ಎರಡೇ ತಿಂಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡ ಮಹಿಳೆ: ಅದೂ ಇಷ್ಟು ಸಿಂಪಲ್ ಟ್ರಿಕ್ ಬಳಸಿ; ಏನದು? ನೀವೇ ಓದಿ
Oct 11, 2024 06:28 PM IST
ತೂಕ ಇಳಿಕೆ (ಸಾಂಕೇತಿಕ ಚಿತ್ರ)
- ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳಿವೆ. ಕೆಲವರು ಆಹಾರಕ್ಕೆ ಕಡಿವಾಣ ಹಾಕಿದರೆ, ಇನ್ನು ಕೆಲವರು ವರ್ಕೌಟ್ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇಲ್ಲೊಬ್ಬರು ಮಹಿಳೆ ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ 2 ತಿಂಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಹಾಗಾದರೆ ಆಕೆ ಮಾಡಿದ್ದಾದ್ರೂ ಏನು ನೋಡಿ.
ತೂಕ ಇಳಿಸಿಕೊಳ್ಳುವ ವಿಚಾರ ಕೇಳಿದಾಕ್ಷಣ ಕಿವಿ ಚುರುಕಾಗೋದು ಖಂಡಿತ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಅನ್ನೋದು ಅಷ್ಟರ ಮಟ್ಟಿಗೆ ಎಲ್ಲರಿಗೂ ಸಮಸ್ಯೆಯಾಗಿದೆ. ಆದರೆ ಇಲ್ಲೊಬ್ಬರು ಮಹಿಳೆ ಒಂದು ಸಿಂಪಲ್ ವಿಧಾನ ಅನುಸರಿಸಿ 2 ತಿಂಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ದಿನಕ್ಕೆ ಒಂದು ಹೊತ್ತು ಮಾತ್ರ ಊಟ ತಿನ್ನುವುದರಿಂದ ಬಹಳ ಬೇಗ ತೂಕ ಇಳಿಯುತ್ತದೆ ಎಂಬ ವಿಡಿಯೊ ಇತ್ತೀಚೆಗೆ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಮಹಿಳೆಯೊಬ್ಬರು ನಾವು ಹಿಂದೆ 97 ಕೆಜಿ ಇದ್ದು, ಕೇವಲ ಎರಡು ತಿಂಗಳಲ್ಲಿ ಆಕೆ 79 ಕೆಜಿ ಆಗಿದ್ದೇನೆ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
‘ನಾನು ಪ್ರತಿದಿನ ಡಯಟ್ ಮಾಡುತ್ತೇನೆ. ದಿನಕ್ಕೆ ಒಂದು ಹೊತ್ತು ಅಷ್ಟೇ ನಾನು ಊಟ ಮಾಡುವುದು ಎಂದು ಮಹಿಳೆ ವಿಡಿಯೊದಲ್ಲಿ ಹೇಳಿದ್ದಾರೆ. ಈ ವೀಡಿಯೊದಲ್ಲಿ ಆಕೆ ತನ್ನ ಎರಡು ತಿಂಗಳ ಆಹಾರ ಕ್ರಮವನ್ನೂ ಹಂಚಿಕೊಂಡಿದ್ದಾಳೆ.
ಮಹಿಳೆಯ ವಿಡಿಯೊ ನೋಡಿದ ನೆಟಿಜನ್‌ಗಳು ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುವುದು ಒಳ್ಳೆಯದಾ ಕೆಟ್ಟದ್ದಾ ಎಂದು ಅಂತರ್ಜಾಲದಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಮುಂಬೈ ಸೆಂಟ್ರಲ್‌ನ ವೊಕಾರ್ಡ್ ಹಾಸ್ಪಿಟಲ್ಸ್‌ನ ಡಯೆಟಿಷಿಯನ್ ಅಕ್ಷತಾ ಚವಾಣ್, ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಒಂದು ಹೊತ್ತಿನ ಊಟ ಬಿಡುವುದು ಪರಿಣಾಮಕಾರಿಯೇ
‘ದಿನಕ್ಕೆ ಒಂದು ಬಾರಿ ಮಾತ್ರ ತಿನ್ನುವ ಮೂಲಕ 2 ತಿಂಗಳಲ್ಲಿ 18 ಕೆಜಿ ತೂಕವನ್ನು ಕಳೆದುಕೊಳ್ಳುವುದು ಕ್ಯಾಲೊರಿಗಳಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಬಹುದು. ಅದಕ್ಕಾಗಿಯೇ ಕೆಲವರು ಈ ವಿಧಾನದಿಂದ ತ್ವರಿತ ತೂಕ ನಷ್ಟವನ್ನು ಹೊಂದುತ್ತಾರೆ. ಆದರೆ ಪೌಷ್ಟಿಕತಜ್ಞಳಾಗಿ ನಾನು ಹೀಗೆ ಎರಡು ತಿಂಗಳ ಕಾಲ ಒಂದು ಹೊತ್ತು ಮಾತ್ರ ಊಟ ಮಾಡುವುದನ್ನು ಸಮರ್ಥಿಸುವುದಿಲ್ಲ. ಸಾಂದರ್ಭಿಕವಾಗಿ ಉಪವಾಸ ಮಾಡುವುದು ಸರಿಯೇ, ಆದರೆ 60 ದಿನಗಳಿಗಿಂತ ಹೆಚ್ಚು ಕಾಲ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ವಾಸ್ತವವಾಗಿ, ಒಂದು ದಿನದಲ್ಲಿ ಒಂದು ಊಟವನ್ನು ತಿನ್ನುವುದು ಅಲ್ಪಾವಧಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ದೀರ್ಘಾವಧಿಯಲ್ಲಿ ಇದು ಅಪಾಯಕಾರಿ' ಎಂದು ಅಕ್ಷತಾ ಚವಾಣ್ ಹೇಳಿದ್ದಾರೆ.
ದಿನನಿತ್ಯದ ಕ್ಯಾಲೋರಿ ಸೇವನೆಯು ದೇಹಕ್ಕೆ ಬಹಳ ಮುಖ್ಯ ಎಂದು ಅಕ್ಷತಾ ಹೇಳುತ್ತಾರೆ. ‘ಒಂದೇ ಊಟದಿಂದ ತೂಕವನ್ನು ಕಳೆದುಕೊಳ್ಳುವುದು ದೇಹದ ಕೊಬ್ಬಿನಿಂದ ಮಾತ್ರವಲ್ಲದೆ ಸ್ನಾಯುಗಳ ನಷ್ಟದಿಂದ ಬರಬಹುದು. ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮೇಲಾಗಿ ದಿನಕ್ಕೊಮ್ಮೆ ತಿಂದರೆ ತುಂಬಾ ಹಸಿವಾಗುತ್ತದೆ. ಆಗ ಮೂಡ್ ಸ್ವಿಂಗ್‌ಗಳು ವಿಪರೀತವಾಗಿರುತ್ತವೆ ಮತ್ತು ಒಮ್ಮೆಗೇ ಅತಿಯಾಗಿ ತಿನ್ನಲು ಕಾರಣವಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ' ಎಂದು ಅವರು ಹೇಳುತ್ತಾರೆ.
ಆಹಾರದಲ್ಲಿ ಇಂತಹ ತೀವ್ರವಾದ ಬದಲಾವಣೆಗಳನ್ನು ಮಾಡುವ ಮೊದಲು ಪೌಷ್ಟಿಕ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂದು ಅಕ್ಷತಾ ಚವಾಣ್ ಸಲಹೆ ನೀಡುತ್ತಾರೆ.
(ಗಮನಿಸಿ: ಈ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಯ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ)