ಇಲ್ಲಿದೆ ಪತಂಗಾಸನದ ಪ್ರಯೋಜನ; ಇದೊಂದು ಆಸನ ಮಾಡಿದರೆ ಸಾಕು ಮಹಿಳೆಯರ ಅರ್ಧಕ್ಕರ್ಧ ಸಮಸ್ಯೆಗೆ ಸಿಗುತ್ತೆ ಪರಿಹಾರ
Aug 11, 2024 02:53 PM IST
ಪತಂಗಾಸನದ ಪ್ರಯೋಜನಗಳು
- ಪತಂಗಾಸನ ಮಹಿಳೆಯರು ಮಾಡಲೇಬೇಕಾದ ಆಸನ. ಯಾಕೆಂದರೆ ಇದರಿಂದ ಮಹಿಳೆಯರ ಆರೋಗ್ಯಕ್ಕೆ ಹಾಗೂ ಮುಟ್ಟಿನ ಸಮಸ್ಯೆಗೆ ಕ್ರಮೇಣ ಪರಿಹಾರ ಸಿಗುತ್ತದೆ. ಇನ್ನೂ ಅನೇಕ ಪ್ರಯೋಜನಗಳು ಈ ಆಸನದಿಂದ ಇದೆ. ಮಹಿಳೆಯರ ಆರೋಗ್ಯ ತುಂಬಾ ಸೂಕ್ಷ್ಮ. ಹಾಗಾಗಿ ಕಾಳಜಿ ವಹಿಸುವುದು ತುಂಬಾ ಮುಖ್ಯ.
ಮಹಿಳೆಯರ ಆರೋಗ್ಯ ತುಂಬಾ ಸೂಕ್ಷ್ಮ. ಹಾಗಾಗಿ ಹೆಚ್ಚಿನ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗುತ್ತದೆ. ಯೋಗಾಸನ ಮಾಡುತ್ತಾ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳವ ಅನುಕೂಲ ಮಹಿಳೆಯರಿಗಿದೆ. ಈ ಸಂದರ್ಭದಲ್ಲಿ ನೀವು ಮಾಡಬೇಕಿರುವ ಒಂದು ಮುಖ್ಯ ಆಸನವೆಂದರೆ ಅದು ಪತಂಗಾಸನ. ಪತಂಗಾಸನ ಮಹಿಳೆಯರ ಅರ್ಧಕ್ಕರ್ಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಈ ಆಸನ ಮಾಡುವುದರಿಂದ ಯಾವೆಲ್ಲ ಪ್ರಯೋಜನ ಇದೆ ಎಂಬುದನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ.
ಉತ್ತಮ ಆರೋಗ್ಯಕ್ಕಾಗಿ ಆನಸ
ಮೂತ್ರಪಿಂಡಗಳು, ಅಂಡಾಶಯಗಳು, ಮೂತ್ರಜನಕಾಂಗದ ಮತ್ತು ಪ್ರಾಸ್ಟೇಟ್ ಗ್ರಂಥಿಗಳನ್ನು ಉತ್ತೇಜಿಸುವ ಆಸನ ಇದಾಗಿದೆ. ಅಂದರೆ ಸಾಮಾನ್ಯವಾಗಿ ಮಹಿಳೆಯರಿಗೆ ಆಗಾಗ ಕಾಣಿಸಿಕೊಳ್ಳುವ ಕಿಪ್ಪೊಟ್ಟೆ ನೋವಿಗೆ ಈ ಆಸನ ಪರಿಹಾರ ನೀಡುತ್ತದೆ. ನೀವು ಒಂದೇ ಬಾರಿ ಈ ಆಸನವನ್ನು ಮಾಡಲು ಸಾಧ್ಯವಿಲ್ಲ. ಆಗಾಗ ಪ್ರಯತ್ನಿಸಿ ನಂತರ ಮಾಡಿ. ಪ್ರತಿದಿನ ಪ್ರಯತ್ನ ಮಾಡಿದರೆ ಒಂದು ಹದಿನೈದು ದಿನದಲ್ಲಿ ನೀವು ಈ ಆಸನವನ್ನು ಮಾಡಬಲ್ಲಿರಿ.
ನಾವು ಈ ಮೇಲೆ ನೀಡಿರುವ ಚಿತ್ರದಲ್ಲಿ ಆಸನ ಮಾಡಿದಾಗ ಹೇಗೆ ಕಾಣಿಸುತ್ತದೆ ಎಂಬುದಿದೆ. ಇನ್ನೂ ಹೆಚ್ಚಿಗೆ ಸಾಧ್ಯವಿದ್ದರೆ ನಿಮ್ಮ ಎರಡೂ ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ಮೇಲಕ್ಕೆ, ಕೆಳಕ್ಕೆ ನಿಮ್ಮ ಕಾಲುಗಳನ್ನು ಅಲ್ಲಾಡಿಸುತ್ತಾ ಇರಿ. ಹೀಗೆ ಎಷ್ಟು ಬಾರಿಇ ಸಾಧ್ಯವೋ ಅಷ್ಟು ಬಾರಿ ಮಾಡಿ. ಇದನ್ನೂ ಸಹ ಕ್ರಮೇಣ ಹೆಚ್ಚಿಗೆ ಮಾಡುತ್ತಾ ಬರಬೇಕು.
ಬೆನ್ನು ಮೂಳೆ ನೋವಿಗೆ ಪರಿಹಾರ
ಹೆಣ್ಣುಮಕ್ಕಳಿಗೆ ಮುಟ್ಟಿನ ಸಂದರ್ಭದಲ್ಲಿ ಹಾಗೂ ಮಗುವಾದ ನಂತರದಲ್ಲಿ ಮಹಿಳೆಯರಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಬೆನ್ನು ಮೂಳೆ ನೋವು. ಬೆನ್ನು ಹುರಿ ಸೆಳೆತ. ಇವುಗಳೆಲ್ಲದರಿಂದ ನಿಮಗೆ ಪರಿಹಾರ ಬೇಕು ಎಂದರೆ ನೀವು ಈ ಆಸನವನ್ನು ದಿನನಿತ್ಯ ಮಾಡಿ ಪ್ರಯೋಜನ ಪಡೆದುಕೊಳ್ಳಿ.
ಇರಲಿ ಎಚ್ಚರ
ನೀವು ಈ ಆಸನವನ್ನು ಮೊದಲನೇ ಬಾರಿ ಮಾಡಲು ಪ್ರಯತ್ನಿಸಿದಾಗ ತೊಡೆಸಂದು ಬಿರಿದಂತೆ ಆಗಬಹುದು. ಕಿಪ್ಪೊಟ್ಟೆ ಜಗ್ಗಿದ ರೀತಿಯೂ ಆಗಬಹುದು. ಆದರೆ ದಿನವೂ ಪ್ರಯತ್ನ ಮಾಡಿ ನಿಧಾನಕ್ಕೆ ಇದು ಅಭ್ಯಾಸವಾಗುತ್ತದೆ. ಪರಿಣಿತರ ಸಲಹೆ ಪಡೆಯಿರಿ.