logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 1+1=2, 2+2=8 ಆದ್ರೆ 4+4= ಎಷ್ಟು? ಶೇ 80 ರಷ್ಟು ಜನರಿಗೆ ಹೇಳಲು ಸಾಧ್ಯವಾಗದ ಈ ಪ್ರಶ್ನೆಗೆ ನಿಮ್ಮ ಉತ್ತರವೇನು ಹೇಳಿ ‌‌‌‌‌‌

Brain Teaser: 1+1=2, 2+2=8 ಆದ್ರೆ 4+4= ಎಷ್ಟು? ಶೇ 80 ರಷ್ಟು ಜನರಿಗೆ ಹೇಳಲು ಸಾಧ್ಯವಾಗದ ಈ ಪ್ರಶ್ನೆಗೆ ನಿಮ್ಮ ಉತ್ತರವೇನು ಹೇಳಿ ‌‌‌‌‌‌

Reshma HT Kannada

Dec 14, 2024 12:19 PM IST

google News

ಬ್ರೈನ್ ಟೀಸರ್

    • ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ಚಿತ್ರವೊಂದು ಇದೀಗ ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಶೇ 80ರ‌ಷ್ಟು ಮಂದಿಗೆ ಉತ್ತರ ಹೇಳಲು ಸಾಧ್ಯವಾಗದ ಈ ಪ್ರಶ್ನೆಗೆ ನಿಮ್ಮಿಂದ ಉತ್ತರಿಸಲು ಸಾಧ್ಯವೇ ಪ್ರಯತ್ನಿಸಿ. ನೀವು ಹೇಳಬೇಕಾಗಿರುವುದು 4+4= ಎಷ್ಟು ಎಂದು. ಉತ್ತರ ಖಂಡಿತ 8 ಅಲ್ಲ? 20 ಸೆಕೆಂಡ್‌ನಲ್ಲಿ ಸರಿಯಾದ ಉತ್ತರ ಹೇಳಿ.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಗಣಿತ ಎಂದರೆ ಹಲವರಿಗೆ ಕಷ್ಟದ ವಿಷಯ. ಇನ್ನೂ ಕೆಲವರಿಗೆ ಗಣಿತ ಫೆವರಿಟ್ ಸಬ್ಜೆಕ್ಟ್‌. ಗಣಿತವು ನಂಬರ್‌ಗಳು, ಸೂತ್ರಗಳು, ಸಮೀಕರಣಗಳನ್ನು ಒಳಗೊಂಡಿರುತ್ತದೆ. ಈ ಪ್ರಶ್ನೆಗಳು ಗೊಂದಲ ಮೂಡಿಸುವಂತೆ ಇರುವುದು ಸುಳ್ಳಲ್ಲ. ಈಗೀಗ ಬ್ರೈನ್ ಟೀಸರ್‌ಗಳು ಗಣಿತದ ರೂಪದಲ್ಲಿ ಕಾಣಿಸುತ್ತಿವೆ. ಅಂತಹ ಬ್ರೈನ್ ಟೀಸರ್‌ವೊಂದು ಇಲ್ಲಿದೆ. ಇದರಲ್ಲಿರುವ ಗಣಿತದ ಸಮೀಕರಣವನ್ನು ಬಿಡಿಸುವುದು ನಿಮಗಿರುವ ಸವಾಲು.

ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ನಲ್ಲಿ ಇರುವ ಸೂತ್ರವು ಮೇಲ್ನೋಟಕ್ಕೆ ಸುಲಭವಾಗಿ ಕಾಣಿಸುತ್ತದೆ. ಆದರೆ ಉತ್ತರ ಮಾತ್ರ ನೀವು ಅಂದುಕೊಂಡಿರುವುದು ಆಗಿರುವುದಿಲ್ಲ. ಇದಕ್ಕಾಗಿ ನೀವು ಔಟ್ ಆಫ್ ದಿ ಬಾಕ್ಸ್ ಯೋಚಿಸಬೇಕಾಗುತ್ತದೆ. ಆದರೆ ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಇದರಿಂದ ಏಕಾಗ್ರತೆಯೂ ಬೆಳೆಯುತ್ತದೆ.

@Brainy_Bits_Hub ಎನ್ನುವ ಎಕ್ಸ್‌ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಇದಾಗಿದೆ. ಶೇ 80 ರಷ್ಟು ಮಂದಿಗೆ ಉತ್ತರ ಹೇಳಲು ಸಾಧ್ಯವಾಗಿಲ್ಲ ಎಂದು ಚಿತ್ರದ ಮೇಲೆ ಬರೆಯಲಾಗಿದೆ. 1 + 1 = 2, 2 + 2 = 8, 3 + 3 = 18, and 4 + 4 = ಎಷ್ಟು ಎಂದು ಇಲ್ಲಿ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರವೇನು ಎಂದು ನೀವು ಹೇಳಬೇಕು. 4+4 =8 ಖಂಡಿತ ಅಲ್ಲ, ಹಾಗಾದರೆ ಇದಕ್ಕೆ ಉತ್ತರವೇನು?

ಗಣಿತದಲ್ಲಿ ನೀವು ಪಂಟರಾಗಿದ್ರೆ ಖಂಡಿತ ಈ ಪ್ರಶ್ನೆಗೆ ಉತ್ತರ ಹೇಳುವುದು ನಿಮಗೆ ಸವಾಲು ಎನ್ನಿಸುವುದಿಲ್ಲ. ನೀವು ಗಣಿತ ಎಕ್ಸ್‌ಪರ್ಟ್ ಆದ್ರೆ ಈ ಪ್ರಶ್ನೆಗೆ 20 ಸೆಕೆಂಡ್ ಒಳಗೆ ಉತ್ತರ ಹೇಳಿ. ನೀವು ಸರಿಯಾದ ಉತ್ತರ ಕಂಡುಕೊಂಡ ನಂತರ ನಿಮ್ಮ ಸ್ನೇಹಿತರು ಆತ್ಮೀಯರಿಗೂ ಇದನ್ನು ಶೇರ್ ಮಾಡಿ. ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, 15 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ, ನಿಮಗೊಂದು ಚಾಲೆಂಜ್

ನಿಮ್ಮ ಕಣ್ಣು ಹಾಗೂ ಮೆದುಳು ಸಖತ್ ಶಾರ್ಪ್ ಆಗಿದೆ ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಚಾಲೆಂಜ್ ಇದೆ. 1 ರಿಂದ 100ವರೆಗೆ ಬರೆದಿರುವ ಈ ನಂಬರ್‌ಗಳಲ್ಲಿ ಒಂದು ನಂಬರ್ ಮಿಸ್ ಆಗಿದೆ. ಆ ನಂಬರ್‌ ಯಾವುದು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್‌. ಕೇವಲ 15 ಸಕೆಂಡ್ ಒಳಗೆ ನೀವು ಉತ್ತರ ಹೇಳಬೇಕು.

Brain Teaser: ಪತ್ತೇದಾರಿಕೆ ಮಾಡೋದ್ರಲ್ಲಿ ನೀವು ಪಂಟರಾದ್ರೆ ಈ 5 ಜನರಲ್ಲಿ ಕೊಲೆಗಾರ ಯಾರು ಕಂಡುಹಿಡಿಯಿರಿ, ನಿಮಗಿರೋದು 30 ಸೆಕೆಂಡ್ ಸಮಯ

ಪತ್ತೇದಾರಿ ಕೆಲಸ ಮಾಡೋದ್ರಲ್ಲಿ ನೀವು ಎಕ್ಸ್‌ಪರ್ಟ್ ಅಂತಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದು ಕೊಲೆ ನಡೆದಿರುವ ವಿವರ ಇದ್ದು, 5 ಜನರಲ್ಲಿ ಕೊಲೆಗಾರ ಯಾರು ಎಂದು ನೀವು ಕಂಡು ಹಿಡಿಯಬೇಕು. ಇದು ನಿಮಗಿರುವ ಸವಾಲು. ನಿಮ್ಮ ಸಮಯ ಈಗ ಶುರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ