೇಳಿ

Reshma HT Kannada

Oct 22, 2024 02:26 PM IST

google News

ಬ್ರೈನ್ ಟೀಸರ್

    • ನಿಮ್ಮ ಕಣ್ಣು ತುಂಬಾನೇ ಶಾರ್ಪ್ ಇದೆ ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. ಎಕ್ಸ್‌ನಲ್ಲಿ ವೈರಲ್ ಆಗಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಟ್ರೈ ಮಾಡಿ. ಚಿತ್ರದಲ್ಲಿ ನಂಬರ್ ಯಾವುದು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಇತ್ತೀಚಿನ ಒತ್ತಡದ ಬದುಕಿನಲ್ಲಿ ಮೆದುಳಿಗೆ ಖುಷಿ ಎನ್ನಿಸುವ ಕೆಲಸಗಳನ್ನು ಮಾಡಲು ಮನಸ್ಸು ಹಾತೊರೆಯುತ್ತದೆ. ಅತಿಯಾದ ಟೆನ್‌ಷನ್‌, ಒತ್ತಡದಿಂದ ಮೆದುಳಿಗೆ ರಿಲ್ಯಾಕ್ಸ್ ಬೇಕು ಎನ್ನಿಸಿದ್ರೆ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವ ಪ್ರಯತ್ನ ಮಾಡಿ. ಈ ಬ್ರೈನ್ ಟೀಸರ್ ಚಿತ್ರಗಳು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ನೀಡುವುದು ಮಾತ್ರವಲ್ಲ ಖುಷಿಯನ್ನೂ ಕೊಡುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ರೀತಿಯ ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತವೆ. ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಸವಾಲು ನಮ್ಮ ಮೆದುಳಿಗೆ ಮೋಜು ನೀಡುವ ಕೆಲಸವಾಗಿದೆ. ಇದು ಟೈಮ್‌ಪಾಸ್‌ ಜೊತೆಗೆ ನಮ್ಮ ಬುದ್ಧಿಯನ್ನೂ ಚುರುಕು ಮಾಡುವ ಕಾರಣ ಹಲವರಿಗೆ ಬ್ರೈನ್ ಟೀಸರ್ ಚಾಲೆಂಜ್ ಸ್ವೀಕರಿಸುವುದು ಇಷ್ಟವಾಗುತ್ತದೆ.

ಇಂದಿನ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಮಾತ್ರವಲ್ಲ, ಕಣ್ಣಿಗೂ ಸವಾಲು ಹಾಕುತ್ತದೆ. ಇಲ್ಲೊಂದು ಕೆಂಪುಬಣ್ಣದಿಂದ ಕೂಡಿದ ಚಿತ್ರವಿದೆ. ಈ ಅಮೂರ್ತ ಚಿತ್ರದಲ್ಲಿ ಒಂದು ನಂಬರ್ ಇದೆ. ಆ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 15 ಸೆಕೆಂಡ್ ಸಮಯ.

Pro Brain Teaser ಎನ್ನುವ ಎಕ್ಸ್‌ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಶೇರ್ ಮಾಡಲಾಗಿದೆ. ಕಣ್ಣಿಗೆ ಪರೀಕ್ಷೆ, ಚಿತ್ರದಲ್ಲಿ ಯಾವ ನಂಬರ್ ಬರೆಯಲಾಗಿದೆ ಎಂದು ಪ್ರಶ್ನೆ ಕೇಳಲಾಗಿದೆ. ಈ ಚಿತ್ರವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಚಿತ್ರದಲ್ಲಿರುವ ನಂಬರ್ ಕಾಣಿಸಬಹುದು. ಒಮ್ಮೆ ಟ್ರೈ ಮಾಡಿ, ಆದ್ರೆ ನಿಮ್ಮ ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯ ಆಗಿರಬೇಕು ಅಂತ ಏನಿಲ್ಲ, ನೆನಪಿರಲಿ.

ಈ ಬ್ರೈನ್ ಟೀಸರ್‌ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ

‘ನಂಗೆ ಒಂದೆರಡು ಸೆಕೆಂಡ್‌ಗಳಲ್ಲೇ ನಂಬರ್‌ ಕಾಣಿಸಿತು. ಇತರರಿಗೂ ನಂಬರ್ ಹುಡುಕುವುದು ಕಷ್ಟವಾಗಬಹುದು ಎಂದು ನನಗೆ ಅನ್ನಿಸುತ್ತಿಲ್ಲ‘ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಪೂರ್ತಿ ನಂಬರ್ ಕಾಣಿಸುತ್ತಿಲ್ಲ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಇದೊಂಥರ ಮೆದುಳಿಗೆ ಕೆಲಸ ಕೊಡುವ ಚಿಕ್ಕ ವರ್ಕೌಟ್‘ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಅವರೆಲ್ಲರ ಕಥೆ ಬಿಡಿ, ನಿಮ್ಮ ಕಣ್ಣಿಗೆ ಚಿತ್ರದಲ್ಲಿ ಯಾವ ನಂಬರ್ ಕಾಣಿಸಿತು ತಿಳಿಸಿ.

ಈ ಬ್ರೈನ್ ಟೀಸರ್‌ನ ವಿವರಕ್ಕೆ ಇಲ್ಲಿದೆ ಲಿಂಕ್ 

Brain Teaser: A+A=2, B+B=4, ಆದರೆ A+B*2= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಈ ಪಜಲ್‌ಗೆ 10 ಸೆಕೆಂಡ್‌ಗಳಲ್ಲಿ ಉತ್ತರ ಹೇಳಿ

ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಇಲ್ಲಿರುವ ಸುಲಭ ಗಣಿತಕ್ಕೆ ಉತ್ತರ ಹೇಳಲು ಸಾಧ್ಯವಾಗದೇ ಹಲವರು ತಲೆ ಕೆರೆದುಕೊಂಡಿದ್ದಾರೆ. ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಅಂತಾದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳು ಸಾಧ್ಯವೇ ಪ್ರಯತ್ನಿಸಿ. A+B*2= ಎಷ್ಟು ಎಂದು ನೀವು ಕಂಡುಹಿಡಿಯಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ