ಪ್ರೆಗ್ನೆನ್ಸಿಯಲ್ಲಿ ಕೆಲಸಗಳನ್ನು ಸುಲಭವಾಗಿ ಮಾಡೋಕೆ ಆಗ್ತಿಲ್ವಾ; ಈ ವೈರಲ್ ವಿಡಿಯೋ ನಿಮಗೆ ಹೆಲ್ಪ್ ಆಗಬಹುದು ನೋಡಿ
Dec 01, 2023 02:08 PM IST
ಗರ್ಭಿಣಿ ಮಹಿಳೆಯರ ಕೆಲಸ ಸುಲಭಗೊಳಿಸುವ ವೈರಲ್ ವಿಡಿಯೋ
Viral Video: ಗರ್ಭಿಣಿ ಸ್ತ್ರೀಯರಿಗೆ ಉಪಯೋಗವಾಗಲೆಂದು 5-Minute Crafts Family ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದೆ. ನಿಮ್ಮಲ್ಲಿ ಯಾರಾದರೂ ಪ್ರೆಗ್ನೆಂಟ್ ಇದ್ದರೆ ಈ ವಿಡಿಯೋ ಉಪಯೋಗವಾಗಬಹುದು ನೋಡಿ.
Viral Video: ಮೈ ನೆರೆಯುವುದು, ಮದುವೆ, ತಾಯ್ತನ ಎಲ್ಲಾ ಹೆಣ್ಣುಮಕ್ಕಳಿಗೂ ಜೀವನದ ಪ್ರಮುಖ ಘಟ್ಟಗಳು. ಹಾಗೇ ಪ್ರತಿ ಹೆಣ್ಣಿಗೂ ತಾಯ್ತನ ಎಂದರೆ ಒಂದು ರೀತಿಯ ಸಂಭ್ರಮ. ಗರ್ಭ ಧರಿಸುತ್ತಿದ್ದಂತೆ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ, ಕೆಲವೊಮ್ಮೆ ಮಾನಸಿಕವಾಗಿಯೂ ಕುಗ್ಗಬಹುದು. ಆದರೆ ಕೆಲವೇ ದಿನಗಳಲ್ಲಿ ಮನೆಗೆ ಬರುವ ಕಂದನನ್ನು ನೆನಪಿಸಿಕೊಂಡರೆ ಯಾವ ಆರೋಗ್ಯ ಸಮಸ್ಯೆಯೂ ದೊಡ್ಡದಲ್ಲ ಬಿಡಿ.
ತಿಂಗಳು ಕಳೆಯುತ್ತಿದ್ದಂತೆ ಮೊದಲಿನಂತೆ ಜೋರಾಗಿ ನಡೆಯಲಾಗುವುದಿಲ್ಲ, ಹೇಗೆಂದರೆ ಹಾಗೆ ಹೆಜ್ಜೆ ಹಾಕುವಂತಿಲ್ಲ, ಕಣ್ಣಿಗೆ ಕಾಣಿಸಿದ ತಿಂಡಿಗಳನ್ನು ತಿನ್ನುವಂತಿಲ್ಲ. ಬಗ್ಗಲು ಆಗುವುದಿಲ್ಲ. ವೈದ್ಯರು ಕೆಲವರಿಗೆ ಬೆಡ್ ರೆಸ್ಟ್ ಹೇಳಿದರೆ ಇನ್ನೂ ಕೆಲವರಿಗೆ ಕೆಲಸ ಮಾಡಲು ಹೇಳುತ್ತಾರೆ. ಆದರೆ ಕೆಲವೊಂದು ಕೆಲಸಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಗರ್ಭಿಣಿ ಸ್ತ್ರೀಯರಿಗೆ ಉಪಯೋಗವಾಗಲೆಂದು 5-Minute Crafts Family ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದೆ. ನಿಮ್ಮಲ್ಲಿ ಯಾರಾದರೂ ಪ್ರೆಗ್ನೆಂಟ್ ಇದ್ದರೆ ಈ ವಿಡಿಯೋ ಉಪಯೋಗವಾಗಬಹುದು ನೋಡಿ.
- ನಿಮಗೆ ಜೀನ್ಸ್ ಧರಿಸುವ ಆಸೆ, ಆದರೆ ಅದು ಈಗ ಹಿಡಿಸುತ್ತಿಲ್ಲ ಎಂದಾದರೆ ವಿಡಿಯೋದಲ್ಲಿ ತೋರಿಸಿರುವಂತೆ ಶೋಲ್ಟರ್ ಬೆಲ್ಟ್ ಬಳಸಿ ಜೀನ್ಸ್ ಧರಿಸಬಹುದು. ಆದರೆ ಬಹಳ ಜಾಗ್ರತೆಯಿಂದ ಇರಿ.
- ನೀವು ಬಟ್ಟೆಗಳನ್ನು ಕೊಂಡೊಯ್ಯುವಾಗ ಅದು ಕೈ ಜಾರಿ ಬಿದ್ದರೆ ಮುಂದೆ ಬಾಗಿ ಎತ್ತಿಕೊಳ್ಳುವ ಪ್ರಯತ್ನ ಬೇಡ, ನಿಮ್ಮ ಮನೆಯಲ್ಲಿ ವ್ಯಾಕ್ಯೂಮ್ ಕ್ಲೀನರ್ ಇದ್ದರೆ ಅದರ ಸಹಾಯದಿಂದ ಎಲ್ಲಾ ಬಟ್ಟೆಗಳನ್ನು ಎತ್ತಿಕೊಳ್ಳಬಹುದು. ಒಂದು ವೇಳೆ ವ್ಯಾಕ್ಯೂಮ್ ಕ್ಲೀನರ್ ಇರದಿದ್ದರೆ ಉದ್ದವಾದ ಕಡ್ಡಿ ಸಾಕು.
- ನಿಮ್ಮ ಕಾಲುಗಳಿಗೆ ನೈಲ್ ಪಾಲಿಶ್ ಹಚ್ಚಿಕೊಳ್ಳುವ ಆಸೆ ಆಗ್ತಿದ್ಯಾ? ಆದರೆ ಹಚ್ಚಿಕೊಡಲು ಯಾರೂ ಇಲ್ಲ, ಮುಂದೆ ಬಾಗಿ ಹಚ್ಚಿಕೊಳ್ಳಲೂ ಆಗುತ್ತಿಲ್ಲ ಎಂದಾದ್ರೆ ಹೀಗೆ ಮಾಡಿ. ಪೇಯಿಂಟ್ ಬ್ರಷ್ ಸಹಾಯದಿಂದ ನಿಮ್ಮ ಕಾಲಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚಿಕೊಳ್ಳಬಹುದು, ಟ್ರೈ ಮಾಡಿ.
- ಸದಾ ಹೊಟ್ಟೆಯನ್ನು ಕೆಳಕ್ಕೆ ಹಾಕಿ ಮಲಗುವುದು ನಿಮಗೆ ಅಭ್ಯಾಸ, ಆದರೆ ಪ್ರೆಗ್ನೆನ್ಸಿಯಲ್ಲಿ ಆ ರೀತಿ ಮಲಗಲು ಸಾಧ್ಯವಿಲ್ಲ. ಒಂದು ವೇಳೆ ಆ ರೀತಿ ಮಲಗಬೇಕು ಎನಿಸಿದರೆ ವಿಡಿಯೋದಲ್ಲಿ ತೋರಿಸಿರುವಂತೆ ಟ್ಯೂಬನ್ನು ಬೆಂಬಲಕ್ಕೆ ಬಳಸಿ ರೆಸ್ಟ್ ಮಾಡಬಹುದು.
- ಕಾರಿನಲ್ಲಿ ಪ್ರಯಾಣಿಸುವಾಗ ಬೆಲ್ಟ್ ಧರಿಸಲು ಸಾಧ್ಯವಾಗದಿದ್ದರೆ ನಿಮ್ಮ ಹೊಟ್ಟೆ ಬಳಿಗೆ ಸಿಲಿಂಡರ್ ಆಕಾರದ ಸ್ಪಾಂಜನ್ನು ಬೆಲ್ಟ್‌ಗೆ ಆಧಾರವಾಗಿಟ್ಟು ಧರಿಸಬಹುದು.
ಏನೇ ಹ್ಯಾಕ್ಸ್ ಇರಲಿ, ನೀವು ಗರ್ಭಿಣಿ ಆಗಿದ್ದಾಗ ಸದಾ ಯಾರಾದರೂ ನಿಮ್ಮೊಂದಿಗೆ ಇದ್ದರೆ ಒಳಿತು. ಯಾವುದೇ ಕೆಲಸ ಮಾಡುವಾಗ ಬಹಳ ಜಾಗರೂಕರಾಗಿರಿ.