logo
ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಬೆಡ್ ಮೇಲೆ ಅವಿತಿರುವ ನಾಯಿ ನಿಮ್ಮ ಕಣ್ಣಿಗೆ ಕಾಣಿಸ್ತಾ; ನಿಮಿಷದೊಳಗೆ ಹುಡುಕಿ ನೋಡಿ

Optical Illusion: ಬೆಡ್ ಮೇಲೆ ಅವಿತಿರುವ ನಾಯಿ ನಿಮ್ಮ ಕಣ್ಣಿಗೆ ಕಾಣಿಸ್ತಾ; ನಿಮಿಷದೊಳಗೆ ಹುಡುಕಿ ನೋಡಿ

Vrinda Jain HT Kannada

Aug 19, 2023 08:00 AM IST

google News

ಚಿತ್ರದಲ್ಲಿ ಅವಿತಿರುವ ನಾಯಿಯನ್ನು ಕಂಡುಹಿಡಿಯಿರಿ

    • Viral Optical Illusion: ಈ ಚಿತ್ರದಲ್ಲಿ ನಾಯಿಯೊಂದು ಅವಿತಿದೆ. ಇದು ಅನೇಕ ಜನರನ್ನು ಗೊಂದಲಕ್ಕೀಡು ಮಾಡಿದೆ. ಅಡಗಿರುವ ನಾಯಿ ನಿಮ್ಮ ಕಣ್ಣಿಗೆ ಕಾಣಿಸ್ತಿದೆಯಾ ನೋಡಿ.
ಚಿತ್ರದಲ್ಲಿ ಅವಿತಿರುವ ನಾಯಿಯನ್ನು ಕಂಡುಹಿಡಿಯಿರಿ
ಚಿತ್ರದಲ್ಲಿ ಅವಿತಿರುವ ನಾಯಿಯನ್ನು ಕಂಡುಹಿಡಿಯಿರಿ (Reddit)

ಕಣ್ಣು ಮತ್ತು ಮೆದುಳಿಗೆ ಕೆಲಸ ಕೊಡುವ ಪಜಲ್‌ಗಳು ಜನರ ಮನಸ್ಸನ್ನು ಸಾಮಾನ್ಯವಾಗಿ ತನ್ನತ್ತ ಸೆಳೆಯುತ್ತವೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಹಲವರು ಸುಸ್ತಾಗುತ್ತಾರೆ. ನೀವು ಕೂಡಾ ಇಂತಹ ಆಪ್ಟಿಕಲ್ ಇಲ್ಯೂಷನ್‌ಗಳಿಗೆ ಉತ್ತರ ಕಂಡುಹಿಡಿಯುವ ಆಸಕ್ತಿ ಹೊಂದಿದ್ದರೆ, ಈ ಪ್ರಶ್ನೆಗೆ ಉತ್ತರಿಸಿ. ನೀವು ಉತ್ತರ ಕಂಡುಹಿಡಿಯುವ ಪ್ರಯತ್ನದಲ್ಲಿ ನಿಮ್ಮ ತಲೆಯನ್ನು ಕೆರೆದುಕೊಳ್ಳುವುದು ಪಕ್ಕಾ. ರೆಡ್ಡಿಟ್‌ ಹಂಚಿಕೊಂಡಿರುವ ಈ ಚಿತ್ರವು ನಿಮ್ಮ ಮೆದುಳಿಗೆ ಮೇವು ಒದಗಿಸುವುದು ಖಚಿತ.

ಈ ಚಿತ್ರದಲ್ಲಿ ಕಾಣುವ ಹಾಸಿಗೆಯ ಮೇಲೆ ಬೆಡ್‌ಶೀಟ್‌ ಅಷ್ಟೇ ಅಷ್ಟೇ ನಿಮ್ಮ ಕಣ್ಣಿಗೆ ಕಾಣುತ್ತಿರಬಹುದು. ಆದರೆ, ಈ ಬೆಡ್‌ ಮೇಲೆ ನಾಯಿಯೊಂದು ಅಡಗಿದೆ. ಆ ನಾಯಿ ಎಲ್ಲಿದೆ ಎಂಬುದನ್ನು ನೀವು ಕಂಡುಹಿಡಿದರೆ ನಿಮ್ಮ ದೃಷ್ಟಿ ಸೂಕ್ಷ್ಮವಾಗಿದೆ ಎಂದರ್ಥ. ಒಂದು ವೇಳೆ ನಿಮ್ಮ ಕಣ್ಣಿಗೆ ನಾಯಿ ಬಿದ್ದರೆ, ಅದನ್ನು ಹುಡುಕಲು ಎಚ್ಟು ಸಮಯ ತೆಗೆದುಕೊಂಡಿದ್ದೀರಿ ಎಂಬುದನ್ನು ನೀವೇ ಲೆಕ್ಕ ಹಾಕಿ.

“ನಾನು ನನ್ನ ನಾಯಿಯನ್ನು 10 ನಿಮಿಷಗಳಿಂದ ಹುಡುಕುತ್ತಿದ್ದೇನೆ” ಎಂಬ ಶೀರ್ಷಿಕೆಯೊಂದಿಗೆ ಈ ಪೋಸ್ಟ್‌ ಹಂಚಿಕೊಳ್ಳಲಾಗಿದೆ. ಚಿತ್ರದಲ್ಲಿ ಕಾಣುವ ಹಾಸಿಗೆಯ ಮೇಲೆ ಕಂಬಳಿ ಮತ್ತು ದಿಂಬುಗಳನ್ನು ಕೂಡಾ ಕಾಣಬಹುದು. ಆದರೆ ಇದರಲ್ಲಿರುವ ನಾಯಿ ಮಾತ್ರ ಅಷ್ಟು ಸುಲಭದಲ್ಲಿ ಕಣ್ಣಿಗೆ ಬೀಳದು. ಬೆಡ್‌ ಮೇಲೆ ಅಡಗಿರುವ ನಾಯಿಯನ್ನು ಕಂಡುಹಿಡಿಯುವುದೇ ನಿಮ್ಮ ಮುಂದಿರುವ ಸವಾಲು.

ಉತ್ತರ ಸಿಕ್ಕಿಲ್ವಾ?

ನಿಮ್ಮಿಂದ ಇನ್ನೂ ನಾಯಿಯನ್ನು ಹುಡುಕಲು ಸಾಧ್ಯವಾಗಿಲ್ಲದಿದ್ದರೆ ನಾವೇ ಉತ್ತರ ಹೇಳುತ್ತೇವೆ. ಚಿತ್ರದಲ್ಲಿ ನಾಯಿಯು ಕಂಬಳಿ ಅಡಿಯಲ್ಲಿ ಅಡಗಿಕೊಂಡಿದೆ. ನೀವು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಶ್ವಾನದ ಮೂಗು ಚಿತ್ರದಲ್ಲಿ ಕಾಣುತ್ತಿದೆ. ಅಲ್ಲೇ ಶ್ವಾನ ಅವಿತುಕೊಂಡಿದೆ.

ಈ ಪೋಸ್ಟ್ ನೋಡಿದ ಜನರು ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಅನೇಕರು ಪೋಸ್ಟ್‌ಗೆ ಕಾಮೆಂಟ್‌ ಮೂಲಕ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ.

Optical Illusion: ಈ ಅರಣ್ಯದಲ್ಲಿರುವ 2ನೇ ಜಿಂಕೆಯನ್ನ 5 ಸೆಕೆಂಡುಗಳಲ್ಲಿ ಹುಡುಕಿದ್ರೆ ನಿಮ್ಮ ಕಣ್ಣು ಶಾರ್ಪ್​ ಎಂದರ್ಥ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಾವು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಜನರನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸುತ್ತವೆ. ನಿಮ್ಮ ಮೆದುಳನ್ನು ಫೂಲ್​ ಮಾಡೋಕೋಸ್ಕರನೇ ಈ ಚಿತ್ರಗಳು ಇರೋದು. ವಾಸ್ತವಿಕತೆ ಮತ್ತು ಗ್ರಹಿಕೆ ಪರಸ್ಪರ ಹೆಣೆದುಕೊಂಡಂತೆ, ನಿಜವಾಗಿಯೂ ಅಲ್ಲಿ ಏನೂ ಇಲ್ಲದಂತೆ ಅಥವಾ ಏನೋ ಇದ್ದಂತೆ ತೋರಿಸುತ್ತದೆ. ಕೆಲವೊಮ್ಮೆ ಎಷ್ಟೇ ಬ್ರೇನ್​ ಉಪಯೋಗಿಸಿದರೂ ಉತ್ತರ ಕಂಡು ಹಿಡಿಯಲು ಆಗಲ್ಲ. ಇದನ್ನ ಕಂಡುಹಿಡಿಯ ಬೇಕಂದ್ರೆ ಸ್ವಲ್ಪ ನಿಮಗೆ ತಾಳ್ಮೆ ಇರಬೇಕು. ಥಟ್ ಅಂತ ಹುಡುಕಿದ್ರೆ ನಿಮ್ಮ ಕಣ್ಣು ತುಂಬಾ ಶಾರ್ಪ್​ ಎಂದರ್ಥ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ