logo
ಕನ್ನಡ ಸುದ್ದಿ  /  ಜೀವನಶೈಲಿ  /  ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಕರಗಿ, ನೀವು ಸ್ಲಿಮ್ ಆಗಿ ಕಾಣಿಸಬೇಕಾ; ಹಾಗಿದ್ರೆ ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ

ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಕರಗಿ, ನೀವು ಸ್ಲಿಮ್ ಆಗಿ ಕಾಣಿಸಬೇಕಾ; ಹಾಗಿದ್ರೆ ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿ

Reshma HT Kannada

Nov 29, 2024 09:23 AM IST

google News

ಬೆಲ್ಲಿ ಫ್ಯಾಟ್ ಕರಗಿಸಲು ಟಿಪ್ಸ್

    • ಹೊಟ್ಟೆಯ ಕೊಬ್ಬು ಕರಗಿಸುವುದು ಖಂಡಿತ ಸುಲಭದ ಮಾತಲ್ಲ. ಒಮ್ಮೆ ಬೆಲ್ಲಿ ಫ್ಯಾಟ್ ಬಂತು ಎಂದರೆ ಅದನ್ನು ಕಡಿಮೆ ಮಾಡುವುದು ತುಂಬಾ ಕಷ್ಟ. ಹಾಗಾಗಿ ಆರಂಭದಿಂದಲೇ ಹೊಟ್ಟೆಯ ಸುತ್ತಲೂ ಕೊಬ್ಬು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು. ಕೆಲವೊಂದು ಪಾನೀಯಗಳನ್ನು ಕುಡಿಯುವ ಮೂಲಕ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಲು ಸಾಧ್ಯವಾಗುತ್ತದೆ.
ಬೆಲ್ಲಿ ಫ್ಯಾಟ್ ಕರಗಿಸಲು ಟಿಪ್ಸ್
ಬೆಲ್ಲಿ ಫ್ಯಾಟ್ ಕರಗಿಸಲು ಟಿಪ್ಸ್ (PC: Canva)

ಬೆಲ್ಲಿ ಫ್ಯಾಟ್ ಸಮಸ್ಯೆ ಇತ್ತೀಚೆಗೆ ಹಲವರನ್ನು ಕಾಡುತ್ತಿದೆ. ಇದು ಗಂಡುಮಕ್ಕಳು, ಹೆಣ್ಣುಮಕ್ಕಳು ಎಂಬ ಭೇದವಿಲ್ಲದೇ ಎಲ್ಲರಲ್ಲೂ ಕಾಣಿಸುತ್ತಿದೆ. ಜೀವನಶೈಲಿಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಜಂಕ್‌ಫುಡ್ ಸೇವನೆ, ನಿದ್ದೆ ಕೊರತೆ, ಜಡಜೀವನಶೈಲಿ ಈ ಎಲ್ಲವೂ ಬೆಲ್ಲಿಫ್ಯಾಟ್‌ಗೆ ಪ್ರಮುಖ ಕಾರಣವಾಗಿದೆ. ಒಮ್ಮೆ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಯ್ತು ಎಂದರೆ ಅದನ್ನ ಕರಗಿಸುವುದು ತುಂಬಾ ಕಷ್ಟ.

ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗುವುದು ವಿವಿಧ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಹಾಗಾಗಿ ಕೊಬ್ಬು ಸಂಗ್ರಹವಾಗುವ ಮುನ್ನವೇ ಎಚ್ಚರ ವಹಿಸಬೇಕು. ಇದಕ್ಕಾಗಿ ರಾತ್ರಿ ವೇಳೆ ಈ ಕೆಲಸ ಮಾಡಬೇಕು, ಅದೇನೆಂದರೆ ರಾತ್ರಿ ಮಲಗುವ ಮುನ್ನ ಕೆಲವೊಂದು ಪಾನೀಯಗಳನ್ನು ಕುಡಿಯಬೇಕು. ಇದು ಈಗಾಗಲೇ ಬೆಲ್ಲಿ ಫ್ಯಾಟ್ ಹೊಂದಿರುವವರಿಗೂ ಅವಶ್ಯ.

ರಾತ್ರಿ ಹೊತ್ತಿನಲ್ಲಿ ಈ ಪಾನೀಯಗಳನ್ನು ಕುಡಿಯುವುದರಿಂದ ಹಸಿವನ್ನು ನಿಗ್ರಹವಾಗುತ್ತದೆ. ಜೀರ್ಣಕ್ರಿಯೆ ಸುಧಾರಿಸಿ, ಕೊಬ್ಬು ಕರಗಲು ಸಹಾಯವಾಗುತ್ತದೆ. ಇವು ಉತ್ತಮ ನಿದ್ದೆಗೂ ಸಹಕಾರಿ. ಹಾಗಾದರೆ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ಸಹಾಯವಾಗುವ ಪಾನೀಯಗಳು ಯಾವುದು ನೋಡಿ.

ನಿಂಬೆ ಪಾನೀಯ

ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮಿಶ್ರಣ ಮಾಡಿ, ರಾತ್ರಿ ಹೊತ್ತು ಕುಡಿಯಿರಿ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಈ ಪಾನೀಯವು ಚಯಾಪಚಯವನ್ನು ಹೆಚ್ಚಿಸುತ್ತದೆ. ನಿಂಬೆಯಲ್ಲಿರುವ ಆಮ್ಲೀಯತೆಯು ಯಕೃತ್ತಿನಿಂದ ವಿಷವನ್ನು ತೆಗೆದುಹಾಕುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನಿಂಬೆ ರಸವನ್ನು ಕುಡಿಯುವುದರಿಂದ ದೇಹದಿಂದ ವಿಷಾಂಶವನ್ನು ಹೊರಹಾಕುತ್ತದೆ ಮತ್ತು ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಪಾನೀಯವಾಗಿದೆ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ತೂಕ ನಷ್ಟಕ್ಕೆ ಸಹಾಯ ಮಾಡುವ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಒಂದು ಲೋಟ ನೀರಿಗೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದು ಹಸಿವನ್ನು ನಿಗ್ರಹಿಸುತ್ತದೆ.

ಬಾದಾಮಿ ಹಾಲು ಸ್ಮೂಥಿ

ತೂಕ ನಷ್ಟಕ್ಕೆ ಬಾದಾಮಿ ಹಾಗೂ ಹಾಲಿನ ಸ್ಮೂಥಿ ಉತ್ತಮ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಇದು ಪೌಷ್ಟಿಕಾಂಶದ ಸಮೃದ್ಧ ಪಾನೀಯವೂ ಆಗಿದೆ. ಹಾಲಿನೊಂದಿಗೆ ಬಾದಾಮಿ, ಬಾಳೆಹಣ್ಣು ಹಾಗೂ ಪೀನಟ್ ಬಟರ್ ಸೇರಿಸಿ. ಆರೋಗ್ಯಕರ ಕೊಬ್ಬಿನಾಂಶದಿಂದ ಸಮೃದ್ಧವಾಗಿರುವ ಈ ಸ್ಮೂಥಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅರಿಶಿನದ ಹಾಲು

ಹಾಲಿನಲ್ಲಿ ಅರಿಶಿನ ಸೇರಿಸಿ ಕುಡಿಯುವುದರಿಂದ ತೂಕ ಇಳಿಕೆಯಾಗುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ಬೆಚ್ಚಗಿನ ಹಾಲಿಗೆ ಅರಿಶಿನ ಪುಡಿ ಸೇರಿಸಿ ಕುಡಿಯುವುದು ಆರೋಗ್ಯ ಸುಧಾರಿಸುತ್ತದೆ.

ಎಳನೀರು

ರಾತ್ರಿ ಹೊತ್ತು ಎಳನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುವ ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ರಾತ್ರಿ ಊಟದ ನಂತರ ಎಳನೀರು ಕುಡಿಯುವ ಅಭ್ಯಾಸ ಮಾಡಿ. ಇದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ.

ಕೊಬ್ಬು ಕರಗಿಸುವ ಈ ಪಾನೀಯಗಳು ದೇಹದಿಂದ ವಿಷಾಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಇದರಿಂದ ಆರೋಗ್ಯವು ಸುಧಾರಿಸುತ್ತದೆ. ಆದರೆ ಈ ಪಾನೀಯವನ್ನು ಕುಡಿಯುವ ಮೊದಲು ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಬಹಳ ಮುಖ್ಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ