logo
ಕನ್ನಡ ಸುದ್ದಿ  /  ಜೀವನಶೈಲಿ  /  Churumuri: ಆಹಾ! ಚಳಿಗಾಲದಲ್ಲಿ ಸಂಜೆ ಖಾರ ಖಾರ ಚುರುಮುರಿ ತಿಂದ್ರೆ ಸ್ವರ್ಗ; ಇಲ್ಲಿದೆ ರೆಸಿಪಿ

Churumuri: ಆಹಾ! ಚಳಿಗಾಲದಲ್ಲಿ ಸಂಜೆ ಖಾರ ಖಾರ ಚುರುಮುರಿ ತಿಂದ್ರೆ ಸ್ವರ್ಗ; ಇಲ್ಲಿದೆ ರೆಸಿಪಿ

HT Kannada Desk HT Kannada

Nov 29, 2023 06:00 PM IST

google News

ಚುರುಮುರಿ (Youtube/Online Aduge)

    • Churumuri Recipe in Kannada: ಚಳಿಗಾಲದಲ್ಲಿ ರಸ್ತೆ ಬದಿ ಮಾರುವ ಚುರುಮುರಿ ಅಥವಾ ಮಸಾಲೆ ಮಂಡಕ್ಕಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇದರ ರೆಸಿಪಿ ಇಲ್ಲಿದೆ..ನೀವೂ ಟ್ರೈ ಮಾಡಿ. 
ಚುರುಮುರಿ (Youtube/Online Aduge)
ಚುರುಮುರಿ (Youtube/Online Aduge)

ಶೀತಮಯ ವಾತಾವರಣ ಇರುವಾಗ ಸಂಜೆ ವೇಳೆ ಬೆಚ್ಚಗೆ ಏನಾದ್ರೂ ತಿನ್ನೋಣ ಅಂತ ಆಸೆ ಆಗುತ್ತದೆ. ಅದು ಗರಂಗರಂ ಮತ್ತು ಖಾರಖಾರ ಇದ್ರೆ ಇನ್ನೂ ಇಷ್ಟ ಆಗತ್ತೆ. ಚಳಿಗಾಲದಲ್ಲಿ ರಸ್ತೆ ಬದಿ ಮಾರುವ ಚುರುಮುರಿ ಅಥವಾ ಮಸಾಲೆ ಮಂಡಕ್ಕಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇದನ್ನ ಮನೆಯಲ್ಲೇ ಹೇಗೆ ಮಾಡೋದು ಎಂದು ತಿಳಿಯೋಣ..

ಚುರುಮುರಿ ಮಾಡಲು ಬೇಕಾಗುವ ಪದಾರ್ಥಗಳು

ಮಂಡಕ್ಕಿ

ಈರುಳ್ಳಿ

ಕ್ಯಾರೆಟ್​

ಟೊಮೆಟೊ

ಮಿಕ್ಸ್ಚರ್

ಶೇಂಗಾ

ಅರಿಶಿನ ಪುಡಿ

ಖಾರದ ಪುಡಿ

ಹಸಿ ಮೆಣಸು

ಗರಂ ಮಸಾಲ

ಕೊಬ್ಬರಿಎಣ್ಣೆ

ಕೊತ್ತುಂಬರಿ ಸೊಪ್ಪು

ಉಪ್ಪು

ನಿಂಬೆ ಹಣ್ಣು

ಚುರುಮುರಿ ಮಾಡುವ ವಿಧಾನ

ಒಂದು ಪಾತ್ರೆಗೆ ಒಂದು ಚಮಚ ಕೊಬ್ಬರಿ ಎಣ್ಣೆ, ಸಣ್ಣಗೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರೆಟ್​, ಸಣ್ಣಗೆ ಕತ್ತರಿಸಿದ ಟೊಮೆಟೊ, ಮಿಕ್ಸ್ಚರ್ (ಸಣ್ಣ ಖಾರದ ಕಡ್ಡಿ), ಶೇಂಗಾ, ಅರಿಶಿನ ಪುಡಿ, ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಗರಂ ಮಸಾಲ ಪುಡಿ, ಸಣ್ಣಗೆ ಕತ್ತರಿಸಿದ ಕೊತ್ತುಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ನಿಂಬೆ ಹಣ್ಣಿನ ರಸ ಹಾಕಿ. ಎಲ್ಲವನ್ನೂ ದೊಡ್ಡ ಚಮಚದಲ್ಲಿ ಚೆನ್ನಾಗಿ ಕಲಸಿ. (ಇಲ್ಲಿ ಹಸಿ ಮೆಣಸಿನ ಕಾಯಿ ಮತ್ತು ಗರಂ ಮಸಾಲ ಕಡ್ಡಾಯವಲ್ಲ. ರುಚಿ ಹೆಚ್ಚಿಸಲು ಹಾಕಬಹುದು)

ಈಗ ಮಂಡಕ್ಕಿಯನ್ನು ತೆಗೆದುಕೊಳ್ಳಿ. ಮಂಡಕ್ಕಿ ಅಥವಾ ಮಂಡಾಳು ತುಂಬಾ ಗರಿಗರಿಯಾಗಿರಬೇಕು. ಒಂದು ವೇಳೆ ಗರಿಗರಿ ಇಲ್ಲವಾದರೆ ಅನ್ನು ಲೈಟ್​ ಆಗಿ ಹುರಿದುಕೊಳ್ಳಿ. ಈ ಮಂಡಕ್ಕಿಯನ್ನು ಪಾತ್ರೆಯಲ್ಲಿ ಕಲಿಸಿ ಇಟ್ಟ ಮಸಾಲೆಗೆ ಸೇರಿಸಿ ಚೆನ್ನಾಗಿ ಕಲಸಿ. ಎಲ್ಲಾ ಮಂಡಕ್ಕಿ ಕಾಳಿಗೂ ಮಸಾಲೆ ಅಂಡಬೇಕು ಹಾಗೆ ಕಲಸಿ. ಈಗ ಚುರುಮುರಿ ಅಥವಾ ಮಸಾಲೆ ಮಂಡಕ್ಕಿ ರೆಡಿ.

ಇದನ್ನು ಮಾಡಿದ ತಕ್ಷಣವೇ ತಿನ್ನಬೇಕು. ಮೆತ್ತಗೆ ಆದಮೇಲೆ ತಿನ್ನಲು ರುಚಿ ಎನಿಸುವುದಿಲ್ಲ. ಚಳಿಗಾಲದ ಸಂಜೆ ವೇಳೆ ಬಿಸಿ ಬಿಸಿ ಟೀ ಕುಡಿಯುತ್ತಾ ಚುರುಮುರಿ ತಿಂದರೆ ಸ್ವರ್ಗ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ