Personality Test: ಈ ಕಿಟಕಿಯ ಬಾಗಿಲು ಯಾವ ಕಡೆ ತೆರೆದುಕೊಂಡಿದೆ? ಏನು ಹೇಳುತ್ತೆ ನೋಡೋಣ ನಿಮ್ಮ ಆಲೋಚನಾ ಲಹರಿ
Sep 05, 2024 03:59 PM IST
ಕಿಟಕಿ
- Illustration Image: ನಿಮಗೆ ನಿಮ್ಮ ಮೆದುಳೇ ಮೋಸ ಮಾಡುತ್ತಿರುವಂತೆ ಅನಿಸುವ ಚಿತ್ರ ಇದು. ಈ ಕಿಟಕಿಯ ಬಾಗಿಲು ಒಳಗಡೆ ತೆರೆದುಕೊಂಡಿದೆಯೇ ಅಥವಾ ಹೊರಗಡೆ ತೆಗೆದುಕೊಂಡಿದಿಯೇ ನೀವೇ ಒಮ್ಮೆ ಗಮನಿಸಿ. ಏನು ಹೇಳುತ್ತೆ ನೋಡೋಣ ನಿಮ್ಮ ಆಲೋಚನಾ ಲಹರಿ.
ಇದನ್ನು ಆಪ್ಟಿಕಲ್ ಇಲ್ಯೂಶನ್ ಎಂದು ಕರೆಯಲಾಗುತ್ತದೆ. ಚಿತ್ರದ ಗ್ರಹಿಕೆಯು ವಾಸ್ತವದಿಂದ ಭಿನ್ನವಾಗಿರುತ್ತದೆ. ವ್ಯತ್ಯಾಸವು ಸಂಭವಿಸುತ್ತದೆ ಏಕೆಂದರೆ ನಮ್ಮ ಮಿದುಳುಗಳು ದೃಷ್ಟಿಗೋಚರ ಮಾಹಿತಿಯನ್ನು ತಪ್ಪುದಾರಿಗೆಳೆಯುವ ಅಥವಾ ಅಪೂರ್ಣವಾದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತವೆ. ಈ ರೀತಿ ಅಪೂರ್ಣವಾಗಿ ಅರ್ಥವಾದಾಗ ಒಂದು ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಆಪ್ಟಿಕಲ್ ಚಿತ್ರಗಳು ದೃಶ್ಯ ಗ್ರಹಿಕೆಯ ವಿವಿಧ ಅಂಶಗಳನ್ನು ಒಳಗೊಂಡಿರುತ್ತದೆ. ಬಣ್ಣ, ಆಕಾರ ಮತ್ತು ಗಾತ್ರ ಇವುಗಳೆಲ್ಲವೂ ನಮಗೆ ಗೊಂದಲ ಉಂಟು ಮಾಡುತ್ತದೆ. ಆ ರೀತಿಯ ಹಲವಾರು ಚಿತ್ರಗಳು ನಮಗೆ ದೊರೆಯುತ್ತದೆ.
ಒಮ್ಮೊಮ್ಮೆ ಖಾಲಿ ಮೋಡಗಳಲ್ಲಿ ನಮಗೆ ಏನೋ ಒಂದು ಬೇರೆ ರೀತಿಯ ಚಿತ್ರ ಕಾಣಿಸುತ್ತದೆ. ಆ ಚಿತ್ರದಲ್ಲಿ ಸೂರ್ಯ, ಕುದುರೆ, ನವಿಲು ಹೀಗೆ ನಮ್ಮ ಮನ ಬಂದಂತೆ ನಾವು ಅದಕ್ಕೆ ಯಾವ ಆಕಾರ ಕೊಡುತ್ತೇವೆಯೋ ಆ ಆಕಾರ ಪಡೆಯುತ್ತಾ ಹೋದಂತೆ ಭಾಸವಾಗುತ್ತದೆ. ಈಗ ನೀವು ನೋಡುತ್ತಿರುವ ಈ ಚಿತ್ರದಲ್ಲಿ ನಿಮಗೆ ಇದು ಎರಡು ರೀತಿ ಕಾಣುತ್ತಿದೆ.
ಒಂದು ಒಳಮುಖವಾಗಿ ತೆರೆದಂತೆ ಕಂಡರೆ ಇನ್ನೊಂದು ರೀತಿಯಲ್ಲಿ ಹೊರ ಮುಖವಾಗಿ ತೆರೆದಂತೆ ಕಾಣುತ್ತದೆ. ಇದು ನಿಮ್ಮ ವ್ಯಕ್ತಿತ್ವ ಹೇಗಿದೆ ಎನ್ನುವುದನ್ನು ಸೂಚಿಸುತ್ತದೆ. ನಿಮ್ಮ ಆಲೋಚನೆ ಯಾವ ರೀತಿ ಇದೆ. ನೀವು ಯಾವುದಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೀರಾ ಎಂಬುದನ್ನು ಈ ಮೂಲಕ ಪತ್ತೆ ಮಾಡಬಹುದು.
ಒಳಮುಖವಾಗಿ ಕಂಡರೆ ಏನರ್ಥ?
ಈ ಕಿಟಕಿಯ ಬಾಗಿಲು ಒಳಗಡೆ ತೆಗೆದುಕೊಂಡಿದೆ ಎಂದು ನಿಮಗೆ ಅನಿಸಿದರೆ ನೀವು ಇಂಟ್ರಾವರ್ಟ್ ಎಂದು ಅರ್ಥ. ನೀವು ಎಲ್ಲವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ನಿಮ್ಮಲ್ಲಿರುವ ನೋವು, ಸುಖ -ದುಃಖ ಸಂತೋಷ ಎಲ್ಲವನ್ನೂ ನಿಮ್ಮಲ್ಲೇ ಮುಚ್ಚಿಟ್ಟು ಕೊಳ್ಳುತ್ತಿರಿ. ಯಾರೊಂದಿಗೂ ಏನನ್ನೂ ಶೇರ್ ಮಾಡಿಕೊಳ್ಳುಲು ಬಯಸುವುದಿಲ್ಲ. ನೀವು ಸಂಕುಚಿತ ಮನಸ್ಥಿತಿಯನ್ನು ಹೊಂದಿದ್ದೀರಿ ಎಂದು ಅರ್ಥ.
ಹೊರಮುಖವಾಗಿ ಕಂಡರೆ ಏನರ್ಥ?
ಈ ಚಿತ್ರದಲ್ಲಿ ಕಿಟಕಿಯ ಬಾಗಿಲು ಹೊರಗಡೆ ತೆಗೆದುಕೊಂಡು ಇದೆ ಎಂದು ನಿಮಗೆ ಅನಿಸಿದರೆ ನೀವು ಎಲ್ಲವನ್ನು ಮನಸ್ಸು ಬಿಚ್ಚಿ ಹೇಳಿಕೊಳ್ಳುತ್ತೀರಿ. ನೀವು ಇಂಟ್ರವರ್ಟ್ ಅಲ್ಲ ಎಂದು ಅರ್ಥ. ನಿಮಗೆ ನಿಮ್ಮ ಸಂತೋಷ ದುಃಖ ಅಥವಾ ಏನೇ ಅನಿಸಿದರು ಅದನ್ನು ಇನ್ನೊಬ್ಬರ ಹತ್ತಿರ ಹಂಚಿಕೊಳ್ಳುತ್ತೀರಿ. ಇನ್ನೊಬ್ಬರಲ್ಲಿ ಅದನ್ನು ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿರಿ. ನೀವು ತುಂಬಾ ವಿಶಾಲ ಮನಸ್ಸಿನವರು ಎಂದರ್ಥ.
ಈ ರೀತಿ ಚಿತ್ರ ನಿಮ್ಮ ವ್ಯಕ್ತಿತ್ವ ಹೇಗಿದೆ ಅನ್ನೋದನ್ನು ತಿಳಿಸಿಕೊಡುತ್ತದೆ ನಿಮ್ಮ ಮನಸ್ಸಿನ ಭಾವನೆ ನಿಮ್ಮ ಅನಿಸಿಕೆಗಳೇ ಇದಕ್ಕೆ ಉತ್ತರ ಆಗಿರುತ್ತದೆ.
ವಿಭಾಗ